ಎಚ್. ಡುಂಡಿರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಡುಂಡಿರಾಜ್ ಅವರಿಗೆ ಅಭಿನಂದನೆ - ಮಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್

ಹನಿಗವನಗಳ ರಾಜ, ಚುಟುಕು ಚಕ್ರವರ್ತಿ ಎಂದೇ ಜನಪ್ರಿಯರಾಗಿರುವ ಎಚ್.ಡುಂಡಿರಾಜ್ ಪದ್ಯ ಹಾಗು ಗದ್ಯ ಎರಡರಲ್ಲೂ ಗಣನೀಯ ಕೃಷಿಮಾಡಿರುವ ಸಮಕಾಲೀನ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದಾರೆ. ಈವರೆಗೆ ಇವರ ೫೭ ಕೃತಿಗಳು ಪ್ರಕಟವಾಗಿವೆ. ಇವುಗಳಲ್ಲಿ ೪೫೦೦ ಕ್ಕೂ ಹೆಚ್ಚು ಹನಿಗವನಗಳು, ೩೫೦ಕ್ಕೂ ಹೆಚ್ಚು ಇಡಿಗವನಗಳು, ೫೩೦ಕ್ಕೂ ಹೆಚ್ಚು ಲೇಖನಗಳು, ೧೫ ನಾಟಕಗಳು ಹಾಗೂ ಒಂದು ಪ್ರವಾಸ ಕಥನ ಸೇರಿವೆ. ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ೩೬ ವರ್ಷ ಸೇವೆ ಸಲ್ಲಿಸಿ ೨೦೧೬ರಲ್ಲಿನಿವೃತ್ತರಾದ ಇವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಜೀವನ[ಬದಲಾಯಿಸಿ]

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಟ್ಟಿಕುದ್ರು ಎಂಬ ಹಳ್ಳಿಯಲ್ಲಿ ವೆಂಕಟರಮಣಭಟ್ ಮತ್ತು ರಾಧಮ್ಮ ಅವರ ಮಗನಾಗಿ ೧೮ನೇ ಆಗಸ್ಟ್ ೧೯೫೬ ರಂದು ಜನಿಸಿದರು. ಹಟ್ಟಿಕುದ್ರು ಮತ್ತು ಬಸ್ರೂರಿನಲ್ಲಿ ಪ್ರಾಥಮಿಕ ಹಾಗು ಹೈಸ್ಕೂಲ್ ಶಿಕ್ಷಣ ಮುಗಿಸಿ ಬೆಂಗಳೂರಿನ ವಿಜಯಾಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು. ೧೯೭೨-೭೮ ರಲ್ಲಿ ಹೆಬ್ಬಾಳದ ಕೃಷಿಕಾಲೇಜಿನಲ್ಲಿ ಬಿ.ಎಸ್ಸಿ(ಕೃಷಿ) ಓದಿದರು. ೧೯೭೮-೮೦ರಲ್ಲಿ ದಾರವಾಡ ಕೃಷಿ ಕಾಲೇಜಿನಲ್ಲಿ, ಅತ್ಯಧಿಕ ಅಂಕ ಗಳಿಸಿದ್ದಕ್ಕಾಗಿ ಸ್ವರ್ಣ ಪದಕದೊಂದಿಗೆ ಎಂ.ಎಸ್ಸಿ (ಕೃಷಿ) ಪೂರೈಸಿದರು.

೧೯೮೦ರಲ್ಲಿ ಕಾರ್ಪೋರೇಶನ್ ಬ್ಯಾಂಕ್‌ನಲ್ಲಿ ಕೃಷಿ ಅಧಿಕಾರಿಯಾಗಿ ವೃತ್ತಿ ಆರಂಭಿಸಿ ಮಂಗಳೂರು, ಉಡುಪಿ, ಕಾರ್ಕಳ, ಬ್ರಹ್ಮಾವರ, ಬೆಳಗಾವಿ, ನಾಸಿಕ್, ಮುಂಬೈ ಹಾಗೂ ಬೆಂಗಳೂರಿನಲ್ಲಿ ಒಟ್ಟು ೩೬ ವರ್ಷ ವಿವಿಧ ಹುದ್ದೆಗಳ ನಿರ್ವಹಿಸಿ, ೨೦೧೬ರಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದರು.

