ಎಚ್. ಗಿರಿಜಮ್ಮ
ಡಾ. ಎಚ್. ಗಿರಿಜಮ್ಮ | |
---|---|
ಜನನ | ಹರಿಹರ, ಕರ್ನಾಟಕ |
ಮರಣ | ಆಗಸ್ಟ್ ೧೭, ೨೦೨೧ ದಾವಣಗೆರೆ, ಕರ್ನಾತಕ |
ವೃತ್ತಿ | ವೈದ್ಯೆ, ಲೇಖಕಿ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕಥೆ, ಕಾದಂಬರಿ, ವೈದ್ಯ ವಿಜ್ಞಾನ |
ಪ್ರಭಾವಗಳು |
ಡಾ. ಎಚ್. ಗಿರಿಜಮ್ಮ ಒಬ್ಬರು ವೈದ್ಯೆ ಹಾಗೂ ಕನ್ನಡ ಸಾಹಿತಿ. ಹಲವು ಕಥಾಸಂಕಲನಗಳನ್ನು, ವೈದ್ಯವಿಜ್ಞಾನ ಕೃತಿಗಳನ್ನು ರಚಿಸಿದವರು. ಸಾಹಿತ್ಯ ಕ್ಷೇತ್ರದಲ್ಲಷ್ಟೇ ಅಲ್ಲದೆ ಚಲನಚಿತ್ರ, ಸಾಕ್ಷ್ಯಚಿತ್ರಗಳ ಬರೆವಣಿಗೆ, ನಿರ್ಮಾಣಗಳಲ್ಲಿ ಕೂಡ ತೊಡಗಿಸಿಕೊಂಡಿದ್ದರು.
ಜೀವನ
[ಬದಲಾಯಿಸಿ]ಇವರು ಹರಿಹರದಲ್ಲಿ ಜನಿಸಿದರು. ಪಿಯುಸಿವರೆಗೆ ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಹರಿಹರದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದರು. ಅನಂತರ ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಮುಂದುವರೆಸಿದರು. ೨೦ಕ್ಕೂ ಹೆಚ್ಚು ವರ್ಷಗಳ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು.[೧]
ವೃತ್ತಿ ಪ್ರವೃತ್ತಿ
[ಬದಲಾಯಿಸಿ]ವೃತ್ತಿಯಿಂದ ವೈದ್ಯೆಯಾಗಿದ್ದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿದ್ದರು. ಪ್ರವೃತ್ತಿಯಿಂದ ಸಾಹಿತ್ಯ, ಚಲನಚಿತ್ರ, ಸಾಕ್ಷ್ಯಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ೧೫ ಟೆಲಿಫಿಲ್ಮ್‌ಗಳು, ೫ ಟೆಲಿ ಧಾರಾವಾಹಿಗಳು ಮತ್ತು ೧೦ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.[೨] 'ಪಂಚವಟಿ', 'ಗಾಜಿನ ಮನೆ', 'ಮೇಘ ಮಲ್ಹಾರ' ಸಿನೆಮಾಗಳಿಗೆ ಕತೆ ಬರೆದಿದ್ದಾರೆ.[೩]'ಅಂತರಗಂಗೆ' ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.
ಸಾಹಿತ್ಯ
[ಬದಲಾಯಿಸಿ]ಹಲವು ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಕತೆಗಳನ್ನು, ನೀಳ್ಗತೆಗಳನ್ನು ಬರೆದಿದ್ದಾರೆ. ಅವರು ಒಟ್ಟು ೫೦ ಕತೆಗಳನ್ನು, ಹದಿನೇಳು ಕಾದಂಬರಿ, ಒಂಭತ್ತು ಕಥಾ ಸಂಕಲನ, ಹತ್ತೊಂಬತ್ತು ವೈದ್ಯ ವಿಜ್ಞಾನದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.[೪] (ಕೆಳಗಿನದು ಅಪೂರ್ಣ ಪಟ್ಟಿ)
ಕಾದಂಬರಿಗಳು
