ಎಮಿಲ್ ಬೆರ್ರಿಂಗ್
ಜೀವನ
[ಬದಲಾಯಿಸಿ]ಎಮಿಲ್ ಬೆರ್ರಿಂಗ್ ಜರ್ಮನಿಯ ಖ್ಯಾತ ವೈದ್ಯಶಾಸ್ತ್ರ ವಿಜ್ಞಾನಿ. ಇವರು ೧೮೫೩ ರಲ್ಲಿ ಜನಿಸಿದರು. ಬಡವರಾಗಿದ್ದರೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿಲ್ಲ. ಇವರು ಬರ್ಲಿನ್ ನಲ್ಲಿ ತಮ್ಮ ವೈಧ್ಯಕೀಯ ಪದವಿ ಪಡೆದರು. ನಂತರ ಜರ್ಮನಿಯ ಸೈನ್ಯದಲ್ಲಿ ಸೇವೆ ಸಲ್ಲಿಸತೊಡಗಿದರು. ಆ ಸಮಯದಲ್ಲೇ ಅವರ ಗಮನ ಪ್ರಯೋಗಗಳತ್ತ ಹರಿಯಿತು.[೧]
ಸಂಶೋಧನೆ
[ಬದಲಾಯಿಸಿ]ಸೋಂಕು ನಿರೋಧಕಗಳ ಮೂಲಕ ಶರೀರವನ್ನು ಕಾಪಾಡುವ ಅನೇಕ ವಿಧಾನಗಳನ್ನು ಇವರು ಸಂಶೋಧಿಸಿದರು. ಇವರು ಮಾಡಿದ ಸಂಶೋಧನೆಗಳೇ ಮುಂದೆ ಅನೇಕ ರಸಾಯನ ರೋಗ ಚಿಕಿತ್ಸೆಗಳಿಗೆ ಸಹಾಯವಾದವು. ಮುಂದೆ ಇವರು ರಕ್ತರಸಿಕೆಯ ಕುರಿತು ಆಳವಾದ ಅಧ್ಯಾಯನ ನಡೆಸಿದರು. ಇವರು ಗಂಟಲಮಾರಿ, ಧನುರ್ವಾಯು ರೋಗಗಳ ವಿರುದ್ಧ ಪ್ರತಿರೋಧಕ ಶಕ್ತಿ ನೀಡುವ ಪ್ರಯೋಗಗಳನ್ನು ಕೈಗೊಂಡರು. ಇವರ ಈ ಸಂಶೋಧನೆ, ಬರ್ಲಿನ್, ಮ್ಯೂನಿಚ್ ಹಾಗು ಲೀಪ್ಜಿಗ್ ನಗರದಲ್ಲಿ ಗಂಟಲುಮಾರಿ ವ್ಯಾಧಿಯಿಂದ ಬಳಲುತ್ತಿದ್ದ ಮಕ್ಕಳಿಗೆ ವರದಾನವಾಗಿ ಪರಿಣಮಿಸಿತು. ಹೀಗಾಗಿ ಇವರನ್ನ "ಬೇರ್ರಿಂಗ್ ಮಕ್ಕಳ ರಕ್ಷಕ" ಎಂದು ಕರೆಯಲಾಗುತ್ತದೆ.[೨] ಬೇರ್ರಿಂಗ್ ವೈದ್ಯ ವಿಜ್ಞಾನದ ಮೊದಲ ನೋಬಲ್ ಪ್ರಶಸ್ತಿಯನ್ನ ಪಡೆದುಕೊಂಡರು. ಇವರು ೧೯೧೭ ರಲ್ಲಿ ವಿಧಿವಶರಾದರು.