ಎಡ್ವಿನ್ ಹೊವಾರ್ಡ್ ಆರ್ಮ್ಸ್ಟ್ರಾಂಗ್
ಎಡ್ವಿನ್ ಹೊವಾರ್ಡ್ ಆರ್ಮ್ಸ್ಟ್ರಾಂಗ್ | |
---|---|
Born | ಎಡ್ವಿನ್ ಹೊವಾರ್ಡ್ ಆರ್ಮ್‌ಸ್ಟ್ರಾಂಗ್ ೧೮೯೦ ಡಿಸೆಂಬರ್ ೧೮ ಅಮೇರಿಕ |
Nationality | ಅಮೇರಿಕ |
ಅಮೇರಿಕದ ಸಂಶೋಧಕರಾಗಿದ್ದ ಎಡ್ವಿನ್ ಹೊವಾರ್ಡ್ ಆರ್ಮ್‌ಸ್ಟ್ರಾಂಗ್‌ರವರು ನ್ಯೂಯಾರ್ಕಿನಲ್ಲಿ ೧೮೯೦ರ ಡಿಸೆಂಬರ್ ೧೮ರಂದು ಜನಿಸಿದರು. ೧೯೦೬ರಲ್ಲಿ ಲೀ ಡಿ ಫಾರೆಸ್ಟ್ ಸಂಶೋಧಿಸಿದ್ದ ‘ಆಡಿಯೋನ್’ ಎಂಬ ಟ್ರಯೋಡ್ ಕವಾಟದ (triode thermionic valve) ಪ್ರವರ್ಧನಾ ಸಾಮರ್ಥ್ಯವನ್ನು ಉಪಯೋಗಿಸಿ ಆರ್ಮ್‌ಸ್ಟ್ರಾಂಗ್‌ರವರು ಪುನರ್ಭವನ ರೇಡಿಯೋ ಗ್ರಾಹಕ ಮಂಡಲವನ್ನು (regenerative radio receiving circuit) ೧೯೧೨ರಲ್ಲಿ ಸಂಶೋಧಿಸಿದರು.[೧] ಆ ಸಂಶೋಧನೆ ರೇಡಿಯೋ ಸಂವಹನ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು. ಅವರ ಸಂಶೋಧನೆ ಯಾವ ವಿಕೃತಿಯೂ ಇಲ್ಲದೆ (without distortion) ದುರ್ಬಲ ರೇಡಿಯೋ ಸಂಕೇತಗಳನ್ನು ಪ್ರವರ್ಧಿಸುವುದರಲ್ಲಿ ಸಹಕಾರಿಯಾಯಿತು. ಆರ್ಮ್‌ಸ್ಟ್ರಾಂಗ್‌ರವರು ತಮ್ಮ ಆ ಸಂಶೋಧನೆಗೆ ಪೇಟೆಂಟ್ ಗಳಿಸಿದರು. ೧೯೩೩ಯಲ್ಲಿ ಆರ್ಮ್‌ಸ್ಟ್ರಾಂಗ್‌ರವರು ಭೌತವಿಜ್ಞಾನಿ ಮೈಕೇಲ್ ಪ್ಯೂಪಿನ್‌ರವರ ಜೊತೆ ಸೇರಿ, ಎಫ್.ಎಮ್. ಪ್ರಸಾರ ವ್ಯವಸ್ಥೆಯನ್ನು (FM or Frequency Modulation broadcasting system) ಸಂಶೋಧಿಸಿದರು.[೨] ಆರ್ಮ್‌ಸ್ಟ್ರಾಂಗ್‌ರವರು ೧೯೫೪ರ ಜನವರಿ ೩೧ರಂದು ಆತ್ಮಹತ್ಯೆ ಮಾಡಿಕೊಂಡರು.
ಉಲ್ಲೇಖಗಳು
[ಬದಲಾಯಿಸಿ]