ಎನ್. ಮರಿಶಾಮಾಚಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(ಮೇ, ೧೫, ೧೯೫೧- ಏಪ್ರಿಲ್ ೦೩, ೨೦೧೩)

ಮರಿ, ಯವರ ವಿದ್ಯಾಭ್ಯಾಸ[ಬದಲಾಯಿಸಿ]

ಶಾಮಾಚಾರರ ಹುಟ್ಟೂರು, ಬೆಂಗಳೂರಿನ ಹತ್ತಿರದ ವಿಜಯಪುರ ದಲ್ಲಿ ೧೯೫೧ ರಲ್ಲಿ ಜನಿಸಿದರು. ಕೆನ್ ಕಲಾ ಶಾಲೆ, ಯಲ್ಲಿ ಆರ್. ಎಮ್. ಹಡಪದ್--ರುದ್ರಪ್ಪ ಮಲ್ಲಪ್ಪ ಹಡಪದ್ ರವರ ಶಿಷ್ಯರಾಗಿ ಕಲಿತರು. ಡ್ರಾಯಿಂಗ್ ಮತ್ತು ಪೇಯಿಂಟಿಂಗ್ ಆರ್ಟ್ ಮಾಸ್ಟರ್ ಪದವಿಯಲ್ಲಿ, Rank ವಿಜೇತರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಮೆರಿಟ್ ವಿದ್ಯಾರ್ಥಿವೇತನಕ್ಕೆ ಪಾತ್ರರಾಗಿ, ಬರೋಡನಗರದ ಫ್ಯಾಕಲ್ಟಿ ಆಫ್ ಫೈನ್ ಆರ್ಟ್ಸ್ ನಲ್ಲಿ, ಖ್ಯಾತ ಪ್ರೊ. ಕೆ. ಜಿ. ಸುಬ್ರಹ್ಮಣ್ಯನ್, ಅವರ ವಿದ್ಯಾರ್ಥಿಯಾಗಿ, ದೃಶ್ಯ ಗ್ರಹಣ ಹಾಗೂ ದೃಶ್ಯ ಸಾಹಿತ್ಯ ವನ್ನು ಅಭ್ಯಸಿಸಿದರು.

ವೃತ್ತಿ-ಪ್ರವೃತ್ತಿಗಳು[ಬದಲಾಯಿಸಿ]

ಶ್ರೀ. ಎನ್. ಮರಿಶಾಮಾಚಾರ್, ವರ್ಣಚಿತ್ರ, ಶಿಲ್ಪಕಲಾಮಾಧ್ಯಮದಲ್ಲಿ ವೈವಿಧ್ಯಮಯ ಸಾಧನೆಗಳನ್ನು ಸಾಧಿಸಿ, ಕಲೆಗೆ ಸಂಬಂಧಿಸಿದ ೨೦ ಅತ್ಯುತ್ತಮ ಪುಸ್ತಕಗಳನ್ನು ರಚಿಸಿ, ಪ್ರಮುಖ ಕನ್ನಡ ಕಲಾಪುಸ್ತಕಗಳಿಗೆ ಸಂಪಾದಕರಾಗಿ, ಕಲಾಶಿಬಿರಗಳ ಸಮರ್ಥ ಆಯೋಜಕರಾಗಿ, ಲಲಿತಕಲಾ ಅಕಾಡೆಮಿಗಳ ಸದಸ್ಯರಾಗಿ, ಪ್ರತಿಭೆ, ವಿದ್ವತ್ತು, ಮತ್ತು ಸಂಘಟನಾಶಕ್ತಿಗಳ ವಿಶೇಷಸಾಮರ್ಥ್ಯವನ್ನು ಮೈಗೂಡಿಸಿಕೊಂಡು, ಬೆಳೆಯುತ್ತಿರುವ ಈ ಕಲಾತಪಸ್ವಿಯ ವಿಷಯವನ್ನು ಎಲ್ಲಾ ಕನ್ನಡಿಗರೂ ತಿಳಿಯಲೇಬೇಕಾಗಿದೆ. ಪ್ರಸ್ತುತದಲ್ಲಿ ಶಾಮಾಚಾರ್ ಕರ್ನಾಟಕ ಕಲಾ ಗ್ರಾಮದ, ವಿಶೇಷ ಕರ್ತವ್ಯಾಧಿಕಾರಿಯಾಗಿ, ಕಾರ್ಯನಿರ್ವಹಿಸುತ್ತಿದ್ದಾರೆ. ಆಪ್ತಗೆಳೆಯರು ಅವರನ್ನು ಮರಿ, ಯೆಂದೇ ಕರೆಯುತ್ತಾರೆ. ಮರಿಯವರು ಒಳ್ಳೆಯ ಫೋಟೋಗ್ರಾಫರ್ ಕೂಡ. ಮೇಲಿನ ಎಲ್ಲಾ ಗತಿವಿಧಿಗಳನ್ನೂ ತಮ್ಮ ಸ್ವ-ಇಚ್ಛೆಯಿಂದಲೇ ಕೈಗೊಂಡಿದ್ದಾರೆ, ಹಾಗೂ ಆ ಕ್ಷೇತ್ರದಲ್ಲಿ ಅಗಾಧ ಸಾಧನೆಯನ್ನು ಮಾಡಿದ್ದಾರೆ.

