ಎಂ. ಕಾಡಪ್ಪ ಮೈಸೂರು

ವಿಕಿಪೀಡಿಯ ಇಂದ
Jump to navigation Jump to search

ಹುಬ್ಬಳ್ಳಿಯ ಧಾರವಾಡ ಜಿಲ್ಲೆಯ 'ಕುಂದುಗೋಳ' ತಾಲ್ಲುಕಿನ 'ಬೆಳ್ಳಿಗಟ್ಟಿ' ಗ್ರಾಮದ,ಎಂ.ಕಾಡಪ್ಪ, ಮೈಸೂರು,ಎನ್ನುವ ದಲಿತ ಕೇರಿಯಲ್ಲಿ ವಾಸಿಸುತ್ತಿದ್ದ ಗ್ರಾಮೀಣ ಪರಿಸರದ ಯುವಕ, ಬಡಕುಟುಂಬದಿಂದ ಬಂದ ವ್ಯಕ್ತಿ. ಹತ್ತಿ ಗಿರಣಿಯಲ್ಲಿ ಕಾವಲುಗಾರನಾಗಿ ವ್ರುತ್ತಿಮಾಡುತ್ತಿದ್ದ. ಪ್ರೌಧಶಾಲೆಯವರೆಗೆ ಓದಿ ಮುಂದೆ ಓದಲು ಹಣದ ಸಹಾಯವಿಲ್ಲದೆ ಕೊರಗುತ್ತಿದ್ದ ವ್ಯಕ್ತಿ. ತನ್ನ ಧೃಡ ನಿರ್ಧಾರ, ಮತ್ತು ಅಪಾರ ಆತ್ಮವಿಶ್ವಾಸದಿಂದ ಇಂದು ಒಬ್ಬ ಯಶಸ್ವಿ ಉದ್ಯೋಗಪತಿಯಾಗಿ ತನ್ನ ಹುಟ್ಟೂರಿನಲ್ಲಿ ೧೦೦ ಕೋಟಿ ರುಪಾಯಿ ಹೂಡಿಕೆಯ ಕಂಪೆನಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾನೆ. ಇಲ್ಲಿನ ಹಲವಾರು ಯುವ ಇಂಜಿನಿಯರ್ ಗಳಿಗೆ ನೌಕರಿ ಕೊಡುವಷ್ಟು ಎತ್ತರಕ್ಕೆ ಬೆಳೆದಿದ್ದಾನೆ.

ಪರಿಶ್ರಮ, ಮಹದಾಸೆ[ಬದಲಾಯಿಸಿ]

ನಿರಂತರ ಪರಿಶ್ರಮ, ಮತ್ತು ಮಹದಾಸೆಯಿಂದ ತನ್ನ ಜೀವನವನ್ನು ರುಪಿಸಿಕೊಂಡು ಮುಂದೆ ಎತ್ತರಕ್ಕೆ ಬೆಳೆದ 'ಎಂ. ಕಾಡಪ್ಪ, ತನ್ನ ಗ್ರಾಮದ ಬೋವಿ ಕಾಲೋನಿಯ ಮಣ್ಣಿನ ಮನೆಯಿಂದ ಹೊಸಜೀವನ ಪ್ರಾರಂಭಿಸಿದ ಕೇವಲ ೧೫ ವರ್ಷಗಳಲ್ಲಿ ಸ್ವಂತ ಉದ್ಯಮಿಯಾಗಿ ಬೆಳೆದಿದ್ದಾನೆ. 'ಶಾಂತಲಾ ಸಮೂಹ' ಎಂಬ ಉದ್ಯಮ ಕ್ಷೇತ್ರವನ್ನು ಕಟ್ಟಿ ಬೆಳಸಿದರು. ಇದು ಅವರ ಬೆಳ್ಳಿಗಟ್ಟಿ ಗ್ರಾಮದ ಹತ್ತಿರದಲ್ಲೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿದೆ. ೪೦ ಎಕರೆ ಪ್ರದೇಶವನ್ನು ಖರೀದಿಸಿ ನಿರ್ಮಿಸಿದರು.'ವಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರಯತಿಗಳ ಹಸ್ತದಿಂದ ಉದ್ಯಮ ಘಟಕದ ಶಂಕುಸ್ಥಾಪನೆ'ಯನ್ನು ಸನ್. ೨೦೧೩ ರ, ಶನಿವಾರ, ಮಾರ್ಚ್ ೨ ರಂದು, ನೆರವೇರಿಸಿದರು.

ವಿದ್ಯುತ್ ನಿರ್ಮಾಣ ಘಟಕ[ಬದಲಾಯಿಸಿ]

ಜೈವಿಕ ತ್ಯಾಜ್ಯವನ್ನು ಮೂಲ ವಸ್ತುವನ್ನಾಗಿ ಬಳಸಿ, ವಿದ್ಯುತ್ ತಯಾರಿಸುವ ಘಟಕ ಈಗ ೬ ಮೆಗಾವ್ಯಾಟ್ ವಿದ್ಯುತ್ ತಯಾರಿಸಲು ಆರಂಭಿಸಿದೆ.ಇಂಜಿನಿಯರಿಂದ್ ಮತ್ತು ಭಾರಿ ಉದ್ಯಮ ವಲಯದಲ್ಲಿ ಸಂಶೋಧನೆಗೆ ಅವತ್ಯವಿರುವ ಪ್ರಯೋಗಶಾಲೆಯಲ್ಲಿ ಉಪಕರಣಗಳ ತಯಾರಿಕಾ ಘಟಕ ಸಹಿತ ಶುರುವಾಗಲಿದೆ.

ಪರಿವಾರ[ಬದಲಾಯಿಸಿ]

ಕಾಡಪ್ಪನವರ ತಂದೆ, ಬೆಳ್ಳಿ ಗಟ್ಟಿ ಕೃಷ್ಣಪ್ಪ ಮೈಸೂರು. ಮತ್ತು ತಾಯಿ ಶಾಂತವ್ವ, ಈ ದಂಪತಿಗಳ ೧೪ ಜನ ಮಕ್ಕಳಲ್ಲಿ ಕಾಡಪ್ಪ ಕೊನೆಯವರು. ೩ ನೆಯ ಇಯತ್ತೆಯಲ್ಲಿ ಓದುವಾಗಲೇ ತಂದೆ ಅನಾರೋಗ್ಯದಿಂದ ನರಳಿ ಕೊನೆಯುಸಿರೆಳೆದರು. ತಾಯಿಯವರು ಧೃತಿಗೆಡದೆ, ಗ್ರಾಮದ ಹೊಲಗಳಲ್ಲಿ ಕೂಲಿ-ನಾಲಿ ಮಾಡಿ ದೊಡ್ಡ ಪರಿವಾರವನ್ನು ಸಾಕಿ ಸಲಹಿ ಮುಂದೆ ತಂದರು.

ವಿದ್ಯಾಭ್ಯಾಸ ಮತ್ತು ವೃತ್ತಿ[ಬದಲಾಯಿಸಿ]

ತಡಸ, ಕುಂದಗೋಳ, ಮತ್ತು ತಾಯಿಯ ತವರು ಮನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲುಕಿನ ಹಿರಿಯೂರು. ೯ ನೆಯ ತರಗತಿವರೆಗೆ ವಿದ್ಯಾಭ್ಯಾಸ. ಮೆಟ್ರಿಕ್ ಹುಬ್ಬಳ್ಳಿಯ ಘಂಟಿಕೇರಿಯ ನ್ಯಾಷನಲ್ ಶಾಲೆಯಲ್ಲಿ ಪೂರೈಸಿದರು. ಹಗಲಿನಲ್ಲಿ ಶಾಲೆಗೇ ಹೋಗುತ್ತಿದ್ದರು. ರಾತ್ರಿಯಲ್ಲಿ ಹತ್ತಿ ಗಿರಣಿಯಲ್ಲಿ ಕಾವಲುಗಾರನ ನೌಕರಿ ಮಾಡುತ್ತಲೇ ಶೇ ೭೧ ಅಂಕಗಳನ್ನು ಗಳಿಸಿ ಶಾಲೆಗೇ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯೆಂದು ಹೆಸರಾದರು. ಮುಂದೆ ಪಿ.ಸಿ.ಜಾಬಿನ ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ಪು.ಯು.ಸಿ.ಪರೀಕ್ಷೆ ಮುಗಿಸಿ, ಅಲ್ಲೂ ೫೪ % ಅಂಕಗಳಿಂದ ಉತ್ತೀರ್ಣರಾಗಿ ಸಿದ್ಧಗಂಗಾ ಇಂಜಿನಿಯರಿಂಗ್ ಕಾಲೇಜಿನಲ್ಲಿ 'ಇನ್ ಷ್ಟ್ರು ಮೆಂಟೇಷನ್ ವಿಷಯ'ದಲ್ಲಿ ಪದವಿಗಳಿಸಿದರು. ತಮ್ಮ ಬಿಡುವಿನ ಸಮಯದಲ್ಲಿ ಕಾಲೇಜಿನ ಖರ್ಚನ್ನು ನಿಭಾಯಿಸಲು, ಖಾಸಗಿ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕನಾಗಿ ದುಡಿದರು. ಇಂಜಿನಿಯರಿಂಗ್ ಬಳಿಕ ಬೆಂಗಳೂರಿನ 'ಎಲ್ ಟೆಲ್' ಎಂಬ ಖಾಸಗಿ ಕಂಪೆನಿಯಲ್ಲಿ ೨ ಸಾವಿರ ರೂ ನೌಕರಿಗೆ ಸೇರಿಕೊಂಡರು. ಅಲ್ಲಿ ಗಳಿಸಿದ ೪ ವರೆ ವರ್ಷಗಳ ಅನುಭವದೊಂದಿಗೆ 'ಪ್ರಯೋಗ ಶಾಲೆಯ ಉಪಕರಣಗಳ ತಯಾರಿಕೆ'ಯಲ್ಲಿ ಪರಿಣತಿಗಳಿಸಿದರು. ಈ ಸಮಯದಲ್ಲಿ 'ಸುಮಂಗಲಾ' ಎಂಬ ಹುಡುಗಿಯ ಜೊತೆ ಮದುವೆಯಾದರು. ಸುಮಂಗಲಾ ರೈಲ್ವೆಯಲ್ಲಿ ವೈದ್ಯೆಯಾಗಿ ಕೆಲಸದಲ್ಲಿದ್ದರು. ಹುಬ್ಬಳ್ಳಿಯ ನಿವೃತ್ತ ಶಿಕ್ಷಕ ನಾರಾಯಣ ರಾವ್ ಈಕೆಯ ತಂದೆ.

