ಎನ್.ಎಸ್.ಚಿದಂಬರರಾವ್

ವಿಕಿಪೀಡಿಯ ಇಂದ
Jump to navigation Jump to search

ಜನನ, ಬಾಲ್ಯ ಮತ್ತು ವೃತ್ತಿಜೀವನ[ಬದಲಾಯಿಸಿ]

'ನೂಲೇನೂರು ಶಂಕರಪ್ಪ ಚಿದಂಬರರಾವ್' [೧]ಇವರು ೧೯೩೬ ಸಪ್ಟಂಬರ ೨೮ರಂದು ಶಿವಮೊಗ್ಗಾ ಜಿಲ್ಲೆಯ ಚನ್ನಗಿರಿಯಲ್ಲಿ ಜನಿಸಿದರು. ತಾಯಿ ಸೀತಮ್ಮನವರು ; ತಂದೆ ಎನ್.ಶಂಕರಪ್ಪ. ಸುಮಾರು ೮ ವರ್ಷವಯಸ್ಸಿನಲ್ಲಿ ಚಿಕ್ಕವರಾಗಿದ್ದ ಎಚ್.ಎಸ್.ವೆಂಕಟೇಶಮೂರ್ತಿಯವರು ಮಲ್ಲಾಡಿಹಳ್ಳಿಯ ವಿವಿಧೋದ್ಧೇಶಿತ ಹೈಸ್ಕೂಲ್ ನಲ್ಲಿ ಕ್ರಾಫ್ಟ್ ಮತ್ತು ಗಣಿತವನ್ನು ಬೋಧಿಸುತ್ತಿದ್ದರು. ಕನ್ನಡದಲ್ಲಿ ಕವಿತೆ, ಕಾವ್ಯರಚನೆಯಲ್ಲಿ ಅವರು ಆಸಕ್ತರಾಗಿದ್ದರು. ಚಿದಂಬರರಾಯರು ಇಂಗ್ಲೀಷ್ ಭಾಷೆಯ ಅಧ್ಯಾಪಕರಾದರೂ ಕನ್ನಡದಲ್ಲಿ ಬಹಳ ಪ್ರಭುತ್ವವನ್ನು ಹೊಂದಿದ್ದರು. ಹಲವಾರು ಕಥೆ, ಕವನಗಳನ್ನು ಬರೆದಿದ್ದರು. ಬರವಣಿಗೆಯಲ್ಲಿ ಅವರಿಬ್ಬರಿಗೂ ಇದ್ದ ಸಮಾನ ಆಸಕ್ತಿ ಅವರನ್ನು ಹತ್ತಿರ ತಂದಿತು. ೧೯೮೮-೮೯ ಮುಖ್ಯೋಪಾಧ್ಯರಾದರು. ೧೯೯೧-೯೪ ರವರೆ ಮಲ್ಲಾಡಿಹಳ್ಳಿಯ ಟಿ.ಸಿ.ಎಚ್.ಕಾಲೇಜಿನ ಪ್ರಾಂಶುಪಾಲರಾದರು. ಆಡಳಿತಾಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತರಾದರು.

ಶಿಕ್ಷಣ,ಮತ್ತು ವ್ಯಕ್ತಿವಿಶೇಷ[ಬದಲಾಯಿಸಿ]

ಚಿದಂಬರರಾವ್ ರವರು ಎಮ್.ಎ.(ಕರ್ನಾಟಕ ವಿ.ವಿ)ಹಾಗು ಬಿ.ಇಡಿ.(ಮೈಸೂರ್ ವಿ.ವಿ) ಪಡೆದಿದ್ದಾರೆ. ಹಿಂದಿಯಲ್ಲಿ ರಾಷ್ಟ್ರ ಭಾಷಾ ವಿಶಾರದ ಪದವೀಧರರಾಗಿದ್ದರು. ಚನ್ನಗಿರಿ,ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. 'ರಾಷ್ಟ್ರೋತ್ಠಾನ ಪರಿಷತ್ ಅವರನ್ನು ಗೌರವಿಸಿತು'. ಕನ್ನಡದಲ್ಲಿ ಪ್ರಕಟಣೆಗಳು ೭ ಸರಿಯುವ ತಾರೆಗಳು ೭೩ ಅಲೆಗಳು ೮೫ ಸಂದಿಘ್ದ ೯೪ ಬೆಂಕಿಯನಾಡು ೮೧ ನಿದೇಶನ ೮೬. ಅವರ ಭಾಷಣ ರೇಡಿಯೋ ಮತ್ತು ದೂರದರ್ಶನದಲ್ಲಿ ೭೦೦ ಸಣ್ಣಕತೆಗಳ ರಚನೆ. ವೃತ್ತಿಯಲ್ಲಿ ಇಂಗ್ಲೀಷ್ ಉಪಾಧ್ಯಾಯರು. ಬಿಳಿ ಹಳದಿ ಮಿಶ್ರಿತ ಬಣ್ಣ. ದಪ್ಪ ಗಾಜಿನ ಸೋಡಾ ಗ್ಲಾಸಿನ ತರಹದ ಕನ್ನಡಕ, ದೊಗಲೆ ಪ್ಯಾಂಟ್, ಮಾಸಿದ ಇಸ್ತ್ರಿಇಲ್ಲದ ಶರ್ಟ್, ಬಣ್ಣ ಹಾಗಿದ ತಲೆಯ ಕೂದಲನ್ನು ಮೇಲಕ್ಕೆ ಬಾಚಿ ಸಜಾಯಿಸುತ್ತಿದ್ದರು. ಎಲೆಅಡಿಕೆ ಜಗಿದ ಹಲ್ಲುಗಳು.ಹೊಗೆ ಘಾಟು ವಾಸನೆ. ಕನ್ನಡ ಸಾಹಿತ್ಯ ಹುಚ್ಚು ಕುಮಾರವ್ಯಾಸ, ಮತ್ತು ಶಿವರಾಮ ಕಾರಂತ, ಅತಿ ಪ್ರಿಯ ಕವಿಗಳು. ಭಾರತವನ್ನು ಗಮಕ ರೂಪದಲ್ಲಿ ಹಾಡುತ್ತಿದ್ದರು.ಒಳ್ಳೆಯ ಜ್ಞಾಪ ಶಕ್ತಿ ಇತ್ತು. ಕಂಠ ಮಾಧುರ್ಯ ಚೆನ್ನಾಗಿತ್ತು. ಮೂಳೆ ಹಾದ ಮುಖ. ಅವರದು, ಬಾಗಿದ ತೆಳ್ಳನೆಯ ಮೈಕಟ್ಟು. ಉಬ್ಬಿದ ಗಟ್ಟಿ ಬಣ್ಣಗೆಟ್ಟ ಹಲ್ಲುಗಳು,ಹತ್ತಾರು ಸ್ಪೇರ್ ಪಾರ್ಟ್ ಗಳನ್ನು ಜೋಡಿಸಿ ನಟ್-ಬೋಲ್ಟ್ ಹಾಕಿದಂತಿದ್ದ ಕಾಲಿನ ಹಿಮ್ಮಡಿಗಳು, ಹತ್ತಾರು ಕನ್ನಡ ಪದ್ಯಗಳನ್ನು ಪುಸ್ತಕನೋಡದೆ ತಡೆಯಿಲ್ಲದೆ ಹಾಡುವಷ್ಟು ಅತ್ಯುತ್ತಮ ಜ್ಞಾಪಕಶಕ್ತಿಯನ್ನು ದೇವರು ಅವರಿಗೆ ಅನುಗ್ರಹಿಸಿದ್ದ.ಇವೆಲ್ಲಾ ಅವರಿಗಿಂತ ಕಿರಿಯಗೆಳೆಯ 'ಎಚ್ಚೆಸ್ವಿ'ಯವರ ಅನ್ನಿಸಿಕೆಗಳು. ಒಟ್ಟಿನಲ್ಲಿ ಅವರೊಬ್ಬ 'ಶಾಪ ಗ್ರಸ್ತ ಗಂಧರ್ವ'ರಂತೆ ಕಾಣಿಸುತ್ತಿದ್ದರು.ಅವರ ಪತ್ನಿಯ ಹೆಸರು,ರಮಾ.ಮೊದಲ ಮಗಳ ಹೆಸರು,'ಕನಕ ಮಂಜುಳ'.

