ವಿಷಯಕ್ಕೆ ಹೋಗು

ಉಮಾ ಜಾಧವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಮೈಸೂರು ನಗರದ 'ಟಿ.ಕೆ.ಬಡಾವಣೆ'ಯಲ್ಲಿನ ಕಾಸ್ಮೋಸ್ ಬ್ಯೂಟಿಪಾರ್ಲರ್ ಎಂಬ 'ಹೆಣ್ಣುಮಕ್ಕಳ ಶೃಂಗಾರಪಡಿಸುವ ಅಂಗಡಿಯ ಮಾಲಕಿ', ಉಮಾ ಜಾಧವ್, ಸತತವಾಗಿ ಮೂರನೆಯ ಬಾರಿಗೆ 'ಸೌಂದರ್ಯ ತಜ್ಞೆ'ಯಾಗಿ ಆಯ್ಕೆಯಾಗಿದ್ದಾರೆ. ಈ ಹೆಸರಾಂತ ಸೌಂದರ್ಯ ತಜ್ಞೆ, ತನ್ನ ಸ್ವಂತ ಪ್ರೌಢಿಮೆಯಿಂದ, ಕಾರ್ ರೇಸಿನಲ್ಲೂ ಆಸಕ್ತಿವಹಿಸಿ ಪಾರಿತೋಷಕ ಗಳಿಸಿದ್ದಾರೆ. ಉಮಾ ಜಾಧವ್, ಹಿಂದಿ ಚಿತ್ರವಲಯದ ಪ್ರಖ್ಯಾತ ನಾಯಕ ನಟಿ, ಪ್ರಿಯಂಕಾ ಛೋಪ್ರ ರಿಗೆ ಮೇಕಪ್ ಮಾಡಿ ಸೈಯೆನ್ನಿಸಿಕೊಂಡಿದ್ದಾರೆ. ಸುವರ್ಣ ಟೆಲಿವಿಶನ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ಯಾಟಿ ಮಂದಿ ಕಾಡಿಗೆ ಬಂದರು' ಎಂಬ ಕನ್ನಡದ ರಿಯಾಲಿಟಿ ಶೋನಲ್ಲಿ ಹೆಸರುಮಾಡಿದ ಟಾಪ್ ೩ ಜನ ಸ್ಪರ್ಧಿಗಳಿಗೆ ಹಚ್ಚೆ 'ಟ್ಯಾಟೊ' ಹಾಕಿ, ಅವರಲ್ಲಿ ಹೊಸ ಉತ್ಸಾಹವನ್ನು ಹುಟ್ಟುಹಾಗಿದ ಶ್ರೇಯಸ್ಸು ಅವರದು.

ಜನನ,ಪರಿವಾರ,ಮತ್ತು ವೃತ್ತಿಆಯ್ಕೆ

[ಬದಲಾಯಿಸಿ]

ಮೈಸೂರಿನ ಜನಾರ್ಧನರಾವ್ ತಂದೆ, ಮತ್ತು ತಾಯಿ, ಪುಷ್ಪಾಬಾಯಿದಂಪತಿಗಳ ಪ್ರೇಮದ ಪುತ್ರಿಯಾಗಿ ಜನಿಸಿದ 'ಉಮಾ ಜಾಧವ್,' ವಿಜ್ಞಾನಿಯಾಗುವ ಕನಸು ಕಾಣುತ್ತಿದ್ದರು. ಆದರೆ ಕೆಲವು ಕಾರಣಗಳಿಂದ ಜೀವನದಲ್ಲಿ ಹೊಸ ಹೊಂದಾಣಿಕೆಯನ್ನು ಸ್ವೀಕರಿಸಬೇಕಾಯಿತು. ತಮ್ಮ 'ಸ್ವ ಇಚ್ಛೆ'ಯಿಂದ 'ಮೇಕಪ್' ದಲ್ಲಿ ಏನಾದರೂ ಸಾಧಿಸುವ ಸವಾಲನ್ನು ಕೈಗೆತ್ತಿಕೊಂಡರು. ಆರಿಸಿಕೊಂಡ ಅಪರಿಚಿತ ಜಾಡಿನಲ್ಲಿ 'ಉಮಾ ಜಾಧವ್' ಯಶಸ್ಸನ್ನು ಗಳಿಸಲು ಮೈಸೂರಿನಿಂದ ಬೆಂಗಳೂರು, ಮುಂಬಯಿ,ಆಸ್ಟ್ರಿಯಾ,(ಯೂರೋಪ್ ದೇಶದ) ಮೊದಲಾದ ಸ್ಥಳಗಳಲ್ಲಿ ಉನ್ನತ ವ್ಯಾಸಂಗಗಳಿಸಿ, ತಾಯ್ನಾಡಿಗೆ ಮರಳಿದರು. ಕನ್ನಡ, ಆಂಗ್ಲಭಾಷೆಗಳ ಜೊತೆಗೆ ತಮಿಳು ಭಾಷೆಗಳಲ್ಲಿ ಪರಿಣತಿಯನ್ನುಗಳಿಸಿದ 'ಉಮಾ ಜಾಧವ್' ಆ ಭಾಷೆಗಳ ಪತ್ರಿಕೆಗಳ ಮುಖಪುಟಗಳಲ್ಲಿ ಸ್ಥಾನಗಳಿಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ.

