ಈಶ್ವರಚಂದ್ರ ಚಿಂತಾಮಣಿ

ವಿಕಿಪೀಡಿಯ ಇಂದ
Jump to navigation Jump to search

ಈಶ್ವರಚಂದ್ರ ಚಿಂತಾಮಣಿಯವರು ವಿಜಯಪುರದ ಜಾನಪದ ವಿದ್ವಾಂಸರು, ಲೇಖಕರು ಹಾಗೂ ಸಾಹಿತಿಗಳು.

ಜನನ[ಬದಲಾಯಿಸಿ]

ಈಶ್ವರ ಅಮಗೌಡ ಚಿಂತಾಮಣಿ ಅವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಿಜ್ಜರಗಿಯಲ್ಲಿ ೧೦.೦೫.೧೯೨೬ ರಲ್ಲಿ ಜನಿಸಿದರು. ತಂದೆ ಅಮಗೌಡ ಸೋಮಲಿಂಗ ಚಿಂತಾಮಣಿ, ತಾಯಿ ನಾಗಮ್ಮ.

೧೯೪೨ರ ಚಲೇಜಾವ್ ಚಳವಳಿಯಲ್ಲಿ ಹೈಸ್ಕೂಲು ವಿದ್ಯಾರ್ಥಿಗಳೊಡನೆ ಸೇರಿಕೊಂಡು ಅನುಭವಿಸಿದ ಸೆರೆಮನೆವಾಸ.

ಜನಪದ[ಬದಲಾಯಿಸಿ]

ಇವರ ಕಾವ್ಯನಾಮ “ಪಾರ್ವತೀಶ” ಈಶ್ವರ ಚಂದ್ರ ಚಿಂತಾಮಣಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆಗಿದ್ದಾಗ ತಮ್ಮ ಸ್ವಂತ ಊರಿನಲ್ಲಿ ಸ್ತ್ರೀಯರು ಹಾಡುವ ಸಂಪ್ರದಾಯದ ಹಾಡುಗಳಿಂದ ಆಕರ್ಷಿತರಾದರು. ಆಗಲೇ ಅವರು ಜನಪದ ಹಾಡುಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡರು. ೧೯೪೬ ರಿಂದಲೇ ಜನಪದ ಸಾಹಿತ್ಯ ಕುರಿತು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯಲು ಆರಂಭಿಸಿದರು.

ಸಾಹಿತ್ಯ[ಬದಲಾಯಿಸಿ]

ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಜೀವನ ಆರಂಭಿಸಿದ ಚಿಂತಾಮಣಿಯವರು, ಮಕ್ಕಳ ಸಾಹಿತ್ಯದ ಬಗ್ಗೆಯೂ ಹಲವಾರು ಕೃತಿಗಳನ್ನು ಹೊರ ತಂದಿದ್ದಾರೆ. ೧೯೫೪ ರಲ್ಲಿ ಜಮಖಂಡಿಯ ಕರ್ನಾಟಕ ಸಾಹಿತ್ಯ ಮಂದಿರದಿಂದ ‘ಗರತಿಯರ ಮನೆಯಿಂದ’ ಎಂಬ ಇವರ ಜಾನಪದ ಗ್ರಂಥ ಪ್ರಕಟವಾಯಿತು. ಇದು ಅತ್ಯಂತ ಉಪಯುಕ್ತ ಗ್ರಂಥವಾಗಿದ್ದು, ಜಾನಪದ ಇತರ ಅಂಗಗಳಾದ ಗಾದೆ, ಒಗಟು, ಒಡಪು, ಚುಕ್ಕೋಳ ಆಟಪಾಟ ಇತ್ಯಾದಿ ವಿಷಯಗಳು ಇದರಲ್ಲಿ ದಾಖಲಾಗಿವೆ. ಈ ಗ್ರಂಥಕ್ಕೆ ಜಾನಪದ ಅಕಾಡೆಮಿಯ ಪ್ರಶಸ್ತಿ ಕೂಡ ಬಂದಿದೆ. ಒಡಪುಗಳು (೧೯೭೬, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು) ಜ್ಯೋತಿಯೇ ಆಗು ಜಗಕ್ಕೆಲ್ಲ (೧೯೮೦) ಜನಪದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಲೇಖನಗಳನ್ನು ಬರೆದಿದ್ದಾರೆ.

ಬಸವಣ್ಣನವರು, ಯುಗಪುರುಷ ಗಾಂಧೀಜಿ, ಮಾದರಿ ಮಲ್ಲಣ್ಣ, ಜನಪ್ರಿಯ ರಾಮಾಯಣ, ಬಾಳಿನ ಬೆಳಕು, ಮಹಾಭಾರತ ದರ್ಶನ, ಕರ್ನಾಟಕದ ಕಥೆಗಳು ಮುಂತಾದವು. ಇದಲ್ಲದೆ ಪೌರಾಣಿಕ ಕೃತಿಗಳಾದ ನಳ ದಮಯಂತಿ, ಸಾವಿತ್ರಿ ಸೌಭಾಗ್ಯ, ಸತ್ಯ ಹರಿಶ್ಚಂದ್ರ ಮುಂತಾದವುಗಳಾದರೆ, ಜಾನಪದ ಕೃತಿಗಳಾದ ಗರತಿಯ ಮನೆಯಿಂದ ಮತ್ತು ಒಡಪುಗಳು, ಭಾಗ್ಯದ ಬಾಗಿಲು, ಪುಣ್ಯ ಪುರುಷ – ಕಾದಂಬರಿಗಳು. ಭಾಗ್ಯದ ಬಾಗಿಲು, ತೆರೆದಿಟ್ಟ ಪುಸ್ತಕ, ಊರ ಉಸಾಬರಿ, ನಂದಾದೀಪ, ಯಾರತಪ್ಪು, ಮೊಲಾದ ೨೦ಕ್ಕೂ ಹೆಚ್ಚು ರೇಡಿಯೋ ನಾಟಕಗಳು,; ಬಂಥನಾಳದ ಬೆಳಕು, ಕಾಯಕವೇ ಕೈಲಾಸ, ಕರ್ನಾಟಕ ಕಣ್ಮಣಿಗಳು, ನೆಹರು ದರ್ಶನ, ನನ್ನ ಮನೆ ಅಸ್ಸಾಂ ಮೊದಲಾದ ಮಕ್ಕಳ ಸಾಹಿತ್ಯ ಕೃತಿಗಳಲ್ಲದೆ ಭಕ್ತಾನುರಾಗಿ ಬಂಥನಾಳ ಶಿವಯೋಗಿ, ಅನುಭಾವ ಚಿಂತಾಮಣಿ, ಧರ್ಮದರ್ಶನ, ಪ್ರಸಾರವಾಣಿ, ಪ್ರಾರ್ಥನಯೋಗ ಮುಂತಾದ ಅಧ್ಯಾತ್ಮಿಕ ಗ್ರಂಥಗಳೂ ಸೇರಿ ಸುಮಾರು ಐವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟಿತ.

ಪ್ರಶಸ್ತಿ[ಬದಲಾಯಿಸಿ]

ಆದರ್ಶ ಶಿಕ್ಷಕ ರಾಷ್ಟ್ರ ಪ್ರಶಸ್ತಿ (೧೯೭೪) ಜಾನಪದ ಅಕಾಡೆಮಿ ಪ್ರಶಸ್ತಿ (೧೯೮೦) ಭಾರತ ಸರ್ಕಾರದಿಂದ ಫೆಲೋಶಿಪ್ (೧೯೯೯) ಸಮೀರವಾಡಿಯಲ್ಲಿ ೧೯೯೭ ರಲ್ಲಿ ಜರುಗಿದ ವಿಜಾಪುರ ಜಿಲ್ಲಾ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ೧೯೯೮ ರಲ್ಲಿ ವಂದೇ ಮಾತರಂ ಗ್ರಂಥಕ್ಕೆ ಗೋರೂರು ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಮುಂತಾದವುಗಳು ಇವರಿಗೆ ಸಂದ ಗೌರವಗಳು.

ಆದರ್ಶ ಶಿಕ್ಷಕ ರಾಷ್ತ್ರಪ್ರಶಸ್ತಿ (೧೯೭೪), ಜಾನಪದ ಅಕಾಡೆಮಿಯ ಪ್ರಶಸ್ತಿ,(೧೯೮೦), ಭಾರತ ಸರಕಾರದ ಫೆಲೋಷಿಪ್ (೧೯೯೦), ಕೂಡಲ ಸಂಗಮ ಮತ್ತು ಭಾಗ್ಯದ ಬಾಗಿಲು ಕೃತಿಗಳಿಗೆ ನವ ಸಾಕ್ಷರ ರಾಷ್ತ್ರ ಪ್ರಶಸ್ತಿ, ‘ಕಾಯಕವೇ ಕೈಲಾಸ’ ಕೃತಿಗೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಪುರಸ್ಕಾರ, ಮುಳವಾಡದಲ್ಲಿ ನಡೆದ ೪ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ‘ಜಾನಪದ ಜ್ಯೋತಿ ಕೃತಿಗೆ’ ಹರ್ಡೇಕರ ಮಂಜಪ್ಪ ಪ್ರಶಸ್ತಿ, ‘ಭಕ್ತಾನುರಾಗಿ ಬಂಥನಾಳ ಶಿವಯೋಗಿ’ ಗ್ರಂಥಕ್ಕೆ ಇಳಕಲ್ಲ ವಿಜಯ ಮಹಾಂತೇಶ ಮಠದಿಂದ ಬಸವ ಗುರು ಕಾರುಣ್ಯ ಪ್ರಶಸ್ತಿ, ಮುಂತಾದ ಪ್ರಶಸ್ತಿ ಗೌರವಗಳಲ್ಲದೆ ಇವರ ಕೃತಿಗಳ ವಿವೇಚನೆ ನಡೆಸಿ’ ‘ಈಶ್ವರ ಚಂದ್ರ ಚಿಂತಾಮಣಿ ಬದುಕು-ಬರಹ’ ಮಹಾ ಪ್ರಬಂಧಕ್ಕೆ ೨೦೦೩ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಮಂಜುನಾಥ ಬಸವನ ಗೌಡ ಪಾಟೀಲರು ಡಾಕ್ಟರೇಟ್ ಪಡೆದಿದ್ದಾರೆ. ವಿದ್ಯಾರ್ಥಿಗಳು, ಅಭಿಮಾನಿಗಳು ೨೦೦೫ರಲ್ಲಿ ಅರ್ಪಿಸಿದ ಗೌರವ ಗ್ರಂಥ 'ಚಿಂತಾಮಣಿ' [೧].

ಉಲ್ಲೇಖ[ಬದಲಾಯಿಸಿ]