ಎಚ್‌ಟಿಎಮ್‌ಎಲ್ ಎಡಿಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
 1. REDIRECT Template:HTML

ಎಚ್‌ಟಿಎಮ್‌ಎಲ್ ಎಡಿಟರ್ ಎಂಬುದು ವೆಬ್‌ಪುಟಗಳನ್ನು ರಚಿಸಲು ಬಳಸುವ ತಂತ್ರಾಂಶವಾಗಿದೆ. ವೆಬ್‌ಪುಟದ ಎಚ್‌ಟಿಎಮ್‌ಎಲ್ ಸಂಕೇತಗಳನ್ನು ಯಾವುದೇ ಟೆಕ್ಸ್ಟ್ ಎಡಿಟರ್‌ನ್ನು ಬಳಸಿ ಬರೆಯಬಹುದಾದರೂ, ಕೆಲವು ವಿಶಿಷ್ಟ ಎಚ್‌ಟಿಎಮ್‌ಎಲ್ ಎಡಿಟರ್‌ಗಳು ಅನುಕೂಲಕರವಾದ ಮತ್ತು ಹೆಚ್ಚುವರಿ ಕ್ರಿಯೆಗಳನ್ನು ಒದಗಿಸುವ ಸೌಲಭ್ಯಗಳನ್ನು ಹೊಂದಿವೆ. ಉದಾಹರಣೆಗೆ, ಹೆಚ್ಚಿನ ಎಚ್‌ಟಿಎಮ್‌ಎಲ್ ಎಡಿಟರ್‌ಗಳು ಎಚ್‌ಟಿಎಮ್‌ಎಲ್‌ನೊಂದಿಗೆ ಕಾರ್ಯನಿರ್ವಹಿಸುವುದೇ ಅಲ್ಲದೆ ಸಂಬಂಧಿತ ತಂತ್ರಜ್ಞಾನಗಳಾದ ಸಿಎಸ್‌ಎಸ್, ಎಕ್ಸ್‌ಎಮ್‌ಎಲ್ ಮತ್ತು ಜಾವಾಸ್ಕ್ರಿಪ್ಟ್ ಅಥವಾ ಇಸಿಎಮ್‌ಎ ಸ್ಕ್ರಿಪ್ಟ್‌ಗಳೊಂದಿಗೂ ಕೂಡಾ ಕಾರ್ಯನಿರ್ವಹಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಇವುಗಳು ಎಫ್‌ಟಿಪಿ ಮತ್ತು ವೆಬ್‌ಡಿಎವಿ ಮೂಲಕ ದೂರದ ವೆಬ್ ಸರ್ವರ್‌ಗಳೊಂದಿಗೆ ಮತ್ತು ಸಿವಿಎಸ್ ಅಥವಾ ಸಬ್‌ವರ್ಶನ್‌ಗಳಂತಹ ಆವೃತ್ತಿ ನಿರ್ವಹಣಾ ವ್ಯವಸ್ಥೆಗಳೊಂದಿಗೆ ಸಂಪರ್ಕವನ್ನು ಕೂಡಾ ಕಲ್ಪಿಸುತ್ತವೆ.

ವಿಧಗಳು[ಬದಲಾಯಿಸಿ]

ಹಲವಾರು ಮಾದರಿಯ ಎಚ್‌ಟಿಎಮ್‌ಎಲ್ ಎಡಿಟರ್‌ಗಳು ಲಭ್ಯವಿವೆ: ಪಠ್ಯ, ದೃಶ್ಯವಸ್ತು ಮತ್ತು ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ (ವಾಟ್ ಯು ಸೀ ಈಸ್ ವಾಟ್ ಯು ಗೆಟ್) ಎಡಿಟರ್‌ಗಳು.

ಟೆಕ್ಸ್ಟ್ ಎಡಿಟರ್‌ಗಳು[ಬದಲಾಯಿಸಿ]

ಎಚ್‌ಟಿಎಮ್‌ಎಲ್‌ನಲ್ಲಿ ಟೆಕ್ಸ್ಟ್ (ಮೂಲ; ಆಕರ) ಎಡಿಟರ್‌ಗಳು ವಾಕ್ಯ ರಚನಾ ವಿನ್ಯಾಸಗಳನ್ನು ಎತ್ತಿತೋರಿಸುವ ವ್ಯವಸ್ಥೆಯನ್ನು ಒದಗಿಸುತ್ತವೆ. ಮಾದರಿಗಳು, ಸಲಕರಣೆಗಳ ಪಟ್ಟಿ (ಟೂಲ್‌ಬಾರ್), ಮತ್ತು ಕೀಬೋರ್ಡ್‌ನ ನೇರ ಹಾಗೂ ಸುಲಭವಾದ ಕಾರ್ಯಕೀಲಿಗಳು ಸಾಮಾನ್ಯವಾದ ಎಚ್‌ಟಿಎಮ್‌ಎಲ್ ಘಟಕಗಳು ಮತ್ತು ರಚನೆಗಳನ್ನು ವೇಗವಾಗಿ ಒಳಸೇರಿಸಲು ಸಹಕರಿಸುತ್ತವೆ. ನಕಲಿ ಮಾದರಿಗಳು(ವಿಝಾರ್ಡ್‌ಗಳು), ಸಲಕರಣೆಗಳ ಬಗ್ಗೆ ಸೂಚನೆಗಳು ಮತ್ತು ಸ್ವಯಂ-ಪೂರ್ಣಗೊಳ್ಳುವಿಕೆಯಂತಹ ವ್ಯವ್ಯಸ್ಥೆಗಳು ಸಾಮಾನ್ಯ ಕಾರ್ಯಗಳಲ್ಲಿ ಸಹಕರಿಸುತ್ತವೆ. ಮೂಲ ಮತ್ತು ಆವೃತ್ತಿ ನಿಯಂತ್ರಣ, ಕೊಂಡಿ(ಲಿಂಕ್)ಗಳ ಪರಿಷ್ಕರಣೆ, ಸಂಕೇತಗಳ ಪರಿಷ್ಕರಣೆ ಮತ್ತು ಕ್ರಮಬದ್ಧಗೊಳಿಸುವಿಕೆ, ಸಂಕೇತಗಳಲ್ಲಿನ ತಪ್ಪುಗಳನ್ನು ತಿದ್ದುವುದು ಮತ್ತು ವಿನ್ಯಾಸ ಮಾಡುವುದು, ಎಫ್‌ಟಿಪಿ ಅಥವಾ ವೆಬ್ ಡಿಎವಿ ಮೂಲಕ, ಅಂತರ್ಜಾಲಕ್ಕೆ ಹಾಕುವುದನ್ನು ಮತ್ತು ಯೋಜನೆಗಳನ್ನು ರಚಿಸುವಂತಕ ಕಾರ್ಯಗಳ ಸಮರ್ಥ ನಿರ್ವಹಣೆಗಾಗಿ ಟೆಕ್ಸ್ಟ್ ಎಚ್‌ಟಿಎಮ್‌ಎಲ್ ಎಡಿಟರ್‌ಗಳು ಸಾಮಾನ್ಯವಾಗಿ ಒಳಗಡೆ ರಚಿಸಲ್ಪಟ್ಟ ಪೂರ್ವನಿಯೋಜಿತ ಕಾರ್ಯಗಳನ್ನು ಅಥವಾ ಬಾಹ್ಯ ಸಲಕರಣೆಗಳೊಂದಿಗಿನ ಸಂಯೋಜನೆಯನ್ನು ಹೊಂದಿರುತ್ತವೆ. ಎಚ್‌ಟಿಎಮ್‌ಎಲ್‌ನ್ನು ಅಥವಾ ವೆಬ್ ವಿನ್ಯಾಸಗಾರರು ಬಯಸುವಂತಹ ಇತರ ವೆಬ್ ತಂತ್ರಜ್ಞಾನಗಳಾದ ಸಿಎಸ್ಎಸ್, ಜಾವಾಸ್ಕ್ರಿಪ್ಟ್ ಮತ್ತು ಸರ್ವರ್‌ಸೈಡ್ ಸ್ಕ್ರಿಪ್ಟಿಂಗ್ ಭಾಷೆಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಬಳಕೆದಾರರು ಹೊಂದಿರುವುದು ಎಚ್‌ಟಿಎಮ್‌ಎಲ್ ಎಡಿಟರ್‌ಗೆ ಅಗತ್ಯವಿದೆ.

