ಎನ್. ಗಾಯತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಎನ್. ಗಾಯತ್ರಿ : -(೧೭-೧-೧೯೫೭)

ಬೆಂಗಳೂರಿನಲ್ಲಿ ಹುಟ್ಟಿದ ಇವರ ತಂದೆ ಕೆ.ನಾಗರಾಜರಾವ್ ಮತ್ತು ತಾಯಿ ಕೆ.ಎನ್.ಜಯಲಕ್ಷ್ಮಿ. ವಿದ್ಯಾಭ್ಯಾಸವೆಲ್ಲವೂ ಬೆಂಗಳೂರಿನಲ್ಲೆ. ಕನ್ನಡ ಎಂ.ಎ. ಮತ್ತು ಮಹಿಳ ಅಧ್ಯಯನದ ಬಗ್ಗೆ ಎಂ.ಎ. ಪದವೀಧರರು. ‘ಆಧುನಿಕ ಕನ್ನಡ ಸಾಹಿತ್ಯ ಚಳುವಳಿಗಳಲ್ಲಿ ಸ್ತ್ರೀ ವಸ್ತು ನಿರ್ವಹಣೆ’ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಬರವಣಿಗೆ ಮತ್ತು ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ, ಮಹಿಳೆಯರ ಏಳಿಗೆ, ಜಾಗೃತಿಗಾಗಿ ತುಡಿತ ಮತ್ತು ದುಡಿತ. ಕೆಲವು ಮಾರ್ಗದರ್ಶಿ ಕೃತಿಗಳ ರಚನೆ. ಹಲವಾರು ನಿಯತ ಕಾಲಿಕೆಗಳ ಸಂಪಾದಕತ್ವ. ಮಹಿಳಾ ಜಾಗೃತಿ ಅಧ್ಯಯನ ಕೇಂದ್ರದಿಂದ ಹೊರತರುತ್ತಿರುವ ‘ಅಚಲ’ ಮಾಸ ಪತ್ರಿಕೆಯ ಸಂಪಾದಕರು. ರಿಸರ್ವ ಬ್ಯಾಂಕಿನ ಕನ್ನಡ ಸಂಘ ಹೊರತರುತ್ತಿರುವ ‘ಕಿರಣ’ ಪತ್ರಿಕೆಯ ಸಂಪಾದಕತ್ವ ನವಕರ್ನಾಟಕ ಪ್ರಕಾಶನ ಸಂಸ್ಥೆ ಪ್ರಕಟಿಸುತ್ತಿರುವ ಪ್ರತಿಷ್ಠಿತ ಮಾಸ ಪತ್ರಿಕೆ ‘ಹೊಸತು’ ಸಹ ಸಂಪಾದಕರು. ಕರ್ನಾಟಕ ಲೇಖಕಿಯರ ಸಂಘದ ಕಾರ‍್ಯದರ್ಶಿಯಾಗಿ ಎರಡು ಬಾರಿ ಆಯ್ಕೆ. ‘ನೆರವು’- ಸೇವಾ ಸಂಸ್ಥೆಯ ಕಾರ‍್ಯದರ್ಶಿ. ಸಂಘ ಸಂಸ್ಥೆಗಳೊಡನೆ ನಿರಂತರ ಒಡನಾಟ, ಮಹಿಳಾ ಸಮಸ್ಯೆಗಳ ಪರಿಹಾರದಲ್ಲಿ ವಿಶೇಷ ಭಾಗಿ. ಹಲವಾರು ಪುಸ್ತಕಗಳ ಪ್ರಕಟಣೆ.

ಫ್ರೆಡರಿಕ್ ಜೋಲಿಯೂ ಕ್ಯೂರಿ (ಅನುವಾದ) ; ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳು (ವ್ಯಕ್ತಿ ಚಿತ್ರ) ; ನಾನೇಕ ನಾಸ್ತಿಕ (ಅನುವಾದ) ; ತ್ರಿವೇಣಿಯವರ ಬಗ್ಗೆ ಬರೆದ ಲೇಖನಗಳ ಸಂಗ್ರಹ (ಸಂಪಾದಿತ) ; ಮಹಿಳೆ-ಬಿಡುಗಡೆಯ ಹಾದಿಯಲ್ಲಿ ಕೃತಿ ರಚನೆ. ಮುಖಾ-ಮುಖಿ (ಸಂದರ್ಶನಗಳ ಸಂಗ್ರಹ) . ‘ಸ್ತ್ರೀವಾದಿ ಪ್ರವೇಶಿಕೆ’ ಮತ್ತು ‘ವಿಮುಕ್ತೆಯ ಹಾದಿ’ (ಎಚ್.ವಿ. ಸಾವಿತ್ರಮ್ಮನವರ ಕೃತಿ ಮತ್ತು ವ್ಯಕ್ತಿತ್ವ) ಬಿ.ಎನ್. ಸುಮಿತ್ರಾಬಾಯಿಯವರೊಡನೆ ಸಂಪಾದಿತ ಮತ್ತೊಂದು ಮಹತ್ತರ ಕೃತಿ-ದಕ್ಷಿಣ ಭಾರತದ ಸಾಂಸ್ಕೃತಿಕ ಅಧ್ಯಯನದ ಸಾಂಸ್ಕೃತಿಕ ಕೋಶ. ‘AN ENCYCLOPAEDIA OF SOUTH INDIAN CULTURE’ ಗ್ರಂಥವನ್ನು ಪ್ರೊ. ಜಿ. ರಾಮಕೃಷ್ಣ ಮತ್ತು ದೇವಿಪ್ರಸಾದ್ ಚಟ್ಟೋಪಾಧ್ಯಾಯರೊಡನೆ ಸಂಪಾದಿಸಿದ್ದಾರೆ. ಮಹಿಳೆ ಬಿಡುಗಡೆಯ ಹಾದಿಯಲ್ಲಿ ಕೃತಿಗೆ ಸಾವಿತ್ರಮ್ಮ ದತ್ತಿನಿ ಪ್ರಶಸ್ತಿ ಹಾಗೂ ಮಹಿಳಾ ಚಳುವಳಿಯ ಮಜಲುಗಳು ಕೃತಿಗೆ ಕ.ಸಾ.ಪದ ದತ್ತಿನಿ ಪ್ರಶಸ್ತಿ. ಹೊಸತು ಪತ್ರಿಕೆಯ ಆಯ್ದ ಸಂಪಾದಿತ ಲೇಖನಗಳು ಪ್ರಕಟಿತ. ಪ್ರಸ್ತುತ ರಿಸರ್ವ್ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಣೆ.