ಉತ್ಪಾದನಾ ತೆರಿಗೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಬಿಯರ್‍ನ ಪಿಪಾಯಿಗಾಗಿ ಅಮೇರಿಕದ 1871ರ ಕಂದಾಯ ಚೀಟಿ.[೧]

ಉತ್ಪಾದನಾ ತೆರಿಗೆ ಎಂದರೆ ಉತ್ಪಾದಿತ ಸರಕುಗಳ ಮೇಲೆ ಮಾರಾಟದ ಕಾಲದ ಬದಲಾಗಿ ಉತ್ಪಾದನಾ ಕಾಲದಲ್ಲಿ ವಿಧಿಸಲಾದ ಯಾವುದೇ ಸುಂಕ. ಉತ್ಪಾದನಾ ತೆರಿಗೆಗಳನ್ನು ಹಲವುವೇಳೆ ಸೀಮಾ ಸುಂಕದೊಂದಿಗೆ ಸಂಬಂಧಿಸಲಾಗುತ್ತದೆ (ಸೀಮಾ ಸುಂಕವನ್ನು ಮೊದಲೇ ಅಸ್ತಿತ್ವದಲ್ಲಿರುವ ಸರಕುಗಳ ಮೇಲೆ ಅವು ನಿರ್ದಿಷ್ಟ ದಿಕ್ಕಿನಲ್ಲಿ ಗೊತ್ತುಪಡಿಸಿದ ಗಡಿಯನ್ನು ದಾಟುವಾಗ ವಿಧಿಸಲಾಗುತ್ತದೆ); ಸೀಮಾ ಸುಂಕವನ್ನು ತೆರಿಗೆಯ ವಸ್ತುವಾಗಿ ಗಡಿಯಲ್ಲಿ ಅಸ್ತಿತ್ವಕ್ಕೆ ಬರುವ ಸರಕುಗಳ ಮೇಲೆ ವಿಧಿಸಲಾಗುತ್ತದೆ. ಉತ್ಪಾದನಾ ತೆರಿಗೆಯನ್ನು ಒಳನಾಡಿನಲ್ಲಿ ಅಸ್ತಿತ್ವಕ್ಕೆ ಬಂದ ಸರಕುಗಳ ಮೇಲೆ ವಿಧಿಸಲಾಗುತ್ತದೆ.

ಕೆಲವೊಮ್ಮೆ ತೆರಿಗೆ ಎಂದು ನಿರ್ದೇಶಿಸಲಾಗುತ್ತದಾದರೂ, ಉತ್ಪಾದನಾ ತೆರಿಗೆಯು ನಿರ್ದಿಷ್ಟವಾಗಿ ಒಂದು ಸುಂಕ; ತಾಂತ್ರಿಕವಾಗಿ ತೆರಿಗೆ ಎಂದರೆ ಒಬ್ಬ ವ್ಯಕ್ತಿಯ ಮೇಲೆ ವಿಧಿಸಲಾದ ಕರ (ಅಥವಾ ಹೆಚ್ಚು ನಿಖರವಾಗಿ, ಇರಬಹುದ ಮೊತ್ತದ ಮೌಲ್ಯಮಾಪನೆ), ಅದೇ ಸುಂಕ ಎಂದರೆ ನಿರ್ದಿಷ್ಟ ಸರಕುಗಳ ಮೇಲೆ ವಿಧಿಸಲಾದ ಕರ. ಉತ್ಪಾದನಾ ತೆರಿಗೆಯನ್ನು ಪರೋಕ್ಷ ತೆರಿಗೆಯೆಂದು ಪರಿಗಣಿಸಲಾಗುತ್ತದೆ, ಅಂದರೆ ಸರ್ಕಾರಕ್ಕೆ ಕರವನ್ನು ಪಾವತಿಸುವ ಉತ್ಪಾದಕ ಅಥವಾ ಮಾರಾಟಗಾರನು ಸರಕುಗಳ ಅಂತಿಮ ಖರೀದಿದಾರನು ಪಾವತಿಸುವ ಬೆಲೆಯನ್ನು ಹೆಚ್ಚಿಸುವ ಮೂಲಕ ತನ್ನ ನಷ್ಟವನ್ನು ತುಂಬಿಕೊಳ್ಳಲು ಪ್ರಯತ್ನಿಸುತ್ತಾನೆ ಎಂದು ನಿರೀಕ್ಷಿಸಲಾಗುತ್ತದೆ. ಉತ್ಪಾದನಾ ತೆರಿಗೆಗಳನ್ನು ಸಾಮಾನ್ಯವಾಗಿ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆಯಂತಹ (ವ್ಯಾಟ್) ಪರೋಕ್ಷ ತೆರಿಗೆಯ ಜೊತೆಗೆ ವಿಧಿಸಲಾಗುತ್ತದೆ. ಸಾಮಾನ್ಯವಾಗಿ, ಉತ್ಪಾದನಾ ತೆರಿಗೆಯು ನಾಲ್ಕು ರೀತಿಗಳಲ್ಲಿ ಮಾರಾಟ ತೆರಿಗೆ ಅಥವಾ ವ್ಯಾಟ್‍ನಿಂದ ಭಿನ್ನವಾಗಿದೆ:

