ಎಚ್ ಕೆ ಸುಬ್ಬಯ್ಯ

ವಿಕಿಪೀಡಿಯ ಇಂದ
Jump to navigation Jump to search

ಸುಬ್ಬು ಹೊಲೆಯಾರ್ ಎಂಬ ಕಾವ್ಯನಾಮದಿಂದ ಕಾವ್ಯ ಬರೆಯುತ್ತಿರುವ ಕವಿ ಎಚ್.ಕೆ. ಸುಬ್ಬಯ್ಯ. ಸುಮಾರು ಇಪ್ಪತ್ತು ವರ್ಷಗಳಿಂದ ದಲಿತ ಸಂಘಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಇವರು ಹೆಗ್ಗೋಡಿನ ನೀನಾಸಂನಿಂದ ಒಂದು ವರ್ಷ ಅವಧಿಯ ನಾಟಕ ಡಿಪ್ಲೊಮಾ ತರಬೇತಿಯನ್ನು ಪಡೆದುಕೊಂಡಿದ್ದಾರೆ. ''ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು' ಎಂಬ ಕವಿತಾ ಸಂಕಲನ ೨೦೦೩ರಲ್ಲಿ ಪ್ರಕಟವಾಗಿದೆ. ಈ ಕವನ ಸಂಕಲನದ ಹಸ್ತಪ್ರತಿಗೆ ಜಿ.ಎಸ್.ಎಸ್.ಕಾವ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ , ದಿನಕರ ದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ, ಶ್ರೀಗಂಧದ ಹಾರ ಕಾವ್ಯ ಪ್ರಶಸ್ತಿಗಳು ಲಭವಾಗಿದೆ. ಸುಬ್ಬಯ ಹೊಲೆಯಾರ್ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಂಡಾಯ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು. ೨೦೦೧ರಲ್ಲಿ ಸಕಲೇಶಪುರದಲ್ಲಿ ನಡೆದ ಸಕಲೇಶಪುರ ತಾಲೂಕು ಮಟ್ಟದ ಮೊದಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ಇವರು ೧೯೯೦ರಿಂದ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಸೇವೆಸಲ್ಲಿಸುತ್ತಿದ್ದರೆ.