ದೃಷ್ಟಿ ಮಾಂದ್ಯದ ತೊಂದರೆ[ಬದಲಾಯಿಸಿ]

ವಿಪರೀತ ಓದಿ ಅವರ ಕಣ್ಣು ದೃಷ್ಟಿ ಹಾಳಾಯಿತು. ಎಸ್.ಎಸ್.ಎಲ್.ಸಿ ಮತ್ತು ಇಂಟರ್ ನಲ್ಲಿ ರ್ಯಾಂಕ್,ಬಂದರು.ಇಂಟರ್ ಓದುವಾಗ ರ್ಯಾಂಕ್ ಪಡೆಯಲೇ ಬೇಕೆಂದು ಹಗಲು ರಾತ್ರಿ ಓದಿದ ಪರಿಣಾಮವಾಗಿ ಕಣ್ಣೇಕಾಣದಂತಹ ಪರಿಷ್ಟಿತಿ ನಿರ್ಮಾಣವಾಯಿತು. ಆಮೇಲೆ ಕಣ್ಣಿನ ಡಾ.ಇಷ್ಟರಮಟ್ಟಿಗೆ ಮತ್ತೆ ಅವರ ದೃಷ್ಟಿ ಲಾಭವನ್ನು ಕುದುರಿಸಿದ್ದರು.ಮುತ್ತಿನಂತಹ ಅಕ್ಷರ. ಪುಸ್ತಕ, ಇಲ್ಲವೇ ನ್ಯೂಸ್ ಪೇಪರ್ ಓದುವಾಗ ಅರ್ಧ ಅಡಿ ಅಂತರದಲ್ಲಿ ಮುಖಕ್ಕೆ ಅಡ್ಡವಾಗಿ ಹಿಡಿದುಕೊಂಡು ಓದುತ್ತಿದ್ದರು. ತಮ್ಮ ಸಣ್ಣನೆಯ ಕಾಲ ಮೇಲೆ ಕಾಲು ಹಾಕಿ, ಎಡ ಪಾದದ ತುದಿಯನ್ನುಹವಾಯಿ ಚಪ್ಪಲಿಯ ಸಮೇತ ಅಲ್ಲಾಡಿಸುತ್ತಾ ಅವರು ಪದ್ಯವನ್ನುಓದಿ ಗಟ್ಟಿಯಾಗಿ ಮುಸುಕರೆಯುತ್ತಿದ್ದರು. ಕಾವ್ಯದ ಅತ್ಯಂತ ಸೂಕ್ಷ್ಮ ಓದುಗರು. ಸಾಫ್-ಸೀದ ಸಣ್ಣ ಕತೆಗಳಿಗೂ ಅವರ ಕಾವ್ಯಾಸ್ವಾದನೆಗೂ ಅಜಗಜಾಂತರ ವ್ಯತ್ಯಾಸವಿತ್ತು. ಗುಣ ದೋಷಗಳನ್ನು ಬೊಟ್ಟಿಟ್ಟು ತೋರಿಸುವಂತಹ ಸಾಮರ್ಥ್ಯ ಹೊಂದಿದ್ದರು. ಇಷ್ಟವಾದರೆ ಮುಕ್ತಕಂಠದಿಂದ ಹೊಗಳುತ್ತಿದ್ದರು. ಇಲ್ಲವಾರೆ ಅದು ನನಗೆ ಹಿಡಿಸಲಿಲ್ಲ ಎಂದು ಸ್ಪಷ್ಟವಾಗಿ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದರು.ಮನೆಯಲ್ಲಿ ಸಾಮಾನು ಸರಂಜಾಮು ಅಸ್ತವ್ಯಸ್ತವಾಗಿ ಚೆಲ್ಲಿರುತ್ತಿತ್ತು.

