ಉತ್ತರ ಪ್ರದೇಶದ ಅರ್ಥವ್ಯವಸ್ಥೆ
ಈ ರಾಜ್ಯದ ಅರ್ಥ ವ್ಯವಸ್ಥೆ ವ್ಯವಸಾಯ ಪ್ರಧಾನವಾಗಿದೆ. ಈ ವಿಚಾರದಲ್ಲಿ ಈ ರಾಜ್ಯಕ್ಕೂ ಭಾರತದ ಇತರ ರಾಜ್ಯಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಇಲ್ಲಿನ ನೆಲ ಫಲಭರಿತವಾದದ್ದರಿಂದಲೂ ನೀರಾವರಿ ಸೌಲಭ್ಯ ಧಾರಾಳವಾಗಿರುವುದರಿಂದಲೂ ಇಲ್ಲಿನ ಕೃಷಿ ಉದ್ಯಮ ವೈವಿಧ್ಯಮಯ: ಇದು ಸಾಕಷ್ಟು ಪ್ರಗತಿಪರವಾಗಿಯೂ ಇದೆಯೆನ್ನಬಹುದು. ವರ್ಷಕ್ಕೆ ಇಲ್ಲಿ ಎರಡು ಫಸಲು. ಖರೀಫ್ ಅಥವಾ ಶರತ್ ಬೆಳೆಯ ಬಿತ್ತನೆ ಜುಲೈ ತಿಂಗಳಲ್ಲಿ; ಅಕ್ಟೋಬರ್-ನವೆಂಬರಿನಲ್ಲಿ ಸುಗ್ಗಿ. ಮಾರ್ಚ್-ಏಪ್ರಿಲ್‍ಗಳಲ್ಲಿ ಫಸಲು ಬರುವ ರಾಬಿ (ವಸಂತ) ಬೆಳೆಯ ಬಿತ್ತನೆಯ ಕಾಲ ನವೆಂಬರ್. ಹೆಚ್ಚು ಮಳೆ ಬೀಳುವ ಪೂರ್ವದಲ್ಲಿ ಬತ್ತದ ಬೆಳಸು. ಮಳೆ ಕಡಿಮೆಯಿರುವ ಪಶ್ಚಿಮದಲ್ಲೂ ನೀರಾವರಿ ಸೌಲಭ್ಯವಿದ್ದ ಕಡೆಗಳಲ್ಲೂ ಬತ್ತವುಂಟು. ನೀರಾವರಿಯ ಸೌಲಭ್ಯದಿಂದ ವರ್ಷಕ್ಕೆರಡು ಬೆಳೆ ತೆಗೆಯುವುದೂ ಸಾಮಾನ್ಯ. ಹೈನು ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಮುಂದು. ಅಲೀಗಢದ ಬೆಣ್ಣೆ ಪ್ರಸಿದ್ಧ.
ಬ್ರಿಟಿಷ್ ಆಡಳಿತಕಾಲ
[ಬದಲಾಯಿಸಿ]ಬ್ರಿಟಿಷ್ ಆಡಳಿತಕಾಲದಲ್ಲಿ ಇಲ್ಲಿನ ಜಮೀನು ಹಿಡುವಳಿ ಪದ್ಧತಿ ಬಹುವಿಧವೂ ತೊಡಕಿನದೂ ಆಗಿತ್ತು. 1952ರ ಜುಲೈ ತಿಂಗಳಿಂದ ವ್ಯವಸಾಯ ಭೂಮಿಯನ್ನೆಲ್ಲ ರೈತರೇ ಸರ್ಕಾರದಿಂದ ನೇರವಾಗಿ ಹಿಡುವಳಿ ಪಡೆದಿದ್ದಾರೆ. ಜಮೀನ್ದಾರಿ ಪದ್ಧತಿ ರದ್ದು ಮಾಡುವ ಮುನ್ನ ಇಲ್ಲಿದ್ದ 20,00,000 ಜಮೀನ್ದಾರರಿಗೆ ಅವರ ವಾರ್ಷಿಕ ವರಮಾನದ ಎಂಟರಷ್ಟು ಪರಿಹಾರ ಕೊಡಲಾಯಿತು. ಗಾಮ್ರಗಳು ಬಹಳಮಟ್ಟಿಗೆ ಸ್ವಾವಲಂಬಿ. ಇವು ಹೊರಗಿನಿಂದ ಆಹಾರಧಾನ್ಯಕೊಳ್ಳುತ್ತಲೂ ಇರಲಿಲ್ಲ; ಮಾರಲು ಉಳಿಯುವಷ್ಟು ಬೆಳೆಯುತ್ತಲೂ ಇರಲಿಲ್ಲ. ಈಚೆಗೆ ಜಾರಿಗೆ ತರಲಾಗಿರುವ ಅಭಿವೃದ್ಧಿ ಕಾರ್ಯಗಳಿಂದ ಹಳ್ಳಿಗಳ ಸ್ಥಿತಿ ಸುಧಾರಿಸುತ್ತಿದೆ.[೧]ಉತ್ತಮ ವ್ಯವಸಾಯ ವಿಧಾನಗಳಿಂದ ಜಮೀನುಗಳ ಇಳಿವರಿ ಅಧಿಕವಾಗುತ್ತಿದೆಯಲ್ಲದೆ, ಇದುವರೆಗೂ ನೆಲವನ್ನೇ ನಂಬಿದ್ದ ಅಧಿಕ ಸಂಖ್ಯೆಯ ದುಡಿಮೆಗಾರರು ಈಗ ಹೊರ ಬಂದು ಪಟ್ಟಣಗಳಲ್ಲಿ ತುಂಬುತ್ತಿದ್ದಾರೆ. ಅನೇಕ ನಗರಗಳು ಆಧುನಿಕ ಕೈಗಾರಿಕಾ ಕೇಂದ್ರಗಳಾಗಿ ಪರಿಣಮಿಸಿವೆ.
ಕೈಗಾರಿಕೆಗಳು
[ಬದಲಾಯಿಸಿ]ಇಲ್ಲಿನ ಮುಖ್ಯ ಕೈಗಾರಿಕೆಗಳನ್ನು ದೊಡ್ಡ ಪ್ರಮಾಣದ ಕೈಗಾರಿಕೆಗಳು, ಸಣ್ಣ ಅಥವಾ ಮಧ್ಯಮ ಪ್ರಮಾಣದ ಕೈಗಾರಿಕೆಗಳು ಮತ್ತು ಗೃಹ ಕೈಗಾರಿಕೆಗಳೆಂದು ಮೂರು ಭಾಗಗಳನ್ನಾಗಿ ವಿಂಗಡಿಸಬಹುದು.ದೊಡ್ಡ ಪ್ರಮಾಣದ ಕೈಗಾರಿಕೆಗಳು ಖಾಸಗಿ ಮತ್ತು ಸರ್ಕಾರಿ ವಲಯಗಳೆರಡರಲ್ಲೂ ಸ್ಥಾಪಿತವಾಗಿವೆ. ಉತ್ತರ ಪ್ರದೇಶದ ಖಾಸಗಿ ವಲಯದಲ್ಲಿ ಸುಮಾರು ಹದಿನಾರು ದೊಡ್ಡ ಪ್ರಮಾಣದ ಕೈಗಾರಿಕೆಗಳಿದ್ದು ಅವುಗಳನ್ನು ಬಂಡವಾಳದ ಹೂಡಿಕೆಯ ಆಧಾರದ ಮೇಲೆ ಮತ್ತೆ ಮೂರು ಭಾಗಗಳನ್ನಾಗಿ ವಿಂಗಡಿಸಬಹುದು. ತಲಾ ಒಂದು ಕೋಟಿ ರೂ. ಗಳಿಗಿಂತಲೂ ಅಧಿಕ ಬಂಡವಾಳ ಇರುವ ಐದು ಕೈಗಾರಿಕೆಗಳು ಮೊದಲನೆಯ ಗುಂಪು: ಸಕ್ಕರೆ, ಹತ್ತಿಜವಳಿ, ವನಸ್ಪತಿ, ರಾಸಾಯನಿಕವಸ್ತುಗಳು, ಯಂತ್ರೋಪಕರಣಗಳು ಹಾಗೂ ವಿದ್ಯುಚ್ಛಕ್ತಿ ಸಲಕರಣೆಗಳ ಕೈಗಾರಿಕೆಗಳು. ಈ ಐದು ಅತಿ ದೊಡ್ಡ ಕೈಗಾರಿಕೆಗಳಲ್ಲಿ ಸಕ್ಕರೆ ತಯಾರಿಕೆ ಅತ್ಯಂತ ಪ್ರಮುಖವಾದದ್ದು.ಉತ್ತರ ಪ್ರದೇಶದಲ್ಲಿ ಸುಮಾರು 98 ಸಕ್ಕರೆ ಕಾರ್ಖಾನೆಗಳಿದ್ದು ಇವುಗಳಲ್ಲಿ ಪ್ರತಿ ನಿತ್ಯವೂ ಸುಮಾರು 71 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಈ ಉದ್ಯಮದಲ್ಲಿನ ಒಟ್ಟು ಬಂಡವಾಳ ಸುಮಾರು 50 ಕೋಟಿ ರೂಪಾಯಿ. ವಾರ್ಷಿಕ ಸಕ್ಕರೆ ಉತ್ಪನ್ನದ ಮೌಲ್ಯ 15 ಕೋಟಿ ರೂಪಾಯಿ. ಸಕ್ಕರೆ ಕೈಗಾರಿಕೆಯಲ್ಲಿ ಇಡೀ ರಾಷ್ಟ್ರದಲ್ಲಿ ಉತ್ತರ ಪ್ರದೇಶವೇ ಪ್ರಥಮ.ಸಕ್ಕರೆ ತಯಾರಿಕೆಯನ್ನು ಬಿಟ್ಟರೆ ರಾಜ್ಯದಲ್ಲಿ ಹತ್ತಿಜವಳಿ ಕೈಗಾರಿಕೆಗಳ ದ್ವಿತೀಯ ಸ್ಥಾನ. ಇಲ್ಲಿ ಸುಮಾರು 27 ಹತ್ತಿಜವಳಿ ಗಿರಣಿಗಳಿದ್ದು ಇವು ಪ್ರತಿನಿತ್ಯವೂ ಸರಾಸರಿ 50,000 ಜನಕ್ಕೆ ಉದ್ಯೋಗ ಒದಗಿಸುತ್ತವೆ. ಈ ಉದ್ಯಮದಲ್ಲಿ ತೊಡಗಿಸಿದ ಬಂಡವಾಳ ಸುಮಾರು 22 ಕೋಟಿ ರೂ; ವಾರ್ಷಿಕ ಉತ್ಪಾದನೆಯ ಮೌಲ್ಯ 8 ಕೋಟಿ ರೂ. ಕಾನ್‍ಪುರವೇ ರಾಜ್ಯದ ಹತ್ತಿಜವಳಿ ಕೈಗಾರಿಕೆಯ ಕೇಂದ್ರ.[೨]
ರಾಸಾಯನಿಕ ವಸ್ತುಗಳ ಉತ್ಪಾದನೆ
[ಬದಲಾಯಿಸಿ]ವನಸ್ಪತಿ ಮತ್ತು ಸಸ್ಯಜನಿತ ಎಣ್ಣೆಯ ಉತ್ಪಾದನೆ ಉತ್ತರ ಪ್ರದೇಶದ ಇನ್ನೊಂದು ಮುಖ್ಯ ಕೈಗಾರಿಕೆ. ಇಲ್ಲಿ ಸುಮಾರು 63 ಎಣ್ಣೆ ಕಾರ್ಖಾನೆಗಳಿವೆ. ವನಸ್ಪತಿ ವಸ್ತುತಯಾರಿಕೆಯಲ್ಲಿ ನಿರತವಾದ ಕಾರ್ಖಾನೆಗಳು ನಾಲ್ಕು. ಈ ಎರಡು ಉದ್ಯಮಗಳೂ ದಿನಂಪ್ರತಿ 59,000 ಜನಕ್ಕೆ ಉದ್ಯೋಗ ಕಲ್ಪಿಸಿಕೊಟ್ಟಿವೆ. ಈ ಉದ್ಯಮಗಳಲ್ಲಿ ಸುಮಾರು 4.67 ಕೋಟಿ ರೂ. ತೊಡಗಿಸಲಾಗಿದೆ. ನಾಲ್ಕು ವನಸ್ಪತಿ ಕಾರ್ಖಾನೆಗಳಲ್ಲಿ ಮೂರನ್ನು ಮೀರತ್ ಜಿಲ್ಲೆಯಲ್ಲಿಯೇ ಸ್ಥಾಪಿಸಲಾಗಿದೆ. ರಾಸಾಯನಿಕ ವಸ್ತುಗಳ ಉತ್ಪಾದನೆ ರಾಜ್ಯದ ಮತ್ತೊಂದು ಮುಖ್ಯ ಕೈಗಾರಿಕೆ. ಈ ರಾಜ್ಯದಲ್ಲಿ 27 ರಾಸಾಯನಿಕ ವಸ್ತುಗಳ ಕಾರ್ಖಾನೆಗಳಿದ್ದು ಇವು ಪ್ರತಿನಿತ್ಯವೂ 2,800 ಕೆಲಸಗಾರರಿಗೆ ಕೆಲಸ ಒದಗಿಸಿವೆ. ಈ ಉದ್ಯಮದಲ್ಲಿ ತೊಡಗಿಸಲಾದ ಬಂಡವಾಳ 3.11 ಕೋಟಿ ರೂ. ವಾರ್ಷಿಕ ಉತ್ಪನ್ನ ಮೌಲ್ಯ 1.58 ಕೋಟಿ ರೂ.151 ಸಾಮಾನ್ಯ ಮತ್ತು ವಿದ್ಯುತ್ ಯಂತ್ರೋಪಕರಣ ಕಾರ್ಖಾನೆಗಳು ಉತ್ತರ ಪ್ರದೇಶದಲ್ಲಿ ಸ್ಥಾಪಿತವಾಗಿವೆ. ಇವುಗಳಲ್ಲಿ ಪ್ರತಿನಿತ್ಯವೂ ಸರಾಸರಿ 11,000 ಕಾರ್ಮಿಕರು ಕೆಲಸಮಾಡುತ್ತಾರೆ. ಕಾರ್ಖಾನೆಗಳಲ್ಲಿ ಹೂಡಲಾದ ಒಟ್ಟು ಬಂಡವಾಳ 3.32 ಕೋಟಿ ರೂ. ವಾರ್ಷಿಕ ಉತ್ಪನ್ನ ಮೌಲ್ಯ 1.39 ಲಕ್ಷ ರೂ.ಲಾ ಒಂದು ಕೋಟಿಗಿಂತ ಕಡಿಮೆ, ಆದರೆ ಐವತ್ತು ಲಕ್ಷಕ್ಕಿಂತ ಹೆಚ್ಚು, ಬಂಡವಾಳ ಹೂಡಲಾಗಿರುವ ಕೈಗಾರಿಕೆಗಳದು ಎರಡನೆಯ ಗುಂಪು. ಕಬ್ಬಿಣ ಉಕ್ಕು, ಉಣ್ಣೆ, ಬಟ್ಟೆ, ಕಾಗದ ಮತ್ತು ಸೆಣಬು ಕೈಗಾರಿಕೆಗಳು ಇವುಗಳಲ್ಲಿ ಮುಖ್ಯ. ಚರ್ಮ ಹದಮಾಡುವಿಕೆ, ಗಾಜು ಮತ್ತು ಗಾಜಿನ ಸಾಮಾನುಗಳ ತಯಾರಿಕೆ, ಬೈಸಿಕಲ್ ಕೈಗಾರಿಕೆ, ಅಕ್ಕಿಗಿರಣಿಗಳು, ಬಣ್ಣ ಮತ್ತು ವಾರ್ನಿಷ್ ತಯಾರಿಕೆ, ಮದ್ಯಸಾರ ತಯಾರಿಕೆ ಇವು ತಲಾ 10 ಲಕ್ಷದಿಂದ 50 ಲಕ್ಷ ರೂ. ವರೆಗೆ ಬಂಡವಾಳ ಹೊಂದಿವೆ. ಇವುಗಳದು ಮೂರನೆಯ ಗುಂಪು.
ಸರ್ಕಾರಿ ಸಿಮೆಂಟ್ ಕಾರ್ಖಾನೆ
[ಬದಲಾಯಿಸಿ]ಸರ್ಕಾರಿ ವಲಯದಲ್ಲಿನ ಎರಡು ಮುಖ್ಯ ಕೈಗಾರಿಕೆಗಳಾದ ಸೂಕ್ಷ್ಮ ಸಲಕರಣೆಗಳ ಕಾರ್ಖಾನೆ ಹಾಗೂ ಸಿಮೆಂಟ್ ಕಾರ್ಖಾನೆ ರಾಜ್ಯಸರ್ಕಾರದ ನೇರ ಆಡಳಿತಕ್ಕೊಳಪಟ್ಟಿವೆ. ಮತ್ತೆ ಕೆಲವು ಕೈಗಾರಿಕೆಗಳಲ್ಲಿ ಸರ್ಕಾರದ ಹತೋಟಿಯುಂಟು. ಮೊದಲನೆಯದು 1950ರಲ್ಲಿ ಉತ್ಪಾದನೆ ಪ್ರಾರಂಭಿಸಿತು. ಇದರಲ್ಲಿ ರಾಜ್ಯಸರ್ಕಾರ ಹೂಡಿರುವ ಬಂಡವಾಳ 41 ಲಕ್ಷ ರೂಪಾಯಿ. ಸುಮಾರು 400 ಮಂದಿ ನಿಪುಣ ಕೆಲಸಗಾರರಿಗೆ ಉದ್ಯೋಗ ಒದಗಿಸಿರುವ ಈ ಕಾರ್ಖಾನೆಯ ಮುಖ್ಯ ತಯಾರಿಕೆಗಳೆಂದರೆ ನೀರಿನ ಮೀಟರ್ ಮತ್ತು ಸೂಕ್ಷ್ಮದರ್ಶಕ ಯಂತ್ರ.ಸರ್ಕಾರಿ ಸಿಮೆಂಟ್ ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭವಾದದ್ದು 1954ರಲ್ಲಿ. 800 ಮಂದಿ ಮಾಜಿ ಕೈದಿಗಳು ಇಲ್ಲಿ ಕಾರ್ಮಿಕರಾಗಿರುವುದು ಈ ಕಾರ್ಖಾನೆಯ ಒಂದು ವೈಶಿಷ್ಟ್ಯ.ರಾಂಪುರದಲ್ಲಿ ಸ್ಥಾಪಿತವಾಗಿರುವ ಮೂರು ಕೈಗಾರಿಕೆಗಳಲ್ಲಿ ರಾಜ್ಯಸರ್ಕಾರ ಷೇರು ಬಂಡವಾಳ ಹೊಂದಿರುವುದರಿಂದ ಇವು ಸರ್ಕಾರದ ಹತೋಟಿಗೊಳಪಟ್ಟಿವೆ.ಇಲ್ಲಿನ ಆ್ಯಂಟಿಬಯೊಟಿಕ್ಸ್, ರಾಸಾಯನಿಕ ಗೊಬ್ಬರ (ಗೋರಖ್‍ಪುರ) ಹೆವಿ ಎಲೆಕ್ಟ್ರಿಕಲ್ (ಹರಿದ್ವಾರ) ಮತ್ತು ಡೀಸೆಲ್ ಎಲೆಕ್ಟ್ರಿಕಲ್ ಎಂಜಿನ್ ಕಾರ್ಖಾನೆ (ವಾರಾಣಸಿ)-ಇವು ಕೇಂದ್ರ ಸರ್ಕಾರದವು.