ಆಬ್ಜೆಕ್ಟ್ ಎಡಿಟರ್‌ಗಳು[ಬದಲಾಯಿಸಿ]

ಕೆಲವು ಎಡಿಟರ್‌ಗಳು ಕೇವಲ ಸರಳವಾಗಿ ಬಣ್ಣಗಳನ್ನು ಹೆಚ್ಚಿಗೊಳಿಸಿ ತೋರಿಸುವುದರ ಬದಲಿಗೆ, ದೃಶ್ಯವಸ್ತುಗಳ ಮೂಲ ಪಠ್ಯವನ್ನು ಅಧಿಕ ವೀಕ್ಷಣಾ ವ್ಯವಸ್ಥೆಗೊಳಪಡಿಸುವಂತಹ ಪರ್ಯಾಯ ಮಾದರಿಯ ತಿದ್ದುಪಡಿ ವ್ಯವಸ್ಥೆಯನ್ನು ಹೊಂದಿರುತ್ತವೆ. ಆದರೆ, ಈ ವ್ಯವಸ್ಥೆಗಳು ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿಗಳಲ್ಲಿ ಸೇರಿಸಲ್ಪಟ್ಟಿಲ್ಲ. ಕೆಲವು ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಎಡಿಟರ್‌ಗಳು ಆರಿಸಿದ ವಸ್ತುಗಳ ಪಠ್ಯ ಅಧಾರಿತ ಅಂಶಗಳನ್ನೂ ಸಹ ಪರಿಷ್ಕರಿಸಲು ಸಹಕರಿಸುವಂತಹ ಪ್ಯಾಲೆಟ್ ವಿಂಡೋ ಆಯ್ಕೆಗಳನ್ನೂ ಒಳಗೊಂಡಿರುತ್ತವೆ. ಪ್ರತ್ಯೇಕ ಅಂಶಗಳನ್ನು ಪ್ರತ್ಯೇಕ ಭಾಗಗಳಲ್ಲಿ ತಿದ್ದುವಂತಹ ವ್ಯವಸ್ಥೆಯನ್ನು ಅಥವಾ ಆಯ್ಕೆ ಮಾಡಿದ ವಸ್ತುವಿನ ಎಲ್ಲಾ ಮೂಲ ಪಠ್ಯಗಳ ಗುಂಪನ್ನು ಟೆಕ್ಸ್ಟ್ ವಿಂಡೋಗಳಲ್ಲಿ ತಿದ್ದುವಂತಹ ವ್ಯವಸ್ಥೆಯನ್ನು ಹೊಂದಿದೆ. ಈ ಅಂಶಗಳನ್ನು ಪರಿಷ್ಕರಿಸುತ್ತಿರುವ ಸಂದರ್ಭದಲ್ಲಿ ಆಯ್ಕೆಗಳನ್ನು ಆರಿಸಿಕೊಳ್ಳಲು ಮತ್ತು ಸೂಚಿಸಲು ಇವುಗಳು ಕೆಲವು ವಿಜೆಟ್‌ಗಳನ್ನೂ ಕೂಡಾ ಒಳಗೊಂಡಿವೆ. ಅಡೋಬ್ ಗೊಲೈವ್ ಸ್ಥೂಲ ಅಥವಾ ಸಂಗ್ರಹ ತಿದ್ದುಪಡಿ ವ್ಯವಸ್ಥೆಯನ್ನು ಒದಗಿಸಿದ್ದು ಇದು ಎಚ್‌ಟಿಎಮ್‌ಎಲ್ ದೃಶ್ಯ ವಸ್ತುಗಳನ್ನು ಮತ್ತು ಅವುಗಳ ಗುಣಲಕ್ಷಣಗಳನ್ನು ಸಂಕುಚಿಸುವಂತೆ ಮತ್ತು ವರ್ಧಿಸುವಂತ, ಇದರ ಅಂಶಗಳನ್ನು ಪರಿಷ್ಕರಿಸುವಂತೆ ಮತ್ತು ವಿಸ್ತೃತ ವಸ್ತುವಿಗೆ ಅನ್ವಯಿಸಿದ ರೇಖಾಚಿತ್ರಗಳನ್ನು ನೋಡಲು ಅನುಕೂಲವಾಗಿದೆ.

ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಎಡಿಟರ್‌ಗಳು[ಬದಲಾಯಿಸಿ]

ಅಮಯ 10 ಎಚ್‌ಟಿಎಂಎಲ್‌ ಎಡಿಟರ್

ವೆಬ್ ಬ್ರೌಸರ್‌ನಲ್ಲಿ ಯಾವ ರೀತಿ ವೆಬ್‌ಪುಟಗಳು ಪ್ರದರ್ಶಿಸಲ್ಪಡುತ್ತವೆಯೋ ಅಂತಹುದೇ ಆದ ತಿದ್ದುಪಡಿ ಮಾಧ್ಯಮವನ್ನು ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಎಚ್‌ಟಿಎಮ್‌ಎಲ್ ಎಡಿಟರ್‌ಗಳು ಒದಗಿಸುತ್ತವೆ. ಕೆಲವು ಎಡಿಟರ್‌ಗಳು, ಬ್ರೌಸರ್ ವಿಸ್ತರಣೆ ಗಳು ಮಾದರಿಯುಳ್ಳವುಗಳು ವೆಬ್‌ಬ್ರೌಸರ‍್ಗಳೊಳಗೆ ತಿದ್ದುಪಡಿ ಮಾಡಲು ಅನುವುಮಾಡಿಕೊಡುತ್ತವೆ. ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಎಡಿಟರ್‌ಗಳನ್ನು ಬಳಸುವುದಕ್ಕೆ ಎಚ್‌ಟಿಎಮ್‌ಎಲ್ ಜ್ಞಾನದ ಅಗತ್ಯವಿಲ್ಲದೇ ಇರುವುದರಿಂದ ಇವುಗಳು ಕಂಪ್ಯೂಟರ್‌ಗಳ ಮಧ್ಯಮವರ್ಗದ ಬಳಕೆದಾರರಿಗೆ ವೆಬ್‌ಪುಟಗಳ ರಚನೆಯನ್ನು ಆರಂಭಿಸಲು ಯೋಗ್ಯವಾದ ಎಡಿಟರ್ ತಂತ್ರಾಂಶವಾಗಿದೆ. ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ನೋಟವು ವೆಬ್ ಬ್ರೌಸರ್‌ನಲ್ಲಿ ಬಳಸಿದ ವಿನ್ಯಾಸ ರಚನೆಯನ್ನು ಆಧಾರವಾಗಿ ಬಳಸಿ ಸಾಧಿಸಲಾಗಿದೆ. ವಿನ್ಯಾಸ ತಂತ್ರವು ಎಡಿಟರ್‌ಗಳನ್ನು ಅಭಿವೃದ್ಧಿಗೊಳಿಸುವವರನ್ನು ಅಕ್ಷರಗಳನ್ನು ಮುದ್ರಿಸಲು, ಅಂಟಿಸಲು, ಅಳಿಸಲು ಮತ್ತು ವಿಷಯಗಳನ್ನು ಸ್ಥಳಾಂತರಿಸಲು ಸಹಕಾರಿಯಾಗಿದೆ. ಮುಖ್ಯ ಉದ್ಧೇಶವು ತಿದ್ದುಪಡಿಯ ಎಲ್ಲಾ ಸಮಯದಲ್ಲೂ, ಅದು ಹೊರಗೆಡಹುವ ಫಲಿತಾಂಶವು ನಂತರದಲ್ಲಿ ಮಾದರಿ ವೆಬ್ ಬ್ರೌಸರ್‌ಗಳಲ್ಲಿ ಕಾಣುವಂತೆಯೇ ಕಾಣಬೇಕು ಎಂಬುದು. ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಎಡಿಟರ್‌ಗಳಲ್ಲಿ ಎಚ್‌ಟಿಎಮ್‌ಎಲ್ ಸಂಕೇತಗಳನ್ನು ಕೈಯಿಂದ ತಿದ್ದುಪಡಿ ಮಾಡಬೇಕಾಗುತ್ತದೆ ಎಂಬ ಸತ್ಯದ ಹೊರತಾಗಿಯೂ, ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಎಡಿಟರ್‌ಗಳು ವೆಬ್ ವಿನ್ಯಾಸವನ್ನು ಸುಲಭ ಹಾಗೂ ಸರಳಗೊಳಿಸುತ್ತದೆ ಎಂದು ತಿಳಿದಿದ್ದರೂ ಹಲವು ವೃತ್ತಿಪರರು ಟೆಕ್ಸ್ಟ್ ಎಡಿಟರ್‌ಗಳನ್ನೇ ಬಳಸುತ್ತಾರೆ. ವೆಬ್ ಒಂದು ದೃಶ್ಯ ಮಾಧ್ಯಮವಾಗಿ ವಿನ್ಯಾಸಗೊಳ್ಳಲ್ಪಟ್ಟಿಲ್ಲ ಮತ್ತು ಲೇಖಕರಿಗೆ ಸಿಎಸ್‌ಎಸ್ ನಂತಹ ಹೆಚ್ಚಿನ ವಿನ್ಯಾಸ ನಿಯಂತ್ರಣಗಳನ್ನು ಕೊಡುವ ಪ್ರಯತ್ನ ನಡೆದಿದ್ದರೂ, ಇವುಗಳು ಪ್ರಧಾನ ವೆಬ್ ಬ್ರೌಸರ್‌‍ಗಳಿಂದ ಬೆಂಬಲಿಸಲ್ಪಟ್ಟಿಲ್ಲ. ಈ ಕಾರಣದಿಂದ, ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಎಡಿಟರ್‌ಗಳಲ್ಲಿ ಸ್ವಯಂ-ಚಾಲಿತವಾಗಿಯೇ ಉತ್ಪಾದಿಸಲ್ಪಡುವ ಸಂಕೇತಗಳು ಫೈಲ್‌ಗಳ ಗಾತ್ರವನ್ನು ಕುಗ್ಗಿಸುವುದರೊಂದಿಗೆ ಇತರ ಬ್ರೌಸರ್‌ಗಳೊಂದಿಗೆ ಹೊಂದಾಣಿಕೆಯನ್ನು ವೃದ್ಧಿಸಿ ವಿಸ್ತೃತ ಬಳಕೆಯಲ್ಲಿರುವ ಡೆಸ್ಕ್‌ಟಾಪ್ ಬ್ರೌಸರ್‌ಗಳಲ್ಲಿ ಬಳಸುವ ವಿನ್ಯಾಸದಂತೆಯೇ ಕಾಣುತ್ತದೆ. ಸ್ವಯಂ-ಚಾಲಿತವಾಗಿ ರಚನೆಗೊಂಡ ಸಂಕೇತಗಳು ಮತ್ತೆ ತಿದ್ದುಪಡಿಗೊಳಗಾಗುತ್ತವೆ ಅಥವಾ ಕೈಯಿಂದ ಸರಿ ಮಾಡಲ್ಪಡುತ್ತದೆ. ಈ ವಿಷಯದ ಬಗ್ಗೆ ಹೆಚ್ಚಿಗೆ ತಿಳಿಯಬೇಕಾದಲ್ಲಿ, "ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿಯನ್ನು ಸಾಧಿಸುವಲ್ಲಿ ಅನುಭವಿಸಿದ ಕಷ್ಟಗಳು" ನೋಡಿ .[೧][೨][೩]

ಡಬ್ಲ್ಯುವೈಎಸ್‌ಐಡಬ್ಲ್ಯುವೈಎಮ್ ಎಡಿಟರ್‌‌ಗಳು[ಬದಲಾಯಿಸಿ]

ವಾಟ್ ಯು ಸೀ ಈಸ್ ವಾತ್ ಯು ಮೀನ್ (ಡಬ್ಲ್ಯುವೈಎಸ್‌ಐಡಬ್ಲ್ಯುವೈಎಮ್) ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಎಡಿಟರ್ ಮೇಲಿನ ಪರ್ಯಾಯ ವಾದರಿಯಾಗಿದೆ. ವಿನ್ಯಾಸ ಅಥವಾ ದಾಖಲೆಯ ಪ್ರಸ್ತುತಿಯನ್ನು ಕೇಂದ್ರೀಕರಿಸದೆ, ಇದು ಪ್ರತಿಯೊಂದು ಘಟಕಗಳ; ಅಂಶಗಳ ಅರ್ಥ ವನ್ನು ಕೇಂದ್ರೀಕರಿಸುತ್ತದೆ. ಉದಾಹರಣೆಗೆ, ಪೇಜ್ ಹೆಡರ್‌ಗಳು, ಉಪವಿಭಾಗಳು (ಸೆಕ್ಷನ್‌ಗಳು), ಪ್ಯಾರಾಗಳು ಇತ್ಯಾದಿಗಳು ತಿದ್ದುಪಡಿ ತಂತ್ರಾಂಶದಲ್ಲ್ಲಿ ಇದೇ ರೀತಿ ಹೆಸರಿಸಲ್ಪಟ್ಟಿದೆ ಮತ್ತು ಬ್ರೌಸರ್‌ನಲ್ಲಿ ಸೂಕ್ತವಾಗಿ ಪ್ರಕಟಗೊಳ್ಳಲ್ಪಟ್ಟಿದೆ.

ಆನ್‌ಲೈನ್ ಎಡಿಟರ್‌ಗಳು[ಬದಲಾಯಿಸಿ]

ಹಲವು ಡಬ್ಲ್ಯುವೈಎಸ್‌ಐಡಬ್ಲ್ಯು ಎಚ್‌ಟಿಎಮ್‌ಎಲ್ ಎಡಿಟರ್‌ಳು ಲಭ್ಯವಿವೆ. ಉದಾಹರಣೆಗೆ:

 • ಸಿಕೆಎಡಿಟರ್
 • ಓಪನ್ ಬಿಎಎಕ್ಸ್ಐ
 • ಟೈನಿಎಮ್‌ಸಿಎ

ಕ್ರಮಬದ್ಧ ಎಚ್‌ಟಿಎಮ್‌ಎಲ್‌ ಮಾರ್ಕ್‌‍ಅಪ್[ಬದಲಾಯಿಸಿ]

ಎಚ್‌ಟಿಎಮ್‌ಎಲ್ ಎಂಬುದು ಒಂದು ರಚನಾ ವ್ಯವಸ್ಥೆಯುಳ್ಳ ತಿದ್ದುಪಡಿ ಭಾಷೆಯಾಗಿದೆ. ವರ್ಲ್ಡ್ ವೈಡ್ ವೆಬ್‌ಗಾಗಿ ಡಬ್ಲ್ಯು೩ಸಿ ಗುಣಮಟ್ಟ ಪರಿಷ್ಕರಣಾ ವ್ಯವಸ್ಥೆಯಿಂದ ಎಚ್‌ಟಿಎಮ್‌ಎಲ್ ಅಂಗೀಕೃತಗೊಳ್ಳಬೇಕಾದರೆ ಅದನ್ನು ಹೇಗೆ ಬರೆಯಬೇಕಾಗುತ್ತದೆ ಎಂಬುದರ ಕುರಿತಾಗಿ ಕೆಲವು ನಿಯಮಗಳಿವೆ. ಈ ನಿಯಮಗಳನ್ನು ಪಾಲಿಸುವುದು ಎಂದರೆ, ಈ ವೆಬ್‌ಸೈಟ್‌ಗಳನ್ನು ಎಲ್ಲಾ ವಿಧದ ಮತ್ತು ಎಲ್ಲಾ ಮಾದರಿಯ ಕಂಪ್ಯೂಟರ್‌ಗಳಲ್ಲಿ ಪಡೆಯುವಂತೆ ಮತ್ತು, ದೈಹಿಕ ಅಸಾಮರ್ಥ್ಯ ಹೊಂದಿದವರನ್ನೂ ಸೇರಿದಂತೆ ಎಲ್ಲಾ ಜನರು ಬಳಸುವಂತೆ ಹಾಗೂ, ಪರಿಮಿತ ಬ್ಯಾಂಡ್‌ವಿಡ್ತ್ ಮತ್ತು ತೆರೆಯ ಗಾತ್ರ ಹೊಂದಿರುವ ಮೊಬೈಲ್, ಪಿಡಿಎಗಳಂತಹ ನಿಸ್ತಂತು ಸಾಧನಗಳಲ್ಲಿ ಕೂಡಾ ಇದನ್ನು ತೆರೆಯಲು ಅನುಕೂಲವಾಗುವಂತೆ ರಚಿಸುವುದು. ದುರಾದೃಷ್ಟವಶಾತ್ ವೆಬ್‌ನಲ್ಲಿರುವ ಹಲವು ಎಚ್‌ಟಿಎಮ್‌ಎಲ್ ದಾಖಲೆಗಳು ಡಬ್ಲ್ಯು೩ಸಿ ಸೂಚಿತ ಗುಣಮಟ್ಟವನ್ನು ಒಳಗೊಂಡಿರುವುದಿಲ್ಲ. ಒಂದು ಅಧ್ಯಯನ Archived 2008-08-03 ವೇಬ್ಯಾಕ್ ಮೆಷಿನ್ ನಲ್ಲಿ. ದ ಪ್ರಕಾರ, ೧೪೧ರಲ್ಲಿ ಒಂದೇ ಒಂದು ಈ ಗುಣಮಟ್ಟದ ಅಗತ್ಯಗಳನ್ನು ಅನುಸರಿಸಿದೆ ಎಂದು ಸೂಚಿಸಿದೆ. ವಾಕ್ಯರಚನಾ ನಿಯಮಾನುಸಾರ ಸರಿಯಾಗಿಯೇ ಇದ್ದ ದಾಖಲೆಗಳೂ ಸಹ ಅನಗತ್ಯವಾದ ಪುನರ್ಬಳಕೆ ಅಥವಾ ಕೆಲವು ವರ್ಷಗಳಿಂದ ಅಸಮ್ಮತಿಗೊಳಗಾದ ನಿಯಮಗಳನ್ನು ಆಧರಿಸಿ ರಚಿಸಿದವುಗಳಾಗಿದ್ದು ಅನರ್ಹವಾಗಿಯೇ ಉಳಿಯಬಹುದು. ಸಿಎಸ್‍ಎಸ್ ಮತ್ತು ಎಚ್‌ಟಿಎಮ್‌ಎಲ್ ಬಳಕೆಗಾಗಿ ಸೂತ್ರೀಕರಿಸಿದ ಈಗಿನ ಡಬ್ಲ್ಯು೩ಸಿ ಶಿಫಾರಸ್ಸು ೧೯೯೬ರಲ್ಲಿ ಡಬ್ಲ್ಯು೩ಸಿನಿಂದ ರಚಿಸಲ್ಪಟ್ಟಿದ್ದು ಅಲ್ಲಿಂದ ನಂತರ ಪರಿಷ್ಕೃತಗೊಂಡು, ಸಂಸ್ಕರಿಸಲ್ಪಟ್ಟಿತು.[೪] ಇದನ್ನು ನೋಡಿ: ಸಿಎಸ್‌ಎಸ್, ಎಕ್ಸ್ಎಚ್‌ಟಿಎಮ್‌ಎಲ್, ಡಬ್ಲೂ3ಸಿಯ ಪ್ರಸ್ತುತ ಸಿಎಸ್‌ಎಸ್ ಸಲಹೆಗಳು ಮತ್ತು ಡಬ್ಲೂ3ಸಿಯ ಪ್ರಸ್ತುತ ಎಚ್‌ಟಿಎಮ್‌ಎಲ್ ಸಲಹೆಗಳು. ಈ ಸೂಚನೆಗಳು ವಿಷಯವನ್ನು; ವಸ್ತುವನ್ನು (ಎಚ್‌ಟಿಎಮ್‌ಎಲ್, ಎಕ್ಸ್ಎಚ್‌ಟಿಎಮ್‌ಎಲ್) ಶೈಲಿಯಿಂದ (ಸಿಎಸ್‌ಎಸ್) ಬೇರ್ಪಡಿಸುವುದಕ್ಕೆ ಮಹತ್ವ ನೀಡುತ್ತದೆ. ಶೈಲಿಗಳ ಮಾಹಿತಿಯನ್ನು ಪೂರ್ತಿ ಸೈಟ್‌ಗೆ ಏಕಕಾಲದಲ್ಲಿ ನೀಡುವಂತಹ ಅನುಕೂಲಕರ ಪ್ರಯೋಜನವನ್ನು ಇದು ಹೊಂದಿದ್ದು ಎಚ್‌ಟಿಎಮ್‌ಎಲ್‌ನಲ್ಲಿ ಪ್ರತಿಯೊಂದು ಪುಟದ, ಪ್ರತಿಯೊಂದು ಎಚ್‌ಟಿಎಮ್‌ಎಲ್ ಅಂಶಕ್ಕೂ ಪ್ರತ್ಯೇಕವಾಗಿ ಮಾಡಬೇಕಾಗುತ್ತದೆ. ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಎಡಿಟರ್ ವಿನ್ಯಾಸಗಾರರು ಈ ತತ್ವಗಳನ್ನು ತಮ್ಮ ಬಳಕೆದಾರರಿಗೆ ಅದೆಷ್ಟರ ಮಟ್ಟಿಗೆ ಉತ್ತಮವಾಗಿ ಮತ್ತು ಅದರ ನೈಜಸ್ಥಿತಿಯ ಬಗ್ಗೆ ಅವರಿಗೆ ಯಾವುದೇ ಗೊಂದಲವುಂಟಾಗದಂತೆ ಅವರಿಗೆ ನೀಡಬಹುದು ಎಂಬುದರ ಕುರಿತಾಗಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆಧುನಿಕ ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಎಡಿಟರ್‌ಗಳು ಸ್ವಲ್ಪಮಟ್ಟಿಗೆ ಇದರಲ್ಲಿ ಯಶಸ್ವಿಯಾಗಿದ್ದಾರಾದರೂ, ಯಾರೊಬ್ಬರೂ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಮೂಲಕ ಅಥವಾ, ಕೈಯಾರೆ ವೆಬ್‌ಪುಟವು ರಚಿಸಲ್ಪಟ್ಟರೂ ಅಥವಾ ತಿದ್ದುಪಡಿಗೊಳಗಾದರೂ, ಸಾಧ್ಯವಿದ್ದಷ್ಟು ಹೆಚ್ಚಿನ ಸಂಖ್ಯೆಯ ಓದುಗರು ಮತ್ತು ವೀಕ್ಷಕರನ್ನು ಗಳಿಸುವಲ್ಲಿ ಹಾಗೂ ವಿಶ್ವಾದ್ಯಂತ ಈ ವೆಬ್‌ನ್ನು ಪ್ರಚಲಿತವಾಗಿಡುವುದರಲ್ಲಿ ಯಶಸ್ವಿಯಾಗಲು ಮೊತ್ತಮೊದಲು ಅದು ತನ್ನ ಕ್ರಮಬದ್ಧ ರಚನೆ ಮತ್ತು ಸಂಕೇತಗಳನ್ನು ಹೊಂದಿರಬೇಕಾಗುತ್ತದೆ.[೫] ಉಚಿತ ಡಬ್ಲ್ಯು೩ಸಿ ಕ್ರಮಬದ್ಧಗೊಳಿಸುವಿಕೆಯ ಸೇವೆಗಳಿಂದ (ಡಬ್ಲ್ಯು3ಸಿ ಎಚ್‌ಟಿಎಮ್‌ಎಲ್ ವ್ಯಾಲಿಡೇಟರ್ ಮತ್ತು ಡಬ್ಲ್ಯು3ಸಿ ಸಿಎಸ್‍ಎಸ್ ವ್ಯಾಲಿಡೇಟರ್)ಅಥವಾ ಇತರ ಕೆಲವು ನಂಬಿಕಾರ್ಹ ಪರ್ಯಾಯ ವ್ಯವಸ್ಥೆಗಳಿಂದ ತನ್ನ ಎಚ್‌ಟಿಎಮ್‌ಎಲ್ ಮತ್ತು ಸಿಎಸ್‌ಎಸ್ ವಾಕ್ಯರಚನಾ ಸೂತ್ರಗಳ ಯಶಸ್ವೀ ಕ್ರಮಬದ್ಧತೆಗೊಳಗಾಗದೇ ಅದು ವರ್ಲ್ಡ್ ವೈಡ್ ವೆಬ್‌ಗೆ ತಯಾರಾದುದು ಎಂದು ತಿಳಿಯಲಾಗದು.[೫] ದೈಹಿಕ ಸಮಸ್ಯೆ, ದೃಷ್ಟಿ ಸಮಸ್ಯೆ, ಅಥವಾ ಇತರ ಯಾವುದೇ ದೈಹಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗಾಗಿ ವೆಬ್‌‌ಪುಟಗಳನ್ನು ವಿನ್ಯಾಸಗೊಳಿಸುವುದು ಆಧುನಿಕ ಸಮಾಜದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಮತ್ತು ಸಮಾಜದಲ್ಲಿ ತನ್ನ ಮಹತ್ವವನ್ನು ಕಾಪಾಡಿಕೊಳ್ಳುವಲ್ಲಿನ ಉತ್ತಮ ತಂತ್ರವಾದರೂ, ಈ ಅಂಶವು ಕಾನೂನಿಂದಲೂ ನೀಡಲ್ಪಟ್ಟ ಆದೇಶವಾಗಿದೆ. ಯುಎಸ್‌ನಲ್ಲಿ ದೈಹಿಕ ಅಸಾಮರ್ಥ್ಯ ಕಾಯ್ದೆಯಡಿಯ ಅಮೇರಿಕನ್ನರು ಮತ್ತು ಯುಕೆಯಲ್ಲಿನ ದೈಹಿಕ ಅಸಾಮರ್ಥ್ಯ ಪಕ್ಷಪಾತ ಕಾಯ್ದೆಯು ಸಾರ್ವಜನಿಕ ವೆಬ್‌ಸೈಟ್‌ಗಳಲ್ಲಿ ಬೇಡಿಕೆಯನ್ನು ಮುಂದಿಟ್ಟಿದೆ. ಇನ್ನೂ ಇತರ ಹಲವು ರಾಷ್ಟ್ರಗಳಲ್ಲಿ ಇಂತಹುದೇ ಕಾನೂನುಗಳು ಈಗಾಗಲೇ ಜಾರಿಯಲ್ಲಿವೆ ಅಥವಾ, ಶೀಘ್ರವಾಗಿ ಜಾರಿಗೊಳ್ಳಲಿವೆ.[೫] ವೆಬ್ ಪುಟಗಳನ್ನು ಕ್ರಮಬದ್ಧಗೊಳಿಸುವುದು ಅವುಗಳನ್ನು ತೆರೆಯುವಂತೆ ಮಾಡುವುದಕ್ಕಿಂತ ಸಂಕೀರ್ಣವಾದುದು. ಅದು ಪೂರ್ವಾಪೇಕ್ಷಿತವಾದರೂ, ಇದರೊಂದಿಗೆ ಇನ್ನೂ ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.[೬] ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಸಾಧವನ್ನು ಬಳಸಿ ರಚಿಸಿದ ಅಥವಾ ಇದನ್ನು ಬಳಸದೇ ರಚಿಸಿದರೂ ಸಹ, ಒಳ್ಳೆಯ ವೆಬ್ ವಿನ್ಯಾಸ ಎಂಬುದು ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ವೆಬ್‌ಪುಟಗಳನ್ನು ರಚಿಸಲು, ವಿನ್ಯಾಸಗೊಳಿಸಲು ಮತ್ತು ಅದನ್ನು ಸುಸ್ಥಿತಿಯಲ್ಲಿಡಲು ಯಾವುದೇ ತಂತ್ರಾಂಶ ಸಾಧನಗಳನ್ನು ಬಳಸಿದರೂ, ಎಚ್‌ಟಿಎಮ್‌ಎಲ್ ಬಳಕೆಯಡಿ ಇರುವ ಗುಣಮಟ್ಟವು ಈ ಪುಟದಲ್ಲಿ ಕೆಲಸ ಮಾಡುವ ವ್ಯಕ್ತಿಯ ಕೌಶಲ್ಯವನ್ನು ಅವಲಂಭಿಸಿರುತ್ತದೆ. ಎಚ್‌ಟಿಎಮ್‌ಎಲ್, ಸಿಎಸ್‌ಎಸ್ ಮತ್ತು ಇತರ ಲಿಪಿಗಳ ಬಗ್ಗೆ ಸ್ವಲ್ಪ ಮಟ್ಟಿನ ಜ್ಞಾನ ಮತ್ತು ಈ ಕ್ಷೇತ್ರದಲ್ಲಿ ಡಬ್ಲ್ಯು೩ಸಿ ನೀಡಿದ ಈಗಿನ ಶಿಫಾರಸ್ಸಿನ ಬಗ್ಗೆ ಅರಿವು ಯಾವುದೇ ವಿನ್ಯಾಸಗಾರರನ್ನು ಡಬ್ಲ್ಯುವೈಎಸ್‌ಐಡಬ್ಲ್ಯುವೈಜಿ ಸಾಧವನ್ನು ಬಳಸಿ ಅಥವಾ ಇದನ್ನು ಬಳಸದೆಯೇ ಉತ್ತಮ ವೆಬ್ ಪುಟಗಳನ್ನು ರಚಿಸಲು ಸಹಕರಿಸುತ್ತವೆ.[೭]