ಕಥೆ,ಕಾವ್ಯಗಳಲ್ಲಿ ಆಸಕ್ತಿ[ಬದಲಾಯಿಸಿ]

ಇಂಗ್ಲೀಷ್ ಕವಿ ಎಲಿಯಟ್ ನ,'ವೇಸ್ಟ್ ಲ್ಯಾಂಡ್' ಬಗ್ಗೆ ಚರ್ಚಿಸುವಾಗ, ಪ್ರಿನ್ಸಿಪಾಲ್ ರಾಮಚಂದ್ರಮೂರ್ತಿ, ಕನ್ನಡ ಉಪನ್ಯಾಸಕ ಜಿ.ಎಲ್ ರಾಮಪ್ಪ, ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು.ಚಿದಂಬರರಾವ್ ಗೆ, 'ವಶೀಕರಣ ವಿದ್ಯೆ'ಯಲ್ಲಿ ನಂಬಿಕೆಯಿತ್ತು. ಆದರೆ ಅವರೇ ಅದನ್ನು ನಿಭಾಯಿಸಲು ಪ್ರಯತ್ನಿಸಿದಾಗ ಯಶಸ್ಸುಸಿಗಲಿಲ್ಲ. ಆಡಳಿತ ವಿಷಯದಲ್ಲಿ ಪ್ರಿನ್ಸಿಪಾಲರಿಗೆ ಅತ್ಯಗತ್ಯ ವ್ಯಕ್ತಿ. ಇಂಗ್ಲೀಷ್ ಭಾಷೆಯ ಮೇಲೆ ಹಿಡಿತವಿತ್ತು. 'ಎಲ್ಲಾ ಬಗೆಯ ಆಫೀಸ್ ಕರೆಸ್ಪಾಂಡೆನ್ಸ್' ಗೊತ್ತಿತ್ತು. ಕಾಲಕ್ರಮದಲ್ಲಿ ಅವರ ಉಡುಪು ಸ್ವಲ್ಪ ಬದಲಾವಣೆಯಾಯಿತು. ಈಗ ಅವರು ಮಲ್ಲಿನ ಪಂಚೆ ಜುಬ್ಬಾ. ಸೇಲಂ ಚಪ್ಪಲಿ ಧರಿಸುತ್ತಿದ್ದರು. ಎಲ್ಲರ ಪ್ರಿಯವ್ಯಕ್ತಿಯಾಗಿದ್ದರು. ಶಾಲಾ ಮೀಟಿಂಗ್ ಆದರೆ, 'ಪ್ರಾರ್ಥೆನೆ', 'ಸ್ವಾಗತ ಭಾಷಣ', 'ಮುಖ್ಯಭಾಷಣ',ಮೊದಲಾದ ಹಲವು ಕಾರ್ಯಗಳನ್ನು ಲೀಲಾಜಾಲವಾಗಿ ಸಾವಿರಾರು ಜನರಮುಂದೆ ಹೆಚ್ಚಿನ ವಿಶೇಷ ತಯಾರಿಯಿಲ್ಲದೆ ಮಾತಾಡುವ ಅಸ್ಖಲಿತ ವಾಣಿ ಅವರದು. ನಾಟಕದಲ್ಲಿ ಅಭಿನಯಿಸುವ ಹುಚ್ಚು ಅವರನ್ನು ಕಾಡಿತ್ತು. ಅವರ ಸಹೋದ್ಯೋಗಿ, ರಾಮಪ್ಪನವರು ಸಹಿತ, ಕೈಲಾಸಂರವರ 'ಬಂಡವಾಳವಿಲ್ಲದ ಬಡಾಯಿ ನಾಟಕ'ದಲ್ಲಿ ಅವರೊಡನೆ ಬೆರೆಯುತ್ತಿದ್ದರು. ರಂಗಭೂಮಿಯ ಪ್ರಯೋಗವೆಲ್ಲವನ್ನೂ ಅವರು ನಿಭಾಯಿಸಿದರು. ಆಶ್ರಮದ ರುವಾರಿ, 'ರಾಘವೇಂದ್ರ ಸ್ವಾಮಿಜಿ' ಹಾಗೂ ಮತ್ತೆಲ್ಲರಿಗೂ ಆಪ್ತರಾದರು. ಈ ಜನಪ್ರಿಯತೆ ಕೆಲವುವೇಳೆ ಪಕ್ಷ, ಪ್ರತಿಪಕ್ಷ ಮುಸುಕಿನ ತಿಕ್ಕಾಟಕ್ಕೆ ಎಡೆಮಾಡಿಕೊಡುತ್ತಿತ್ತು. ರಮಾ, ಮತ್ತು ಎಚ್ಚೆಸ್ವಿಯವರ ಅಜ್ಜಿ ಮನೆಯಲ್ಲಿ ಕೂತು, ಪಗಡೆಆಟ ಆಡುವಷ್ಟು ಆಪ್ತರಾಗಿದ್ದರು. ಚಿದಂಬರರಾಯರ ದೃಷ್ಟಿಶಕ್ತಿ ಸ್ವಲ್ವ ಸ್ವಲ್ಪವಾಗಿ ಕುಂಠಿತವಾಯಿತು.

