ಉತ್ತಾನಪಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತಾನಪಾದ: ವಿಷ್ಣುಪುರಾಣದಲ್ಲಿ ಹೇಳಿರುವಂತೆ ಸ್ವಾಯಂಭುವ ಮನುವಿನ ಇಬ್ಬರು ಪುತ್ರರಲ್ಲಿ ಕಿರಿಯವ; ಪ್ರಿಯವ್ರತ ಮೊದಲನೆಯವ. ಸುನೀತಿ, ಸುರುಚಿ ಎಂಬ ಇಬ್ಬರು ಪತ್ನಿಯರು. ಹೆಚ್ಚು ಪ್ರೀತಿಪಾತ್ರಳಾದ ಕಿರಿಯ ಪತ್ನಿ ಸುರುಚಿಯಲ್ಲಿ ಉತ್ತಮನೆಂಬ ಪುತ್ರನನ್ನು ಸುನೀತಿಯಲ್ಲಿ ಧ್ರುವ ಎಂಬುವನನ್ನೂ, ಪಡೆಯುತ್ತಾನೆ. ಇವನ ಹಿರಿಯ ಪತ್ನಿಯೂ ಬಹು ಪ್ರಸಿದ್ಧನಾದ ಧ್ರುವನ ಮಾತೆಯೂ ಆದ ಸುನೀತಿಗೆ ಸೂನೃತಾ ಎಂಬ ನಾಮಂತರವಿದೆ. ಸುರುಚಿಯ ಈರ್ಷೆಗೆ ಪಾತ್ರನಾದ ಧ್ರುವ ಕಾಡುಪಾಲಾಗಿ, ತಪಸ್ಸನ್ನಾಚರಿಸಿ ಧ್ರುವ ಪದವಿಯನ್ನು ಪಡೆದ. (ನೋಡಿ-ಧ್ರುವ-3) (ಬಿ.ಕೆ.ಎಸ್.)