ಇ. ಎಚ್. ದಾರುವಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೊ. ಇ. ಎಚ್. ದಾರುವಾಲ (೧೯೨೩-೨೦೧೨)ಇರಾಕ್ ಹರ್ಮುಸ್ಜಿ ದಾರುವಾಲ ನಿರ್ದೇಶಕರು, ದ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನೊಲೊಜಿ ಅಂಡ್ ರಿಸರ್ಚ್ ಅಡ್ವೈಸರ್ ಬಾಂಬೆ ಟೆಕ್ಸ್ ಟೈಲ್ ರಿಸರ್ಚ್ ಅಸೋಸಿಯೇಷನ್ ಸಂಸ್ಥೆಯಲ್ಲಿ ಸಂಶೋಧಕರಾಗಿದ್ದರು. ಟೆಕ್ಸ್ ಟೈಲ್ ಕೆಮಿಸ್ಟ್ರಿ ವಿಷಯದಲ್ಲಿ ಹೆಸರುವಾಸಿಯಾಗಿದ್ದರು.

ವಿದ್ಯಾಭ್ಯಾಸ[ಬದಲಾಯಿಸಿ]

ಪ್ರಾರಂಭದಲ್ಲಿ UDCT ಯಿಂದಲೇ ಬಿ.ಎಸ್.ಸಿ ಟೆಕ್, ಮತ್ತು ಎಂ.ಎಸ್.ಸಿ.ಟೆಕ್ ಪದವಿಗಳನ್ನು ಗಳಿಸಿದರು. ಪಿ.ಎಚ್.ಡಿ.ಪದವಿಯನ್ನು ಮ್ಯಾಂಚೆಸ್ಟರ್ ನಿಂದ ಗಳಿಸಿದರು. ಸ್ವದೇಶಕ್ಕೆ ವಾಪಸ್ಸಾಗಿ ಅವರು ತಾವು ಕಲಿತ ಸಂಸ್ಥೆಯಲ್ಲೇ ಶಿಕ್ಷಕರಾಗಿ ಮುಂದುವರೆದರು. ದಾರುವಾಲ ನಡೆಸಿದ ಸೆಲ್ಯೂಲೋಸ್ ಕೆಮಿಸ್ಟ್ರಿ, ರಿಯಾಕ್ಟಿವ್ ಡೈಸ್ ಸಂಶೋಧನೆಗಳು ಬೊಂಬಾಯಿನ ಬಟ್ಟೆ ಗಿರಣಿಗಳ ಗುಣಮಟ್ಟದ ಬಟ್ಟೆ ಉತ್ಪಾದನೆಯಲ್ಲಿ ಹೆಚ್ಚಿನ ಸುಧಾರಣೆಗಳನ್ನು ಮಾಡಲು ಸಾಧ್ಯವಾಯಿತು. ಹೊಸ ಸಾಧ್ಯತೆಗಳ ಬಗ್ಗೆ ಯೋಚಿಸಲು ಸಹಾಯಕಾರಿಯಾಯಿತು.

ಪ್ರೊ. ದಾರುವಾಲ ಅವರ ಪರಿವಾರ[ಬದಲಾಯಿಸಿ]

ಪ್ರೊ.ದಾರುವಾಲ ಅವರ ಹೆಂಡತಿ, ಬಖ್ಟಾವರ್ ಇ.ದಾರುವಾಲ. ಹೆಣ್ಣುಮಕ್ಕಳು : ಮೆಹರ್ ಮತ್ತು ಜೆರ್, ವೆಂಕಟರಾಮ್ ಮತ್ತು ಅನಿಮೇಶ್ ಅಳಿಯಂದಿರು. ಮೊಮ್ಮಕ್ಕಳು : ಉರ್ವೀನ್, ಮಾಯಾ, ಜೆಹಾನ್ ಸರೋಶ್,

ವೃತ್ತಿಜೀವನ[ಬದಲಾಯಿಸಿ]

