ಊಹಿಸುವುದು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಅನುಮಾನ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಸಂದೇಹ ಲೇಖನಕ್ಕಾಗಿ ಇಲ್ಲಿ ನೋಡಿ.
ಕೇವಲ ನೋಡಿ ಈ ಜಾಡಿಯಲ್ಲಿರುವ ಅಣಬೆಗಳ ನಿಖರ ಸಂಖ್ಯೆ ನಿರ್ಧರಿಸಲಾಗುವುದಿಲ್ಲ. ಆದರೆ, ಸಂಖ್ಯೆಯನ್ನು ಊಹಿಸಬಹುದು.

ಊಹೆ ಹತ್ತಿರವಿರುವ ದತ್ತದಿಂದ ಪಡೆದ ಒಂದು ಕ್ಷಿಪ್ರ ತೀರ್ಮಾನ, ಮತ್ತು ಸಂಭಾವ್ಯ ಅಥವಾ ತಾತ್ಕಾಲಿಕವೆಂದು ಭಾವಿಸಲಾಗುತ್ತದೆ, ಏಕೆಂದರೆ ಊಹಿಸುವ ವ್ಯಕ್ತಿಯು ನಿಸ್ಸಂದೇಹವಾಗಿ ಹೆಚ್ಚಿನ ನಿಖರ ಪ್ರಮಾಣಕ್ಕೆ ಬೇಕಾದ ಮಾಹಿತಿಯನ್ನು ಹೊಂದಿರುವುದಿಲ್ಲ. ಊಹೆಯು ಅಸ್ಥಿರ ಉತ್ತರವೂ ಹೌದು, ಏಕೆಂದರೆ ಅದು ಯಾವಾಗಲೂ ಭಾವಿಸಲಾದದ್ದು, ತಪ್ಪಬಹುದಾದದ್ದು, ಹೆಚ್ಚಿನ ಪರಿಷ್ಕರಣೆ ಮತ್ತು ವ್ಯಾಖ್ಯಾನಕ್ಕಾಗಿ ತೆರೆದದ್ದು, ಮತ್ತು ನಮಗೆ ಈಗಾಗಲೇ ಗೊತ್ತಿರುವುದನ್ನು ಪರಿಗಣಿಸಿ ಒಂದು ವ್ಯಾಖ್ಯಾನ ಮತ್ತೊಂದಕ್ಕಿಂತ ಹೆಚ್ಚು ಸಂಭಾವ್ಯ ಎಂದು ತೋರಿಸಿ ಸಂಭಾವ್ಯ ಅರ್ಥಗಳ ವ್ಯಾಪ್ತಿಯ ವಿರುದ್ಧ ಮೌಲ್ಯೀಕರಿಸುವಂಥದ್ದು. ಅದರ ಅನೇಕ ಬಳಕೆಗಳಲ್ಲಿ, ಊಹಿಸುವುದರ ಅರ್ಥವನ್ನು ಸೂಚ್ಯವಾಗಿ ತಿಳಿದದ್ದು ಎಂದು ಅಂದುಕೊಳ್ಳಲಾಗುತ್ತದೆ,[೧] ಮತ್ತು ಹಾಗಾಗಿ ಪದವನ್ನು ಹಲುವುವೇಳೆ ನಿಖರವಾಗಿ ವ್ಯಾಖ್ಯಾನಿಸದೆಯೆ ಬಳಸಲಾಗುತ್ತದೆ. ಊಹಿಸುವುದು ತರ್ಕ, ದೃಷ್ಟಾಂತ ಕೊಡುವಿಕೆ, ಅನುಗಮನ, ಮತ್ತು ಕೊಡಲಾದ ಆಯ್ಕೆಗಳ ಸಮೂಹದಿಂದ ಒಂದನ್ನು ಸಂಪೂರ್ಣವಾಗಿ ಯಾದೃಚ್ಛಿಕ ಆಯ್ಕೆಯ ಅಂಶಗಳನ್ನು ಒಂದುಗೂಡಿಸಬಹುದು. ಊಹಿಸುವುದು ಊಹಿಸುವವನ ಒಳಜ್ಞಾನವನ್ನೂ ಒಳಗೊಂಡಿರಬಹುದು. ಊಹಿಸುವವನು ಯಾವ ಉತ್ತರ ಸರಿ ಎನ್ನುವ ಬಗ್ಗೆ ಸಹಜ ಪ್ರವೃತ್ತಿ ಹೊಂದಿರಬಹುದು ಆದರೆ ಈ ಅನಿಸಿಕೆ ಹೊಂದಿರಲು ಕಾರಣವನ್ನು ಸ್ಪಷ್ಟವಾಗಿ ತಿಳಿಸಲು ಅಸಮರ್ಥನಾಗಿರಬಹುದು.

ಹಲವುವೇಳೆ ಉಹಿಸುವುದರ ಕಡೆಗಣಿಸಲಾದ ಶ್ರೇಣೀಕರಣಗಳಿರುತ್ತವೆ - ಅಂದರೆ, ಬೇರೆ ಮಟ್ಟಗಳ ಆತ್ಮವಿಶ್ವಾಸಕ್ಕೆ ಒಳಗಾಗಬಹುದಾದ ಬೇರೆ ರೀತಿಯ ಊಹೆಗಳು. ಊಹಿಸುವುದು ಸಮಸ್ಯೆಗಳಿಗೆ ಸಂಭಾವ್ಯ ಪರಿಹಾರಗಳನ್ನು ಕಲ್ಪನಾತ್ಮಕವಾಗಿ ಸೃಷ್ಟಿಸುವ, ಆರಿಸುವ ಅಥವಾ ವಜಾಗೊಳಿಸುವ ಒಂದು ಆರಂಭಿಕ, ಉದ್ದೇಶಪೂರ್ವಕ ಮೂಲ ಚಟುವಟಿಕೆ.

ಉಲ್ಲೇಖಗಳು[ಬದಲಾಯಿಸಿ]

  1. Mark Tschaepe, "Gradations of Guessing: Preliminary Sketches and Suggestions", in John R. Shook, Contemporary Pragmatism Volume 10, Number 2, (December 2013), p. 135-154.