ಉಕ್ಕಡಗಾತ್ರಿ

ವಿಕಿಪೀಡಿಯ ಇಂದ
Jump to navigation Jump to search

ಉಕ್ಕಡಗಾತ್ರಿಯು ಹರಿಹರ ತಾಲೂಕಿನ ಸರಹದ್ದಿನಲ್ಲಿದೆ. ಇಲ್ಲಿನ ಕರಿಬಸವೇಶ್ವರ (ಅಜ್ಜಯ್ಯ) ದೇವಸ್ಥಾನವು ಪ್ರಸಿದ್ಧವಾಗಿದೆ. ಇದು ತುಂಗಭದ್ರ ನದಿಯ ದಡದಲ್ಲಿದೆ,, ಇದು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದೆ.. ಇದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗಡಿಭಾಗದಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿಗೆ ಹೊಂದಿಕೊಂಡಿದೆ.. ಇಲ್ಲಿಗೆ ದಾವಣಗೆರೆ, ರಾಣಿಬೆನ್ನೂರು, ಹರಿಹರ,ಹೊನ್ನಾಳಿ, ಚನ್ನಗಿರಿ, ಶಿವಮೊಗ್ಗ ನಿಂದ ನೆರವಾಗಿ ಸಾರಿಗೆ ಸಂಪರ್ಕ ಹೊಂದಿದೆ

ಇದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಹೋಬಳಿಗೆ ಸೇರಿದೆ. ಇಲ್ಲಿ ಪ್ರತಿ ಅಮವಾಸ್ಯಗೆ ಬಲು ದೊಡ್ಡ ಜಾತ್ರೆ ನಡೆಯುತ್ತದೆ. ಇಲ್ಲಿಗೆ ಕರ್ನಾಟಕ ಅಲ್ಲದೆ ಇತರ ರಾಜ್ಯ ಗಳಿಂದಲೂ ಭಕ್ತಾದಿಗಳು ಬರುತ್ತಾರೆ.