ಎವಿಂಗ್ ಸಾರ್ಕೋಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎವಿಂಗ್ ಸಾರ್ಕೋಮಾ

ಎವಿಂಗ್ ಸಾರ್ಕೋಮಾ ಮೂಳೆಗಳು , ಕಾರ್ಟಿಲೆಜ್ ಅಥವಾ ನರಗಳು ಸೇರಿದಂತೆ ಮೃದು ಅಂಗಾಂಶದಲ್ಲಿ ಬೆಳೆಯುವ ಕ್ಯಾಂಸರ್ಗಳು. ಸಾಮಾನ್ಯವಾಗಿ ದೀರ್ಘ ಮೂಳೆಗಳು, ಪಕ್ಕೆಲುಬುಗಳು, ಸೊಂಟವನ್ನು ಮತ್ತು ಬೆನ್ನುಹುರಿ (ಬೆನ್ನೆಲುಬು) ಸಂಭವಿಸುವ ಕ್ಯಾನ್ಸರ್ ಗೆಡ್ಡೆಯ ಒಂದು ಅಪರೂಪದ ವಿಧ. ಎವಿಂಗ್ ಸರ್ಕೊಮಾ ಮಕ್ಕಳು ಮತ್ತು ಯುವ ಜನರಲ್ಲಿ ಕಂಡುಬರುವ ಎರಡನೇ ಅತ್ಯಂತ ಸಾಮಾನ್ಯ ಪ್ರಾಥಮಿಕ ಸರ್ಕೊಮಾ ಆಗಿದೆ. ಹೆಚ್ಚಾಗಿ ಎಲುಬು ನಂತರ ಸೊಂಟದಿಂದ ಆರಂಭವಾಗುತ್ತದೆ, ಇದು ಇತರ ಮೂಳೆಗಳು, ಮೂಳೆ ಮಜ್ಜೆ, ಮತ್ತು ಶ್ವಾಸಕೋಶಗಳು, ಹೃದಯ, ಮತ್ತು ಮೂತ್ರ ಪಿಂಡಗಳು ಕೂಡಿದಂತೆ ಪ್ರಮುಖ ಅಂಗಗಳಿಗೆ ಹರಡಬಹುದು. ನೋವು ಮೂಳೆ ಕ್ಯಾನ್ಸರಿನ ಅತ್ಯಂತ ಸಾಮಾನ್ಯ ಲಕ್ಷಣ. ಇದು ರಾತ್ರಿಯಲ್ಲಿ ಗಂಭೀರವಾಗಗುತ್ತದೆ. ಕ್ಯಾನ್ಸರ್ ರೋಗಲಕ್ಷಣಗಳು ಸ್ಥಾನ ಮತ್ತು ಗಾತ್ರದೊಂದಿಗೆ ಬದಲಾಗುತ್ತದೆ. ಮಗುವಿನ ಮೂಳೆಗಳು ದುರ್ಬಲಗೊಂಡು ಸಣ್ಣ ಪತನ ಅಥವಾ ಅಪಘಾತದದಿಂದ ಮುರಿದರೆ ಈ ಕ್ಯಾಂಸರ್ ಇರುವ ಸಾಧ್ಯತೆ ಇದೆ. ಕೆಲವೊಮ್ಮೆ, ಜ್ವರ, ನಿರ್ಬಲತೆ ಅಥವಾ ತೂಕ ನಷ್ಟ ಇರಬಹುದು.ಚರ್ಮದ ಬಳಿ ಒಂದು ಸ್ಪರ್ಶಕ್ಕೆ ಬೆಚ್ಚಗಿನ ಮತ್ತು ಮೃದು ಭಾವಿಸುವ ಗಂಟು, ಗೆಡ್ಡೆ ಸೊಂಟ ಅಥವಾ ಕಾಲಿನ ಬಳಿ ಕುಂಟುವುದು ಹಾಗೂ ನಡೆಯುವಾಗ ನೋವು, ಪಾರ್ಶ್ವವಾಯು ಅಥವಾ ಮೂತ್ರ ನಿಯಂತ್ರಣ ನಷ್ಟವು ಮೂಳೆಮಜ್ಜೆಗಳ ಬಳಿ ಸಾರ್ಕೋಮಾ ಇದ್ದಲ್ಲಿ ಸಂಭವಿಸುವ ಲಕ್ಶ್ಣಗಳು.[೧]

ಉಲ್ಲೇಖಗಳು[ಬದಲಾಯಿಸಿ]