" ಸಂಯೋಜಿತ ಸಂಸ್ಥೆ " ಯನ್ನು ಹುಟ್ಟು ಹಾಕಿದ ಪ್ರಮುಖರಲ್ಲೊಬ್ಬರು[ಬದಲಾಯಿಸಿ]

ಆಧುನಿಕ ಹಾಗೂ ಸಮಕಾಲೀನ ಕರ್ನಾಟಕಕಲೆಯ ಸಂಘಟಿತ ಸಂಸ್ಥೆಯಾದ, ಸಂಯೋಜಿತ ಸಂಸ್ಥೆಯನ್ನು ಹುಟ್ಟು ಹಾಕುವುದರಲ್ಲಿ ಇವರೂ ಒಬ್ಬ ಪ್ರಮುಖರು. ಕೆಂದ್ರ ಲಲಿತಕಲಾ ಅಕಾಡಮಿಯ ಸುದೀರ್ಘ ಕಾಲದಿಂದ ಕರ್ನಾಟಕದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಲಾ-ಇತಿಹಾಸವನ್ನು ಅಭ್ಯಸಿಸುವ ವಿಧ್ಯಾರ್ಥಿಗಳಿಗೆ ಮರಿಶಾಮಾಚಾರ್ ರವರು, ಬರೆದಿರುವ ಕಲಾವಿಷಯಕ ಗ್ರಂಥಗಳು. ಗ್ರಂಥಗಳ ಸಂಪಾದಕರುಗಳ ರಷ್ಟು ಕಲಾವಿಷಯಕ ಗ್ರಂಥಗಳ ಲೇಖಕರು. ಅನೇಕ ಮಹತ್ವದ ಪ್ರಕಟಣೆಗಳಿಗೆ, ಮುಖಪುಟ ವಿನ್ಯಾಸಕ, ರಾಗಿ ಅವುಗಳ ಕಲಾತ್ಮಕತೆಯ ಮಟ್ಟವನ್ನು ಹೆಚ್ಚಿಸಲು ಕಾರಣರಾಗಿದ್ದಾರೆ.

ಪ್ರಮುಖ ಹೊತ್ತಿಗೆಗಳು[ಬದಲಾಯಿಸಿ]

  • ಕಲಾಕೋಶ,
  • ಚಿತ್ರಕಲಾ ಪ್ರಪಂಚ,
  • ಶಿಲ್ಪಕಲಾವಿದರ ಮಾಲೆ,
  • ಕಲಾಚರಿತ್ರೆ, ಇವರ ಪ್ರಮುಖ ಹೊತ್ತಿಗೆಗಳು.

- ಇವಲ್ಲದೆ ಅನೇಕ ಪ್ರಮುಖ ಕನ್ನಡ ಕಲಾಪುಸ್ತಕಗಳಿಗೆ ಸಹಸಂಪಾದಕರಾಗಿದ್ದರು. ವರ್ಣಚಿತ್ರಕಲೆ, ಶಿಲ್ಪಕಲೆಗಳ, ಬಗ್ಗೆ ಪುಸ್ತಕಗಳ ರಚನೆ ಮಾಡಿದ್ದಾರೆ.

ಶಾಮಾಚಾರ್ ರವರ ಕೃತಿಶೈಲಿ[ಬದಲಾಯಿಸಿ]

