ಎಮ್. ಎ. ಎನ್. ಪ್ರಸಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾರಾಯಣ ಪ್ರಸಾದ್, ಎನ್ನುವ ಬಾಲ್ಯದ ಹೆಸರುಳ್ಳ, ಎಮ್.ಎ.ಎನ್.ಪ್ರಸಾದ್ ರವರು, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಿಕ ಕ್ಷೇತ್ರಗಳಲ್ಲಿ ಬಹಳ ಆಸಕ್ತರು. ’ಮೈಸೂರ್ ಅಸೋಸಿಯೇಷನ್, ಮುಂಬಯಿ,ನ ಕಾರ್ಯದರ್ಶಿ’ಯಾಗಿ ಅನೇಕ ವರ್ಷಗಳ ಸೇವೆಸಲ್ಲಿಸಿ,ಈಗ ಬೆಂಗಳೂರಿಗೆ ಹೋಗಿ ಅಲ್ಲಿ ನೆಲೆಸಿದ್ದಾರೆ. ದೊರೈಸ್ವಾಮಿ, ಕೆ.ಮಂಜುನಾಥಯ್ಯ, ವಸಂತ್, ಡಾ. ಬಿ.ಆರ್.ಮಂಜುನಾಥ್, ಡಾ. ಶ್ರೀನಿವಾಸ್, ಮುಂತಾದವರು, ಅಸೋಸಿಯೇಷನ್ ನ ಸರ್ವಾಂಗೀಣ ವಿಕಾಸದಲ್ಲಿ ಯೋಗದಾನ ಮಾಡಿದ್ದಾರೆ. ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾದ ಮೈಸೂರ್ ಅಸೋಸಿಯೇಷನ್, ಮುಂಬಯಿ' ತನ್ನದೇ ಆದ ಒಂದು 'ಹವಾನಿಯಂತ್ರಿತ,' 'ಅತ್ಯಾಧುನಿಕ ರಂಗಮಂಚ'ವನ್ನು ಹೊಂದಿದೆ. ಅಸೋಸಿಯೇಷನ್ ನಾಟ್ಯ, ಸಂಗೀತ, ಸಂದರ್ಶನ, ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.

ವಿದ್ಯಾಭ್ಯಾಸ,ವೃತ್ತಿಜೀವನ[ಬದಲಾಯಿಸಿ]

ಎಮ್.ಎ.ನಾರಾಯಣ್.ಪ್ರಸಾದ್ [೧] ’ಫಾರ್ಮಸಿ ವಿಜ್ಞಾನ’ದಲ್ಲಿ ಪದವಿಯನ್ನು ಪಡೆದು ನಂತರ ಮಾರ್ಕೆಟಿಂಗ್ ನಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದಿದ್ದಾರೆ. ಲೋಜೆಸ್ಟಿಕ್ಸ್ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ.ಔಷಧಿಗಳ ಹಾಗೂ ಗ್ರಾಹಕ ಸಾಮಗ್ರಿಗಳ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಹಿರಿಯ ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿದ್ದು ಅವರು ಅನೇಕ ವರ್ಷಗಳ ಅನುಭವವವನ್ನು ಪಡೆದಿದ್ದಾರೆ. ಮುಂಬಯಿನಗರದಲ್ಲಿ ಕೆಲವು ವರ್ಷಗಳಿಂದ ’ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ಸಂಸ್ಥೆ’ಯನ್ನು ಆರಂಭಿಸಿ ನಡೆಸಿಕೊಂಡು ಹೋಗುತ್ತಿದ್ದರು.

ಭಾರತಿ ಪ್ರಸಾದ್[ಬದಲಾಯಿಸಿ]

ಎಮ್.ಎ.ನಾರಾಯಣ ಪ್ರಸಾದರ ಪತ್ನಿ, ಭಾರತಿ ಪ್ರಸಾದ್, ಮಹಿಳಾ ಸಂಘಟನೆಯಲ್ಲಿ ಕೆಲಸಮಾಡುತ್ತಿದ್ದರು. ಮೈಸೂರು ಅಸೋಸಿಯೇಷನ್ ನ ಮಹಿಳಾ ವಲಯದ ಸಕ್ರಿಯ ಸದಸ್ಯೆಯಾಗಿದ್ದರು.

ಬೆಂಗಳೂರಿನಲ್ಲಿ[ಬದಲಾಯಿಸಿ]

ಪ್ರಸಾದ್, ಬೆಂಗಳೂರಿನಲ್ಲೂ ಹಲವಾರು 'ಸಾಂಸ್ಕೃತಿಕ' ಹಾಗೂ 'ವಿದ್ಯಾಸಂಸ್ಥೆ'ಗಳ ಸದಸ್ಯರಾಗಿದ್ದರು. ’ಮೈಸೂರ್ ಅಸೋಸಿಯೇಷನ್’ ಪ್ರಕಟಿಸುವ ’ನೇಸರು ಪತ್ರಿಕೆ’ ಯ ಬೆಂಗಳೂರು ವಿಭಾಗದ ಪ್ರತಿನಿಧಿಯಾಗಿ ಸೇವೆಸಲ್ಲಿಸುತ್ತಿದ್ದರು. "ಬೆಂಗಳೂರಿನಲ್ಲಿ ಒಂದು ಸಂಜೆ", ಕಾರ್ಯಕ್ರಮವಿತ್ತು. ೨೦೧೧ ರ ಮೇ ತಿಂಗಳಿನಲ್ಲಿ, [೧]