ಡಬ್ಲ್ಯೂವೈಎಸ್ಐಡಬ್ಲ್ಯೂವೈಜಿ ಸಾಧಿಸುವಲ್ಲಿ ಇರುವ ತೊಂದರೆಗಳು[ಬದಲಾಯಿಸಿ]

ನೀಡಲಾದ ಎಚ್ ಟಿಎಂಎಲ್ ದಾಖಲೆಯು ಹೊಂದಿಕೆಯಾಗದಂತಹ ತೋರಿಕೆಯನ್ನು ಅನೇಕ ಕಾರಣಗಳಿಂದ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಹಾಗೂ ಗಣಕಯಂತ್ರಗಳಲ್ಲಿ ತೋರಿಸುತ್ತದೆ:

ಭಿನ್ನ ಬ್ರೌಸರ್‌ಗಳು ಹಾಗೂ ಅಪ್ಲಿಕೇಶನ್‌ಗಳು ಒಂದೇ ನಿರ್ದೇಶನವನ್ನು ಭಿನ್ನವಾಗಿ ಪ್ರದರ್ಸಿಸುತ್ತವೆ.
ಒಂದೇ ಪುಟವು ಇಂಟರ್ನೆಟ್ ಎಕ್ಸ್ ಪ್ಲೋರರ್ ಹಾಗೂ ಫೈರ್‌ಫಾಕ್ಸ್‌ನಲ್ಲಿ ಸ್ವಲ್ಪ ವ್ಯತ್ಯಾಸದೊಂದಿಗೆ ಅತಿ ಹೆಚ್ಚು ತಳಿದ ಚಿತ್ರದಲ್ಲಿ ಪ್ರದರ್ಶನಗೊಳ್ಳಬಹುದು, ಆದರೆ ಅದು ಕೇವಲ ಲಿನ್‌ಕ್ಸ್ ಬ್ರೌಸರ್‌ನಲ್ಲಿ ಮಾತ್ರ ಅತ್ಯಂತ ಭಿನ್ನವಾಗಿ, ಪರಿಪೂರ್ಣವಾಗಿ ಕಂಡುಬರುತ್ತದೆ. ಅದು ಮತ್ತೆ ಒಂದು ಪಿಡಿಎದಲ್ಲಿ, ಒಂದು ಅಂತರ್ಜಾಲ ಲಭ್ಯವಿರುವ ದೂರದರ್ಶಕದಲ್ಲಿ ಮತ್ತು ಒಂದು ಮೊಬೈಲ್ ದೂರವಾಣಿಯಲ್ಲಿ ಭಿನ್ನವಾಗಿ ಚಿತ್ರಿಸಲ್ಪಡಬೇಕಾಗುತ್ತದೆ. ಸಾಂಪ್ರದಾಯಿಕ ಬ್ರೌಸರ್‌ನಲ್ಲಿ ಕೆಲಸ ಮಾಡುವಾಗ ಒಂದು ಮಾತು ಅಥವಾ ಬ್ರೇಯ್ಲಿ ಬ್ರೌಸರ್, ಅಥವಾ ಪರದೆ-ವೀಕ್ಷಕದ ಮೂಲಕ ಉಪಯುಕ್ತತೆಯು ಅಡಗಿರುವ ಎಚ್ ಟಿಎಂಎಲ್ ನ ಸಂಪೂರ್ಣ ವಿಭಿನ್ನ ವಿಷಯದ ಮೇಲೆ ಬೇಡಿಕೆಯನ್ನಿಡುತ್ತದೆ, ವಿಭಿನ್ನ ಬ್ರೌಸರ್‌ಗಳು ಹಾಗೂ ವಿಭಿನ್ನ ಮುದ್ರಕಗಳ ಮೂಲಕ ವಿವಿಧ ಕಾಗದದ ಗಾತ್ರಗಳಲ್ಲಿ ಪುಟವನ್ನು ಮುದ್ರಿಸುವುದು ಜಗತ್ತಿನಾದ್ಯಂತ ಇತರ ಬೇಡಿಕೆಗಳನ್ನು ಇಡುತ್ತದೆ. ಆಧುನಿಕ ಎಚ್ ಟಿಎಂಎಲ್ ಹಾಗೂ ಸಿಎಸ್ಎಸ್‌ನ ಸರಿಯಾದ ಉಪಯೋಗದಿಂದ ಮುಂದೆ 'ಮುದ್ರಿಸಬಲ್ಲ ಪುಟ'ದ ಸಂಪರ್ಕಗಳನ್ನು ನೀಡುವುದು ಮತ್ತು ಎರಡು ಸಂಪೂರ್ಣ ಸೈಟ್ ನ ಎರಡು ರೂಪಾಂತರಗಳನ್ನು ಇಟ್ಟುಕೊಳ್ಳುವ ಅಗತ್ಯ ಬರುವುದಿಲ್ಲ. ಪುಟಗಳು ಉಪಯೋಗಿಸುವವನು ಆಯ್ಕೆ ಮಾಡಿದ ಕಾಗದದ ಗಾತ್ರಕ್ಕೆ ಸರಿಯಾಗದಿದ್ದರೆ ಮತ್ತು ಹೊಂದಿಕೊಳ್ಳದಿದ್ದರೆ, ಅಥವಾ ದಪ್ಪನೆಯ ಹಿನ್ನೆಲೆ ಬಣ್ಣಗಳು ಅನವಶ್ಯಕವಾಗಿ ಮುದ್ರಣದಲ್ಲಿ ವ್ಯರ್ಥವಾಗುವುದು, ಅಥವಾ ನಿರ್ದೇಶಕ ಪಟ್ಟಿಯನ್ನು ಪುನರ್ ನಿರ್ಮಿಸುವ ಮೂಲಕ ಕಾಗದಗಳನ್ನು ವ್ಯರ್ಥ ಮಾಡಿದರೂ ಒಂದು ಬಾರಿ ಮುದ್ರಣ ಮಾಡಿದ ಮೇಲೆ ಸಂಪೂರ್ಣ ಉಪಯೋಗವಿಲ್ಲದಂತಾಗಿ ಯಾವುದೇ ಕ್ಷಮೆಯೂ ಇರುವುದಿಲ್ಲ[೮].
ಬ್ರೌಸರ್‌ಗಳು ಮತ್ತು ಗಣಕಯಂತ್ರದ ಗ್ರಾಫಿಕ್ ಗಳ ಪದ್ಧತಿಗಳು ಬಳಕೆದಾರನ ಜೋಡಣೆಯ ಒಂದು ವ್ಯಾಪ್ತಿಯನ್ನು ಹೊಂದಿವೆ.
ತಳಿದ, ಅಕ್ಷರದ ಗಾತ್ರ, ಬಣ್ಣ, ವೈದೃಶ್ಯ ಮುಂತಾದವುಗಳು ಬಳಕೆದಾರನ ವಿವೇಚನೆಗೆ ತಕ್ಕಂತೆ ಹೊಂದಿಕೊಳ್ಳುತ್ತವೆ, ಮತ್ತು ಅನೇಕ ಆಧುನಿಕ ಬ್ರೌಸರ್‌ಗಳು ಪುಟದ ತೋರಿಕೆಯ ಮೇಲೆ ಬಳಕೆದಾನಿಗೆ ಇನ್ನೂ ಹೆಚ್ಚಿನ ಹಿಡಿತ ನೀಡಿವೆ[೯]. ಓರ್ವ ಲೇಖಕ ಮಾಡಬಲ್ಲಂತಹುದೆಂದರೆ ತೋರಿಕೆಯ ಕುರಿತು ಸಲಹೆ ನೀಡುವುದು.
ಎಲ್ಲ ಗಣಕಯಂತ್ರ ಸಾಫ್ಟ್ ವೇರ್ ಹೊಂದಿರುವಂತಹ ವೆಬ್ ಬ್ರೌಸರ್‌ಗಳು,