ಪ್ರೊ.ದಾರುವಾಲ ಅವರು, ಅಂತಾರಾಷ್ಟ್ರೀಯ ಖ್ಯಾತಿಯ UDCT ಶಿಕ್ಷಣ ಸಂಸ್ಥೆಯಲ್ಲಿ ಟೆಕ್ಸ್ ಟೈಲ್ ಕೆಮಿಸ್ಟ್ರಿ ವಿಭಾಗದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮುಂಬಯಿ ಮಹಾನಗರದ ಅನೇಕ ಬಟ್ಟೆ ಗಿರಣಿಗಳಿಗೆ, ಕೆಮಿಕಲ್ ಸಂಸ್ಥೆಗಳಿಗೆ, ಟೆಕ್ನಿಕಲ್ ಸಲಹೆಗಾರರಾಗಿದ್ದರು. ಅವರನ್ನು ಹತ್ತಿರದಿಂದ ಬಲ್ಲವರು ಅವರನ್ನು ನಡೆದಾಡುವ ವಿಶ್ವಕೋಶವೆಂದೇ ನಂಬಿದ್ದರು. ರಾಷ್ಟ್ರದಲ್ಲಿ ಅವರ ಸಮಯದ ಹಲವಾರು ಖ್ಯಾತ ರಸಾಯನ ಶಾಸ್ತ್ರಜ್ಞರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದರು. ಉತ್ತಮ ಶಿಕ್ಷಕರೆಂದು ಪ್ರಸಿದ್ಧರು.

ಪ್ರಶಸ್ತಿಗಳು[ಬದಲಾಯಿಸಿ]

Gold Medal by the Society of Dyers and Colourists (UK) ಕೊಡುಗೆ,ಬಟ್ಟೆಗಳಿಗೆ ಬಣ್ಣ ಹಾಕುವ ವಿಜ್ಞಾನದಲ್ಲಿ ಒಂದು ಸ್ಥಾಪಿಸಿತು. ಹೀಗೆ ಪ್ರಶಸ್ತಿಗಳಿಸಿದ ಪ್ರಥಮ ಭಾರತೀಯ. ಭಾರತೀಯ ಬಟ್ಟೆ ಕಾರ್ಯಾಗಾರಗಳ ಪಿತನೆಂದು ಹೆಸರುಗಳಿಸಿದರು ‘Father Of Textile Industry’ in India, ಹಲವಾರು ಶಿಕ್ಷಣ ಸಂಸ್ಥೆಗಳಿಗೆ, ಸಣ್ಣ,ದೊಡ್ಡ ಡೈಯಿಂಗ್ ಮತ್ತು ಫಿನಿಶಿಂಗ್ ಫ್ಯಾಕ್ಟರಿಗಳಿಗೆ ಸಲಹಾಕಾರರಾಗಿ ಸೇವೆಸಲ್ಲಿಸಿದರು. ನಿವೃತ್ತಿಯ ನಂತರವೂ BTRA, Rossari BioTech, Century Mills, ಮೊದಲಾದ ಸಂಸ್ಥೆಗಳಿಗೆ ಸಲಹಾಕಾರರಾಗಿದ್ದರು. ಡಾ.ದಾರುವಾಲರು, ತಮ್ಮ ಕೆಲಸದಲ್ಲಿ ಬಹಳ ನಿಷ್ಠಾವಂತರು. ಅವರು ಮತ್ತು ಅವರ ಹೆಂಡತಿ ಕೊಡುಗೈ ದಾನಿಗಳೆಂದು ಹೆಸರಾದವರು. ವಿಶೇಷವಾಗಿ ಅಂಧವಿದ್ಯಾರ್ಥಿಗಳಿಗೆ ತುಂಬಾ ನೆರವಾದರು.

ನಿಧನ[ಬದಲಾಯಿಸಿ]

ಪ್ರೊ. ದಾರುವಾಲ,(೮೯) ೧೭ ಮಾರ್ಚ್, ೨೦೧೨ ರಂದು ನಿಧನರಾದರು. [೧]

ಪಾಠವನ್ನು ಬೋಧಿಸುವ ಕಲೆ ವೈಶಿಷ್ಟ್ಯಪೂರ್ಣ[ಬದಲಾಯಿಸಿ]

