ಉನ್ಮೀಲನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉನ್ಮೀಲನ: ತೆರೆಯುವಿಕೆ, ಬಿಡುಗಡೆ, ಕಾಣುವಿಕೆ ಎಂಬ ಅರ್ಥದಲ್ಲಿ ಈ ಪದದ ಬಳಕೆ ಇದೆ. ಪೂರ್ಣಗ್ರಹಣಕಾಲದಲ್ಲಿ ಗ್ರಹಣ ಬಿಡಲು ಪ್ರಾರಂಭಿಸಿ ಮುಚ್ಚಿರುವ ಛಾಯೆ ತೆರೆದು ಬಿಂಬದ ಪ್ರಕಾಶ ಕಾಣಲು ಮೊದಲಾದಾಗ ಉನ್ಮೀಲನಕ್ರಿಯೆ ಪ್ರಾರಂಭವಾಗುತ್ತದೆ. ಚಂದ್ರಗ್ರಹಣದಲ್ಲಿ ಗ್ರಾಹ್ಯ ಚಂದ್ರ, ಗ್ರಾಹಕ ಭೂಮಿಯ ನೆರಳು. ಸೂರ್ಯಗ್ರಹಣದಲ್ಲಿ ಗ್ರಾಹ್ಯ ಸೂರ್ಯ, ಗ್ರಾಹಕ ಚಂದ್ರ. ಪೂರ್ಣಗ್ರಹಣದಲ್ಲಿ ಗ್ರಾಹ್ಯ ಗ್ರಾಹಕ ಬಿಂಬಪ್ರಮಾಣಾಂತ ರಾರ್ಧವರ್ಗವನ್ನು ವಿಕ್ಷೇಪವರ್ಗದಿಂದ ಕಳೆದು ಬಂದ ಶೇಷದ ವರ್ಗಮೂಲವನ್ನು ಅರುವತ್ತರಿಂದ ಗುಣಿಸಿ ಸೂರ್ಯಚಂದ್ರರ ಗತ್ಯಂತರದಿಂದ ಭಾಗಿಸಿದಾಗ ಬರುವ ಲಬ್ಧಿಯೇ ಮರ್ದಾರ್ಧಘಟೀ. ಇದನ್ನು ಗ್ರಹಣಮಧ್ಯಕಾಲಕ್ಕೆ ಕೂಡಿಸಿದರೆ ಉನ್ಮೀಲನಕಾಲ ಬರುತ್ತದೆ. ದೇವತಾವಿಗ್ರಹಗಳನ್ನು ಪ್ರತಿಷ್ಠಿಸುವ ಮೊದಲು ಮಂತ್ರಪೂರ್ವಕವಾಗಿ ಅವುಗಳ ಕಣ್ಣನ್ನು ಬಿಡಿಸುವ (ತೆರೆಯುವ) ಆಗಮೋಕ್ತಕ್ರಿಯೆಯನ್ನು ನೇತ್ರೋನ್ಮೀಲನ ಎಂದು ಕರೆಯುತ್ತಾರೆ. (ಎಸ್.ಎನ್.ಕೆ.)

"https://kn.wikipedia.org/w/index.php?title=ಉನ್ಮೀಲನ&oldid=715559" ಇಂದ ಪಡೆಯಲ್ಪಟ್ಟಿದೆ