  • ಸನ್,೨೦೦೮ ರಲ್ಲಿ 'ಬೆಂಗಳೂರಿನಲ್ಲಿ ಜರುಗಿದ ಪ್ರಥಮ ಮೇಕ್ ಅಪ್ ಮತ್ತು ಹೇರ್ ಸ್ಟೈಲ್ ಸ್ಪರ್ಧೆ'ಗಳಲ್ಲಿ ಪ್ರಥಮ ಬಹುಮಾನಗಳಿಸಿದರು.
  • ಸನ್,೨೦೦೯ ರ ಜೊತೆಗೆ, 'ಬೆಸ್ಟ್ ಮೇಕ್ ಅಪ್ ಅವಾರ್ಡ್',ಮತ್ತು 'ಬೆಸ್ಟ್ ಪರ್ಫಾರ್ಮೆನ್ಸ್ ಅವಾರ್ಡ್' ಗಿಟ್ಟಿಸಿದರು.
  • ಛಲಬಿಡದ ತ್ರಿವಿಕ್ರಮನಂತೆ ಮೂರನೆಯ ಬಾರಿಗೂ ಭಾಗವಹಿಸಿ ಪ್ರಥಮ ಪಾರಿತೋಷಕ ಗಳಿಸಿದರು.

'ವೃತ್ತಿ'-ಮೇಕಪ್ ಕ್ಷೇತ್ರದಲ್ಲಿ

[ಬದಲಾಯಿಸಿ]
  • 'ವಧುಗಳ ಮೇಕಪ್',
  • 'ಫ್ಯಾಶನ್ ಮೇಕಪ್',
  • 'ಕ್ರಿಯೇಟೀವ್ ಮೇಕ್ ಅಪ್', ಹೀಗೆ ಮೂರರಲ್ಲೂ ಪ್ರಥಮ ಮತ್ತು 'ಕ್ರಿಯೇಟೀವ್ ಮೇಕ್ ಅಪ್' ನಲ್ಲಿ ತೃತಿಯ ಸ್ಥಾನಗಳಿಸಿದರು.

ಬೇರೆ ಬೇರೆ ಊರುಗಳಲ್ಲಿ ನಡೆಸಿದ ಫ್ಯಾಶನ್ ಶೋಗಳು

[ಬದಲಾಯಿಸಿ]
  • 'ಜೋಧಾ ಬಾಯಿಗೆ ಹಾಕಿದ ಮೇಕಪ್' ಪ್ರಥಮಸ್ಥಾನ ಗಳಿಸಿಕೊಟ್ಟಿತು. ಇದು,'ಮೈಸೂರು ಜಿಲ್ಲಾಮಟ್ಟದ ರಾಣಿಯರ ಮೇಕಪ್ ಗಾಗಿ ನಡೆಸಿದ ಸ್ಪರ್ಧೆ'ಯಾಗಿತ್ತು.
  • 'ಮೆಹಂದಿ ಸ್ಪರ್ಧೆ'ಯಲ್ಲಿ ಮೊದಲ ಸ್ಥಾನ,
  • 'ಸೀರೆ ಡ್ರೆಸಿಂಗ್' ನಲ್ಲಿ ತೃತೀಯ ಸ್ಥಾನ
  • 'ಆಂಟಿಕ್ ಜ್ಯೂಯಲರಿ' ತೃತಿಯ ಸ್ಥಾನ
  • 'ಮುಂಬಯಿನಲ್ಲಿ ಆಯೋಜಿಸಿದ ಮೇಕಪ್ ಸ್ಪರ್ಧೆ'ಯಲ್ಲೂ ಬಹುಮಾನಗಳಿಸಿದರು.
  • 'ಬಿ ಅಂಡ್ ಡಿ ಮೇಕಪ್ ಅವಾರ್ಡ್ ವಿಜೇತೆ'
  • 'ಕಾರ್ ರೇಸ್ ನಲ್ಲಿ ಮೂರನೆಯ ಸ್ಥಾನ.'ಮೈಸೂರಿನ ಸುವರ್ಣ ಲೇಡೀಸ್ ಕ್ಲಬ್ ನಿಂದ ಸ್ತ್ರೀರತ್ನ ಬಿರುದು',
  • 'ಮೈಸೂರು ಕಲಾಪ್ರಪಂಚದ ವತಿಯಿಂದ, ಸೌಂದರ್ಯ ಶಿಲ್ಪಿ ಪ್ರಶಸ್ತಿ' ದೊರೆತಿದೆ.
  • ಹೊರ ಸಂಪರ್ಕ :
  • [೧]