ಬಗ್ ಗಳು

ಅವರು ಪ್ರಸಕ್ತ ದರ್ಜೆಗಳಿಗೆ ಸರಿಹೊಂದದಿರಬಹುದು. ಎಲ್ಲ ಸಾಮಾನ್ಯ ಬ್ರೌಸರ್ ಗಳ ಪ್ರಸಕ್ತ ಬಗ್‌ನ ಸುತ್ತ ವೆಬ್‌ಪುಟಗಳನ್ನು ಚಿತ್ರಿಸುವುದು ನಿಷ್ಪ್ರಯೋಜಕವಾಗಿದೆ: ಪ್ರತಿ ಬ್ರೌಸರ್‌ನ ಒಂದು ಹೊಸ ರೂಪಾಂತರವು ಪ್ರತಿ ಕ್ಷಣವೂ ಹೊರಬರುತ್ತದೆ, ಜಾಗತಿಕ ವೆಬ್‌ನ ಒಂದು ಅರ್ಥಗರ್ಭಿತವಾದ ಪರಿಮಾಣವು ಹೊಸ ಬಗ್ ಗಳು ಮತ್ತು ಹೊಸ ಜೋಡಣೆಗಳನ್ನು ಸರಿಹೊಂದಿಸಲು ಪುನಃ ಸಂಕೇತನ ಮಾಡುವ ಅಗತ್ಯವಿರುತ್ತದೆ.‌ ಅವು ಸಂಪೂರ್ಣ ಹೊಂದಿಕೊಳ್ಳುವವರೆಗೂ 'ಅತ್ಯಂತ ಆಧುನಿಕ ತಂತ್ರಜ್ಞಾನ'ದ ಗುಣಲಕ್ಷಣಗಳಿಂದ ದೂರವಿದ್ದು, ಮಟ್ಟಕ್ಕೆ ತಕ್ಕಂತೆ ರೂಪಿಸಿವುದು ಸಾಮಾನ್ಯವಾಗಿ ಹೆಚ್ಚು ಬುದ್ಧಿವಂತಿಕೆಯ ಕೆಲಸ ಎಂದು ಯೋಚಿಸಲಾಗಿದೆ, ಹಾಗೂ ನಿಮ್ಮ ಪುಟಗಳನ್ನು ಪಡೆಯಲು ಅವರು ಇತರ ಮಾರ್ಗಗಳಿಗಿಂತ ಬ್ರೌಸರ್ ಅಭಿವೃದ್ಧಿಪಡಿಸುವವರಿಗಾಗಿ ಕಾಯುತ್ತಾರೆ[೧೦]. ಇದಕ್ಕೆ ಸಂಬಂಧಿಸಿದಂತೆ, ಸಾಮಾನ್ಯ ಬ್ರೌಸರಗಳಲ್ಲಿ ಎಲ್ಲ ಪ್ರಮುಖ ಗುಣಲಕ್ಷಣಗಳಿಗೆ[೧೧] ಅತ್ಯಂತ ಹೆಚ್ಚು ವ್ಯಾಪ್ತಿಯ ಬೆಂಬಲ ಲಭ್ಯವಿರುವಂತೆ ಈಗ ಸಿಎಸ್ಎಸ್ ಈಗಲೂ 'ಮುಂಚೂಣಿಯಲ್ಲಿರುವ ತಂತ್ರಜ್ಞಾನ' ಎಂಬುದನ್ನು ಅನೇಕ ಡಬ್ಲ್ಯೂವೈಎಸ್ಐಡಬ್ಲ್ಯೂವೈಜಿ ಮತ್ತು ಇತರ ಸಂಪಾದಕರು ಇನ್ನೂ ಸಂಪೂರ್ಣವಾಗಿ ತಿಳಿದುಕೊಳ್ಳದಿದ್ದರೂ ಯಾರೂ ಅಲ್ಲಗಳೆಯುವುದಿಲ್ಲ[೧೨].

ಭೇಟಿ ನೀಡುವ ಹೆಚ್ಚು ಜನರು ನೋಡುವುದನ್ನೇ ನೀವು ಕೂಡ ನೋಡಬಹುದು, ಆದರೆ ಅದು ಪ್ರತಿಯೊಬ್ಬರಿಗೂ ಸಿಗುವುದೇ ಆಗಿರುತ್ತದೆ ಎಂಬುದಕ್ಕೆ ಭರವಸೆ ಇಲ್ಲ.

ಇವನ್ನೂ ಗಮನಿಸಿ[ಬದಲಾಯಿಸಿ]

 • ಎಚ್ ಟಿಎಂಎಲ್ ಸಂಪಾದಕರ ಹೋಲಿಕೆ
 • ಎಚ್ ಟಿಎಂಎಲ್ ಸಂಪಾದಕರ ಪಟ್ಟಿ
 • ವೆಬ್ ಪ್ರಮಾಣ ಫಲಕ ಪದ್ಧತಿ
 • ವೆಬ್ ಸೈಟ್ ತಯಾರಕರು
 • ಕ್ರಮಬದ್ಧಗೊಳಿಸುವವರು

ಉಲ್ಲೇಖಗಳು[ಬದಲಾಯಿಸಿ]

 1. ಡಬ್ಲೂಪಿಡಿಎಫ್‌ಡಿ ಸಂಚಿಕೆ #54 - ಸೆಪ್ಟೆಂಬರ್ 01, 2002 | ಪೆಬ್ ಪೇಜ್ ಡಿಸೈನ್ ಫಾರ್ ಡಿಸೈನರ್ಸ್ ©
 2. ಡಬ್ಲೂಪಿಡಿಎಫ್‌ಡಿ ಸಂಚಿಕೆ #77 - ಆಗಸ್ಟ್ 01, 2004 | ಪೆಬ್ ಪೇಜ್ ಡಿಸೈನ್ ಫಾರ್ ಡಿಸೈನರ್ಸ್ ©
 3. ಡಬ್ಲೂಪಿಡಿಎಫ್‌ಡಿ ಸಂಚಿಕೆ #79 - ಅಕ್ಟೋಬರ್ 01, 2004 | ಪೆಬ್ ಪೇಜ್ ಡಿಸೈನ್ ಫಾರ್ ಡಿಸೈನರ್ಸ್ ©
 4. ಕ್ಯಾಸ್ಕೇಡಿಂಗ್ ಸ್ಟೈಲ್ ಶೀಟ್ಸ್, ಮಟ್ಟ 1
 5. ೫.೦ ೫.೧ ೫.೨ Harold, Elliotte Rusty (2008). Refactoring HTML. Boston: Addison Wesley. ISBN 978-0-321-50363-3.
 6. "Web Content Accessibility Guidelines (WCAG) 2.0". W3C. 2008.
 7. ಡೇವ್ ರ್ಯಾಜೆಟ್ಸ್‌ನ ಇಂಟ್ರೋಡಕ್ಷನ್ ಟು ಎಚ್‌ಟಿಎಂಎಲ್‌
 8. ಮಾಧ್ಯಮ ಪ್ರಕಾರಗಳು
 9. ಆಯ್ಕೆಗಳ ವಿಂಡೋ
 10. ಎನ್ ಎಸ್ಸೇ ಆನ್ ಡಬ್ಲೂ‌3ಸಿಸ್ ಡಿಸೈನ್ ಪ್ರಿನ್ಸಿಪಲ್ಸ್
 11. ಕ್ಯಾಸ್ಕೇಡಿಂಗ್ ಸ್ಟೈಲ್ ಶೀಟ್ಸ್
 12. ಕ್ಯಾಸ್ಕೇಡಿಂಗ್ ಸ್ಟೈಲ್ ಶೀಟ್ಸ್