ವಿಷಯಕ್ಕೆ ಹೋಗು

ಎರ್ನ್‌ಸ್ಟ್ ಹೆನ್ರಿ ಸ್ಟರ್ಲಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎರ್ನ್‌ಸ್ಟ್ ಹೆನ್ರಿ ಸ್ಟರ್ಲಿಂಗ್
ಜನನ
ಎರ್ನ್‌ಸ್ಟ್ ಹೆನ್ರಿ ಸ್ಟರ್ಲಿಂಗ್

೧೮೬೬ ಏಪ್ರಿಲ್ ೧೭
ಇಂಗ್ಲೆಂಡ್
ರಾಷ್ಟ್ರೀಯತೆಇಂಗ್ಲೆಂಡ್

ಇಂಗ್ಲೆಂಡಿನ ಶರೀರವಿಜ್ಞಾನಿಯಾಗಿದ್ದ ಎರ್ನ್‌ಸ್ಟ್ ಹೆನ್ರಿ ಸ್ಟರ್ಲಿಂಗ್‌ರವರು ೧೮೬೬ರ ಏಪ್ರಿಲ್ ೧೭ರಂದು ಲಂಡನ್ನಿನಲ್ಲಿ ಜನಿಸಿದರು. ಅವರು ಇನ್ನೊಬ್ಬ ಶರೀರವಿಜ್ಞಾನಿ ವಿಲಿಯಂ ಮಡ್ಡೋಕ್ ಬೇಲಿಸ್‌ರವರ (೧೮೬೦-೧೯೨೪) ಜೊತೆಗೂಡಿ ಮೇದೋಜೀರಕಾಂಗ ಹಾಗೂ ಯಕೃತ್ತನ್ನು ಉತ್ತೇಜಿಸಿ ಅವನ್ನು ಕಾರ್ಯೋನ್ಮುಖಗೊಳಿಸುವ ’ಸೆಕ್ರೆಟಿನ್’ಎಂಬ ಹಾರ್ಮೋನನ್ನು ೧೯೦೨ರಲ್ಲಿ ಕಂಡುಹಿಡಿದರು. ಸೆಕ್ರೆಟಿನ್ ತಯಾರಿಕೆಯ ಕಾರ್ಯಾಚರಣೆಗೆ ’ಬೇಲಿಸ್ ಪರಿಣಾಮ’ (Bayliss effect) ಎಂದೇ ಕರೆಯಲಾಗಿದೆ. ಅಲ್ಲದೆ ಅವರಿಬ್ಬರೂ ಸೇರಿ ಕರುಳಿನಲ್ಲಿರುವ ಪರಿಕ್ರಮ ಸ್ನಾಯು ಸಂಕೋಚನ (peristalisis) ವ್ಯವಸ್ಥೆಯನ್ನು (ಅಂದರೆ ಅನ್ನನಾಳ, ಕರುಳು ಮೊದಲಾದುವುಗಳಲ್ಲಿ ಪದಾರ್ಥ ಕ್ರಮೇಣ ಮುಂದಕ್ಕೆ ಸಾಗಿ ಹೋಗಲು ಸಹಾಯಕವಾಗುವಂತೆ, ವೃತ್ತ ಪರಂಪರೆಯಲ್ಲಿ ತರಂಗಗಳೋಪಾದಿ ತಾನಾಗಿ ಉಂಟಾಗುವ ಸ್ನಾಯು ಸಂಕೋಚನ ವ್ಯವಸ್ಥೆಯನ್ನು) ಕೂಡ ಕಂಡುಹಿಡಿದರು. ಅಲ್ಲದೆ ಸ್ಟರ್ಲಿಂಗ್‌ರವರು ನಮ್ಮ ದೇಹದಲ್ಲಿನ ದ್ರವ ಪಲ್ಲಟಗಳನ್ನು ವಿವರಿಸುವ ’ಸ್ಟರ್ಲಿಂಗ್ ಸಮೀಕರಣ’ವನ್ನು ಕಂಡುಹಿಡಿದರು. ಜೊತೆಗೆ ಅವರು ಹಾರ್ಮೋನ್‌ಗಳ ಪರಿಕಲ್ಪನೆಯನ್ನೂ ಸಹ ೧೯೦೫ರಲ್ಲಿ ಮಂಡಿಸಿದರು. ಮೂತ್ರಪಿಂಢ ನೀರು ಮತ್ತು ಅನೇಕ ವಿದ್ಯುದ್ವಿಭಜಕ ಪದಾರ್ಥಗಳನ್ನು ಹೀರುವ ಪ್ರಕ್ರಿಯೆಯನ್ನು ಕೂಡ ಕಂಡುಹಿಡಿದರು.[೧] ಸ್ಟರ್ಲಿಂಗ್‌ರವರು ೧೯೨೭ರ ಮೇ ೨ರಂದು ಜಮೈಕಾದ ಕಿಂಗ್‌ಸ್ಟನ್ ಬಂದರಿನಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]