ಉದಯ್ ಉಮೇಶ್ ಲಲಿತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶರು
ಉದಯ್ ಉಮೇಶ್ ಲಲಿತ್ (ಯು.ಯು.ಲಲಿತ್)
ಹಾಲಿ
ಅಧಿಕಾರ ಸ್ವೀಕಾರ 
27 August 2022
Appointed by ದ್ರೌಪದಿ ಮುರ್ಮು
ಪೂರ್ವಾಧಿಕಾರಿ ಎನ್.ವಿ.ರಮಣ
ಅಧಿಕಾರ ಅವಧಿ
13 August 2014 – 26 August 2022
Nominated by ರಾಜೇಂದ್ರ ಮಾಲ್ ಲೋಧಾ
Appointed by ಪ್ರಣಬ್ ಮುಖರ್ಜಿ
ವೈಯಕ್ತಿಕ ಮಾಹಿತಿ
ಜನನ (1957-11-09) ೯ ನವೆಂಬರ್ ೧೯೫೭ (ವಯಸ್ಸು ೬೬)
ಸೋಲಾಪುರ, ಮುಂಬೈ, ಭಾರತ
ಸಂಬಂಧಿಕರು ಯು.ಆರ್.ಲಲಿತ್ (ತಂದೆ)

ಉದಯ್ ಉಮೇಶ್ ಲಲಿತ್ (ಜನನ: 9 ನವೆಂಬರ್ 1957) ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು[೧]. ಈ ಹಿಂದೆ ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ವಕೀಲರಾಗಿ ಅಭ್ಯಾಸ ನಡೆಸಿ, ನೇರವಾಗಿ ಸುಪ್ರೀಂ ಕೋರ್ಟ್‌ಗೆ ಏರಿದ ಆರು ಹಿರಿಯ ವಕೀಲರಲ್ಲಿ ನ್ಯಾಯಮೂರ್ತಿ ಲಲಿತ್ ಸಹ ಒಬ್ಬರು.[೨] ಇವರು ಆಗಸ್ಟ್ ೨೭, ೨೦೨೨ ರಂದು ಭಾರತದ ಸುಪ್ರೀಂ ಕೋರ್ಟ್ ನ ೪೯ನೇ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.[೩]

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಉದಯ್ ಯು ಲಲಿತ್ ಅವರು, ಬಾಂಬೆ ಹೈಕೋರ್ಟಿನ ನಾಗ್ಪುರ ಪೀಠದ ಮಾಜಿ ಹೆಚ್ಚುವರಿ ನ್ಯಾಯಾಧೀಶರು ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ವಕೀಲರು ಯು.ಆರ್.ಲಲಿತ್ ಅವರ ಪುತ್ರ. ಅವರು ಮಹಾರಾಷ್ಟ್ರದ ಪಟ್ಟಣ ಸೊಲ್ಲಾಪುರದಲ್ಲಿ ಜನಿಸಿದರು. ಅವರ ಅಜ್ಜ, ರಂಗನಾಥ್ ಲಲಿತ್ ಸಹ ವಕೀಲರಾಗಿದ್ದರು. ಇನ್ನು ಅವರ ಪತ್ನಿ ಅಮಿತಾ ಲಲಿತ್ ಮುಂಬೈನ ಸರ್ಕಾರಿ ಕಾನೂನು ಕಾಲೇಜಿನ ಕಾನೂನು ಪದವೀಧರರಾಗಿದ್ದಾರೆ.[೪]

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ[ಬದಲಾಯಿಸಿ]

ಆಗಸ್ಟ್ 10, 2022 ರಂದು ಯು.ಯು.ಲಲಿತ್ ಅವರನ್ನು ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಿಸಿದರು. 27 ಆಗಸ್ಟ್ 2022 ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಪ್ರಮಾಣವಚನ ಸ್ವೀಕರಿಸಿದರು.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 27 ಆಗಸ್ಟ್ 2022. Retrieved 27 ಆಗಸ್ಟ್ 2022.
  2. http://indiatoday.intoday.in/story/uu-lalit-name-cleared-by-supreme-court-collegium-for-being-a-judge/1/370824.html
  3. https://www.kannadaprabha.com/nation/2022/aug/27/justice-u-u-lalit-takes-oath-as-49th-cji-475737.html
  4. "ಆರ್ಕೈವ್ ನಕಲು". Archived from the original on 27 ಆಗಸ್ಟ್ 2022. Retrieved 27 ಆಗಸ್ಟ್ 2022.