ಪ್ರಾರಂಭದ ಚಿತ್ರಗಳಲ್ಲಿ ಜಾನಪದ ಹಾಗೂ ಚಿಕಣಿ ಚಿತ್ರಗಳ ಪ್ರಭಾವ ಇದ್ದರೂ, ಅಲಂಕಾರದ ಹೂವುಗಳು, ಟೆಕ್ಸ್ ಟೈಲ್ಸ್ ನ ಅಲಂಕರಣ, ವ್ಯಕ್ತಿಚಿತ್ರಗಳು, ಪ್ರಮುಖಪಾತ್ರವನ್ನು ವಹಿಸಿವೆ. ಹೆಣ್ಣು ಮತ್ತು ಬೆಕ್ಕು-ಅವರ ಇತ್ತೀಚಿನ ಪ್ರದರ್ಶನದಲ್ಲಿ ಹೆಚ್ಚಾಗಿ ಕಾಣುತ್ತವೆ. ಒಳಾಂಗಣ, ಹೊರಂಗಣದ ಆಕಾರಗಳ ರಚನೆ, ವಿಶಿಷ್ಟವಾದ ಸಂಯೋಜನೆಗಳನ್ನು ಅವರ ಕಲಾಕೃತಿಗಳಲ್ಲಿ ನಾವು ಕಾಣಬಹುದು.

ಪ್ರಶಸ್ತಿಗಳು[ಬದಲಾಯಿಸಿ]

  • ೧. ಹೆಬ್ಬಾರ್- (೧೯೮೪)ರಲ್ಲಿ ಪ್ರಶಸ್ತಿ.
  • ೨. ಸೃಜನಶೀಲರು (೧೯೮೫) ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
  • ೩. ಭಾರತದ ದೃಷ್ಯ ಕಲಾವಿದರು (೧೯೯೩)-ಆರ್ಯಭಟ್ಟ ಪ್ರಶಸ್ತಿ.
  • ೪. ಕಲಾಸಾಧಕ-(೧೯೯೬), ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಮುಖಪುಟ ವಿನ್ಯಾಸ ಪ್ರಶಸ್ತಿ.
  • ೫. ಪ್ರಕಟನೆಯ ಗುಣಮಟ್ಟಕ್ಕಾಗಿ-ನವದೆಹಲಿಯ ಭಾರತೀಯ ಪ್ರಕಾಶಕರ ಒಕ್ಕೂಟದ ಪ್ರಶಸ್ತಿ.
  • ೬. ಕರ್ನಾಟಕ ಲಲಿತಕಲಾ ಅಕಾಡೆಮಿಯ ಅತ್ಯುತ್ತಮ ಪುಸ್ತಕ.
  • ೭. ಭಾರತೀಯ ಕಲೆ -ಕರ್ನಾಟಕ ಸಾಹಿತ್ಯ ಅಕಾಡೆಮಿ ಪಡೆದಿದ್ದಾರೆ.
  • ೮. ದೃಶ್ಯಕಲಾ (೨೦೦೧) ಕೃತಿಗೆ ಅತ್ಯುತ್ತಮ ಮುಖಪುಟ ಪ್ರಶಸ್ತಿ.
  • ೯. ೧೯೮೫-ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ.
  • ೧೧. ೧೯೯೭-೨೦೦೧ಐ ಎಫ್. ಎಕ್ಸ್, ನವದೆಹಲಿ.
  • ೧೧. ೧೯೮೫-೧೫ ನೆ, ಅಖಿಲ ಭಾರತೀಯಕಲಾ ಪ್ರದರ್ಶನ ಬೆಂಗಳೂರು.
  • ೧೨. ೧೯೯೨-ಅಖಿಲ ಭಾರತೀಯ ಪ್ರದರ್ಶನ, ಶಿಮ್ಲಾ.
  • ೧೩. ೧೯೯೪- ಅಂಬಾಲ.
  • ೧೪. ೧೯೮೫-ಮೈಸೂರು ದಸರಾ ಪ್ರಶಸ್ತಿ.
  • ೧೫. ೧೯೯೭-ಐ. ಆರ್. ಡಿ. ಇ, ನವದೆಹಲಿ.
  • ೧೬. ಕರ್ನಾಟಕ ಜಾನಪದಕಲೆ. ಸಂಶೋಧನ ಕೃತಿ. (೨೦೦೧-ಎರಡು ಕೇಂದ್ರ ಸರ್ಕಾರದ ಸಂಶೋಧನ ವೇತನ ದೊರಕಿದೆ.)
  • ೧೭. ೨೦೦೪-ಬೆಂಗಳೂರು ಮಹಾನಗರಪಾಲಿಕೆಯ, ಕೆಂಪೇಗೌಡ ಪ್ರಶಸ್ತಿ.
  • ೧೮. ೨೦೦೫-ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ.
  • ೧೯. ೨೦೦೬-ಜಿ. ಎಸ್. ಶೆಣೈ ಪ್ರಶಸ್ತಿ.
  • ೨೦. ೨೦೦೭-ನಾಡೋಜ ಆರ್. ಎಮ್. ಹಡಪಡ್ ಪ್ರಶಸ್ತಿ.

