ಎನ್ ಶೇಷಗಿರಿ
ಗೋಚರ
ಡಾ. ಎನ್. ಶೇಷಗಿರಿ - ಪ್ರಖ್ಯಾತ ಕಂಪ್ಯೂಟರ್ ತಜ್ಞರು, ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ಬರೆದ ಮೊದಲಿಗರಲ್ಲಿ ಒಬ್ಬರು. ನ್ಯಾಷನಲ್ ಇನ್ಫರ್ಮಾಟಿಕ್ಸ್ ಸೆಂಟರ್ (ಎನ್‌ಐಸಿ) ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಸ್ಥಾಪನೆಯಲ್ಲಿ ಅವರು ಗಣನೀಯ ಪಾತ್ರವಹಿಸಿದ್ದರು. ಭಾರತದಲ್ಲಿ ಐಟಿ ಕ್ರಾಂತಿಗೆ ಕಾರಣರಾದವರಲ್ಲಿ ಪ್ರಮುಖ ಹೆಸರು ಎಂದೇ ಪರಿಗಣಿಸಲಾಗಿದ್ದ ಶೇಷಗಿರಿಯವರನ್ನು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕಂಪ್ಯೂಟರುಗಳ ಬಗ್ಗೆ ಅವರು ಬರೆದ ವಿಸ್ತೃತ ಲೇಖನವೊಂದು ೧೯೭೩ರಷ್ಟು ಹಿಂದೆಯೇ ಮೈಸೂರು ವಿವಿಯ ಕನ್ನಡ ವಿಶ್ವಕೋಶದಲ್ಲಿ ಪ್ರಕಟವಾಗಿದ್ದು ವಿಶೇಷ.ಇವರ ಮಾರ್ಗದರ್ಶನದಲ್ಲಿ ಹಲವಾರು ಸರ್ಕಾರಿ ಗಣಕಯಂತ್ರ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.ಸತತವಾಗಿ ೨೧ ವರ್ಷಗಳ ಕಾಲ ಎನ್.ಐ.ಸಿ ಯ ಮುಖ್ಯಸ್ಥರಾಗಿದ್ದರು. ಅವರು ಬೆಂಗಳೂರಿನಲ್ಲಿ ಮೇ ೨೬, ೨೦೧೩ರ ಭಾನುವಾರದಂದು ನಿಧನರಾದರು.