ವಿಷಯಕ್ಕೆ ಹೋಗು

ಉರಗದಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Modern depiction of the caduceus as the symbol of commerce
Hermes Ingenui[] carrying a winged kerykeion upright in his left hand, Roman copy reflecting an unknown Greek original of the 5th century BCE. (Museo Pio-Clementino, Rome).

ಉರಗದಂಡ ಎರಡು ಹಾವುಗಳು ಸುತ್ತಿಕೊಂಡಿರುವ ಒಂದು ದಂಡ, ದಂಡದ ಮೇಲೆ ಎರಡು ರೆಕ್ಕೆಗಳು-ಈ ಸಂಕೇತದ ಒಟ್ಟು ಹೆಸರು (ಕೆಡೂಸಿಯಸ್). ಹಾವುಗಳನ್ನು ಬುದ್ಧಿ, ಆರೋಗ್ಯಗಳ ಸಂಕೇತಗಳೆಂದು ಈಜಿಪ್ಟ್‌, ಗ್ರೀಸ್ ದೇಶಗಳ ಜನರು ಪುಜಿಸುತ್ತಿದ್ದರೆಂದು ಆ ದೇಶಗಳ ಪ್ರಾಚೀನಕಾಲದ ದಾಖಲೆಗಳಿಂದ ತಿಳಿದುಬಂದಿದೆ. ಅಂದು ಗ್ರೀಸ್ ದೇಶದಲ್ಲಿ ಈಸ್ಕುಲೇಪಿಯಸನ (ನೋಡಿ-ಈಸ್ಕುಲೇಪಿಯಸನ) ದೇಗುಲಗಳಲ್ಲಿ ಹಾವುಗಳಿದ್ದವು. ಅಲ್ಲಿನ ಪೂಜೆ ಪುನಸ್ಕಾರಗಳಲ್ಲಿ ಇವೂ ಸೇರಿರುತ್ತಿದ್ದವು. ಈಸ್ಕುಲೇಪಿಯಸನ ದಂಡದಲ್ಲಿ ಒಂದು ಹಾವು ಸುತ್ತಿಕೊಂಡಿರುವಂತೆ ಮೊದಲು ಚಿತ್ರಿಸಲಾಗಿತ್ತು. ಇವನು ರೋಗಶಾಮಕ ದೇವತೆ. ರೋಗವನ್ನು ಗುಣಪಡಿಸುವ ಸಂಕೇತ ಹಾವು ಎಂಬ ಭಾವನೆಯಿಂದ ಅದರ ಆಕೃತಿಯನ್ನು ದಂಡಕ್ಕೆ ಸುತ್ತಿರಬಹುದೆಂಬ ಒಂದು ವಾದವಿದೆ. ಹಾವಿನ ದೀರ್ಘಾಯುಷ್ಯ, ಚುರುಕು, ಪೊರೆಕಳಚವುದು ಮುಂತಾದುವೂ ಕಾರಣವಿರಬಹುದು. ಗ್ರೀಕರ ಪುರಾಣದಲ್ಲಿ ಉರಗದಂಡ ರೆಕ್ಕೆಯಿದ್ದ ಮಕುರ್ಯ್‌ರಿಯ ಲಾಂಛನ. ಮೊದಲಿಗೆ ಇದು ಸಂಪತ್ತು ಏಳಿಗೆ ದೊರಕಿಸುವ ಶಕ್ತಿಯ ಪ್ರತೀಕ ಮಾತ್ರವಾಗಿತ್ತು. ಸತ್ತವರ, ಬದುಕಿರು ವವರ ಮೇಲೆ ಹಲವಾರು ಪರಿಣಾಮಗಳ ಗುರುತೂ ಆಗಿತ್ತು. ಇದಕ್ಕೂ ಮೊದಲು ನಿಜವಾಗಿ ಹರ್ಮಿಸ್ ಬಳಸಿದ, ದೂತನಿಗೆ ಗೊತ್ತಾಗಿರುವ, ಅಂದರೆ ಅವನನ್ನು ಕಾಪಿಡುವ ಸಂಕೇತವಾಗಿತ್ತು. ಇನ್ನೂ ಮೊದಲು ಇದರಲ್ಲಿ ಆಲಿವ್ ರೆಂಬೆಗಳಿದ್ದÄವು. ಒಂದು ಹಿಡಿ, ಇನ್ನೆರಡು ಮೇಲೆ ಒಂದಕ್ಕೊಂದು ಗಂಟು ಹೆಣೆದುಕೊಂಡಿದ್ದವು. ಆ ಮೇಲೆ ಈ ಎರಡು ರೆಂಬೆಗಳ ಜಾಗಕ್ಕೆ ಹಾವುಗಳು ಬಂದು ಉರಗದಂಡವಾಯಿತು. ಇದರಲ್ಲಿ ಎರಡು ಹಾವುಗಳು ಸುತ್ತಿಕೊಂಡು ಮೇಲುಗಡೆ ಮುಖಗಳು ಎದುರುಬದುರಾಗಿವೆ. ಒಲಿಂಪಸನ ವೇಗದ ದೂತನಾದ ಮಕುರ್ಯ್‌ರಿಯದೆಂದು ಸೂಚಿಸಲು ರೆಕ್ಕೆಗಳಿವೆ. ಅನಂತರ ಇದನ್ನು ರೋಮನ್ ದೂತರು ಅಧಿಕಾರದ ದಂಡವಾಗಿ ಹಿಡಿಯುತ್ತಿದ್ದರು. ಹೀಗೆ ಉರಗದಂಡ ಅಂದು ವ್ಯಾಪಾರದ ಗುರುತಾಗಿತ್ತೇ ಹೊರತು ವೈದ್ಯಕ್ಕೆ ಸಂಬಂಧಿಸಿರಲಿಲ್ಲ.

