ವಿಷಯಕ್ಕೆ ಹೋಗು

ಎಮಿಲ್ ಅಡಾಲ್ಫ್ ವಾನ್ ಬೆಹ್ರಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಮಿಲ್ ಅಡಾಲ್ಫ್ ವಾನ್ ಬೆಹ್ರಿಂಗ್
ಜನನ
ಎಮಿಲ್ ಅಡಾಲ್ಫ್ ವಾನ್ ಬೆಹ್ರಿಂಗ್

೧೮೫೪ ಮಾರ್ಚ್ ೧೫
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಜರ್ಮನಿಯ ಬ್ಯಾಕ್ಟೀರಿಯಾವಿಜ್ಞಾನಿಯಾಗಿದ್ದ ಎಮಿಲ್ ಅಡಾಲ್ಫ್ ವಾನ್ ಬೆಹ್ರಿಂಗ್‌ರವರು ೧೮೫೪ರ ಮಾರ್ಚ್ ೧೫ರಂದು ಹಾನ್ಸ್ ಡೋರ್ಟ್‌ನಲ್ಲಿ ಜನಿಸಿದರು. ಬೆಹ್ರಿಂಗ್‌ರವರು ರೋಗರಕ್ಷಣೆಯ ವಿಧಾನಗಳ ಬಗ್ಗೆ ಅಧ್ಯಯನ ನಡೆಸಿದರು. ಅವರು ೧೮೯೦ರಲ್ಲಿ ಗಂಟಲಮಾರಿಗೆ ಪ್ರತಿವಿಷವನ್ನು (diphtheria antitoxin) ಕಂಡುಹಿಡಿದರು. ಅವರು ಜಪಾನಿನ ಬ್ಯಾಕ್ಟೀರಿಯಾವಿಜ್ಞಾನಿ ಕಿಟಸಟೋ ಶಿಬಸಾಬುರೋರವರ (೧೮೫೩-೧೯೩೧) ಜೊತೆ ಸೇರಿ ಧನುರ್ವಾಯುವಿರುವ (tetanus) ಪ್ರಾಣಿಯ ರಕ್ತಸಾರವನ್ನು (blood serum) ತೆಗೆದು ಅದನ್ನು ಇನ್ನೊಂದು ಪ್ರಾಣಿಗೆ ವರ್ಗಾಂತರಿಸಿದಾಗ ಆ ಇನ್ನೊಂದು ಪ್ರಾಣಿಯ ದೇಹ ಆ ರೋಗಕ್ಕೆ ಪ್ರತಿರಕ್ಷಾ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂಬುದಾಗಿ ಕಂಡುಹಿಡಿದರು. ನಂತರ ಪ್ರತಿರಕ್ಷಾ ವ್ಯವಸ್ಥೆ ಸೃಷ್ಟಿಯಾದ ಪ್ರಾಣಿಯಿಂದ ರಕ್ತಸಾರವನ್ನು ತೆಗೆದು ಇನ್ನೊಂದು ಪ್ರಾಣಿ (ಅಥವಾ ಮನುಷ್ಯನಿಗೆ) ವರ್ಗಾಂತರಿಸಿದರೆ ಆ ಪ್ರಾಣಿಯಲ್ಲಿಯೂ ಸಹ ಧನುರ್ವಾಯು ರೋಗಕ್ಕೆ ಪ್ರತಿರಕ್ಷಾ ವ್ಯವಸ್ಥೆ ಸೃಷ್ಟಿಯಾಗುತ್ತದೆ ಎಂಬುದಾಗಿಯೂ ಅವರು ಕಂಡುಹಿಡಿದರು. ಬೆಹ್ರಿಂಗ್‌ರವರ ಈ ಸಂಶೋಧನೆಗೆ ೧೯೦೧ರ ವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಬೆಹ್ರಿಂಗ್‌ರವರು ವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಗಳಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಬೆಹ್ರಿಂಗ್ ಮತ್ತು ಪಾಲ್ ಎಹ್ರ್‌ಲಿಚ್ (೧೮೫೪-೧೯೧೫) ಎಂಬಿಬ್ಬರು ವಿಜ್ಞಾನಿಗಳೂ ಕುದುರೆಗೆ ವಿನಾಶಕಾರಿ ವಿಷವನ್ನು ಚುಚ್ಚುವುದರ ಮೂಲಕ ಗಂಟಲುಮಾರಿ ರಕ್ತಸಾರವನ್ನು ಅಭಿವೃರಪಡಿಸಿದ್ದರು. ಜರ್ಮನಿಯಲ್ಲಿ ಗಂಟಲುಮಾರಿ ರೋಗದ ಸೊಂಕು ಹರಡಿದಾಗ ಆ ರಕ್ತಸಾರವನ್ನು ಅವ್ಯಾಹತವಾಗಿ ಉಪಯೋಗಿಸಲಾಯಿತು. ಅಲ್ಲಿನ ಒಂದು ಕಂಪೆನಿ ಆ ರಕ್ತಸಾರವನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುವ ವಿಷಯದಲ್ಲಿ ಇಬ್ಬರ ಜೊತೆಗೂ ಒಪ್ಪಂದ ಮಾಡಿಕೊಂಡಿತು. ಆದರೆ ಅದರಿಂದ ಬಂದ ಹಣವನ್ನೆಲ್ಲಾ ಬೆಹ್ರಿಂಗ್ ತಾವೇ ಇಟ್ಟುಕೊಂಡು ಪಾಲ್ ಎಹ್ರ್‌ಲಿಚ್‌ರವರಿಗೆ ಮೋಸ ಮಾಡಿದರು ಎಂಬುದಾಗಿ ದಾಖಲಾಗಿದೆ. ಅಲ್ಲದೆ ಕೇವಲ ಬೆಹ್ರಿಂಗ್‌ರವರು ಅಂತಹ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ಗಳಿಸಿದರು,[] ಬೆಹ್ರಿಂಗ್ ರವರು ೧೯೧೭ರ ಮಾರ್ಚ್ ೩೧ರಂದು ಹೆಸ್ಸೆ-ನಾಸ್ಸಾದ ಮಾರ್‌ಬರ್ಗ್‌ನಲ್ಲಿ ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]