ಸಣ್ಣ ಪ್ರಮಾಣದ ಕೈಗಾರಿಕೆಗಳು
[ಬದಲಾಯಿಸಿ]ಉತ್ತರ ಪ್ರದೇಶದಲ್ಲಿರುವ ಸಣ್ಣ ಪ್ರಮಾಣದ ಕೈಗಾರಿಕೆಗಳು ಅನೇಕ. ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ಈ ಕೈಗಾರಿಕೆಗಳದು ಮುಖ್ಯ ಪಾತ್ರ. ಆರ್ಥಿಕವಾಗಿ ಹಿಂದುಳಿದ ಉತ್ತರ ಪ್ರದೇಶ ರಾಜ್ಯದಲ್ಲಿ ಜನರಿಗೆ ಉದ್ಯೋಗ ಒದಗಿಸಿಕೊಟ್ಟು ಅವರ ಬಡತನವನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸುವುದರಲ್ಲಿ ಈ ಸಣ್ಣ ಪ್ರಮಾಣದ ಕೈಗಾರಿಕೆಗಳು ಸಹಾಯಕ. ಸುಮಾರು 1,700 ಸಣ್ಣ ಪ್ರಮಾಣದ ಕೈಗಾರಿಕಾಸಂಸ್ಥೆಗಳು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು 51 ಸಾವಿರ ಜನರಿಗೆ ಉದ್ಯೋಗ ಒದಗಿಸಿಕೊಟ್ಟಿವೆ. ಅಲಹಾಬಾದಿನ ಉಕ್ಕಿನ ಟ್ರಂಕು ತಯಾರಿಕೆ, ಫಿರೋeóÁಬಾದಿನ ದೇಶಪ್ರಸಿದ್ಧ ಗಾಜಿನ ಬಳೆಗಳ ಉತ್ಪಾದನೆ, ಮುರಾದಾಬಾದಿನ ಸ್ಪೇನ್ ಲೆಸ್ ಸ್ಟೀಲ್, ಕಂಚಿನ ಸಾಮಾನು ತಯಾರಿಕೆ-ಇವು ಮುಖ್ಯ. ಸೋಪು, ಕ್ರೀಡಾವಸ್ತು, ರಬ್ಬರ್ ಸಾಮಾನು, ಬೀಗ, ಸೈಕಲ್ ಸಾಮಾನು ಸಂಗೀತ ಸಲಕರಣೆ, ಚರ್ಮವಸ್ತು-ಇವುಗಳೆಲ್ಲವೂ ಸಣ್ಣ ಪ್ರಮಾಣದ (50 ಅಥವಾ ಕಡಿಮೆ ಸಂಖ್ಯೆಯ ಕೆಲಸಗಾರರನ್ನುಳ್ಳ) ಕೈಗಾರಿಕೆಗಳು.
ಗೃಹ ಕೈಗಾರಿಕೆ
[ಬದಲಾಯಿಸಿ]ಉತ್ತರ ಪ್ರದೇಶ ಅನೇಕ ಗೃಹ ಕೈಗಾರಿಕೆಗಳಿಗೂ ಪ್ರಸಿದ್ಧ. ಇವು ಸಾಮಾನ್ಯವಾಗಿ ವಂಶಪಾರಂಪರ್ಯ. ಇವುಗಳಲ್ಲಿ ಎಷ್ಟೋ ವಿದೇಶಿ ವಿನಿಮಯ ಸಂಪಾದನೆಗೆ ಕಾರಣ. ಮಥುರಾ, ಫರೂಕಾಬಾದ್‍ಗಳ ಕ್ಯಾಲಿಕೋ ಪ್ರಿಂಟಿಂಗ್, ಮಿeóರ್Áಪುರ ಮತ್ತು ಬದೋಹಿಯ ಜಗದ್ವಿಖ್ಯಾತ ಜಮಖಾನೆ ತಯಾರಿಕೆ, ವಾರಾಣಸಿಯ ರೇಷ್ಮೆ ಬಟ್ಟೆ ಮತ್ತು ರೇಷ್ಮೆ ಜರತಾರಿ ನೇಯ್ಗೆ, ಲಖನೌದ ದಂತದ ಕೆಲಸ-ಇವು ಮುಖ್ಯ.ಈ ರಾಜ್ಯದ ಕೈಗಾರಿಕಾ ರಚನೆಯಲ್ಲಿ ಇಲ್ಲಿಯವರಿಗೆ ಗ್ರಾಮ ಮತ್ತು ಗೃಹ ಕೈಗಾರಿಕೆಗಳೇ ಪ್ರಧಾನವಾಗಿದ್ದುವು. ಸಕ್ಕರೆ ಮತ್ತು ಬಟ್ಟೆ ತಯಾರಿಕೆಗಳು ಮಾತ್ರ ರಾಜ್ಯದ ಅತಿ ಮುಖ್ಯ ದೊಡ್ಡ ಕೈಗಾರಿಕೆಗಳು. ಆಗ್ರ ಅಲೀಗಢ ವಾರಾಣಸಿ ಮತ್ತು ಲಖನೌ ಪಟ್ಟಣಗಳು ಕೈಗಾರಿಕಾ ಕ್ಷೇತ್ರದಲ್ಲಿ ಈಚೆಗೆ ಪ್ರಗತಿ ಹೊಂದಲು ಪ್ರಾರಂಭಿಸಿದ್ದರೂ ಕಾನ್‍ಪುರ ಮಾತ್ರವೇ ದೊಡ್ಡ ಕೈಗಾರಿಕಾ ಕೇಂದ್ರ. ಈ ರಾಜ್ಯ ಹಿಂದೆ ಹೆಚ್ಚು ಪ್ರಗತಿ ಹೊಂದದಿರಲು ಕಚ್ಚಾ ಸಾಮಗ್ರಿಯ ಅಭಾವ, ವಿದ್ಯುಚ್ಛಕ್ತಿಯ ಕೊರತೆ, ಸ್ಥಳೀಯ ಬೇಡಿಕೆಯ ಮತ್ತು ಶ್ರಮ ಕೌಶಲಗಳ ಅಭಾವವೇ ಮುಖ್ಯ ಕಾರಣ. ಪಂಚವಾರ್ಷಿಕ ಯೋಜನೆಗಳ ಕಾಲದಲ್ಲಿ ಈ ರಾಜ್ಯ ಗಣನೀಯ ಪ್ರಮಾಣದಲ್ಲಿ ಕೈಗಾರಿಕಾಭಿವೃದ್ಧಿ ಹೊಂದುತ್ತಿದೆ.
ಕೈಗಾರಿಕಾ ಘಟಕ
[ಬದಲಾಯಿಸಿ]ಈ ರಾಜ್ಯದಲ್ಲಿ 1998 ಮಾರ್ಚ್ ತಿಂಗಳ ಕೊನೆಯಲ್ಲಿ ಒಟ್ಟು ರೂ.41,266.20 ಕೋಟಿ ಬಂಡವಾಳದ 2616 ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕಾ ಘಟಕಗಳಿದ್ದವು. ಇವುಗಳಲ್ಲಿ 7,38,582 ಮಂದಿಗೆ ಉದ್ಯೋಗಾವಕಾಶವಾಗಿತ್ತು. ಹಾಗೆಯೇ ರೂ. 4028 ಕೋಟಿ ಬಂಡವಾಳದ 401,372 ಸಣ್ಣ ಕೈಗಾರಿಕೆಗಳಿದ್ದು 15,52,000 ಮಂದಿಗೆ ಉದ್ಯೋಗ ದೊರಕಿತ್ತು. 2001-02 ರ ಸಾಲಿನಲ್ಲಿ ಸು. 52.60 ಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿತ್ತು. 68 ಜವಳಿ ಕಾರ್ಖಾನೆಗಳೂ 32 ಆಟೊಮೊಬೈಲ್ ಕಾರ್ಖಾನೆಗಳೂ ಇದ್ದು ಒಟ್ಟು ರೂ. 5740 ಕೋಟಿ ಬಂಡವಾಳ ಹೂಡಲಾಗಿದ್ದು 20,280 ಮಂದಿಗೆ ಉದ್ಯೋಗ ನೀಡಲಾಗಿತ್ತು. ನ್ಯೂ ಓಕ್ಲ ಕೈಗಾರಿಕಾಭಿವೃದ್ಧಿ ನಿಗಮದ ಯೋಜನೆಯಂತೆ 2011 ರ ಹೊತ್ತಿಗೆ 102 ಕೈಗಾರಿಕಾ ಘಟಕಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯವೂ ಸಾಗಿದೆ.
ಉಲ್ಲೇಖಗಳು
[ಬದಲಾಯಿಸಿ]