ಉಪೋತ್ಪನ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪೋತ್ಪನ್ನ: ನಿರ್ದಿಷ್ಟ ವಸ್ತುವಿನ ಉತ್ಪಾದನೆಯ ಉದ್ದೇಶವಿರುವ ಕೈಗಾರಿಕೆಯಲ್ಲಿ ಆನುಷಂಗಿಕವಾಗಿ ಲಭಿಸುವ ಇತರ ಉತ್ಪನ್ನ (ಬೈಪ್ರಾಡಕ್ಟ್‌). ಉಪೋತ್ಪನ್ನಗಳಲ್ಲಿ ಬಹುಪಾಲು ಉಪಯುಕ್ತ ವಸ್ತುಗಳು, ಎಲ್ಲೋ ಕೆಲವು ಮಾತ್ರ ಅಪ್ರಯೋಜಕವಾಗಿದ್ದು ಅವುಗಳ ವಿಲೇವಾರಿಯೇ ಒಂದು ಸಮಸ್ಯೆಯಾಗಿ ಪರಿಣಮಿಸುವುದುಂಟು. ಇದಕ್ಕೆ ಒಂದು ನಿದರ್ಶನ ಲೆಬ್ಲ್ಯಾಂಕ್ ಸೋಡಾ ವಿಧಾನ. ಕಬ್ಬಿಣದ ಬಾಣಲೆಗಳಲ್ಲಿ ಉಪ್ಪನ್ನು ಪ್ರಬಲ ಸಲ್ಫ್ಯೂರಿಕ್ ಆಮ್ಲದೊಡನೆ ಕಾಯಿಸಿದರೆ ಸೋಡಿಯಂ ಬೈಸಲ್ಫೇಟ್ ಮತ್ತು ಹೈಡ್ರೋಜನ್ ಕ್ಲೋರೈಡ್ ಉಂಟಾಗುವುವು. ಓಚಿಅಟ+ಊ೨Sಔ೪ ಲಓಚಿಊSಔ೪+ಊಅಟ ­ ಬೈಸಲ್ಫೇಟನ್ನು ಕೆದಕಿ ತೆಗೆದು ಮತ್ತಷ್ಟು ಉಪ್ಪನ್ನು ಸೇರಿಸಿ ಪ್ರತಿಫಲಕ (ರೆವರ್ಬರೆಟರಿ) ಕುಲುಮೆಯಲ್ಲಿ ಹೆಚ್ಚಿನ ಉಷ್ಣತೆಗೆ ಕಾಯಿಸಿದರೆ ಕೆಳಕಂಡ ರಾಸಾಯನಿಕ ಕ್ರಿಯೆ ನಡೆದು ಸೋಡಿಯಂ ಸಲ್ಫೇಟ್ ಆಗುವುದು ಓಚಿಅಟ+ಓಚಿಊSಔ೪ಲಓಚಿ೨Sಔ೪+ಊಅಟ ­ ಹೈಡ್ರೊಜನ್ ಕ್ಲೋರೈಡನ್ನು ನೀರಿನಲ್ಲಿ ವಿಲೀನ ಮಾಡಿದರೆ ಹೈಡ್ರೋಕ್ಲೋರಿಕ್ ಆಮ್ಲವಾಗುವುದು. ಹುಡಿಮಾಡಿದ ಸೋಡಿಯಂ ಸಲ್ಫೇಟನ್ನು ಕೋಕ್ ಮತ್ತು ಸುಣ್ಣಕಲ್ಲಿನೊಡನೆ ಉರುಳು (ರಿವಾಲ್ವಿಂಗ್) ಕುಲುಮೆಗಳಲ್ಲಿ ಕಾಯಿಸಿದಾಗ ಸೋಡಿಯಂ ಕಾರ್ಬೋನೇಟ್ ದೊರೆಯುವುದು ಓಚಿ೨Sಔ೪+ಅಚಿಅಔ೩+೨ಅಲಓಚಿ೨ಅಔ೩+೨ಅಔ೨ ­ +ಅಚಿS ದೊರೆತ ಬೂದಿಯಂತಿರುವ ಮಿಶ್ರಣವನ್ನು ನೀರಿನಲ್ಲಿ ಕದಡಿದರೆ ಕಾರ್ಬೋನೇಟ್ ಮಾತ್ರ ಕರಗುವುದು. ಶೋಧಿಸಿ ಬಂದ ದ್ರಾವಣದಿಂದ ಸೋಡಿಯಂ ಕಾರ್ಬೋನೇಟನ್ನು ಹರುಳು