ಈಗ ಮಡದಿ ಭಾರತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮಗಳು ಸಹಜಾ, ಅಳಿಯ ಸಂದೀಪ್ ಹಾಗು ಮೊಮ್ಮಗಳು ದಿವಿಜಾ. ಮಗ ಸಾರ್ಥಕ ಮತ್ತು ಸೊಸೆ ಉತ್ಕಲಾ

ಸಾಹಿತ್ಯ[ಬದಲಾಯಿಸಿ]

ವಿದ್ಯಾರ್ಥಿಯಾಗಿದ್ದಾಗಲೆ ಮಕ್ಕಳ ಕವನಗಳ ರಚನೆಯಲ್ಲಿ ತೊಡಗಿದ್ದರು. ಕಾಲೇಜಿನಲ್ಲಿ ಕೈ ಬರಹಪತ್ರಿಕೆ, ಭಿತ್ತಿಪತ್ರಿಕೆ ಪ್ರಕಟಣೆ, ನಾಟಕಗಳಲ್ಲಿ ಅಭಿನಯ ಇತ್ಯದಿಗಳ ಮೂಲಕ ಸದಾ ಚಟುವಟಿಕೆಯಿಂದ ಕೂಡಿದ್ದರು. ಬೆಂಗಳೂರಿನಲ್ಲಿ ಅಣ್ಣ, ಸಾಹಿತ್ಯ ಪ್ರೇಮಿ ಶಿವರಾಮ್ಭಟ್ವರ ಮನೆಯಲ್ಲಿದ್ದ ಸಾಹಿತ್ಯ ಕೃತಿಗಳ ಅಧ್ಯಯನದಿಂದ ಚಿಗುರಿದ ಸಾಹಿತ್ಯಾಸಕ್ತಿ ವೃತ್ತಿಜೀವನದ ಜತೆಗೆ ಪ್ರವೃತ್ತಿಯಾಗಿ ಮುಂದುವರಿಯಿತು. ೨೧ನೇ ವಯಸ್ಸಿನಿಂದಲೇ ಅವರು ಬರೆದ ಕವನ, ಹನಿಗವನ, ಹಾಸ್ಯಲೇಖನ, ಸಾಹಿತ್ಯಿಕ ಬರಹಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿತು. ವಿಶೇಷಾಂಕಗಳಲ್ಲಿ ಹನಿಗವನಗಳ ಪ್ರಕಟಣೆ. ಆಕಾಶವಾಣಿ ಹಾಗೂ ಟಿವಿ ವಾಹನಗಳಲ್ಲಿ ಅನೇಕ ಕವನಗಳು ಹಾಗೂ ನಾಟಕಗಳು ಪ್ರಸಾರಗೊಂಡಿವೆ. ರಂಗ ಹಾಗೂ ರೇಡಿಯೋ ನಾಟಕಗಳಲ್ಲಿಅಭಿನಯಿಸಿದ್ದಾರೆ. ಇವರ ಓಡುವವರು, ಹುಡುಕಾಟ, ಅಜ್ಜಿಕತೆ, ಕೊರಿಯಪ್ಪನ ಕೊರಿಯೋಗ್ರಫಿ, ಅಧ್ವಾನಪುರ ನಾಟಕಗಳು ಹಲವಾರುಪ್ರದರ್ಶನಗಳನ್ನುಕಂಡಿವೆ. ಇವರು ರಚಿಸಿದ ಕೆಲವು ನಾಟಕಗಳು ವಿದೇಶಗಳಲ್ಲೂ ಪ್ರದರ್ಶನ ಕಂಡಿವೆ. ಇತ್ತೀಚಿನ ನಾಟಕ ಪುಕ್ಕಟೆ ಸಲಹೆ ೪೫ ಪ್ರದರ್ಶನಗಳನ್ನುಕಂಡಿದೆ.

ಅಂಕಣಕಾರರಾಗಿಯೂಪ್ರಸಿದ್ಧರಾಗಿರುವ ಡುಂಡಿರಾಜ್ ವಿಜಯಕರ್ನಾಟಕ, ಪ್ರಜಾವಾಣಿ, ಕಸ್ತೂರಿ, ತುಷಾರ, ವಿಜಯವಾಣಿ ಹಾಗೂ ಉದಯವಾಣಿ ಪತ್ರಿಕೆಗಳಿಗೆ ಅಂಕಣ ಬರೆದಿದ್ದಾರೆ. ಉದಯವಾಣಿ ಪತ್ರಿಕೆಯಲ್ಲಿ ‘ಹನಿದನಿ’ಎಂಬ ದೈನಿಕ ಅಂಕಣದಲ್ಲಿ ೨೦೧೧ರ ಸೆಪ್ಟೆಂಬರ್ ತಿಂಗಳಿನಿಂದ ನಿರಂತರವಾಗಿ ಪ್ರತಿ ದಿನವೂ ಹೊಸ ಹನಿಗವನ ಬರೆಯುತ್ತಿದ್ದಾರೆ.

ಹಾಸ್ಯಭಾಷಣಕಾರರಾಗಿಯೂಜನಪ್ರಿಯರಾಗಿರುವ ಡುಂಡಿರಾಜ್ ಕರ್ನಾಟಕ ಮಾತ್ರವಲ್ಲದೆ, ದೆಹಲಿ, ಮುಂಬೈ, ಚೆನ್ನೆöÊ, ಅಮೆರಿಕಾ, ಇಂಗ್ಲೆAಡ್, ಸಿಂಗಾಪೂರ್, ದುಬೈ, ಕತಾರ್ ಹಾಗು ಬಹರೈನ್ನ್ ‌ನಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಹಲವುನಾಟಕಗಳಿಗೆ, ನಕ್ಕಳಾರಾಜಕುಮಾರಿ, ಕೋತಿಗಳುಸಾರ್ಕೋತಿಗಳು, ನಿಂಬೆಹುಳಿ ಹಾಗೂ ಹಾರುವ ಹಂಸಗಳು ಚಲನಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಭಾವಗೀತೆಗಳಿಗೆ ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ಬಿ.ವಿ.ಕಾರಂತ್, ಉಪಾಸನಾ ಮೋಹನ್, ಮನೋರಂಜನ್ ಪ್ರಭಾಕರ್, ವಿ. ಮನೋಹರ್, ಬಿ.ವಿ.ಶ್ರೀನಿವಾಸ್ ಮುಂತಾದವರು ರಾಗ ಸಂಯೋಜನೆ ಮಾಡಿದ್ದಾರೆ. ನಾಡಿನ ಖ್ಯಾತ ಗಾಯಕ ಗಾಯಕಿಯರು ಹಾಡಿರುವ ಈ ಗೀತೆಗಳ ಧ್ವನಿಮುದ್ರಿಕೆಗಳು ಜನಪ್ರಿಯವಾಗಿವೆ.

ಕೃತಿಗಳು[ಬದಲಾಯಿಸಿ]

ಹನಿಗವನಸಂಕಲನಗಳು:

 • ೧.ಪಾಡ್ಯ ಬಿದಿಗೆ ತದಿಗೆ (೧೯೮೫)
 • ೨.ನವನೀತ (೧೯೯೧)
 • ೩.ನೂರು ಹನಿಗವನಗಳು (೧೯೯೨)
 • ೪.ಇನ್ನೂರು ಹನಿಗವನಗಳು (೧೯೯೫)
 • ೫.ಪಂಚ್ಕಜಾಯ (೧೯೯೭)
 • ೬.ಹನಿಕೇತನ (೧೯೯೯)
 • ೭.ಅಳಿಲು ಸೇವೆ (೨೦೦೦)
 • ೮.ಹನಿ ಖಜಾನೆ (೨೦೦೦) (ಇದುವರೆಗಿನ ಹನಿ ಗವನಗಳು)
 • ೯.ಹನಿ ಹನಿ ಪ್ರೀತಿ (೨೦೦೯) (ಆಯ್ದ ಹನಿಗವನಗಳು)
 • ೧೦.ಹನಿ ಹನಿ ಹಾಸ್ಯ (೨೦೦೯) (ಆಯ್ದ ಹನಿಗವನಗಳು)
 • ೧೧.ಹನಿಗಣಿ (೨೦೧೦)
 • ೧೨.ಹನಿಗಾರಿಕೆ (೨೦೧೨)
 • ೧೩.ಹನಿ ದರ್ಶಿನಿ (೨೦೧೩)
 • ೧೪.ಹನಿ ವಾಹಿನಿ (೨೦೧೪)
 • ೧೫.ಹನಿ ಮೋಹಿನಿ(೨೦೧೫)
 • ೧೬.ಹನಿ ರಂಜನಿ (೨೦೧೬)
 • ೧೭.ಹನಿ ಮಾರ್ದನಿ (೨೦೧೮)
 • ೧೮.ಡುಂಡಿ ಸೂಜಿ (ಆಯ್ದ ಹನಿಗವನಗಳು) (೨೦೧೮)
 • ೧೯.ಪಂಚ್ನಾಮಾ (೨೦೧೮)
 • ೨೦.ಮಿನಿ ಮಿನುಗು(೨೦೧೯)
 • ೨೧.ಕರೊನಾರೀ ಸಹೋದರ(೨೦೨೦)


(ಅಕ್ಷತಾಲಕ್ಷತಾ ಮತ್ತು ಕನಕನಕಿಂಡಿ ಕವನ ಸಂಕಲನಗಳಲ್ಲಿಇಡಿ ಗವನಗಳ ಜೊತೆಗೆ ಹನಿಗವನಗಳೂ ಇವೆ.)

ಕವನಸಂಕಲನಗಳು

 • ೧.ನಮ್ಮ ಗೋಡೆಯ ಹಾಡು (೧೯೮೨)
 • ೨.ನೀನಿಲ್ಲದೆ (೧೯೮೬)
 • ೩.ನನ್ನ ಕವಿತೆ ನನ್ನ ಹಾಗೆ (೧೯೯೨)
 • ೪.ಆಯದಕ ವನಗಳು (೧೯೯೮)
 • ೫.ಏನಾಯಿತು (೧೯೯೯)
 • ೬.ಅಕ್ಷತಾ-ಲಕ್ಷತಾ (೨೦೦೪)
 • ೭.ಬನ್ನಿ ನಮ್ಮ ಹಾಡಿಗೆ (ಗೀತೆಗಳು) (೨೦೦೪)
 • ೮.ಇಂಚರ ಬಂದಳು ಇಂಚರ (ಮಕ್ಕಳಕವಿತೆಗಳು)  (೨೦೧೩)
 • ೯.ಕನಕನ ಕಿಂಡಿ (೨೦೧೭)
 • ೧೦.ಇಡಿ ಕಿಡಿ ಕವನಗಳು (ಆಯ್ದಕವನಗಳು) (೨೦೧೭)
 • ೧೧.ಲಾಲಿ ಪಾಪು ಚೀಪು ಚೀಪು (೨೦೨೦) (ಮಕ್ಕಳಕವನಗಳ ಇ-ಪುಸ್ತಕ ಮತ್ತು ಆಡಿಯೋ ಪುಸ್ತಕ)

ಪ್ರಬಂಧ/ ಅಂಕಣಬರಹಗಳಸಂಗ್ರಹ

 • ೧.ಯಾರಿಗೂ ಹೇಳ್ಬೇಡಿ (೨೦೦೦)
 • ೨.ಮಾತು ಕ(ವಿ)ತೆ (೨೦೦೫)
 • ೩.ಮತ್ತಷ್ಟುಮಾತು-ಕ(ವಿ)ತೆ (೨೦೦೬)
 • ೪.ಪರವಾಗಿಲ್ಲ (೨೦೦೭)
 • ೫.ಬಾರಯ್ಯ ಲಂಬೋದರ (೨೦೦೮)
 • ೬.ಟೈಮಿಲ್ಲ ಸಾರ್ಟೈಮಿಲ್ಲ (೨೦೦೮)
 • ೭.ಡುಂಡಿಮ (೨೦೧೦)
 • ೮.ಕಾರ್ಡಿದ್ರೆ ಕೈಲಾಸ (೨೦೧೧)
 • ೯.ಡುಂಡಿ ನಗೆ ಬಂಡಿ (ಆಯ್ದನಗೆಬರಹಗಳು) (೨೦೧೩)
 • ೧೦.ಅನಿವಾಸಿಗಳೇ ವಾಸಿ(ಪ್ರವಾಸಕಥನ) (೨೦೧೩)
 • ೧೧.ಬೋಳಾಯ ತಸ್ಮೆöÊ ನಮಃ (೨೦೧೫)
 • ೧೨.ನೊಣಾನುಬಂಧ (೨೦೧೮)
 • ೧೩.ಕರೆಗಳುಸಾರ್ಕರೆಗಳು (೨೦೧೯)
 • ೧೪.ಕಾಯುವಕಾಯಕ (೨೦೧೯)


ನಾಟಕಗಳು

 • ೧.ಓಡುವವರು(೧೯೮೧)
 • ೨.ಹುಡುಕಾಟ(೧೯೮೫)
 • ೩.ಅಧ್ವಾನಪುರ(೧೯೮೯)
 • ೪.ಕೊರಿಯಪ್ಪನ ಕೊರಿಯೋಗ್ರಫಿ (ಎರಡುನಾಟಕಗಳು) (೧೯೯೧)
 • ೫.ಅಜ್ಜಿಕತೆ (ಮಕ್ಕಳನಾಟಕ) (೧೯೯೪)
 • ೬.ಸಿನಿಮಹಾತ್ಮೆ (ಮೂರುನಾಟಕಗಳು) (೧೯೯೬)
 • ೭.ಕಾಯೋಕಲ್ಪ ಮತ್ತು ಇತರ ನಾಟಕಗಳು (೨೦೦೩)
 • ೮.ಇಪ್ಪತ್ತೊಂದರೆಶತಮಾನ (೨೦೦೩)
 • ೯.ಮಗು ಕಳೆದು ಹೋಗಿದೆ (೨೦೦೬)
 • ೧೦.ಪುಕ್ಕಟೆಸಲಹೆ (೨೦೧೧)


ಸಂಪಾದಿತ

ಸೂಜಿಮಲ್ಲಿಗೆ (ಹನಿಗವನಗಳು) (೧೯೯೬) ಪ್ರ: ಕನ್ನಡಸಾಹಿತ್ಯಪರಿಷತ್,   ಬೆಂಗಳೂರು


ಧ್ವನಿಸುರುಳಿ/ಧ್ವನಿಮುದ್ರಿಕೆಗಳು :

 • ೧.ಡುಂಡಿ ಕಾಮಿಡಿ ಉಪನ್ಕಾಯ್ (ಹನಿಗವನಗಳು) ನಿ: ಸಿ.ಅಶ್ವಥ್ ಮತ್ತು ಟಿ.ಎಸ್. ನಾಗಾಭರಣ
 • ೨.ಸಲ್ಲಾಪ (ಭಾವಗೀತೆಗಳು) ನಿ: ಸಿ.ಅಶ್ವಥ್
 • ೩.ಹುಣ್ಣಿಮೆ (ಭಾವಗೀತೆಗಳು) ನಿ: ಸಿ.ಅಶ್ವಥ್
 • ೪.ನಾವಿರೋದೆಹೀಗೆ (ಹಾಸ್ಯಗೀತೆಗಳು) ನಿ: ಬಿ.ವಿ. ಶ್ರೀನಿವಾಸ್
 • ೫.ಕಿರುನಗೆ (ಭಾವಗೀತೆಗಳು) ನಿ: ಉಪಾಸನಾಮೋಹನ್
 • ೬. ಹಾಸ್ಯಗಂಗೆ (ಹಾಸ್ಯಭಾಷಣದಡಿವಿಡಿ) ನಿ: ಝಂಕಾರ್ಆಡಿಯೊ


ಡುಂಡಿರಾಜ್ಸಾಹಿತ್ಯದಕುರಿತುಕೃತಿಗಳು:

 • ೧.ವಿನೋದಸೌಧದಸಾಹಿತಿಡುಂಡಿರಾಜ್- ಲೇ: ಡಾ.ಜಿ.ಎನ್. ಉಪಾಧ್ಯ
 • ೨. ಡುಂಡಿಮಲ್ಲಿಗೆ- ಸಂ: ಡಾ.ಎಚ್.ಎಸ್.ಸತ್ಯನಾರಾಯಣಮತ್ತುಎನ್.ರಾಮನಾಥ್

ಪ್ರಶಸ್ತಿ, ಗೌರವಗಳು[ಬದಲಾಯಿಸಿ]

 • ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ. (೨೦೦೬)
 • ಅಖಿಲ ಭಾರತ ಬಾನುಲಿ ನಾಟಕ ರಚನಾ ಸ್ಪರ್ಧೆಯಲ್ಲಿ ಅತ್ಯುತ್ತಮ ಹಾಸ್ಯ ನಾಟಕ ಪುರಸ್ಕಾರ. (೧೯೮೯-೯೦)
 • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ.(೧೯೯೪)
 • ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹನಿಗವನ ಗೋಷ್ಠಿಯ ಅಧ್ಯಕ್ಷತೆ (೧೯೯೬)
 • ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಚುಟುಕು ಗೋಷ್ಠಿಯ ಅಧ್ಯಕ್ಷತೆ. (೨೦೦೬)
 • ಕಡೆಂಗೋಡ್ಲು ಕಾವ್ಯ ಪ್ರಶಸ್ತಿ.(೧೯೮೨)
 • ಮುದ್ದಣ ಕಾವ್ಯ ರಾಜ್ಯಪ್ರಶಸ್ತಿ(೧೯೮೫)
 • ಕುಂದಪ್ರಭ - ಕೋ.ಮ.ಕಾರಂತ ಪುರಸ್ಕಾರ(೨೦೦೬)
 • ವಿಶ್ವೇಶ್ವರಯ್ಯ ಪ್ರಶಸ್ತಿ (೨೦೦೭)
 • ಆರ್ಯಭಟಪ್ರ ಶಸ್ತಿ (೨೦೦೭)
 • ಚುಟುಕು ಸಾರ್ವಭೌಮ ಪ್ರಶಸ್ತಿ(೨೦೦೮)
 • ಚುಟುಕು ಚಕ್ರವರ್ತಿ ಪ್ರಶಸ್ತಿ (೨೦೧೧)
 • ಚುಟುಕು ರತ್ನ ಪ್ರಶಸ್ತಿ (೧೯೯೬)
 • ಭಾರ್ಗವಪ್ರ ಶಸ್ತಿ(೧೯೯೩)
 • ಶ್ರೀ ಪೇಜಾವರ ಮಠದ ರಾಮವಿಠಲಪ್ರಶಸ್ತಿ (೨೦೧೨)
 • ಸುರಭಿ ಪ್ರತಿಷ್ಠಾನದ ಬಿಂದುಶ್ರೀ ಪ್ರಶಸ್ತಿ (೨೦೧೩)
 • ಬೆಳಗಾವಿಯ ಜಿನದತ್ತ ದೇಸಾಯಿ ಸಹಸ್ರ ಚಂದ್ರ ದರ್ಶನ ಸಮಿತಿ ಏರ್ಪಡಿಸಿದ್ದ ಹನಿಗವನ ಕೃತಿಗಳ ರಾಜ್ಯ ಮಟ್ಟದ ಸ್ಫರ್ಧೆಯಲ್ಲಿ ‘ಹನಿಗಣಿ’ಸಂಕಲನಕ್ಕೆ ಪ್ರಥಮ ಬಹುಮಾನ(೨೦೧೧)
 • ‘ಹನಿಮೋಹಿನಿ’ಕೃತಿಗೆ ವಿಶ್ವೇಶ್ವರಯ್ಯ ರಾಷ್ತ್ರೀಯ ಸಾಹಿತ್ಯ ಪ್ರಶಸ್ತಿ(೨೦೧೬)
