ಎಚ್. ಎಸ್. ಅನುಪಮಾ
ವೈದ್ಯೆ, ಲೇಖಕಿ, ಚಿಂತಕಿ | |
ಡಾ. ಎಚ್. ಎಸ್. ಅನುಪಮಾ (6-2-1970) ವೃತ್ತಿಯಲ್ಲಿ ವೈದ್ಯೆ. ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಪದವಿ: ಎಂಬಿಬಿಎಸ್ - ಬಳ್ಳಾರಿ ಮೆಡಿಕಲ್ ಕಾಲೇಜ್. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಕವಲಕ್ಕಿ ಗ್ರಾಮದಲ್ಲಿ 33 ವರ್ಷದಿಂದ ಜಲಜ ಜನರಲ್ ಮತ್ತು ಮೆರ‍್ನಿಟಿ ಕ್ಲಿನಿಕ್ ನಡೆಸುತ್ತಿದ್ದಾರೆ.
2021ರ ಕೋವಿಡ್ ಪಿಡುಗಿನ ಸಂದರ್ಭದಲ್ಲಿ, ಟಿವಿ9 ಕನ್ನಡ ಡಿಜಿಟಲ್‌ಗಾಗಿ "ಕವಲಕ್ಕಿ ಮೇಲ್" ಎಂಬ ಸರಣಿಯ ಮೂಲಕ ತಮ್ಮ ವೈದ್ಯಕೀಯ ವೃತ್ತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.[೧] ಇದುವರೆಗೆ 63 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ 7 ಕವನ ಸಂಗ್ರಹ, 3 ಕಥಾ ಸಂಕಲನ, 1 ಕಾದಂಬರಿ, 2 ಸಂಶೋಧನಾ ಕೃತಿಗಳು, 9 ಜೀವನ ಚರಿತ್ರೆ, 5 ವೈದ್ಯಕೀಯ-ವಿಜ್ಞಾನ ಬರಹಗಳ ಪುಸ್ತಕಗಳು, 3 ಪ್ರವಾಸ ಕಥನ, 8 ಲೇಖನ ಸಂಗ್ರಹ, 10 ಅನುವಾದಿತ ಕೃತಿಗಳು, 6 ಸಂಪಾದನೆ, 8 ಸಹ ಸಂಪಾದನೆಯ ಪುಸ್ತಕಗಳು ಸೇರಿವೆ. ವಿಜಯಪುರದ ಮಹಿಳಾ ವಿಶ್ವವಿದ್ಯಾಲಯವೂ ಸೇರಿದಂತೆ ಶಾಲೆ, ಕಾಲೇಜುಗಳಲ್ಲಿ ಬರಹ/ಪುಸ್ತಕಗಳು ಪಠ್ಯವಾಗಿವೆ. `ನಾನು ಕಸ್ತೂರ್’ ಪುಸ್ತಕವು ತಮಿಳು ಮತ್ತು ತೆಲುಗಿಗೆ ಅನುವಾದಗೊಂಡಿವೆ. ಕಥೆಗಳು ಇಂಗ್ಲಿಷಿಗೆ ಭಾಷಾಂತರಗೊಂಡಿದ್ದು ಪ್ರಕಟಣೆಗೆ ಸಿದ್ಧವಾಗಿವೆ. ಪ್ರವಾಸ ಕಥನ `ಅಂಡಮಾನ್ ಕಂಡ ಹಾಗೆ’ ಮತ್ತು ಕಾದಂಬರಿ `ಬೆಳಗಿನೊಳಗು’ವಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿರುವುದೂ ಸೇರಿ ಕೆಲವು ಮನ್ನಣೆ ಪಡೆದಿದ್ದಾರೆ.
ಪ್ರಸ್ತುತ ಧಾರವಾಡದ ಕರ್ನಾಟಕ ವಿ.ವಿ.ದ ಸಿಂಡಿಕೇಟ್ ಸದಸ್ಯರಾಗಿದ್ದಾರೆ. 2014-2017ರ ಅವಧಿಗೆ `ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ (ಅನುವಾದ ಅಕಾಡೆಮಿ)ಯ ಸದಸ್ಯರಾಗಿದ್ದರು.
