ವಿಷಯಕ್ಕೆ ಹೋಗು

ಎಕಿಡ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮ್ಯಾಮೇಲಿಯ ವರ್ಗದಲ್ಲಿನ ತೀರ ಕೆಳಗಿನ ವರ್ಗವಾದ ಮಾನೊಟ್ರೆಮೇಟಕ್ಕೆ ಸೇರಿದ ಸ್ತನಿಗಳು. ಮೊಟ್ಟೆ ಇಡುವುದೇ ಇವುಗಳ ವೈಶಿಷ್ಟ್ಯ. ಆಸ್ಟ್ರೇಲಿಯ, ಟಾಸ್ಮೇನಿಯ ಮತ್ತು ನ್ಯೂಗಿನಿಗಳು ಇಂಥ ಪ್ರಾಣಿಗಳ ಮೂಲಸ್ಥಾನ. ಇವುಗಳ ದೇಹ ಬಲು ಭಾರ, ಬಾಲ ಮೋಟು. ಕೂಗು ನೀಳವಾಗಿ ಚುರುಕಾಗಿರುತ್ತದೆ. ಹಲ್ಲಿಲ್ಲ, ಹುಳುಗಳೇ ಇವುಗಳ ಆಹಾರ. ನಾಲಗೆ ನೀಳವಾದ ಕೊಳವೆಯಂತಿದ್ದು ಅಂಟಾಗಿರುವುದರಿಂದ ಹುಳುಗಳ ಬೇಟೆಗೆ ಅನುಕೂಲವಾಗಿದೆ. ಕಾಲುಗಳು ಮೋಟು, ದಪ್ಪ ಪಾದದ ಬೆರಳುಗಳು ಉದ್ದವಾಗಿದ್ದು ನೆಲ ಅಗೆಯಲು ಅನುಕೂಲವಾಗಿವೆ. ಮೈಮೇಲೆ ಮುಳ್ಳುಹಂದಿಗಿರುವಂತೆ ಮುಳ್ಳುಗಳಿವೆ.[]

ಬೆಟ್ಟಗುಡ್ಡಗಳ ಮರಳು ಮತ್ತು ಕಲ್ಲು ನೆಲದಲ್ಲಿ ಇವುಗಳ ವಾಸ. ಭಯವಾದಾಗ ಚೆಂಡಿನಂತೆ ಸುರುಳಿಯಾಗಿ, ಮುಳ್ಳು ಮೇಲಾಗಿ ಕೂಡುತ್ತವೆ. ಅಥವಾ ಹುಡಿನೆಲವನ್ನು ಅಗೆದು ಒಳಸೇರುತ್ತವೆ. ಇವುಗಳ ದೃಷ್ಟಿ ಮಂದವಾದರೂ ಕಿವಿ, ಮೂಗುಗಳು ಸುಟಿಯಾಗಿವೆ. ರಾತ್ರಿ ಬೇಟೆಯಾಡುವುದೇ ಸಾಮಾನ್ಯ. ತನ್ನ ಹೊಟ್ಟೆಯ ಹೊರಭಾಗದಲ್ಲಿರುವ ಚೀಲಗಳಲ್ಲಿ ಮೊಟ್ಟೆಗಳನ್ನು ಇಟ್ಟುಕೊಂಡು ಕಾಪಾಡುತ್ತವೆ. ಮೊಲೆ ಹಾಲು ಚೀಲದಲ್ಲಿರುವ ಮರಿಗಳಿಗೆ ನೇರ ಒದಗುತ್ತದೆ. ನೇರ ಮೂತಿಯ, ಐದು ಕಾಲುಬೆರಳಿನ ಎಕಿಡ್ನ ಪೂರ್ವ ಆಸ್ಟ್ರೇಲಿಯ, ಟಾಸ್ಮೇನಿಯ, ದಕ್ಷಿಣ ನ್ಯೂಗಿನಿಗಳಲ್ಲೂ ಡೊಂಕು ಮೂತಿಯ ಮೂರು ಕಾಲುಬೆರಳಿನ ಎಕಿಡ್ನ ನ್ಯೂಗಿನಿಯಲ್ಲೂ ವಾಸಿಸುತ್ತವೆ.

ಉಲ್ಲೇಖನಗಳು:

[ಬದಲಾಯಿಸಿ]
  1. http://animals.sandiegozoo.org/animals/echidna
"https://kn.wikipedia.org/w/index.php?title=ಎಕಿಡ್ನ&oldid=924609" ಇಂದ ಪಡೆಯಲ್ಪಟ್ಟಿದೆ