ವಿಷಯಕ್ಕೆ ಹೋಗು

ಉತ್ತರ ಪಕ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರ ಪಕ್ಷ:

  1. . ವಾದದಲ್ಲಿ ಒಂದು ವಿಷಯವನ್ನು ಕುರಿತು ಪ್ರತಿಪಕ್ಷೀಯನಿಂದ ಮಂಡಿತವಾದ, ನೈಜವಲ್ಲದ, ಪೂರ್ವಪಕ್ಷರೂಪವಾದ ವಿಚಾರ ಪರಂಪರೆಯನ್ನು ಯುಕ್ತಿ ಪ್ರಮಾಣಾದಿಗಳಿಂದ ಸಕಾರಣವಾಗಿ ಖಂಡಿಸಿ ನೈಜವಾದ ಸಿದ್ಧಾಂತವನ್ನು ಪ್ರತಿಪಾದಿಸಿ ಸ್ಥಾಪಿಸುವುದು.
  2. . ಮೀಮಾಂಸಾಶಾಸ್ತ್ರದಲ್ಲಿ ಐದು ಅಂಗಗಳಿಂದ ಕೂಡಿದ ವಾಕ್ಯಸಮುದಾಯ. ರೂಪ ಅಧಿಕರಣಗಳಲ್ಲಿ ಬರುವ ವಿಷಯ, ವಿಶಯ (ಸಂಶಯ), ಪೂರ್ವಪಕ್ಷ, ಉತ್ತರ, ನಿರ್ಣಯಗಳೆಂಬ ಐದು ಅವಯವಗಳಲ್ಲಿ ನಾಲ್ಕನೆಯದು.
  3. . ಚಾಂದ್ರಮಾನ ತಿಂಗಳುಗಳನ್ನು ಶುಕ್ಲಪಕ್ಷ ಕೃಷ್ಣಪಕ್ಷ ಎಂದು ಎರಡಾಗಿ ವಿಭಾಗ ಮಾಡಿದ್ದಾರೆ. ಇದರಲ್ಲಿ ಕೃಷ್ಣಪಕ್ಷದ ಪ್ರಥಮ ತಿಥಿಯಿಂದ ಅಮಾವಾಸ್ಯೆ ತಿಥಿ ಪುರ್ತಿ ಇರುವ ಉತ್ತರ ಮಾಸಾರ್ಧ ರೂಪ ಪಕ್ಷ.