ಅಮೆರಿಕ ಸಂಯುಕ್ತಸಂಸ್ಥಾನಗಳ ಸೇನೆಯಲ್ಲಿ ಬಳಕೆಯಲ್ಲಿರುವ ಉರಗದಂಡ
ಅಮೆರಿಕ ಸಂಯುಕ್ತಸಂಸ್ಥಾನಗಳ ಸೇನೆಯಲ್ಲಿ ಬಳಕೆಯಲ್ಲಿರುವ ಉರಗದಂಡ

ಇವೆರಡು ಲಾಂಛನಗಳಲ್ಲಿ ಒಂದಕ್ಕೊಂದರ ತಪ್ಪು ತಿಳಿವಳಿಕೆ ಬಹು ಕಾಲದ್ದು, ಮೊಟ್ಟಮೊದಲು 16ನೆಯ ಶತಮಾನದಲ್ಲಿ ವೈದ್ಯಕ ಪುಸ್ತಕಗಳ ಪ್ರಕಾಶಕ ಜೊಹಾನ್ ಫ್ರೋಬೆನ್ ಪುಸ್ತಕಗಳ ಮುಖಪತ್ರದ ಗುರುತಾಗಿ ಇದನ್ನು ಬಳಸಿದನಂತೆ. ಕೆಲ ಕಾಲಾನಂತರ ಎರಡನೆಯ ಹೆನ್ರಿಯ ವೈದ್ಯ ಸರ್ ವಿಲಿಯಂ ಬಟ್ಸ್‌ ತನ್ನ ಲಾಂಛನವಾಗಿ ಇದನ್ನು ಇಟ್ಟುಕೊಂಡನಂತೆ. ಬ್ರಿಟಿಷ್ ಸೇನೆಯಲ್ಲಿ ರಾಯಲ್ ಸೇನೆಯ ವೈದ್ಯಕದಳ, ಅಮೆರಿಕದ ವೈದ್ಯಕ ಸಂಘ ಇವು ದಂಡದೊಂದಿಗೆ ಒಂದೇ ಹಾವನ್ನು ಲಾಂಛನವಾಗಿ ಇಟ್ಟುಕೊಂಡಿವೆ. ಅಮೆರಿಕ ಸಂಯುಕ್ತಸಂಸ್ಥಾನಗಳ ಸೇನೆಯ ವೈದ್ಯ ದಳಕ್ಕೆ ಮಾತ್ರ ಎರಡು ಹಾವುಗಳಿರುವ ಉರಗದಂಡವೇ ಲಾಂಛನ

ಉಲ್ಲೇಖಗಳು

[ಬದಲಾಯಿಸಿ]
  1. It is unclear whether the inscription refers to a patron/donor or a sculptor
"https://kn.wikipedia.org/w/index.php?title=ಉರಗದಂಡ&oldid=715638" ಇಂದ ಪಡೆಯಲ್ಪಟ್ಟಿದೆ