ಕರ್ನಾಟಕ ಕಲಾಮೇಳದ ವ್ಯವಸ್ಥಾಪಕ ಸ್ಥಾಪಕ[ಬದಲಾಯಿಸಿ]

  • ಜಿ.ಎಸ್.ಶಣೈ ಸ್ಮಾರಕ ಕಲಾ ಉತ್ಸವ (೧೯೯೫ ೧೯೯೫)
  • ಕಲಾಬರಹಗಾರರ ಮೊದಲ ಸಮ್ಮೇಳನ (೧೯೯೫, ಬೆಂಗಳೂರು)
  • ಕೆ.ಕೆ.ಹೆಬ್ಬಾರ್ ಸ್ಮಾರಕ ಕಲಾ ಉತ್ಸವ (೧೯೯೭, ಬೆಂಗಳೂರು)
  • ಎಂ.ಎಸ್.ಐ.ಎಲ್, ಶಿಬಿರದ ಆಯೋಜಕರಾಗಿ.
  • ಕನ್ನಡ ವಿಶ್ವವಿದ್ಯಾಲಯದ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಲಲಿತಕಲೆಯ (ಶಿಲ್ಪ) ಅಧ್ಯಯನದ ಸಮಿತಿ,
  • ಇದೇ ವಿಶ್ವವಿದ್ಯಾಲಯದ ಸ್ನಾತಕೋತ್ತರ ಎಂ.ವಿ.ಎ ಅಧ್ಯಯನದ ಅಂಗದ ಸಲಹಾ ಸಮಿತಿ.
  • ನವದೆಹಲಿಯ ಕೆಂದ್ರ ಲಿಲಿತಕಲಾ ಅಕಾಡೆಮಿ (೧೯೯-೨೦೦೧) ಮತ್ತು ೨೦೦೩-೨೦೦೭) ಅದರ ಕಾರ್ಯಕ್ರಮ ಸಮಿತಿ.
  • ಚೆನ್ನೈನ ಲಲಿತಕಲಾ ಅಕಡೆಮಿಯ ರೀಜನಲ್ ಸೆಂಟರ್.
  • ಹಾಗೂ ಬೆಂಗಳೂರಿನ ಅಂತರಾಷ್ಟ್ರೀಯ ಕಲಾ ಉತ್ಸವ,ದ ಸದಸ್ಯರಾಗಿ ವೈವಿಧ್ಯಮಯ ಸೇವೆ ಸಲ್ಲಿಸುತ್ತಿದ್ದಾರೆ.

ಮರಿ ಯವರು ಮೇಲೆ ತಿಳಿಸಿದ ಹಲವಾರು ಸಂಘಟನೆಗಳಲ್ಲಿ ಕಲಾವಿದರಾಗಿ, ಕಲಾಸಾಹಿತಿಯಾಗಿ, ಸಂಘಟಕರಾಗಿ, ಪಾಲ್ಗೊಂಡಿದ್ದಾರೆ.

ಅಖಿಲಭಾರತ ಕಲೋತ್ಸವಗಳು ಹಾಗೂ ಕಲಾಮೇಳಗಳು[ಬದಲಾಯಿಸಿ]

  • ಅಖಿಲ ಭಾರತ ಕಲಾ ಉತ್ಸವ, ಚೆನ್ನೈ- ೧೯೯೩,
  • ದಕ್ಷಿಣಭಾರತ ಕಲಾವಿದರ ಶಿಬಿರ, ೧೯೭೯-ಬೆಂಗಳೂರು,
  • ಯುವ ಬರಹಗಾರರ ಹಾಗೂ ಕಲಾವಿದರ ಒಕ್ಕೂಟ, ೧೯೮೦-ಬೆಂಗಳೂರು.
  • ಕರ್ನಾಟಕ ಕಲಾಮೇಳ ೧೯೮೦-೮೧-೮೨-ಬೆಂಗಳೂರು, ಲಲಿತಕಲಾ ಅಕಾಡೆಮಿ ಹಮ್ಮಿಕೊಂಡ ಶಿಬಿರ, ಕಾರವಾರ, ೧೯೮೪.
  • ಕೇಂದ್ರ ಲಲಿತಕಲಾ ಅಕಾಡೇಮಿ, ಮೈಸೂರು, ೨೦೦೨
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ "ನೆಹರೂ ಶತಮಾನೋತ್ಸವ ಶಿಬಿರ "೧೯೮೯. ಇವು ಕೆಲವು.

