ವಿಷಯಕ್ಕೆ ಹೋಗು

ಎಲ್ ಡೊರಾಡೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಲ್ ಡೊರಾಡೋ: ಅಮೆರಿಕ ಸಂಯುಕ್ತಸಂಸ್ಥಾನದ ಅರಕನ್ಸಾಸ್ನ ದಕ್ಷಿಣಕ್ಕಿರುವ ನಗರ. ಜನಸಂಖ್ಯೆ 26,625(2002) ರಾಜ್ಯದ ತೈಲಕೇಂದ್ರ. ವ್ಯವಸಾಯೋತ್ಪನ್ನಗಳ ವ್ಯಾಪಾರ ಕೇಂದ್ರ. ಇಲ್ಲಿ ಮರಮುಟ್ಟುಗಳ ಕಾರ್ಖಾನೆಗಳೂ ಹತ್ತಿಯ ಗಿರಣಿಗಳೂ ತೈಲಶುದ್ಧೀಕರಣ ಕೇಂದ್ರಗಳೂ ಎರಕಹೊಯ್ಯುವ ಕಾರ್ಖಾನೆಗಳೂ ಇವೆ, ದನ, ಧಾನ್ಯ, ತೈಲ ಇಲ್ಲಿಂದ ರಫ್ತಾಗುತ್ತವೆ. 1877ರಲ್ಲಿ ಇದನ್ನು ನಗರವಾಗಿ ಪರಿಗಣಿಸಲಾಯಿತು. 1951ರಲ್ಲಿ ನಗರಸಭೆಯೊಂದು ಏರ್ಪಟ್ಟು ನಗರ ವ್ಯವಸ್ಥಾಪಕನೊಬ್ಬ ಇದರ ಆಡಳಿತವನ್ನು ನಡೆಸುತ್ತಿದ್ದ. ಪ್ರಸಿದ್ಧ ಪತ್ರಿಕಾಕರ್ತನೂ ಲೇಖಕನೂ ಆದ ವಿಲಿಯಂ ಅಲೆನ್ ವೈಟ್ ತನ್ನ ಜೀವನದ ಆರಂಭದ ದಿನಗಳನ್ನು ಇಲ್ಲಿ ಕಳೆದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: