ಎಚ್.ಎನ್.ಹೂಗಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಚ್.ಎನ್.ಹೂಗಾರರು ೧೯೩೨ರಲ್ಲಿ ಗದಗಿನಲ್ಲಿ ಜನಿಸಿದರು. ಉತ್ತರ ಕರ್ನಾಟಕದ ಎಲ್ಲಾ ವೃತ್ತಿನಿರತ ನಾಟಕ ಕಂಪನಿಗಳು ಇವರ ನಾಟಕಗಳನ್ನು ಆಡಿವೆ. ಇವರ ನಾಟಕಗಳ ಯಶಸ್ಸಿನಿಂದಾಗಿ ಇವರು ‘ಜ್ಯುಬಿಲೀ ಕವಿ’ ಎಂದೇ ಹೆಸರಾಗಿದ್ದಾರೆ. ಇವರ ಕೆಲವು ಪ್ರಸಿದ್ಧ ನಾಟಕಗಳು:

  • ಭಕ್ತಿಜ್ಯೋತಿ
  • ಕುಲಪುತ್ರ
  • ಕೊಂಡು ತಂದ ಗಂಡ
  • ಬೂದಿ ಮುಚ್ಚಿದ ಕೆಂಡ
  • ಸತಿಯೇ ಸೌಭಾಗ್ಯ
  • ಮನ ಗೆದ್ದ ಮಡದಿ
  • ಸಂಗೊಳ್ಳಿ ರಾಯಣ್ಣ
  • ಬಂಗಾರ ಗಂಡು
  • ವಾತ್ಸಲ್ಯ
  • ನಾಟ್ಯರಾಣಿ
  • ದಸರಾ
  • ಪುತ್ಥಳಿ
  • ಕಂಕಣ ಬಲ
  • ಸುನಂದಾ
  • ಮಕ್ಕಳ ಮದುವೆ
  • ಸಂಸಾರ ಸಮರ