ರೂಪಕ್ಕೆ ತರಬಹುದು. ಉಳಿದ ಕ್ಯಾಲ್ಸಿಯಂ ಸಲ್ಫೈಡಿಗೆ ಕ್ಷಾರೀಯ ಕಸ (ಆಲ್ಕಲಿ ವೇಸ್ಟ್‌) ಎಂದು ಹೆಸರು. ಈ ಕಸವನ್ನು ಕಾರ್ಖಾನೆಯ ಬಳಿ ಗುಡ್ಡೆ ಹಾಕಿದಾಗ ಅದು ವಾತಾವರಣದ ಸಂಪರ್ಕದಲ್ಲಿ ದುರ್ವಾಸನೆಯುಳ್ಳ ಅನಿಲ ವಸ್ತುಗಳನ್ನು ಕೊಡುತ್ತದೆ. ಇದರಿಂದ ಸುತ್ತಮುತ್ತಲ ಪ್ರದೇಶದ ನಿವಾಸಿಗಳ ಆರೋಗ್ಯ ಕೆಡುವ ಸಂಭವ ಉಂಟು. ಆದ್ದರಿಂದ ಕಸವನ್ನು ತತ್ಕ್ಷಣ ವಿನಿಯೋಗಮಾಡದೆ ಗತ್ಯಂತರವಿಲ್ಲ. ಅದನ್ನು ನೀರಿನಲ್ಲಿಟ್ಟು ಇಂಗಾಲದ ಡೈಆಕ್ಸೈಡ್ ಹಾಯಿಸಿದರೆ ಕ್ಯಾಲ್ಸಿಯಂ ಕಾರ್ಬೋನೇಟ್ ಒತ್ತರಿಸಿ ಹೈಡ್ರೋಜನ್ ಸಲ್ಫೈಡ್ ಬಿಡುಗಡೆಯಾಗುವುದು. ಅಚಿS+ಊ೨ಔ+ಅಔ೨ಲಅಚಿಅಔ೩ ¯ ಊ೨S ಅನಿಲವನ್ನು ಗಾಳಿಯೊಡನೆ ಬೆರೆಸಿ ಫೆರಿಕ್ ಆಕ್ಸೈಡ್ ವೇಗವರ್ಧಕದ ಮೇಲೆ ಹಾಯಿಸಿದರೆ ಗಂಧಕವಾಗಿ ಉತ್ಕರ್ಷಿತವಾಗುವುದು. ಸಾಲ್ವೆ ವಿಧಾನ ಜಾರಿಗೆ ಬರುವ ಮುನ್ನ ಈ ವಿಧಾನ ಬಳಕೆಯಲ್ಲಿತ್ತು. ವ್ಯಾವಹಾರಿಕವಾಗಿ ಈ ವಿಧಾನ ಲಾಭದಾಯಕವಾಗಿರಲಿಲ್ಲ. ಆದ್ದರಿಂದ ಅದನ್ನು ಕೈಬಿಡಲಾಗಿದೆ. ಆದರೂ ಸೋಡಿಯಂ ಸಲ್ಫೇಟ್ ಮತ್ತು ಹೈಡ್ರೋಜನ್ ಕ್ಲೋರೈಡನ್ನು ತಯಾರಿಸಲು ಮಾತ್ರ ಈ ವಿಧಾನವನ್ನು ಈಗಲೂ ಅನುಸರಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಉಪೋತ್ಪನ್ನಗಳು ಅಲ್ಲೇ ಪುನಃ ಉಪಯೋಗವಾಗಿ ಉದ್ಯಮ ಲಾಭದಾಯಕವೂ ಮತ್ತು ಸ್ವಯಂಪರಿಪೂರ್ಣವೂ ಆಗುವುದುಂಟು. ಇದು ಸಾಲ್ವೆ ವಿಧಾನಕ್ಕೆ ಅನ್ವಯಿಸುತ್ತದೆ. ಉಪ್ಪು ನೀರನ್ನು ಮೊದಲು ಅಮೋನಿಯದಿಂದಲೂ ಅನಂತರ ಇಂಗಾಲದ ಡೈಆಕ್ಸೈಡಿನಿಂದಲೂ ಬೇರೆ ಬೇರೆ ಕೋಶಗಳಲ್ಲಿ ಪರ್ಯಾಪ್ತಗೊಳಿಸ ಲಾಗುವುದು. ಇದಕ್ಕೆ ಅಗತ್ಯವಾದ ಇಂಗಾಲದ ಡೈ ಆಕ್ಸೈಡನ್ನು ಸುಣ್ಣಕಲ್ಲನ್ನು ಕಾಯಿಸಿ ಪಡೆಯುವರು. ಅಚಿಅಔ೩ಲಅಚಿಔ+ಅಔ೨ ­ ಈ ಸ್ಥಿತಿಯಲ್ಲಿ ಸೋಡಿಯಂ ಬೈಕಾರ್ಬೋನೇಟ್ ಒತ್ತರಿಸುವುದು. ಓಚಿಅಟ+ಊ೨o+ಓಊ೩+ಅಔ೨ಲಓಚಿಊಅಔ೩ ¯ಓಊ೪ಅಟ ಇದನ್ನು ಶೋಧಿಸಿ ಕಾಯಿಸಿದಾಗ ವಿಭಜನೆ ಹೊಂದಿ ಸೋಡಿಯಂ ಕಾರ್ಬೋನೇಟ್ ಘನವೂ ಇಂಗಾಲದ ಡೈ ಆಕ್ಸೈಡೂ ದೊರೆಯುವುವು. ಮೇಲ್ಕಂಡ ಕ್ರಿಯೆಗಳಲ್ಲಿ ದೊರೆತ ಕ್ಯಾಲ್ಸಿಯಂ ಆಕ್ಸೈಡ್ ಮತ್ತು ಅಮೋನಿಯಂ ಕ್ಲೋರೈಡುಗಳನ್ನು ಒಟ್ಟಿಗೆ ಕಾಯಿಸಿ ಅಮೋನಿಯ ಪಡೆಯಬಹುದು. ಅಚಿಅಔ+೨ಓಊ೪ಅಟಲಅಚಿಅಟ೨+ಊ೨ಔ+೨ಓಊ೩ ­

ಲಭ್ಯವಾದ ಅಮೋನಿಯ ಮತ್ತು ಇಂಗಾಲದ ಡೈ ಆಕ್ಸೈಡುಗಳಿಂದ ಮತ್ತಷ್ಟು ಉಪ್ಪಿನ ದ್ರಾವಣವನ್ನು ಪರ್ಯಾಪ್ತಗೊಳಿಸಬಹುದು. ಆದರೆ ಉಪ್ಪಿನಲ್ಲಿದ್ದ ಕ್ಲೋರಿನ್ನಿನ ಭಾಗ ಅಷ್ಟು ಉಪಯುಕ್ತವಲ್ಲದ ಕ್ಯಾಲ್ಸಿಯಂ ಕ್ಲೋರೈಡಾಗಿ ನಷ್ಟವಾಗುವುದು, ಇದೊಂದೇ ಈ ವಿಧಾನದಲ್ಲಿರುವ ಕೊರತೆ. ಮುಖ್ಯೋತ್ಪನ್ನದಷ್ಟೇ ಉಪೋತ್ಪನ್ನಗಳು ಅಮೂಲ್ಯವಾಗಿರುವ ಸಂದರ್ಭಗಳಿವೆ. ಅಂಥ ಕ್ರಿಯೆಗಳನ್ನು ಮುಂದೆ ಹೆಸರಿಸಲಾಗಿದೆ. ಉಪ್ಪಿನ ದ್ರಾವಣವನ್ನು ವಿದ್ಯುದ್ವಿಭಜನೆ ಮಾಡಿದಾಗ ಉತ್ಪತ್ತಿಯಾದ ಸೋಡಿಯಂ ನೀರಿನೊಡನೆ ವರ್ತಿಸಿ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣವಾಗುವುದು. ಹೈಡ್ರೊಜನ್ ಋಣಧ್ರುವದಲ್ಲೂ ಕ್ಲೋರಿನ್ ಧನ ಧ್ರುವದಲ್ಲೂ ಬಿಡುಗಡೆ ಆಗುವುವು. ಇವು ಉಪೋತ್ಪನ್ನಗಳು, ಹಾಗೆಯೇ ದ್ರವೀಕರಿಸಿದ ಉಪ್ಪನ್ನು ವಿದ್ಯುದ್ವಿಭಜನೆಗೆ ಒಳಪಡಿಸಿದರೆ ಋಣಧ್ರುವದಲ್ಲಿ ಸೋಡಿಯಂ ಲೋಹವೂ ಧನ ಧ್ರುವದಲ್ಲಿ ಕ್ಲೋರಿನ್ನೂ ಉತ್ಪತ್ತಿಯಾಗುವುವು. ಇವೆಲ್ಲ ಸಮಾನ ಪ್ರಾಮುಖ್ಯವಿರುವ ವಸ್ತುಗಳು. ಕಬ್ಬಿನ ರಸದಿಂದ ಸಕ್ಕರೆಯನ್ನು ತಯಾರಿಸುವಾಗ ಅದರ ಒಂದು ಅಂಶ ಹರಳು ರೂಪಕ್ಕೆ ಬಾರದೆ ಉಳಿಯುವುದು. ಇದೇ ಕಾಕಂಬಿ. ಇದರಿಂದ ಆಲ್ಕೋಹಾಲ್ ಮತ್ತು ಇಂಗಾಲದ ಡೈ ಆಕ್ಸೈಡುಗಳನ್ನು ತಯಾರಿಸಲಾಗುತ್ತದೆ. ಉಳಿದ ಕಬ್ಬಿನ ಸಿಪ್ಪೆಯನ್ನು ಹದಮಾಡಿ ತೆಳುವಾದ ಹಲಗೆಗಳನ್ನು ಮಾಡಬಹುದು. ವಾಕ್ಚಿತ್ರಮಂದಿರಗಳ ಮೇಲ್ಛಾವಣಿಗೆ ಇದನ್ನು ಜೋಡಿಸಿದರೆ ಧ್ವನಿ ನಿಯಂತ್ರಣವಾಗಿ ಶ್ರೋತೃಗಳಿಗೆ ಹಿತವೆನಿಸುವುದು. ಸಲ್ಫೈಡ್ ಅದಿರುಗಳಿಂದ ತಾಮ್ರ, ಸತು ಮತ್ತು ಸೀಸಗಳನ್ನು ತಯಾರಿಸುವಾಗ ಹೇರಳವಾಗಿ ಗಂಧಕದ ಡೈ ಆಕ್ಸೈಡ್ ಹೊರಬೀಳುತ್ತದೆ. ಇದನ್ನು ಸಲ್ಫ್ಯೂರಿಕ್ ಆಮ್ಲವಾಗಿ ಪರಿವರ್ತಿಸಲಾಗುವುದು. ಸಾಬೂನಿನ ತಯಾರಿಕೆಯಲ್ಲಿ ಗ್ಲಿಸರಾಲ್ ಉಪೋತ್ಪನ್ನವಾಗಿ ಸಿಕ್ಕುತ್ತದೆ. ಅದನ್ನು ಕಡಿಮೆ ಒತ್ತಡದಲ್ಲಿ ಸಾಂದ್ರೀಕರಿಸಬಹುದು ಅಥವಾ ಅಯಾನು ವಿನಿಮಯ ಅಂಟುಗಳನ್ನು ಬಳಸಿ ಶುದ್ಧಿಗೊಳಿಸಬಹುದು, ಪೆಟ್ರೋಲಿಯಂ ಎಣ್ಣೆಯನ್ನು ಆಂಶಿಕ ಬಾಷ್ಟ ಸಾಂದ್ರೀಕರಣ ಮಾಡಿದಾಗ ಸಾಂದ್ರತೈಲ (ಹೆವಿ ಆಯಿಲ್) ಬೇರ್ಪಡುವುದು. ಇದರಲ್ಲಿ ಭಾರವಾದ ಹೈಡ್ರೊಕಾರ್ಬನ್ನುಗಳ ಅಣುಗಳಿರುತ್ತವೆ. ಸೂಕ್ತ ವೇಗವರ್ಧಕಗಳ ನೆರವಿನಿಂದ ಉನ್ನತ ಉಷ್ಣಕ್ಕೆ ಒಡ್ಡಿದಾಗ ಅವು ವಿಭಜಿಸಿ ಪೆಟ್ರೋಲಿನಂತಿರುವ ಎಣ್ಣೆ ಬರುತ್ತದೆ. ಆಗ ಪ್ರೊಪಿಲೀನ್ ಎಂಬ ಅಪರ್ಯಾಪ್ತ ಹೈಡ್ರೊಕಾರ್ಬನ್ ಲಭಿಸುತ್ತದೆ. ಇದನ್ನೂ ಸಹ ಗ್ಲಿಸರಾಲಿಗೆ ಮಾರ್ಪಡಿಸುವರು. ಹೀಗೆ ಉಪೋತ್ಪನ್ನಗಳನ್ನು ಬುದ್ಧಿವಂತಿಕೆಯಿಂದ ಬಳಸಿದರೆ ಉತ್ಪಾದನ ವೆಚ್ಚವನ್ನು ತಗ್ಗಿಸಿ ಮುಖ್ಯವಸ್ತುವನ್ನು ಆಕರ್ಷಕ ಬೆಲೆಗೆ ಒದಗಿಸಬಹುದು.