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಠಲ ಮೂರ್ತಿಯವರು, ಮುಂಬಯಿಯ ಮೈಸೂರ್ ಅಸೋಸಿಯೇಷನ್ ಗೆ ಭೇಟಿಕೊಟ್ಟರು.[೨]

೨೦೧೫ ರಲ್ಲಿ[ಬದಲಾಯಿಸಿ]

ಎಮ್.ಎ.ನಾರಾಯಣ್ ಪ್ರಸಾದ್ ವಿರಚಿತ, 'ಸುಮ ಸಂಚಯ'ವೆಂಬ ಕೃತಿಯನ್ನು ೨೮,ಮಾರ್ಚ್, ೨೦೧೫ ರಂದು, ಮುಂಬಯಿನ ಮೈಸೂರ್ ಅಸೋಸಿಯೇಷನ್ ನಲ್ಲಿ ಬಿಡುಗಡೆಮಾಡಲಾಯಿತು.

ಪ್ರಸಾದ್ ವಿರಚಿತ,'ಸುಮ ಸಂಚಯ'ವೆಂಬ ಕಿರುಹೊತ್ತಿಗೆ ಮೈಸೂರು ಅಸೋಸಿಯೇಷನ್ ನಲ್ಲಿ ಬಿಡುಗಡೆಯಾಯಿತು

೨೦೧೭ ರಲ್ಲಿ[ಬದಲಾಯಿಸಿ]

ನೇಸರು ಪತ್ರಿಕೆಯಲ್ಲಿ ಬರೆದ ಇಂಗ್ಲೀಷ್ ಭಾಷೆಯ ಬರಹಗಳು

  1. ನೇಸರು,ಡಿಸೆಂಬರ್, ೨೦೧೭, [೩]
  2. ನೇಸರು, ಸೆಪ್ಟೆಂಬರ್, ೨೦೧೭, [೪]
  3. ನೇಸರು, ದೀಪಾವಳಿ ಸಂಚಿಕೆ. ಪು.೬,೭,೮, [೫]

ನಿಧನ[ಬದಲಾಯಿಸಿ]

ಶ್ರೀ ಎಮ್. ಎ. ಎನ್. ಪ್ರಸಾದ್ ರವರು ವರ್ಷ ೨೦೧೯ ರಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಫ಼ೆಬ್ರವರಿ ೧೧, ೨೦೨೪ ರಂದು ಬೆಂಗಳೂರಿನ ತಮ್ಮ ಮನೆಯಲ್ಲಿಯೆ ನಿಧನರಾದರು. [೬]

ಉಲ್ಲೇಖಗಳು[ಬದಲಾಯಿಸಿ]

  1. "ಬೆಂಗಳೂರಿನಲ್ಲಿ ಒಂದು ಸಂಜೆ", ನೇಸರು, ಮೇ, ೨೦೧೧, ಪುಟ-೨-ಲಕ್ಷ್ಮೀ ಸೀತಾರಾಂ
  2. 'ನೇಸರು ವಿಠಲಮೂರ್ತಿಯವರ ವಿಶೇಷ ಸಂಚಿಕೆ', 'ಕಲಾಪ್ರೇಮಿ ಐ.ಎಮ್.ವಿಠಲಮೂರ್ತಿ',ಪುಟ-೧೩-ಎಮ್.ಎ.ಎನ್.ಪ್ರಸಾದ್[ಶಾಶ್ವತವಾಗಿ ಮಡಿದ ಕೊಂಡಿ]
  3. ಪು.೨೩. ಮೈಸೂರು ಹಾಗೂ ತಂಜಾವೂರು ಚಿತ್ರ ಶೈಲಿ, ನೇಸರು, ಎಮ್.ಎ.ಪ್ರಸಾದ್
  4. Ancient musical insturments of India, ಪು.೬-೭, ನೇಸರು, M.A.N.Prasad
  5. Thoughts ...on Arts Indian Shilpa Shastra, M.A.N.Prasad
  6. http://karnatakamalla.com/articlepage.php?articleid=KARMAL_MAI_20240213_3_11&width=224px&edition=Main&curpage= ಮೈಸೂರು ಅಸೋಸಿಯೇಷನ್ ಮುಂಬೈನ ಮಾಜಿ ಕಾರ್ಯದರ್ಶಿ ಎಮ್.ಎ.ನಾರಾಯಣ ಪ್ರಸಾದ್ ನಿಧನ, ಕರ್ನಾಟಕ ಮಲ್ಲ, ೧೩, ಫೆಬ್ರವರಿ, ೨೦೨೪]