ವಿಷಯಕ್ಕೆ ಹೋಗು

ಉಣಕಲ್ ಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಬ್ಬಳಿಯಲ್ಲಿರುವ ಉಣಕಲ್ ಕೆರೆ ಒಂದು ಸುಂದರವಾದ ಕೆರೆ, ಇದರ ಸುತ್ತ ಒಳ್ಳೆಯ ತೋಟವಿದೆ ಹಾಗೂ ಇದು ಹುಬ್ಬಳ್ಳೆಗೆ ಬರುವವರಿಗೆ ಸ್ವಾಗತ ಕೋರುತ್ತದೆ.

ಭಕ್ತರ ಯಾತ್ರಾ ಸ್ಥಳ 

ಚನ್ನಬಸವಣ್ಣ ಭೇಟಿ ನೀಡಿದ್ದ ಸ್ಥಳ ಕೆರೆ ದಂಡೆಯ ಮೇಲಿರುವ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ನಡೆದುಕೊಳ್ಳುತ್ತಾರೆ . ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ಜಾತ್ರೆ, ರಥೋತ್ಸವ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆಯುತ್ತವೆ. 12 ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಡೆದ ನಂತರ ಬಸವಣ್ಣನ ಸೋದರಳಿಯ ಚನ್ನಬಸವಣ್ಣ ನೇತೃತ್ವದ ಶರಣರ ತಂಡ ಸಹ್ಯಾದ್ರಿಯ ಅರಣ್ಯ ಪ್ರದೇಶದ ಮಧ್ಯದ ಉಳ್ಳಾವಿಯತ್ತ ಸಾಗುತ್ತಿತ್ತು. ಈ ಪಯಣದ ನಡುವೆ ಉಣಕಲ್ ಕೆರೆ ದಂಡೆ ಮೇಲೆ ಕೆಲಕಾಲ ಉಳಿದು ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದ್ದರು, ಈ ಹಿನ್ನೆಲೆಯಲ್ಲಿ ಉಣಕಲ್ ಕೆರೆ ದಂಡೆಯ ಮೇಲೆ ರೂಪಗೊಂಡಿರುವ ದೇವಸ್ಥಾನ ಬಸವ ಭಕ್ತರ ಪವಿತ್ರ ಯಾತ್ರಾ ಸ್ಥಳವಾಗಿಯೂ ಪ್ರಸಿದ್ಧಿ ಪಡೆದುಕೊಂಡಿದೆ.