೧೯೭೯ ರಲ್ಲಿ, ಲಲಿತಕಲಾ ಅಕಾಡಮಿ ಯಲ್ಲಿ ಕಲಾವಿದನಾಗಿ ಸೇರಿದಾಗಿನಿಂದಲೂ ತಮ್ಮ ಕಲಾಸ್ನೇಹಿತರೊಡನೆ ಇಟ್ಟುಕೊಂಡಿರುವ ಒಡನಾಟ ವಿಶಿಷ್ಟವಾದದ್ದು. ಅಗಾಧ ಕ್ರಿಯಾಶೀಲತೆ, ಪ್ರಬುದ್ಧ ಚಿಂತನೆ, ಸ್ನೇಹಶೀಲ ಗುಣಗಳಿಂದಾಗಿ ಕಲಾವಿದರ ಮನದಲ್ಲಿ ಗಟ್ಟಿಯಾಗಿ ಮನೆ ಮಾಡಿದ್ದಾರೆ. ಸಾಮಾಜಿಕ ಪರಿಸರದ ಚಿತ್ರಣವನ್ನು ತಮ್ಮ ಕಲಾಕೃತಿಗಳಲ್ಲಿ ಅಭಿವ್ಯಕ್ತಿಸುವ ಅವರು, ೩ ಮಾಧ್ಯಮಗಳಲ್ಲೂ, ಭಿನ್ನ ವಸ್ತುಗಳನ್ನು ನಿರ್ವಸಿಸುವ ರೀತಿ ಅನನ್ಯ.

೧೯೭೭ ರಿಂದ ಏಕವ್ಯಕ್ತಿ, ಸಮೂಹ ಪ್ರದರ್ಶನ[ಬದಲಾಯಿಸಿ]

  • ಇಂತಹ ಪ್ರದರ್ಶನಗಳು ಹಲವೆಡೆ ಆಗಿವೆ. ಸಂಯೋಜಿತೆ ಯಲ್ಲಿ ಪ್ರಥಮ ಪ್ರದರ್ಶನ-೧೯೭೭ ರಲ್ಲಿ.
  • ಕಬ್ಬನ್ ಪಾರ್ಕ್,
  • ಜಹಾಂಗೀರ್ ಆರ್ಟ್ಸ್ ಗ್ಯಾಲರಿ.
  • ವಿಶ್ವ ಕನ್ನಡಿಗರ ಸಮ್ಮೇಳನ, ಮ್ಯಾಂಚೆಸ್ಟೆರ್, ಇಂಗ್ಲೆಂಡ್.
  • ಬೆಂಗಳೂರು, ಬರೋಡ, ಹೈದರಾಬಾದ್, ಮಣಿಪುರ, ಸಿಮ್ಲಾ, ಮುಂಬಯಿ, ಭೂಪಾಲ್, ಅಹ್ಮೆದಾಬಾದ್, ಕೊಲ್ಕತ್ತಾ, ನವದೆಹಲಿ ಮುಂತಾದ ಕಡೆ ನಡೆದಿವೆ.

'ಕೆ.ಕೆ.ಹೆಬ್ಬಾರ್ ಶತಮಾನೋತ್ಸವದ ಪ್ರಶಸ್ತಿ'ಯನ್ನು 'ಮರಿಶಾಮಾಚಾರ್' ರವರಿಗೆ ಕೊಡಲಾಯಿತು[ಬದಲಾಯಿಸಿ]

'ಜೆ.ಸಿ.ರಸ್ತೆ'ಯಲ್ಲಿರುವ, 'ಕನ್ನಡ ಭವನದ ನಯನ ಸಭಾಂಗಣ'ದಲ್ಲಿ, ಹಮ್ಮಿಕೊಂಡ 'ಪ್ರಶಸ್ತಿ ಪ್ರದಾನ ಕಾರ್ಯಕ್ರಮ' ರವಿವಾರ, ೨೦, ಜೂನ್, ೨೦೧೦ ರಂದು ಬೆಳಿಗ್ಯೆ, ೧೧ ಗಂಟೆಗೆ ಜರುಗಿತು. 'ಹೆಬ್ಬಾರ್ ಬಳಗ', ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ 'ಪ್ರಶಸ್ತಿ-ವಿಜೇತ 'ರಿಗೆ 'ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನ', ಹಾಗೂ 'ಸ್ಮೃತಿ ಫಲಕ'ವನ್ನು ಕೊಟ್ಟು ಸನ್ಮಾನಿಸಲಾಯಿತು.

ನಿಧನ[ಬದಲಾಯಿಸಿ]

ಶ್ರೀಯುತರು ಏಪ್ರಿಲ್ ೦೩, ೨೦೧೩ ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು.