ವಿಷಯಕ್ಕೆ ಹೋಗು

ಎಡ್ವರ್ಡ್ ಲಾರಿ ಟಾಟುಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಡ್ವರ್ಡ್ ಲಾರಿ ಟಾಟುಮ್
ಎಡ್ವರ್ಡ್ ಲಾರಿ ಟಾಟುಮ್
Born
ಎಡ್ವರ್ಡ್ ಲಾರಿ ಟಾಟುಮ್

೧೯೦೯ ಡಿಸೆಂಬರ್ ೧೪
ಅಮೇರಿಕ
Nationalityಅಮೇರಿಕ

ಎಡ್ವರ್ಡ್ ಲಾರಿ ಟಾಟುಮ್‌ರವರು,[] ಅಮೇರಿಕದ ಒಬ್ಬ ಸುಪ್ರಸಿದ್ಧ ತಳಿವಿಜ್ಞಾನಿ.

ಎಡ್ವರ್ಡ್ ಲಾರಿ ಟಾಟುಮ್,೧೯೦೯ರ ಡಿಸೆಂಬರ್ ೧೪ರಂದು ಕೊಲರೇಡೋವಿನ ಬೌಲ್ಡರ್‌ನಲ್ಲಿ ಜನಿಸಿದರು. ದಿನಬಳಕೆಯ ಬ್ರೆಡ್ಡಿನ ಬೂಸ್ಟನ್ನು ಕ್ಷ-ಕಿರಣಗಳಿಗೆ ಒಡ್ಡಿದಾಗ ಅದು ವಿಕೃತಿಗೆ (mutation) ಒಳಗಾಗುವ ಬಗ್ಗೆ ಎಡ್ವರ್ಡ್ ಲಾರಿ ಟಾಟುಮ್‌ರವರು ಜಾರ್ಜ್ ವೆಲ್ಸ್ ಬೀಡಲ್‌ [] ರವರ (೧೯೦೩-೧೯೮೯) ಜೊತೆ ಪ್ರಯೋಗಗಳನ್ನು ನಡೆಸಿದರು. ಅಂತಹ ಪ್ರಯೋಗಗಳ ಸರಣಿಯಲ್ಲಿ ವಿಕೃತಿಗಳು ಉಪಾಪಚಯ ಪ್ರಕ್ರಿಯೆಯ ಪಥದಲ್ಲಿ (metabolic pathways) ತೊಡಗಿಸಿಕೊಳ್ಳುವ ಕೆಲವು ನಿಗದಿತ ಕಿಣ್ವಗಳಲ್ಲಿ (enzymes) ಬದ ಲಾವಣೆಯನ್ನು ತರುತ್ತದೆ ಎಂಬುದಾಗಿ ಅವರುಗಳು ತೋರಿಸಿಕೊಟ್ಟರು. ೧೯೪೧ರಲ್ಲಿ ಪ್ರಕಟವಾದ ಅವರ ಪ್ರಯೋಗದ ವಿವರಗಳು ವಂಶವಾಹಿಗಳು(genes) ಮತ್ತು ಕಿಣ್ವಕ ಕ್ರಿಯೆಗಳ ನಡುವೆ ನೇರವಾದ ಸಂಬಂಧವಿದೆ ಎಂಬುದನ್ನು ನಿರೂಪಿಸಿದವು. ವಂಶವಾಹಿಗಳು ಉಪಾಪಚಯದ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನೂ ನಿಯಂತ್ರಿಸುತ್ತವೆ ಎಂಬುದಾಗಿ ಅವರುಗಳು ತೋರಿಸಿಕೊಟ್ಟರು.

ಪ್ರಶಸ್ತಿಗಳು

[ಬದಲಾಯಿಸಿ]

ಈ ಇಬ್ಬರು ತಳಿ ವಿಜ್ಞಾನಿಗಳ ಮಹತ್ವದ ಸಂಶೋಧನೆಗೆ ಪೂರಕವಾಗಿ ಅವರಿಬ್ಬರಿಗೂ ಜಂಟಿಯಾಗಿ ೧೯೫೮ರ ವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಗಳು,[] ಮತ್ತು ಅರ್ಧ ಮೊತ್ತದ ಹಣವನ್ನು ನೀಡಲಾಯಿತು. ಮಿಕ್ಕ ಅರ್ಧ ಹಣವನ್ನು ಮತ್ತು ಪ್ರಶಸ್ತಿಯನ್ನು 'ಜೋಷುವಾ ಲೆಡರ್‌ಬರ್ಗ್‌'ರವರಿಗೆ[] ನೀಡಲಾಯಿತು.

'ಟಾಟುಮ್‌ರವರು', ೧೯೭೫ರ ನವೆಂಬರ್ ೫ರಂದು ನ್ಯೂಯಾರ್ಕ್ ನಗರದಲ್ಲಿ ನಿಧನರಾದರು.

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. English Wikipedia,
  2. English Wikipedia,
  3. https://www.nobelprize.org/nobel_prizes/medicine/laureates/1958/tatum-bio.html
  4. Obituary, Joshua Lederberg