ಎಂ.ಆರ್.ಲಕ್ಷ್ಮಮ್ಮ
ಗೋಚರ
ಎಂ.ಆರ್.ಲಕ್ಷ್ಮಮ್ಮ ಇವರು ೧೯೧೩ರಲ್ಲಿ ಜನಿಸಿದರು. ಇವರ ತಂದೆ ಆರ್.ರಾಮರಾವ್; ಪತಿ ನಾರಾಯಣ ಮೂರ್ತಿ.
ಪತ್ರಿಕೋದ್ಯಮ
[ಬದಲಾಯಿಸಿ]ಲಕ್ಷ್ಮಮ್ಮನವರು ವಯಸ್ಕರ ಶಿಕ್ಷಣ ಸಮಿತಿಯ ‘ಬೆಳಕು’ ಪತ್ರಿಕೆಯ ಪ್ರಪ್ರಥಮ ಸಂಪಾದಕಿಯಾಗಿದ್ದರು. ಮಹಿಳೆಯರಿಗಾಗಿ ‘ಸೋದರಿ’ ಎನ್ನುವ ವಾರಪತ್ರಿಕೆಯನ್ನು ೫ ವರ್ಷ ಕಾಲ ನಡೆಯಿಸಿದರು.ಆ ಬಳಿಕ ೧ ವರ್ಷ ಕಾಲ ಇದನ್ನು ಮಾಸಪತ್ರಿಕೆಯಾಗಿ ನಡೆಯಿಸಿದರು.
ಸಾಹಿತ್ಯ
[ಬದಲಾಯಿಸಿ]ಲಕ್ಷ್ಮಮ್ಮನವರು ಹಲವಾರು ಕತೆಗಳನ್ನು ರಚಿಸಿದ್ದಾರೆ ಹಾಗು ಜನಪದ ಸಾಹಿತ್ಯವನ್ನು ಸಂಗ್ರಹಿಸಿದ್ದಾರೆ.
ಸಾಮಾಜಿಕ
[ಬದಲಾಯಿಸಿ]೧೯೪೫ರಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಗೊಂಡಿದ್ದರು.
ಎಂ.ಆರ್.ಲಕ್ಷ್ಮಮ್ಮನವರು ೧೯೮೪ರಲ್ಲಿ ನಿಧನರಾದರು.