[ಬದಲಾಯಿಸಿ]- ಮೇಘ ಮಂದಾರ (ಈ ಕಾದಂಬರಿಯು ಚಲನಚಿತ್ರವಾಗಿದೆ. ೧೯೯೨)
- ಚಂದಮಾಮ
- ತಮಸೋಮ ಜ್ಯೋತಿರ್ಗಮಯ
- ಅಂಬರತಾರೆ
- ಬೆಂಕಿಹೂ
ಕಥಾಸಂಕಲನಗಳು
[ಬದಲಾಯಿಸಿ]- ಬಿರುಕು
- ಆಯ್ದ ಕತೆಗಳು
- ಸಂಜೆ ಮಲ್ಲಿಗೆ
ವೈದ್ಯ ವಿಜ್ಞಾನ ಕೃತಿಗಳು
[ಬದಲಾಯಿಸಿ]- ನಿಮ್ಮ ಮಗು
- ಸ್ತ್ರೀ ದೇಹ
- ಬಸಿರು
- ಬಂಜೆತನ ಮತ್ತು ಪರಿಹಾರೋಪಾಯಗಳು
- ಬಂಜೆತನದ ಬವಣೆಗಳು
- ಮಕ್ಕಳು ಮನಸ್ಸು ಮತ್ತು ಬೆಳವಣಿಗೆ
- ಮಕ್ಕಳು-ಮನಸು
- ಸಂತಾನಹೀನತೆ
- ಗರ್ಭಕೋಶದ ಖಾಯಿಲೆಗಳಿಗೆ ಚಿಕಿತ್ಸೆ[೫]
- ಮನುಷ್ಯ ದೇಹ ಮತ್ತು ಆರೋಗ್ಯ (ಡಾ. ಪೂರ್ಣಿಮಾ ಭಟ್ ಸಹಲೇಖಕಿ)
- ರಕ್ತದ ಕಾಯಿಲೆಗಳು
ಆತ್ಮಕಥನ
[ಬದಲಾಯಿಸಿ]- ಕಾಡತಾವ ನೆನಪುಗಳು
- ರಾಜ್ಯೋತ್ಸವ ಪ್ರಶಸ್ತಿ - ೨೦೧೪
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೨೦೦೬[೭]
- ಅತ್ತಿಮಬ್ಬೆ ಪ್ರಶಸ್ತಿ
- ಬಿ. ಸರೋಜಾದೇವಿ ದತ್ತಿನಿಧ ಪ್ರಶಸ್ತಿ
- ವಿಶ್ವೇಶ್ವರಾಯ ಪ್ರಶಸ್ತಿ
- ಕನ್ನಡ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ
- ಡಾ. ಪಿ.ಇ ಎಸ್. ಶಂಕರ್ ಪ್ರತಿಷ್ಠಾನದ ‘ಶ್ರೇಷ್ಠ ವೈದ್ಯ’ ಸಾಹಿತಿ ಪ್ರಶಸ್ತಿ[೮]
ನಿಧನ
[ಬದಲಾಯಿಸಿ]೧೭ಆಗಸ್ಟ್ ೨೦೨೧ ರಂದು ದಾವಣಗೆರೆಯಲ್ಲಿ ನಿಧನರಾದರು.[೯] ಅವರಿಗೆ ೭೦ ವರ್ಷ ವಯಸ್ಸಾಗಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ ಸಂಜೆವಾಣಿ ವರದಿ, ೧೭ ಆಗಸ್ಟ್ ೨೦೨೧
- ↑ http://www.viggy.com/english/current_ananya.asp
- ↑ "Dr H Girijamma: Filmography". Chiloka.com. Retrieved 28 September 2021.
- ↑ ಡಾ ಹೆಚ್ ಗಿರಿಜಮ್ಮ ಅವರೊಂದಿಗೆ ಬಿ ಎನ್ ಮಲ್ಲೇಶ್ ಸಂದರ್ಶನ, ಅವಧಿ ಮ್ಯಾಗಜೀನ್
- ↑ https://kanaja.karnataka.gov.in/ebook/wp-content/uploads/2020/PDF/667.pdf
- ↑ ಡಾ. ಎಚ್. ಗಿರಿಜಮ್ಮ, ೧೭ ಆಗಸ್ಟ್ ೨೦೨೧, ಕನ್ನಡಪ್ರಭ
- ↑ "Five writers selected for Kannada Sahitya Academy awards". The Hindu. Bangalore. 25 February 2006. Retrieved 1 November 2014.
- ↑ ‘ಶ್ರೇಷ್ಠ ವೈದ್ಯ’ರಾಗಿ ಡಾ.ಸಿ.ಆರ್.ಚಂದ್ರಶೇಖರ್ ಹಾಗೂಡಾ.ಗಿರಿಜಮ್ಮ, ೦೭ ಡಿಸೆಂಬರ್ ೨೦೦೧, ಕನ್ನಡ ಒನ್ ಇಂಡಿಯಾ
- ↑ ಗಿರಿಜಮ್ಮ ನಿಧನ, ೧೭ ಆಗಸ್ಟ್ ೨೦೨೧, ವಿಜಯವಾಣಿ