ವಿಷಯಕ್ಕೆ ಹೋಗು

ಉಪ್ಯಾರಪೇಟೆ ಆಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪ್ಪರಪ್ಯಾಟೆ

ಆಡಲು ಬೇಕಾಗುವ ವಸ್ತುಗಳು – ನೀರು, ಸುಣ್ಣ

ಆಟದ ವಿವರಣೆ

ಮಳೆ ಬರದೇ ಇದ್ದಾಗ ಮಳೆ ರಾಯನನ್ನು ಬರಮಾಡಿಕೊಳ್ಳಲು ಆಡುವ ಆಟವಾಗಿದೆ ಉಪ್ಪರಪ್ಯಾಟೆ. ಜೇಡಿ ಮಣ್ಣಿನಿಂದ ಮಳೆರಾಯನ ವಿಗ್ರಹ ಮಾಡಿ ಪೂಜೆ ಮಾಡಿ ಊರಿನ ಕೆರೆಯಲ್ಲಿ  ಬಿಟ್ಟುಬಂದು ಆಡುತ್ತಿದ್ದ ಸಾಂಪ್ರದಾಯಿಕ ಆಟ

ಆಡುವ ವಿಧಾನ

·        ಆಟದ ಸ್ಥಳವನ್ನು ಸುಣ್ಣವನ್ನುಪಯೋಗಿಸಿ 4 ಮೂಲೆಗಳಿರುವಂತೆ ಗೆರೆ ಎಳೆಯಬೇಕು

·        ಈ ಆಟವನ್ನಾಡಲು 5 ಮಂದಿ ಬೇಕು.

·        ನಾಲಕ್ಕು ಮಂದಿ ಆಟಗಾರರು 4 ಮೂಲೆಗಳಲ್ಲಿ ನಿಂತಿರುತ್ತಾರೆ, ಹಾಗೂ ಒಬ್ಬ ಆಟಗಾರ ಮಧ್ಯದಲ್ಲಿರುತ್ತಾನೆ.

·        ಮಧ್ಯದಲ್ಲಿರುವ ಆಟಗಾರನು ಮಧ್ಯದ ಗೆರೆಯ ಮೇಲೆ ನೀರು ಎರೆಯುತ್ತಾ ಮುಂದೆ ನಡೆಯುತ್ತಾರೆ

·        ಉಳಿದ ನಾಲ್ಕು ಮಂದಿ ಉಪ್ಪು ಉಪ್ಪು ಎನ್ನುತ್ತಿರಬೇಕು.

·        ಮಧ್ಯದ ವ್ಯಕ್ತಿಯು ಆ ನಾಲ್ವರಲ್ಲಿ ಯಾರನ್ನಾದರೂ ಮುಟ್ಟಿದರೆ ಆ ವ್ಯಕ್ತಿಯು ನೀರೆರೆಯುತ್ತಾನೆ . ಹೀಗೆ ಆಟ ಮುಂದುವರಿಯುತ್ತದೆ.

·        ನೀರು ಕಟ್ಟುವ ಆಟ ಇದರ ಪರ್ಯಾಯ ಆಟವಾಗಿದೆ.ಇಲ್ಲಿ ಮಧ್ಯದಲ್ಲಿ 4 ಕಲ್ಲುಗಳಿದ್ದು ಮಧ್ಯದ ವ್ಯಕ್ತಿಯು ಅದನ್ನು ಸಂರಕ್ಷಿಸಬೇಕು, ಉಳಿದ ಆಟಗಾರರು ಕಲ್ಲನ್ನು ಕದಿಯಲು ಬರುತ್ತಾರೆ.ಅವರನ್ನು ಆತನು ಮುಟ್ಟಿದಲ್ಲಿ ಮುಟ್ಟಲ್ಪಟ್ಟಾತ ಮಧ್ಯಕ್ಕೆ ಬರುತ್ತಾನೆ. ಹೀಗೆ ಆಟ ಮುಂದುವರೆಯುತ್ತದೆ.

ಮಾಹಿತಿ ಸಂಗ್ರಹಣೆ- ಪುಷ್ಪ ವಿ

                  ಆಲಂಬ ಮಾಲೂರು