ಹೊನ್ನಾವರದ `ಮಂಥನ’ ಸಾಹಿತ್ಯಿಕ, ಸಾಂಸ್ಕೃತಿಕ ವೇದಿಕೆಯ ಸಹ ಸಂಚಾಲಕರು. ದಲಿತ, ಜನಪರ ಮತ್ತು ಮಹಿಳಾ ಸಂಘಟನೆಗಳ ಸಹಭಾಗಿ. `ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ಕಾರ್ಯಕರ್ತೆಯಾಗಿ ರಾಜ್ಯಾದ್ಯಂತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈವರೆಗೆ 11 ಜಿಲ್ಲೆಗಳಲ್ಲಿ ನಡೆದ ರಾಜ್ಯಮಟ್ಟದ ಮಹಿಳಾ ಸಮಾವೇಶದ ಸಂಘಟನಾ ತಂಡದಲ್ಲಿ ಸಕ್ರಿಯರಾಗಿದ್ದಾರೆ. `ಮೇ ಸಾಹಿತ್ಯ ಮೇಳ ಬಳಗ’ ಎಂಬ ಸಮಾನತೆಯ ಸಮಾಜಕ್ಕಾಗಿ ಕಟ್ಟಿದ ಹೊಸ ಸಾಮಾಜಿಕ-ಸಾಂಸ್ಕೃತಿಕ ಜೊತೆಗುಂಪಿನ ಸಹಭಾಗಿಯಾಗಿ ಪ್ರತಿವರ್ಷ ಮೇ ತಿಂಗಳಿನಲ್ಲಿ ನಡೆಯುವ ಮೇ ಸಾಹಿತ್ಯ ಮೇಳದ ಸಂಘಟಕರಲ್ಲಿ ಒಬ್ಬರಾಗಿದ್ದಾರೆ. ಹೊನ್ನಾವರದಲ್ಲಿ `ಮಂಥನ’ ವೇದಿಕೆ ವತಿಯಿಂದ 11 ವರ್ಷ ಹತ್ತಾರು ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. `ಕವಿ ಪ್ರಕಾಶನ’ ನಡೆಸುತ್ತ ಬೇರೆಬೇರೆ ಬರಹಗಾರರ 20 ಕೃತಿ ಪ್ರಕಟಿಸಿದ್ದಾರೆ. ಕವಲಕ್ಕಿ ಹಳ್ಳಿಯ ಆಸುಪಾಸಿನ ಊರಿನವರೊಡನೆ `ಸಮತಾ ಬಳಗ’ ಕಟ್ಟಿ ಗಾಂಧಿ ಜಯಂತಿಯAದು ಕಾಲ್ನಡಿಗೆ ಜಾಥಾ, ಪ್ಲಾಸ್ಟಿಕ್ ವಿರೋಧಿ ಅಭಿಯಾನ, ಪ್ರತಿ ರವಿವಾರದ ಗ್ರಾಮಸ್ವಚ್ಛತಾ ಕಾರ್ಯಕ್ರಮ, ಶಾಲಾಕಾಲೇಜುಗಳಲ್ಲಿ ಲಿಂಗಸೂಕ್ಷö್ಮತಾ ಕಾರ್ಯಾಗಾರ ನಡೆಸುತ್ತಾರೆ. ಬಳಗದ ವತಿಯಿಂದ ವಿಭಿನ್ನವಾಗಿ `ಮಹಿಳಾ ಚೈತನ್ಯ ದಿನ’, `ಶ್ರಮಿಕರ ದಿನ’ ಆಚರಿಸಲಾಗುತ್ತದೆ.
ಪ್ರಜ್ಞಾ ಜಾಗೃತಿ ಯುವ ಶಿಬಿರ
[ಬದಲಾಯಿಸಿ]ತಮ್ಮದೇ ಮನೆಯಲ್ಲಿ ಪ್ರತಿ ತಿಂಗಳು 25-30 ಯುವ ಜನರಿಗೆ `ಪ್ರಜ್ಞಾ ಜಾಗೃತಿ ಯುವ ಶಿಬಿರ’ ಎಂಬ ಕಾರ್ಯಾಗಾರ ನಡೆಸುತ್ತಾರೆ. ಯುವತಿ, ಯುವಕರಿಗೆ ನಡೆಯುವ ಪ್ರತ್ಯೇಕ ಶಿಬಿರಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬರುವ ತರುಣ, ತರುಣಿಯರು ಭಾಗವಹಿಸಿ ಲಿಂಗಸೂಕ್ಷö್ಮತೆ, ಸಮಾಜ-ಸಂಬAಧ-ಆರೋಗ್ಯವೂ ಸೇರಿದಂತೆ ಹಲವಾರು ವಿಷಯಗಳ ಬಗೆಗೆ ನಡೆಯುವ ಸಂವಾದ, ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಂತಹುದೇ ಶಿಬಿರಗಳನ್ನು ವಿವಿಧ ಊರುಗಳ ಕಾಲೇಜುಗಳಲ್ಲಿಯೂ ನಡೆಸಿಕೊಡುತ್ತಾರೆ.
ವಿಳಾಸ: ಡಾ. ಎಚ್. ಎಸ್. ಅನುಪಮಾ, ಕವಲಕ್ಕಿ; ಜಲಜ ಜನರಲ್ ಮತ್ತು ಹೆರಿಗೆ ಆಸ್ಪತ್ರೆ, ಕವಲಕ್ಕಿ ಅಂಚೆ, ಹೊನ್ನಾವರ ತಾ, ಉ. ಕ. ಜಿಲ್ಲೆ, ಪಿನ್: 581361 Email:anukrishna93@gmail.com
ಡಾ. ಎಚ್. ಎಸ್. ಅನುಪಮಾ ಅವರ ಪ್ರಕಟಿತ ಕೃತಿಗಳು:
[ಬದಲಾಯಿಸಿ]ಕವನ ಸಂಕಲನ
[ಬದಲಾಯಿಸಿ]- ಕಾಡುಹಕ್ಕಿಯ ಹಾಡು
- ಸಹಗಮನ
- ಬುದ್ಧ ಚರಿತೆ
- ನೆಗೆವ ಪಾದದ ಜಿಗಿತ
- ಸಬರಮತಿ
- ಎರಡಳಿದು
- ಅಮ್ಮಮ್ಮನ ಕವಿತೆಗಳು
ಕಥಾ ಸಂಕಲನ
[ಬದಲಾಯಿಸಿ]- ಹೂವರಳಿದ್ದಕ್ಕೆ ಯಾಕೆ ಸಾಕ್ಷಿ
- ಚಿವುಟಿದಷ್ಟೂ ಚಿಗುರು
- ಕೋವಿಡ್: ಡಾಕ್ಟರ್ ಡೈರಿ
ಕಾದಂಬರಿ
[ಬದಲಾಯಿಸಿ]- ಬೆಳಗಿನೊಳಗು ಮಹಾದೇವಿಯಕ್ಕ
- ಸಂಶೋಧನಾ ಕೃತಿಗಳು
- ಬುದ್ಧ, ಧಮ್ಮ, ಸಮಾಜ ಸುಧಾರಕರು
- ಬುದ್ಧ, ಧಮ್ಮ ಮತ್ತು ಮಹಿಳೆ
ಜೀವನ ಚರಿತ್ರೆ
[ಬದಲಾಯಿಸಿ]- ಬಾನಿನಲ್ಲಿ ಮಹಿಳೆ: ಸುನಿತಾ ವಿಲಿಯಮ್ಸ್
- ಛತ್ರಪತಿ ಶಾಹೂ: ಜನರ ನೋವಿಗೆ ಮಿಡಿದ ಪ್ರಾಣಮಿತ್ರ
- ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ
- ದಲಿತಪ್ರಜ್ಞೆಯ ದನಿ ಜೋತಿಬಾ
- ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ
- ವಿಮೋಚಕನ ಹೆಜ್ಜೆಗಳು - ಡಾ. ಬಿ. ಆರ್. ಅಂಬೇಡ್ಕರ್ ಜೀವನ ಚರಿತ್ರೆ
- ನಾನು ಕಸ್ತೂರ್ – ಕಸ್ತೂರಬಾ ಜೀವನ ಕಥನ
- ಜನ ಸಂಗಾತಿ ಭಗತ್
- ಜನಸೇವಾಸಕ್ತೆ ಯಶೋಧರಾ ದಾಸಪ್ಪ
ವೈದ್ಯಕೀಯ-ವಿಜ್ಞಾನ
[ಬದಲಾಯಿಸಿ]- ಜೀವಕೋಶ: ವೈದ್ಯಲೋಕದ ಕಥನ
- ಮಹಿಳಾ ಆರೋಗ್ಯ - ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ.
- ಮಹಿಳೆ, ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯ
- ಮುಟ್ಟು – ವಿಜ್ಞಾನ, ಸಂಸ್ಕೃತಿ ಮತ್ತು ಅನುಭವ
- ಪ್ಲಾಸ್ಟಿಕ್-ಪರಿಸರ: ಪರ್ಯಾಯ, ಪ್ರಯೋಗ
ಪ್ರವಾಸ ಕಥನ
[ಬದಲಾಯಿಸಿ]- ನೈಲ್ ನದಿಯಗುಂಟ ಶರಾವತಿಯನರಸುತ್ತ - ಈಜಿಪ್ಟ್ ಪ್ರವಾಸ ಕಥನ
- ಅಂಡಮಾನ್: ಕಂಡ ಹಾಗೆ
- ಚೆಗೆವಾರನ ನೆಲದಲ್ಲಿ (ದಕ್ಷಿಣ ಅಮೆರಿಕಾ ಪ್ರವಾಸ ಕಥನ)
ಲೇಖನ ಸಂಗ್ರಹ
[ಬದಲಾಯಿಸಿ]- ಮಹಿಳೆ: ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ
- ಹೆಣ್ಣು: ಸಂಕರ ಕಾಲದ ಆತ್ಮಪ್ರಜ್ಞೆ
- ಮುಳ್ಳಮೇಲಿನ ಸೆರಗು (ಅತ್ಯಾಚಾರ ಮತ್ತು ಕಾನೂನು)
- ನೋಯುವ ಹಲ್ಲಿಗೆ ಹೊರಳುವ ನಾಲಿಗೆ: ಅಂಕಣ ಬರಹ
- ಬುದ್ಧ ಬೆಳಕಿನಲ್ಲಿ ಅಂಬೇಡ್ಕರ್ ಭಾರತ
- ಸಂವಿಧಾನ ಮತ್ತು ಮಹಿಳೆ
- ಹೆಣ್ಣು ಹೆಜ್ಜೆ (ಮಹಿಳಾ ಮಾದರಿ ಮತ್ತು ಮಾರ್ಗ)
- ಗಡಿ ದಾಟಿದ ಹೆಣ್ಣುಗಳ ಕಥನ: ಸ್ವಾತಂತ್ರದ ಬೆಳಕಿನ ಕಡೆಗೆ
ಅನುವಾದ
[ಬದಲಾಯಿಸಿ]- ಉರಿಯ ಪದವು: ಮರಾಠಿ ಕವಿ ನಾಮದೇವ್ ಢಸಾಳ್ ಕವನಗಳ ಅನುವಾದ
- ಮರಗುದುರೆ: ತೆಲುಗು ಕವಿ ನಗ್ನಮುನಿ ಮಾತು-ಕವಿತೆ ಅನುವಾದ
- ಅಂಬೇಡ್ಕರ್‌ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು: ಡಾ. ಆನಂದ್ ತೇಲ್ತುಂಬ್ಡೆ
- ಮೋಟಾರ್ ಸೈಕಲ್ ಡೈರೀಸ್: ಚೆಗೆವಾರ (ಅನುವಾದ)
- ಭಗತ್ ಸಿಂಗ್ ಜೈಲ್ ಡೈರಿ – (ಅನು) ಮೂಲ ಇಂಗ್ಲಿಷ್: ಚಮನ್ ಲಾಲ್
- ತಾಳೆ ಗರಿ (ಬಾಮಾ ಅವರ ತಮಿಳು ಆತ್ಮಕತೆ ಕರುಕ್ಕು ಕನ್ನಡಾನುವಾದ
- ಉರಿವ ಕುಡಿಯ ನಟ್ಟ ನಡುವೆ – ಜಲಾಲುದ್ದೀನ್ ರೂಮಿ ಕವಿತೆಗಳ ಅನುವಾದ
- ಕರಿ ಕಣಗಿಲ - ಅನುವಾದಿತ ತೆಲುಗು ದಲಿತ ಕಾವ್ಯ ಸಂಗ್ರಹ (ಮೂಲ ಕೆ. ಪುರುಷೋತ್ತಮ್)
- ಆ ಹದಿಮೂರು ವರುಷಗಳು: ನಕ್ಸಲೈಟನ ಜೈಲು ಆತ್ಮಕಥನ, ಹಿಂದಿ ಮೂಲ: ರಾಮಚಂದ್ರ ಸಿಂಗ್, ಇಂಗ್ಲಿಷ್‌ಗೆ: ಮಧು ಸಿಂಗ್
- ಕಾಮ್ರೇಡ್ ಆಗಿ ನನ್ನ ಬದುಕು – ಮೈ ಲೈಫ್ ಅಸ್ ಎ ಕಾಮ್ರೇಡ್ ಕನ್ನಡಾನುವಾದ. (ಮೂಲ ಇಂಗ್ಲಿಷ್: ಕೆ. ಕೆ. ಶೈಲಜಾ, ಮಂಜು ಸಾರಾ ರಾಜನ್ ಜೊತೆಗೆ.)
- ಗೀತಾಂಜಲಿಯ ಕವಿತೆಗಳು (ಗೀತಾಂಜಲಿ ಘೈ (ಮೂಲ ಇಂಗ್ಲಿಷ್) ಆಯ್ದ ಕವನಗಳ ಕನ್ನಡ ಅನುವಾದ)
ಸಂಪಾದನೆ
[ಬದಲಾಯಿಸಿ]- ಮಣಿ ಸರ – ಗಡಿ ದಾಟಿದ ಕವಿತೆಗಳು (ಸಂಪಾದಿತ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ)
- ಕಸಿ ಮಾವು – ಅನುವಾದಿತ ಕತೆಗಳು (ಸಂಪಾದಿತ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ)
- ಪ್ರತಿ ಬಿಂಬ - ಪತ್ರಿಕಾ ಬರಹಗಳ ಸಂಕಲನ – 2014 (ಸಂಪಾದಿತ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ)
- ನಡೆಯೋಣ, ಕೇಳುತ್ತಾ.. (ಸಂಪಾದಿತ, ಪರ್ಯಾಯ ಚಿಂತನೆಗಳ ಅನುವಾದಿತ ಲೇಖನ ಸಂಗ್ರಹ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ)
- ಕಾವ್ಯ ಬೋಧಿ – ಮಹಿಳಾ ಕಾವ್ಯ 2014
- ಮಿಡತೆಗಳಿಗೆ ಕಿವಿಯೊಡ್ಡಿ – ಅರುಂಧತಿ ರಾಯ್ ಅನುವಾದಿತ ಲೇಖನ ಸಂಗ್ರಹ
ಸಹ ಸಂಪಾದನೆ
[ಬದಲಾಯಿಸಿ]- ಅಸಮಾನ ಭಾರತ - ಜಾತಿ ಜನಗಣತಿ ಕುರಿತ ಬರಹಗಳ ಸಹ ಸಂಪಾದನೆ (ಡಾ. ಕೃಷ್ಣ ಜಿ., ಚಂದ್ರಶೇಖರ ಐಜೂರ್ ಅವರೊಡನೆ.)
- ಭೀಮಯಾನ – ಅಂಬೇಡ್ಕರ್ ಬರಹಗಳ ಅನುವಾದ (ಬಸೂ ಅವರೊಡನೆ)
- ಅಂಬೇಡ್ಕರ್ ಮತ್ತು ಕಾರ್ಟೂನ್ ವಿವಾದ – (ಬಸೂ ಅವರೊಡನೆ)
- ದಲಿತರು: ಭೂತ-ಭವಿಷ್ಯ, ಡಾ. ಆನಂದ್ ತೇಲ್ತುಂಬ್ಡೆ ಬರಹಗಳ ಅನುವಾದ (ಬಸೂ ಅವರೊಡನೆ)
- ಅಭಿವ್ಯಕ್ತಿ ಸ್ವಾತಂತ್ರö್ಯ: ವಿವಿಧ ಆಯಾಮಗಳು. (ಬಸೂ ಅವರೊಡನೆ)
- ಹೆಣ್ಣು ನೋಟಕ್ರಮ - ಸಬಾಲ್ಟçನ್ ಸಂಪುಟ (ಸಾಹಿತ್ಯ ಅಕಾಡೆಮಿಗಾಗಿ ಸಬಿತಾ ಬನ್ನಾಡಿ ಅವರೊಡನೆ)
- ನಿರಹಂ: ಸೂಫಿ ದರ್ಶನ-ಕಾವ್ಯ (ಕವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಬಿ. ಪೀರ್‌ಬಾಷಾ ಅವರೊಡನೆ)
- ಒಡನಾಡಿ ಸಬಿಹಾ (ಡಾ. ಸಬಿಹಾ ಭೂಮಿಗೌಡ ಅಭಿನಂದನ ಗ್ರಂಥ), ದು. ಸರಸ್ವತಿ, ಆರ್. ಸುನಂದಮ್ಮ, ಓಂಕಾರಗೌಡ ಕಾಕಡೆ ಅವರೊಡನೆ.
ಪ್ರಶಸ್ತಿಗಳು
[ಬದಲಾಯಿಸಿ]- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[೨]
ಉಲ್ಲೇಖಗಳು
[ಬದಲಾಯಿಸಿ]- ↑ https://tv9kannada.com/specials/covid-diary-of-writer-dr-hs-anupama-from-kavalakki-north-kannada-228670.html
- ↑ https://www.bookbrahma.com/author/h-s-anupama#:~:text=%E0%B2%B2%E0%B3%87%E0%B2%96%E0%B2%95%E0%B2%BF%2C%20%E0%B2%95%E0%B2%B5%E0%B2%AF%E0%B2%A4%E0%B3%8D%E0%B2%B0%E0%B2%BF%20%E0%B2%8E%E0%B2%9A%E0%B3%8D.,%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%86%E0%B2%AF%20%E0%B2%B9%E0%B3%8A%E0%B2%A8%E0%B3%8D%E0%B2%A8%E0%B2%BE%E0%B2%B5%E0%B2%B0%20%E0%B2%A4%E0%B2%BE%E0%B2%B2%E0%B3%82%E0%B2%95%E0%B2%BF%E0%B2%A8%20%E0%B2%95%E0%B2%B5%E0%B2%B2%E0%B2%95%E0%B3%8D%E0%B2%95%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF%20%E0%B2%95%E0%B2%BE%E0%B2%B0%E0%B3%8D%E0%B2%AF%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%BF%E0%B2%B8%E0%B3%81%E0%B2%A4%E0%B3%8D%E0%B2%A4%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%B0%E0%B3%86.