ಬಾಲ್ಯದ ಯವ್ವನದ ಕಥೆಗಳ ನಿರೂಪಣೆ[ಬದಲಾಯಿಸಿ]

ರಾವ್ ತಮ್ಮ ಬಾಲ್ಯದ ಯವ್ವನದ ಪ್ರಣಯ ಸಾಹಸದ ರಸವತ್ತಾದ ಕಥೆಗಳನ್ನು ಕೇಳಿ ಮೆಚ್ಚಿ ಪತ್ರಿಕೆಗಳಲ್ಲಿ ಬರೆಯಲು ಪ್ರೇರೆಪಿಸಿದ್ದು ಎಚ್.ಎಸ್.ವಿ.ಮೂರ್ತಿಯವರು. ರಾವ್ ತಮ್ಮ ಲೇಖನಗಳನ್ನು 'ಸುಧಾಪತ್ರಿಕೆ'ಗೆ ಕಳಿಸಿದರು. ಅದು ಪ್ರಕಟವಾದಮೇಲೆ ಆತ್ಮ ವಿಶ್ವಾಸ ಪ್ರಬಲವಾಯಿತು. ನಂತರ ಅವರು, 'ಸುಧಾ', 'ಪ್ರಜಾವಾಣಿ', 'ಗೋಕುಲ', ಮೊದಲಾದ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಬರೆದು ಕಳಿಸುತ್ತಿದ್ದರು. ಒಂದೆರಡು ವರ್ಷಗಳಲ್ಲಿ ಸಂಪಾದಕರೆ ಅವರಿಗೆ ಪತ್ರಬರೆದು ತರಿಸಿಕೊಳ್ಳಲು ಪ್ರಾರಂಭಿಸಿದರು. ಒಮ್ಮೆ ಬರೆದಮೇಲೆ ಬದಲಾವಣೆ ಮಾಡುತ್ತಿರಲಿಲ್ಲ.ಬರವಣಿಗೆ ಜೋಷಿನ ಕೆಲಸ. ಮೊದಲೇ ೧೦-೧೨ ಬಿಳಿ ಹಾಳೆಗಳನ್ನು ಸ್ಟೇಪಲ್ ಮಾಡಿಟ್ಟುಕೊಂದು ಕಥೆ, ಬರೆಯಲು ಆರಂಭಿಸುತ್ತಿದರು.ಏನಿದ್ದರು ಬರೆಯುವ ಕತೆ, ಅಷ್ಟರಲ್ಲೇ ಮುಗಿಯಬೇಕು. ಪ್ರತಿಮಾಡುವ ಮತ್ತು ತಿದ್ದುವ ಗೋಜಿಗೆ ಹೋಗುತ್ತಿರಲಿಲ್ಲ. ಇನ್ನೊಬ್ಬರ ಬರವಣಿಗೆಯ ಬಗ್ಗೆ ನಿಷ್ಟುರ ವಿಮರ್ಶಕರಾದರೂ,ತಮ್ಮ ಬರವಣಿಗೆಯ ಬಗ್ಗೆ ವಿಪರೀತ ಉದಾಸೀನ ಮನೋಭಾವ. 'ಕೈಕಾಸು ಗಿಟ್ಟುತ್ರಿ ಅದಕ್ಕೆ ಬರಿತಿನೀ ಅನ್ನುತ್ತಿದ್ದರು.'ನೂರಾರು ಕಥೆ ಬರೆದು ಬಿಸಾಕಿದರು. ಅವನ್ನು ಜೋಡಿಸಿಟ್ಟುಕೊಳ್ಳಲಿಲ್ಲ. ರಾವ್ ರವರ ಗೆಳೆಯ 'ಎಚ್ಚೆಸ್ವಿ'ಯವರು, ಒಮ್ಮೆ ಮಲ್ಲಾಡಿಹಳ್ಳಿಗೆ ಬಂದಾಗ, ಅವರ ಮನೆಗೆ ಹೋಗಿ, ಕಥೆಗಳ ಪ್ರತಿಗಳನ್ನೆಲ್ಲಾ ಸಂಗ್ರಹಿಸಿ ಒಂದು ಪುಸ್ತಕ ಮಾಡಿ, ಅವರಿಗೆ ಸ್ನೇಹದ ಕಾಣಿಕೆಯಾಗಿ ಕೊಟ್ಟಾಗ, ಅವರಿಗೆ ಬಹಳ ಸಂತೋಷವಾಗಿತ್ತು. 'ಸರಿಯುವ ತೆರೆಗಳು' ಎನ್ನುವ ಪುಸ್ತಕಕ್ಕೆ ಮುಖಚಿತ್ರ ಬರೆದರು. ಹಣ ಸುರಿದು ಅದನ್ನು ಪ್ರಕಟಿಸಲು ಮುಂದೆ ಬಂದವರು 'ಎಚ್ಚೆಸ್ವಿ'. ಈ ಪುಸ್ತಕ ಬೆಂಗಳೂರಿನ ಶೇಷನಾರಾಯನಾರಾಯಣರ,'ವಿಕಾಸ್ ಮುದ್ರಣಾಲಯ'ದಲ್ಲಿ ಅಚ್ಚಾಯಿತು.

