ಈ ಕವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಕವಿ-ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ[ಬದಲಾಯಿಸಿ]

ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ) ಸಂಸ್ಥೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಭವವನ್ನು ಮರಳಿ ಹಿಂತರುವ ಮತ್ತು ಮಾಹಿತಿ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕನ್ನಡ ನಾಡು ನುಡಿಯ ಜನಜೀವನದ ಬಗ್ಗೆ ಚಿಂತನೆ ಕಾಳಜಿಹೊಂದಿರುವ ಈ ಸಂಘಟನೆ ೨೦೦೩ ಅಕ್ಟೋಬರ್ ೪ ರಂದು ಜನ್ಮತಾಳಿತು. ೨೦೦೪ರ ಜನವರಿಯಲ್ಲಿ ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಕಾರ್ಯಾರಂಭಿಸಿದ ಈ-ಕವಿ ಕರ್ನಾಟಕದಾದ್ಯಂತ ತನ್ನ ಚಟುವಟಿಕೆ ವಿಸ್ತರಿಸುತ್ತ ಮುಂದೆ ಸಾಗುತ್ತಿದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಈ ಕವಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಈತ್ತೀಚಿನ ದಿನಗಳಲ್ಲಿ ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು, ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ. ಈ-ಮೇಲ್, ಅಂತರಜಾಲ ಇತ್ಯಾದಿ ಮಾಧ್ಯಮಗಳ ಮೂಲಕ ಜನಗಳಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. "ಈ-ಕವಿ" ಸಂಸ್ಥೆಯು ಕನ್ನಡ ನಾಡು-ನುಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. "ಈ-ಕವಿ" ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಗುರಿಯನ್ನು ಮುಟ್ಟುವ ಸಲುವಾಗಿ "ಈ-ಕವಿ" ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ಗ್ರಾಮೀಣ ಶಿಕ್ಷಣಕ್ಕೆ ಕಾಯಕಲ್ಪ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಆ ಪ್ರದೇಶದ ಶಾಲೆಗಳನ್ನು ದತ್ತು ಪಡೆದು ಬಡವರಿಗೆ ಮೈಕ್ರೊ ಕ್ರೆಡಿಟ್‌ ಸೌಲಭ್ಯ ಒದಗಿಸುವುದು, ಇತ್ಯಾದಿ ಜನಮುಖಿ ಕಾರ್ಯಕ್ರಮಗಳನ್ನು ರಾಜ್ಯದ ಇತರ ಎನ್‌ಜಿಓಗಳ ಸಹಕಾರದೊಂದಿಗೆ ಹಮ್ಮಿಕೊಳ್ಳುವುದು ಈ ಸಂಸ್ಥೆಯ ಉದ್ದಿಶ್ಯ. ಈ ಸಂಸ್ಥೆಯ ಧ್ಯೇಯ: ಈ ಕವಿಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಇಲ್ಲಿ ಪಡೆಯಿರಿ. ಈ-ಕವಿ Archived 2020-02-04 ವೇಬ್ಯಾಕ್ ಮೆಷಿನ್ ನಲ್ಲಿ. ಈ ಕವಿಯ ಮುಖವಾಣಿ ಈ ಕವಿ ಸಂಸ್ಥಾಪಕರು ಶ್ರೀ ವಿ.ಎಂ.ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ವಿ.ಎಂ.ಕುಮಾರಸ್ವಾಮಿ. ಇವರ ಕೆಲವು ಕಾರ್ಯಗಳ ಪರಿಚಯ ಇಲ್ಲಿದೆ.... ಅಮೆರಿಕಾದ ವಿಶ್ವ ವಿದ್ಯಾಲಯವೊಂದರಲ್ಲಿ ಕನ್ನಡ ಪೀಠ ಸ್ಥಾಪಿಸುವುದು ಅವರ ಕನಸು. ಅದಕ್ಕಾಗಿ'ಅಕ್ಕ' ಸಹಯೋಗದಲ್ಲಿ ನಿಧಿಯಾಂದನ್ನು ಸ್ಥಾಪಿಸಲಾಗಿದೆ. ಅಮೆರಿಕಾದಲ್ಲಿನ ಎಲ್ಲ ವಿಶ್ವ ವಿದ್ಯಾಲಯಗಳನ್ನು ಕುಮಾರಸ್ವಾಮಿ ಸಂಪರ್ಕಿಸಿದ್ದಾರೆ. ಕನ್ನಡ ಪೀಠ ಸ್ಥಾಪನೆಗೆ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯ ಆಸಕ್ತಿ ತೋರಿಸಿದೆ. ಪೆನ್ಸಿಲ್ವೇನಿಯಾ ವಿವಿ ನೆರವಿನಲ್ಲಿ WE TALKನ್ನುವ ವೆಬ್‌ ಆಧರಿತ ಕನ್ನಡ ಕಲಿಕೆ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ. ವಿಶ್ವಾದ್ಯಂತ ಇರುವ ಕನ್ನಡ ಸಂಘಟನೆಗಳನ್ನು ಸಂಪರ್ಕಿಸಿ, ಕರ್ನಾಟಕದ ವಾಣಿಜ್ಯ ಹಾಗೂ ಪ್ರವಾಸೋದ್ಯಮವನ್ನು ಪ್ರೋತ್ರಾಹಿಸುವ ಕಾರ್ಯಕ್ರಮಗಳ ಸಮಾನ ಮಾಧ್ಯಮವನ್ನು ರೂಪಿಸುವ ಪ್ರಯತ್ನ. ಲಾಸ್‌ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಕಾರ್ಯಪಡೆ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆಗೆ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ.


ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಈ_ಕವಿ&oldid=1165974" ಇಂದ ಪಡೆಯಲ್ಪಟ್ಟಿದೆ