  1. ಉತ್ಪಾದನಾ ತೆರಿಗೆಯು ಒಂದು ಸುಂಕ, ತೆರಿಗೆಯಲ್ಲ,
  2. ಉತ್ಪಾದನಾ ತೆರಿಗೆಯು ಸಾಮಾನ್ಯವಾಗಿ ಪ್ರತಿ ಘಟಕ ತೆರಿಗೆಯಾಗಿದೆ, ಖರೀದಿಸಲಾಗುವ ವಸ್ತುವಿನ ಒಂದು ಪರಿಮಾಣ ಅಥವಾ ಘಟಕಕ್ಕೆ ನಿರ್ದಿಷ್ಟ ಮೊತ್ತ ತಗಲುತ್ತದೆ, ಅದೇ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆಯು ಒಂದು ಬೆಲೆಗನುಸಾರವಾದ ತೆರಿಗೆ ಮತ್ತು ಸರಕುಗಳ ಬೆಲೆಗೆ ಪ್ರಮಾಣಾನುಗುಣವಾಗಿರುತ್ತದೆ,
  3. ಉತ್ಪಾದನಾ ತೆರಿಗೆಯು ಸಾಮಾನ್ಯವಾಗಿ ಉತ್ಪನ್ನಗಳ ಕಿರಿದಾದ ವ್ಯಾಪ್ತಿಗೆ ಅನ್ವಯಿಸುತ್ತದೆ, ಮತ್ತು
  4. ಉತ್ಪಾದನಾ ತೆರಿಗೆಯು ಸಾಮಾನ್ಯವಾಗಿ ಹೆಚ್ಚು ಭಾರವಿರುತ್ತದೆ, ಉದ್ದಿಷ್ಟ ಉತ್ಪನ್ನಗಳ ಚಿಲ್ಲರೆ ಬೆಲೆಯ ಹೆಚ್ಚಿನ ಭಾಗವಿರುತ್ತದೆ.

ಅಬಕಾರಿ ಸುಂಕಗಳ ಸಾಮಾನ್ಯ ಉದಾಹರಣೆಗಳೆಂದರೆ ಪೆಟ್ರೋಲ್ ಮತ್ತು ಇತರ ಇಂಧನಗಳ ಮೇಲಿನ ತೆರಿಗೆಗಳು, ಮತ್ತು ತಂಬಾಕು ಹಾಗೂ ಮದ್ಯದ ಮೇಲಿನ ತೆರಿಗೆಗಳು (ಕೆಲವೊಮ್ಮೆ ಪಾಪದ ತೆರಿಗೆ ಎಂದು ಸೂಚಿಸಲ್ಪಡುತ್ತವೆ).

ಉಲ್ಲೇಖಗಳು[ಬದಲಾಯಿಸಿ]

  1. "6 2/3c Beer revenue stamp proof single". Smithsonian National Postal Museum. Retrieved Sep 30, 2013.