ವಿಷಯಕ್ಕೆ ಹೋಗು

ಎಣ್ಣೆ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಣ್ಣೆ ಮರ
Conservation status
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
K. pinnatum
Binomial name
Kingiodendron pinnatum
(DC.) Harms
ಎಣ್ಣೆಮರದ ಎಲೆಗಳು
ಎಣ್ಣೆಮರದ ಎಲೆಗಳು

ಎಣ್ಣೆಮರ ಲೆಗ್ಯುಮಿನೋಸಿ ಕುಟುಂಬದ (ಫ್ಯಾಮಿಲಿ) ಒಂದು ಮರ.ಇದು ಅಳಿವಿನಂಚಿನಲ್ಲಿರುವ ಪ್ರಬೇಧವಾಗಿದೆ.

ವೈಜ್ಞಾನಿಕ ನಾಮ

[ಬದಲಾಯಿಸಿ]

ಇದರ ವೈಜ್ಞಾನಿಕ ನಾಮ ಹಾರ್ಡ್‍ವಿಕಿಯ ಪಿನ್ನೇಟ[].ಕಿಂಗಿಯೋಡೆಂಡ್ರಾನ್ ಪಿನ್ನಾಟಂ ಎಂಬುದು ಪರ್ಯಾಯ ನಾಮ[]. ವ್ಯಾಪಾರನಾಮ ಪಿನ್ನೆ.

ಲಕ್ಷಣಗಳು

[ಬದಲಾಯಿಸಿ]

ನಿತ್ಯಹರಿದ್ವರ್ಣದ ದೊಡ್ಡ ಜಾತಿ ಮರ. ಎತ್ತರ 300 ಮೀಟರಷ್ಟು ಆಗಬಹುದು ; ಸುತ್ತಳತೆ 4 ಮೀಟರ್ ಹೊಳಪು ಎಲೆಗಳು ದಕ್ಷಿಣ ಕನ್ನಡ, ಕೊಡಗಿನ ಕಾಡುಗಳಲ್ಲಿ ವಿಶೇಷವಾಗಿದೆ. ಚೌಬೀನೆಯಲ್ಲಿ ಮಾಸಲು ಬಿಳುಪಿನ ಬಿಳಿಮರ ಹೆಚ್ಚು. ಕಬ್ಬಿನ ಮರ ಕಂದುಗೆಂಪು. ಇದರಲ್ಲಿ ಒಂದು ಬಗೆಯ ತೈಲರಾಳ ಇದೆ. ಬಿಳಿಮರ ಬಾಳಿಕೆ ಬರುವುದಿಲ್ಲ. ರಕ್ಷಕ ಸಂಸ್ಕರಣೆಯಿಂದ ಮರದ ಬಾಳಿಕೆ ಏರುತ್ತದೆ; ಕೆಚ್ಚು ಚೆನ್ನಾಗಿ ಹದಗೊಳ್ಳುವುದು ಹಾಗೂ ಬಾಳಿಕೆ ಬರುವುದು.

ಉಪಯೋಗಗಳು

[ಬದಲಾಯಿಸಿ]

ಮರ ಸಾಕಷ್ಟು ಗಡಸು ಮತ್ತು ಗಟ್ಟಿ ಮರಗೆಲಸ ಸುಲಭ. ತೊಲೆ, ತೇರು, ಹೆಂಚು ಹಲಗೆ, ನೆಲಹಲಗೆ ಮತ್ತು ಪೀಠೋಪಕರಣಗಳಿಗೆ ಉಪಯುಕ್ತವಾದುದು. ಕಡೆತದ ಕೆಲಸಗಳಿಗೂ ಬರುತ್ತದೆ. ಆರಿಸಿದ ಚೌಬೀನೆ ಬೀರು ಇತ್ಯಾದಿ ಅಂದದ ಉಪಕರಣಗಳಿಗೂ ಉಪಯುಕ್ತ.

ಉಲ್ಲೇಖಗಳು

[ಬದಲಾಯಿಸಿ]
  1. "Hardwickia pinnata". Retrieved 24 April 2016.
  2. "The Plant List". Archived from the original on 16 ಜೂನ್ 2020. Retrieved 24 April 2016.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: