ಎಂ.ಜಿ. ಮಂಜುನಾಥ

ವಿಕಿಪೀಡಿಯ ಇಂದ
Jump to navigation Jump to search

ಡಾ. ಎಂ.ಜಿ. ಮಂಜುನಾಥ ಕರ್ನಾಟಕದ ಹೆಸರಾಂತ ಲಿಪಿ ಶಾಸ್ತ್ರಙ್ಜ್ನ ಮತ್ತು ಸಂಶೋಧಕರು. ಕನ್ನಡ ಲಿಪಿ ವಿಕಾಸ ಕೃತಿಯಿಂದ ಪ್ರಸಿದ್ಧರಾದ, ಡಾ. ಮಂಜುನಾಥ, ೨೦೧೫ರಿಂದ ಮೈಸೂರು_ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ[೧]ಸೇವೆ ಸಲ್ಲಿಸುತ್ತಿದ್ದಾರೆ.[೨]

ಓದು-ವೃತ್ತಿ[ಬದಲಾಯಿಸಿ]

ಡಾ. ಮಂಜುನಾಥ ೧೯೭೩ರಲ್ಲಿ ಶ್ರೀ ಗಂಗಪ್ಪನವರ ಮಗನಾಗಿ ಹುಟ್ಟಿದರು. ಎಂ.ಎ ಮತ್ತು ಪಿ.ಹೆಚ್.ಡಿ ಪಡೆದು ೯೦ರ ದಶಕದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ವೃತ್ತಿ ಆರಂಭಿಸಿದ ಡಾ. ಮಂಜುನಾಥ, ತದ್ನಂತರ ಹೇಮಗಂಗೋತ್ರಿಯ ಪದವಿಯೋತ್ತರ ಕೇಂದ್ರ ಮತ್ತು ಮೈಸೂರು ವಿ.ವಿಯಲ್ಲಿ ಸೇವೆ ಗೈದರು.[೩]

ಆಸಕ್ತಿ[ಬದಲಾಯಿಸಿ]

 • ಕರ್ನಾಟಕದ ಶಾಸನಕಲ್ಲುಗಳು
 • ಕರ್ನಾಟಕದ ನಾಣ್ಯ-ವ್ಯವಸ್ಥೆ
 • ಶತಮಾನಗಳ ಅವಧಿಯಲ್ಲಿ ಕನ್ನಡ ಲಿಪಿಯ ವಿಕಾಸ

ಅಜೀವ ಸದಸ್ಯತ್ವ[ಬದಲಾಯಿಸಿ]

 • ಕನ್ನಡ ಸಾಹಿತ್ಯ್ಯ ಪರಿಷತ್
 • ಕರ್ನಾಟಕ ಇತಿಹಾಸ ಅಕಾಡೆಮಿ
 • ಕರ್ನಾಟಕ ಇತಿಹಾಸ ಕಾಂಗ್ರೆಸ್
 • ದಕ್ಷಿಣ ಭಾರತ ಇತಿಹಾಸ ಕಾಂಗ್ರೆಸ್
 • ಪ್ಲೇಸ್‍ನೇಮ್ ಸೊಸೈಟಿ ಆಫ್ ಇಂಡಿಯಾ
 • ನುಮಿಸ್ಮಾಟಿಕ್ಸ್ ಸೊಸೈಟಿ ಆಫ್ ಇಂಡಿಯಾ (ಪುರಾತನ ನಾಣ್ಯಗಳ ಅಧ್ಯಯನಕಾರರ ಸೊಸೈಟಿ)
 • ಭಾರತೀಯ ಎಪಿಗ್ರಾಫಿ ಕಾಂಗ್ರೆಸ್ (ಶಿಲಾಶಾಸನ ಕಲ್ಲುಗಳ ಅಧ್ಯಯನ)
 • ಭಾರತೀಯ ಕಲಾ ಚರಿತ್ರೆ ಕಾಂಗ್ರೆಸ್

ಪ್ರಕಟಣೆ[ಬದಲಾಯಿಸಿ]

ಸಂಪಾದನೆ[ಬದಲಾಯಿಸಿ]

 • ಕನ್ನಡ ಲಿಪಿ ವಿಕಾಸ [೪].[೫] ಭಾಷೆಯ ಲಿಪಿಯಿಂದ ಜನಮಾನಸದಲ್ಲಿ ಬೇರುಬಿಟ್ಟ ರೂಢಿಗತ ಸಂಸ್ಕೃತಿಯನ್ನು ಅಧ್ಯಯನ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟ ಹಿರಿಮೆ ಈ ಪುಸ್ತಕದ್ದು.[೬]. ಕೇವಲ ಪಂಡಿತರ ಮಟ್ಟದಲ್ಲಿ ಅಲ್ಲದೇ, ಪುಸ್ತಕ ಮೇಳಗಳಲ್ಲಿ ಸಹ ಹೆಚ್ಚು ಮಾರಾಟವಾದದ್ದು ಈ ಪುಸ್ತಕದ ವಿಶೇಷ.[೭]

ಅಂಕಿ ಮತ್ತು ಅಕ್ಷರ ಎರಡನ್ನೂ ಕಂಪ್ಯೂಟರ್ ಗೆ ತಿಳಿಹೇಳಲು[೮]
ಮತ್ತು ಸ್ವಯಂ ಲಿಪಿತಿಳುವಳಿ [೯]ಗಾಗಿ ಈ ಕೃತಿಯನ್ನು ಬಳಸಲಾಗುತ್ತಿದೆ.

 • ಕನ್ನಡ ಲಿಪಿಶಾಸ್ತ್ರ.[೧೦]
 • ಮಾಸ್ತಿಕಲ್ಲು, ವೀರಗಲ್ಲು ಮತ್ತು ನಿಸಿಡಿ ಶಾಸನಗಳು
 • ೧೨೦೦ರಿಂದ ೧೬೦೦ ರ ಅವಧಿಯಲ್ಲಿ ಕನ್ನಡ ಸಾಹಿತ್ಯದಲ್ಲಿನ ಪಲ್ಲಟಗಳನ್ನು ಶಿಲಾಶಾಸನಗಳನ್ನು ಬಳಸಿ ಅಧ್ಯಯನ ನಡೆಸುತ್ತಿರುವರು..[೧೧]

ಪ್ರಶಸ್ತಿಗಳು[ಬದಲಾಯಿಸಿ]

 • ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಕೊಡಮಾಡುವ ಸುಜಯಶ್ರೀ ಪ್ರಶಸ್ತಿಯನ್ನು ಡಾ. ಮಂಜುನಾಥರಿಗೆ ಕನ್ನಡ ಲಿಪಿ ವಿಕಾಸ ಕೃತಿಗೆ ನೀಡಲಾಗಿದೆ.[೧೨]
 • ಡಾ. ಮಂಜುನಾಥರ ಸಂಶೋಧನೆಗೆ ಗೌತಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


ಉಲ್ಲೇಖಗಳು[ಬದಲಾಯಿಸಿ]