ಪ್ರಧಾನ ಮಂತ್ರಿಯವರ ರೋಜ್ಗಾರ್ ಯೋಜನೆಯಿಂದ ನೆರವು[ಬದಲಾಯಿಸಿ]

ಕಾಡಪ್ಪನವರಿಗೆ ಸ್ವಂತ ಉದ್ಯಮದ ಕನಸು ಪ್ರಬಲವಾಯಿತು. ತಾವು ಉಳಿಸಿದ ಹಣದಿಂದ ತಮ್ಮ ನೌಕರಿಸಮಯದಲ್ಲಿ ಗಳಿಸಿದ ಭವಿಷ್ಯನಿಧಿ ಯಿಂದ ೩೦ ಸಾವಿರ ರೂ. ಮತ್ತು ಕೆಂದ್ರ ಸರಕಾರದ 'ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ'ಯ ಅಡಿಯಲ್ಲಿ ದೊರೆತ ೮೫ ಸಾವಿರ ಸೇರಿಸಿ, ಸನ್ ೧೯೯೯ ರಲ್ಲಿ ಹುಬ್ಬಳ್ಳಿಯ ಶಿವಗಂಗ ಕಾಲೋನಿಯಲ್ಲಿ 'ಶಾಂತಲಾ ಸಮೂಹ ಸಂಸ್ಥೆ' ಸ್ಥಾಪಿಸಿದರು. ದೊಡ್ಡ ಕಂಪೆನಿಗಳಲ್ಲಿ ಗುಣಮಟ್ಟ ಪರೀಕ್ಷೆ ಸೇವೆ ಆರಂಭಿಸಿದ ಕಂಪೆನಿಗೆ ಸುಮಾರು ಒಂದು ದಶಕದಲ್ಲಿ ಹಲವಾರು ಗ್ರಾಹಕರು, ಮುಂದೆ ಬರಲಾರಂಭಿಸಿದರು. ಅವರಲ್ಲಿ ಪ್ರಮುಖರು,

  • ಬಿ.ಎಚ್ ಇ.ಎಲ್.
  • ಏನ್.ಟಿ ಪಿ.ಸಿ.
  • ಸುಜ್ಲಾನ್ (ಮತ್ತು ಪವನ ವಿದ್ಯುತ್ ಸಂಸ್ಥೆಗಳಾದ)
  • ಎನರ್ಕಾನ್
  • ಎಸಿಸಿ
  • ಅಂಬುಜಾ ಸಿಮೆಂಟ್
  • ಜಿಂದಾಲ್ ಮೊದಲಾದವುಗಳು.

ತಮ್ಮ ಕಂಪೆನಿ ಸ್ವಲ್ಪ ಕುದುರಿದ ಬಳಿಕ, ಡಾ.ಸುಮಂಗಲಾ, ರೈಲ್ವೆಗೆ ರಾಜೀನಾಮೆ ನೀಡಿ, ಪತಿಯವರ ಜೊತೆ ಸಕ್ರಿಯರಾಗಿ ದುಡಿಯಲು ಪ್ರಾರಂಭಿಸಿದರು. ತಮ್ಮದೇ ಆದ ಸ್ವಂತ ಕಟ್ಟಡ 'ಶಾಂತಲಾ ಭವನ' ತಯಾರಾಯಿತು. ಅದು ಶಿವಗಂಗಾ ಕಾಲೋನಿಯ ಗೋಕುಲಾ ರಸ್ತೆಯಲ್ಲಿ ಆಯಿತು. ಅಲ್ಲೇ ೨ ವರ್ಷಗಳಿಂದ ತಲಾ ೧೫ ಕೊ ರೂಪಾಯಿ ಲಾಭಗಳಿಸಿ, ಈಗ ೩೬೦ ಜನ ಕೆಲಸಮಾಡುತ್ತಿದ್ದಾರೆ. ಅವರಲ್ಲಿ ೨೦೦ ಮಂದಿ ಇಂಜಿನಿಯರ್ ಗಳು. ಈಗ 'ಬೆಳ್ಳಿ ಗಟ್ಟಿ ಘಟಕ'ದ ಮೂಲಕ, ತನ್ನ ಉದ್ಯಮವನ್ನು ವಿಸ್ತರಿಸಲು ಸಂಸ್ಥೆ ಯೋಜನೆಗಳನ್ನು ಹಾಕಿಕೊಂಡಿದೆ.