ವಿಷಯಕ್ಕೆ ಹೋಗು

ಉದಕ ಪಾವಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದಕ ಪಾವಡ: ಇಷ್ಟಲಿಂಗವನ್ನು ಮುಚ್ಚಿರುವ ಚಿಕ್ಕ ವಸ್ತು. ಉದುಗ ಪಾವಡ, ಲಿಂಗವಸ್ತ್ರ ಎಂಬ ಹೆಸರುಗಳೂ ಇವೆ. ಲಿಂಗವನ್ನು ಇದರಲ್ಲಿ ಹುದುಗಿಸಿ ಇಡುತ್ತಾರಾದ ಕಾರಣ ಹುದುಗು ಎಂಬ ಮಾತು ಉದುಗ ಆಗಿ ಉಳಿದು ಬಂದಿರಬಹುದು. ಈ ಪುಟ್ಟ ವಸ್ತ್ರದ ಉದ್ದಗಲ 5 ಅಂಗುಲ, 3 ಅಂಗುಲ. ರೇಷ್ಮೆಯದೋ ಹತ್ತಿಯದೋ ಆಗಿರಬಹುದು. ಇದರಲ್ಲಿಟ್ಟಾಗ ಲಿಂಗ ಅಲುಗಾಡದು, ಅಲ್ಲದೆ ಕಾಂತಿ (ಚಿದ್ರಸ) ಕೆಡದು. ವಸ್ತ್ರದ ಒಂದೊಂದು ಬಣ್ಣಕ್ಕೂ ಒಂದೊಂದು ಫಲವನ್ನು ಹೇಳಲಾಗಿದೆ. ಬಿಳುಪು ಜ್ಞಾನಪ್ರದ, ಕೆಂಪು ವಶ್ಯಕರ, ಕಪ್ಪು ಶತ್ರುಹರ, ಹಳದಿ ಪುತ್ರಪ್ರದ, ಚಿತ್ರವರ್ಣ ಚಿತ್ರಫಲದಾಯಕ. ಬಣ್ಣ ಯಾವುದೇ ಇರಲಿ, ವಸ್ತ್ರ ಶುದ್ಧವಾಗಿರಬೇಕೆಂದು ವೀರಶೈವ ಧರ್ಮಶಿರೋಮಣಿಯಲ್ಲಿ ಹೇಳಿದೆ.

"https://kn.wikipedia.org/w/index.php?title=ಉದಕ_ಪಾವಡ&oldid=697728" ಇಂದ ಪಡೆಯಲ್ಪಟ್ಟಿದೆ