 • ‘ಬೋಳಾಯತಸ್ಮೆöÊನಮಃ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಡಿ. ಮಾಣಿಕರಾವ್ ಸ್ಮರಣಾರ್ಥ ಸಾಹಿತ್ಯ ದತ್ತಿಪ್ರ ಶಸ್ತಿ(೨೦೧೬)
 • ರಂಗಶ್ರೀ ಪ್ರಶಸ್ತಿ (೨೦೧೮)
 • ಶ್ರೀ ಸಿದ್ಧತೋಟೇಂದ್ರ ಚುಟುಕುರತ್ನ ಪ್ರಶಸ್ತಿ (೨೦೧೮)
 • ದುಬೈನಲ್ಲಿ ನಡೆದ ಪ್ರಥಮ ಯು.ಎ.ಇ. ಚುಟುಕು ಸಮ್ಮೇಳನದ ಅಧ್ಯಕ್ಷತೆ (೨೦೧೧)
 • ಅಮೆರಿಕದ ಅಟ್ಲಾಂಟಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲಿ ಹಾಗೂ ಅಲ್ಲಿನ ವಿವಿಧ ನಗರಗಳಲ್ಲಿ ಕಾವ್ಯವಾಚನ (೨೦೧೨)
 • ಸಿಂಗಾಪೂರ್ ಕನ್ನಡಸಂಘದಿಂದ ಸನ್ಮಾನ (೨೦೧೩)
 • ಇಂಗ್ಲೆಂಡಿನ ಬ್ರೆ ಡ್ಫೋರ್ಡ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯು.ಕೆ. ಕನ್ನಡ ಬಳಗದಿಂದ ಸನ್ಮಾನ (೨೦೧೭)
 • ಕತಾರ್ ರಾಜ್ಯೋತ್ಸವದಲ್ಲಿ ಸನ್ಮಾನ (೨೦೧೭)
 • ೧೯೮೨ - ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ( ನಮ್ಮ ಗೋಡೆಯ ಹಾಡು)
 • ೧೯೮೫ - ಮುದ್ದಣ ಕಾವ್ಯ ರಾಜ್ಯ ಪ್ರಶಸ್ತಿ (ನೀನಿಲ್ಲದೆ)
 • ೧೯೮೯-೯೦ - ಅತ್ಯುತ್ತಮ ಹಾಸ್ಯ ನಾಟಕ - ಅಖಿಲ ಭಾರತ ಬಾನುಲಿ ನಾಟಕ ಸ್ಪರ್ಧೆ ( ನಾಳೆ ಬನ್ನಿ)
 • ೧೯೯೦ - ಕರ್ನಾಟಕ ಸರಕಾರದ ಬಹುಮಾನ (ನವನೀತ)
 • ೧೯೯೪ - ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (ಅಜ್ಜಿ ಕಥೆ)
 • ೧೯೯೬ - ಚುಟುಕುರತ್ನ ಪ್ರಶಸ್ತಿ
 • ೧೯೯೬ - ಅಧ್ಯಕ್ಷತೆ - ಹನಿಗವನಗೋಷ್ಠಿ , ೬೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
 • ೨೦೦೬-೦೭ - ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪುರಸ್ಕಾರ(ರೇಡಿಯೋ ರಂಗ ನಾಟಕಕ್ಕೆ ಸಲ್ಲಿಸಿರುವ ಸೇವೆಗೆ)

ಹೊರಗಿನ ಸಂಪರ್ಕಗಳು[ಬದಲಾಯಿಸಿ]