ವಿಷಯಕ್ಕೆ ಹೋಗು

ಉತ್ತರ ಫಲ್ಗುನೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರ ಫಲ್ಗುನೀ: ಚಂದ್ರಪತ್ನಿಯರಾದ ಇಪ್ಪತ್ತೇಳು ನಕ್ಷತ್ರಗಳಲ್ಲಿ ಅಶ್ವಿನ್ಯಾದಿ ಗಣನಾಕ್ರಮದಲ್ಲಿ ಹನ್ನೆರಡೆನೆಯ ನಕ್ಷತ್ರ. ಇದರಲ್ಲಿ ಹಾಸಿಗೆಯ ಆಕಾರವನ್ನು ನೆನಪಿಗೆ ತರುವ ಎರಡು ತಾರೆಗಳಿವೆ. ಈ ತಾರೆಗಳ ಬಣ್ಣ ಸ್ವಲ್ಪ ಕೆಂಪು. ನಾಮಾಕ್ಷರಗಳು ಟೆ.ಟೋ.ಪ.ಪಿ. ಇದರಲ್ಲಿ ಹದಿನೆಂಟು ಗಳಿಗೆ ಮೇಲೆ ನಾಲ್ಕು ಗಳಿಗೆಗಳ ಕಾಲ ಶುಭಕಾರ್ಯಗಳಿಗೆ ತ್ಯಾಜ್ಯಕಾಲ. ಕ್ಷತ್ರಿಯ ಜಾತಿವಿಭಾಗಕ್ಕೆ ಸೇರಿದೆ. ಗೋ ಯೋನಿ ಉಳ್ಳದ್ದು. ಈ ನಕ್ಷತ್ರ ಇರುವ ದಿವಸ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಿಗೆ ಪ್ರಯಾಣ ಮಾಡಬಹುದು. ಕಮಲಧಾರಿಯಾದ ಪದ್ಮವರ್ಣದ ಅರ್ಯಮನ್ ಇದಕ್ಕೆ ದೇವತೆ. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸೂರ್ಯದೆಶೆ ಪ್ರಾರಂಭವಾಗುತ್ತದೆ. ಮದುವೆ ಮುಂಜಿ ಮುಂತಾದ ಎಲ್ಲ ಮಂಗಳಕಾರ್ಯಗಳನ್ನೂ ಮಾಡಲು ಇದು ಪ್ರಶಸ್ತವಾದ ನಕ್ಷತ್ರ. ಇದು ಇರುವ ಕಾಲದಲ್ಲಿ ಮರಣವಾದರೆ ಪ್ರಾಣ ಹೋದ ಜಾಗವನ್ನು ಮೂರು ತಿಂಗಳ ಕಾಲ ಯಾವ ಕಾರ್ಯಕ್ಕೂ ಉಪಯೋಗಿಸದೆ ಬಿಟ್ಟುಬಿಡಬೇಕು. ಇದರ ನಾಲ್ಕು ಪಾದಗಳಲ್ಲಿ ಮೊದಲನೆಯದು ಸಿಂಹರಾಶಿಗೂ ಉಳಿದ ಮೂರು ಪಾದಗಳು ಕನ್ಯಾರಾಶಿಗೂ ಸೇರಿವೆ. ಇದಕ್ಕಾಗಿ ತ್ರಿಪಾದಿ ನಕ್ಷತ್ರ ಎಂದು ಇದನ್ನು ಕರೆಯುತ್ತಾರೆ. ಇದರಲ್ಲಿ ಹುಟ್ಟಿದವ ದಾನಶೀಲ, ದಯಾಳು, ಕೀರ್ತಿವಂತ, ಸುಮತಿ, ಧೀರ ಮತ್ತು ಮೃದು ಸ್ವಭಾವ ಉಳ್ಳವನಾಗುತ್ತಾನೆ. (ಎಸ್.ಎನ್.ಕೆ.) ಖಗೋಳಶಾಸ್ತ್ರದಲ್ಲಿ ಉತ್ತರಾನಕ್ಷತ್ರವೆಂದು ಇದರ ಹೆಸರು. ಶಾಸ್ತ್ರನಾಮ x—ವಿರ್ಗೋ. ವಿಂಡ್ಮೀಟ್ರಿಕ್ಸ್‌ ಪರ್ಯಾಯನಾಮ. ಕನ್ಯಾರಾಶಿಯ ಐದನೆಯ ನಕ್ಷತ್ರ. ಕಾಂತಿವರ್ಗ 3.0.