ವಿಷಯಕ್ಕೆ ಹೋಗು

ಎಮಿಲ್ ಕೊನ್ರಾಡ್ ಬ್ಲಾಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಮಿಲ್ ಕೊನ್ರಾಡ್ ಬ್ಲಾಕ್
Born
ಎಮಿಲ್ ಕೊನ್ರಾಡ್ ಬ್ಲಾಕ್

೧೯೧೨ ಜನವರಿ ೨೧
ಜರ್ಮನಿ
Nationalityಅಮೇರಿಕ

ಜರ್ಮನಿಯಲ್ಲಿ ಹುಟ್ಟಿ, ಅಮೇರಿಕದ ಜೀವರಸಾಯನವಿಜ್ಞಾನಿಯಾಗಿದ್ದ (biochemist) ಎಮಿಲ್ ಕೊನ್ರಾಡ್ ಬ್ಲಾಕ್‌ರವರು ೧೯೧೨ರ ಜನವರಿ ೨೧ರಂದು ಜರ್ಮನಿಯ ನೀಸ್ಸೆಯಲ್ಲಿ ಜನಿಸಿದರು. ಬ್ಲಾಕ್‌ರವರು ಜೈವಿಕ ರಸಾಯನವಿಜ್ಞಾನದಲ್ಲಿ ಮತ್ತು ಕೊಲೆಸ್ಟಿರಾಲ್‌ನನ್ನು (C27 H46 0) ಒಳಗೊಂಡ ಕ್ರಿಯೆಗಳು ಮತ್ತು ಮೇದಸ್ಸುಗಳ ಉಪಾಪಚಯಗಳ (metabolism of fats or lipids) ಬಗ್ಗೆ ಅವರು ಗಮನಾರ್ಹ ಪ್ರಯೋಗಗಳನ್ನು ನಡೆಸಿ, ಉಪಯುಕ್ತ ವಿಷಯಗಳನ್ನು ಕಂಡುಹಿಡದಿದ್ದಾರೆ. ಸ್ಟೀರಾಯ್ಡ್‌ಗಳು (steroids) ಜೀವಿಗಳಲ್ಲಿರುವ ಅನೇಕ ಸಂಕೀರ್ಣ ಹೈಡ್ರೋಕಾರ್ಬನ್‌ಗಳ ಪೈಕಿ ಒಂದಾಗಿದೆ. ಸ್ಟೀರಾಯ್ಡ್ ಗುಂಪಿನ ವಸ್ತುಗಳಿಂದ ಉತ್ಪತ್ತಿ ಮಾಡಲಾದ ಸ್ಟಿರಾಲ್‌ಗಳಲ್ಲಿ (sterols or lipids) ಕೊಲೆಸ್ಟಿರಾಲ್ (cholesterol) ಕೂಡ ಒಂದಾಗಿದೆ. ಪ್ರಾಣಿಗಳ ಊತಕಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವ ಸ್ಟೀರಾಲ್‌ಗಳಲ್ಲಿ ಒಂದಾದ ಕೊಲೆಸ್ಟರಾಲ್‌ನನ್ನು ೧೮೧೨ರಲ್ಲಿ ಕಂಡುಹಿಡಿಯಲಾಯಿತು. ಬ್ಲಾಕ್‌ರವರ ಗಮನಾರ್ಹ ಸಂಶೋಧನೆಗಳಿಗೆ ೧೯೬೪ರ ವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು[] (ಫಿಯೋಡೊರ್ ಲೈನೆನ್‌ರವರ ಜೊತೆಗೆ) ನೀಡಲಾಯಿತು. ಬ್ಲಾಕ್‌ರವರು ೨೦೦೦ರ ಅಕ್ಟೋಬರ್ ೧೫ರಂದು ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]