ಪ್ರೊ.ದಾರುವಾಲರ ಪಾಠ ಹೇಳಿಕೊಡುವ ಶೈಲಿ ಅವರ ವಿದ್ಯಾರ್ಥಿಗಳಿಗೆ ಮುದಕೊಡುತ್ತಿತ್ತು. ಅವರು ಕೆಲವು ಪ್ರಮುಖ ಪಠ್ಯ ಪುಸ್ತಕಗಳಿಂದ/ಜರ್ನಲ್ ಗಳಿಂದ ಆಯ್ದ ಕೆಲವು ತಥ್ಯಗಳನ್ನು ವಿದ್ಯಾರ್ಥಿಗಳಿಗೆ ಮುಂದೆ ಓದಿ ಹೇಳುವುದರ ಜೊತೆಗೆ ಅವನ್ನು ತಮ್ಮ ನೋಟ್ಬುಕ್ ನಲ್ಲಿ ದಾಖಲಿಸಲು ಸೂಚಿಸುತ್ತಿದ್ದರು. ಇದು ಸುಮಾರು ೧೫-೨೦ ನಿಮಿಷಗಳು ಆಗುತ್ತಿತ್ತು. ಕೊನೆಯಲ್ಲಿ ಪುಸ್ತಕ ಮುಚ್ಚಿ ಅವರು ಅದುವರೆಗೆ ಮಾಡಿದ ಉಪನ್ಯಾಸದ ತಾತ್ಪರ್ಯವನ್ನು ಅತಿ ಮನದಟ್ಟಾಗುವಂತೆ ಹೇಳುತ್ತಿದ್ದರು. ಅವರು ತಮ್ಮ ವಿಷಯಗಳನ್ನು ತುಂಬಾ ಸೊಗಸಾದ ಭಾಷಾ ಚಾತುರ್ಯದಿಂದ ಹಾಗೂ ಅತ್ಯಂತ ಸಮರ್ಥ ಹಾಗೂ ಪಾಂಡಿತ್ಯ ಪೂರ್ಣ ರೀತಿಯಲ್ಲಿ ಯಾವ ಪುಸ್ತಕವನ್ನು ಆಧರಿಸದೆ, ಇಷ್ಟು ವಿಷಯದಮೇಲೆ ಪ್ರಭುತ್ವವಿರುವ ವ್ಯಕ್ತಿ, 'ಏಕೆ ಬರೆಯಲು ಹೇಳುತ್ತಿದ್ದರು' ಎಂದು ಕೆಲವು ವಿದ್ಯಾರ್ಥಿಗಳಿಗೆ ವಿಸ್ಮಯವಾಗುತ್ತಿತ್ತು. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದೇ ಅವರು ಅವರೇ ತಯಾರಿಸಿದರೆ ಹಲವಾರು ಪ್ರಮುಖ ವಿಶಯಗಳನ್ನು ಮರೆಯಬಹುದೆಂದು.

ಇತರ ಹವ್ಯಾಸಗಳು[ಬದಲಾಯಿಸಿ]

ದಾರುವಾಲ ಅವರು, ಶಿರ್ಡಿ ಸಾಯಿಬಾಬಾರ ಭಕ್ತರು. ಬಾಬಾರವರ ದರ್ಶನವಾಯಿತೆಂದು ನಂಬಿದ್ದರು. ತಮ್ಮ ಇಳಿಯ ವಯಸ್ಸಿನಲ್ಲೂ ಯಾವಾಗಲೂ ಕಾರ್ಯನಿರತರಾಗಿರುತ್ತಿದ್ದರು. ಅವರ ಘೋಷವಾಕ್ಯ, ಅವರ ವಿದ್ಯಾರ್ಥಿಗಳಲ್ಲಿ ಬಹಳ ಹೃದಯಸ್ಪರ್ಶಿಯಾಗಿದೆ. "ತುಕ್ಕು ಹಿಡಿದು ಮೂಲೆಯಲ್ಲಿ ಕೊಳೆಯುವ ಬದಲು ಸವೆದು ಸವೆದು, ಮಣ್ಣುಪಾಲಾಗುವುದು ಒಳ್ಳೆಯದೆಂದು"ಎನ್ನುವ ಮಾತನ್ನು ಸ್ವಾಗತಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. NCM-New Cloth Market-Exporters' First Choice.Obituary :Prof. EH Daruwalla (1923-2012), June, 10, 2012, Prof. ED.Daruwalla, 'The Doyen of Textile Chemistry passed away' 

Research papers[ಬದಲಾಯಿಸಿ]

  1. {https://books.google.co.in/books?id=KY0iBAAAQBAJ&pg=PA104&dq=e.+h.+daruwala,&hl=kn&sa=X&ved=0ahUKEwiH-9nyqdflAhW47XMBHbEmCCk4ChDoAQguMAE#v=onepage&q=e.%20h.%20daruwala%2C&f=false Fibre science and technology, -Premamoy Ghosh]