ಉನ್ಮೇಷ
ಗೋಚರ
ಉನ್ಮೇಷ: ಒಂದು ಚಿಂತನೆಯಿಂದ ಇನ್ನೊಂದು ಚಿಂತನೆ ಅಥವಾ ಭಾವಕ್ಕೆ ಹೊರಳುವಾಗ ಉಂಟಾಗುವ ಅನುಭವ. ಇದು ಕೇವಲ ಅನುಭವದಿಂದ ಗುರುತಿಸಬಹುದಾದ ವಿಷಯ. ಶಿವನ ಶಕ್ತಿಪ್ರಸಾರವೇ ಈ ವಿಶ್ವ. ಅಂಥ ಶಕ್ತಿ ಪ್ರಸಾರವಾಗುವಲ್ಲಿ ಮೊದಲ ಸ್ಫುರಣವೇ ಉನ್ಮೇಷ. ಸ್ಪಂದ, ಸ್ಫೋಟ, ಕಂಪನ, ಅಭಾಸನ, ಉನ್ಮೀಲನ ಪದಗಳನ್ನು ಈ ಅರ್ಥದಲ್ಲಿ ಉಪಯೋಗಿಸುತ್ತಾರೆ. ಸೌಂದರ್ಯಮೀಮಾಂಸೆಯಲ್ಲಿ ಪ್ರತಿಭೆಯನ್ನು ನವನವೋನ್ಮೇಷಶಾಲಿನಿ ಯೆಂದು ಹೇಳುವಲ್ಲಿ ಆ ಗುಣವಿಶೇಷ ಸೃಷ್ಟಿಯಲ್ಲಿನ ಹೊಸ ಹೊಸ ವಿಷಯಗಳನ್ನು ತೆರೆದು ತೋರಿಸಬಲ್ಲುದೆಂಬ ಅರ್ಥದಲ್ಲಿ ಉನ್ಮೇಷ ಪದವನ್ನು ಬಳಸಿದ್ದಾರೆ. (ಜೆ.ಆರ್.)