ಎರಡನೇ ಭಾಸ್ಕರಾಚಾರ್ಯರು
ಈತ ಪ್ರಸಿದ್ಧ ವಿಜ್ಞಾನಿ,ಜೊತೆಗೆ ಕವಿಯೂ ಆಗಿದ್ದನು.ಇವನು ಹುಟ್ಟಿದುದು ಇಂದಿನಬಿಜಾಪುರ ಎಂದು ಹೇಳಲಾಗಿರುವ ಬಿಜ್ಜಡಬಿಡ ಎಂಬಲ್ಲಿ.ಕ್ರಿ.ಶ.೧೧೧೪ರಲ್ಲಿ ಭಾಸ್ಕರಾಚಾರ್ಯರು ಜನಿಸಿದರು.ತಂದೆ ಮಹೇಶ್ವರೋಪಾಧ‍್ಯಾಯ,ಗಣಿತ ವಿದ್ವಾಂಸ.ಭಾಸ್ಕರಾಚಾರ್ಯನಿಗೆ ತಂದೆಯೇ ಗುರು.ತನ್ನ ೩೬ನೆಯ ವಯಸ್ಸಿನಲ್ಲಿ ಇವನು "ಸಿದ್ಧಾಂತ ಶಿರೋಮಣಿ"ಎಂಬ ಗ್ರಂಥವನ್ನು ಬರೆದ.ಈ ಗ್ರಂಥದ ನಾಲ್ಕು ಭಾಗಗಳಲ್ಲಿ "ಲೀಲಾವತಿ"ಅಥವಾ "ಅಂಕಗಣಿತ" ಪ್ರಸಿದ್ಧವಾಗಿವೆ.
'ಲೀಲಾವತಿ' ಭಾಗವು ೨೭೭ಉಪ ಭಾಗಗಳಿಂದ ಕೂಡಿದೆ.ಇದು ಕ್ರಮಪಲ್ಲಟನೆ,ಲೆಕ್ಕಾಚಾರ ಮುಂತಾದ ಗಣಿತದ ಭಾಗಗಳಣ್ಣು ಹೊಂದಿದೆ.ಎರಡನೇ ಭಾಗವಾದ 'ಬೀಜಗಣಿತ'ವು ಸೊನ್ನೆ,ಅನಂತ,ಋಣಾತ್ಮಕ,ಘನಾತ್ಮಕ ಮುಂತಾದ ಸೂತ್ರಗಳನ್ನೊಳಗೊಂಡಿದೆ.'ಗ್ರಹಗಣಿತ'-ಇದು ಸಿದ್ಧಾಂತ ಶಿರೋಮಣಿಯ ಮೂರನೆಯ ಭಾಗ-ಇದು ಗ್ರಹಗಲ ಚಲನೆ ವೇಗ ಮುಂತಾದ ವಿಷಯಗಳಿಂದ ಕೂಡಿದೆ.ಗಣಿತ ಶಾಸ್ತ್ರಕ್ಕೆ ಈತನ ಕೊಡುಗೆ ಅಪಾರ.ಇವನು ೧೧೮೫ರಲ್ಲಿ ತನ್ನ ಕೊನೆಯುಸಿರೆಳೆದನು.
ಇವರು ಬರೆದ ಸಿದ್ಧಾಂತ ಶಿರೋಮಣಿಯಂಬ ಗ್ರಂಥದಲ್ಲಿ ಲೀಲಾವತಿ,ಬಿಜಗಣಿತ,ಗ್ರಹಗಣಿತ ಮತ್ತು ಗೋಲಧ್ಯಾಯಯಂಬ ನಾಲ್ಕು ಭಾಗಗಳಿವೆ. ಇವರು ಕರಣಕುತೂಹಲ ಎಂಬ ಮತ್ತೊಂದು ಗ್ರಂಥವನ್ನು ಬರೆದಿದ್ದಾರೆ.