ಕೃತಿಗಳು[ಬದಲಾಯಿಸಿ]

ಕಥಾಸಂಕಲನ[ಬದಲಾಯಿಸಿ]

  • ಸರಿಯುವ ತೆರೆಗಳು

ಕಾದಂಬರಿ[ಬದಲಾಯಿಸಿ]

  • ಬೆಂಕಿಯ ನೆರಳು
  • ನಿರ್ದೇಶನ

ಜೀವನ ಚರಿತ್ರೆ[ಬದಲಾಯಿಸಿ]

  • ಎಚ್ಚಮ ನಾಯಕ

ಸಂಪಾದನೆ[ಬದಲಾಯಿಸಿ]

  • ಕತೆಗಳು-೧೯೮೧
  • ಅಲೆಗಳು
  • ಜೋಳಿಗೆ ಮಹಿಮೆ- ಇದು ಮಲ್ಲಾಡಿಹಳ್ಳಿ ಶ್ರೀ. ಶ್ರೀ. ರಾಘವೇಂದ್ರಸ್ವಾಮಿಗಳ,ಆತ್ಮಚರಿತ್ರೆ.ಇದನ್ನು ಅತ್ಯಂತ ಸಮರ್ಪಕವಾಗಿ ೧೯೯೪ ರಲ್ಲಿ ಸಂಪಾದಿಸಿದ ಹಿರಿಮೆ ಅವರದು.

ಉಲ್ಲೇಖಗಳು[ಬದಲಾಯಿಸಿ]

  1. Who's who of Indian Writers, page 247, Chidambara rao Shankarappa Nulenur