ಇಸ್ರೋ ಉಪಗ್ರಹಗಳು

ವಿಕಿಪೀಡಿಯ ಇಂದ
Jump to navigation Jump to search

ಇಸ್ರೋ ಉಪಗ್ರಹಗಳು[ಬದಲಾಯಿಸಿ]

  • ಉಪಗ್ರಹ ಕಕ್ಷೆಗಳು: ಉಪಗ್ರಹ ಕಕ್ಷೆಗಳಲ್ಲಿ ಮುರು ವಿಧಗಳಿವೆ.ಅವುಗಳೆಂದರೆ ಭೂಸ್ಥಾಯಿ,ಮಧ್ಯಮಸ್ಥಾಯಿ ಹಾಗೂ ಕೆಳಸ್ಥಾಯಿ ಉಪಗ್ರಹ ಕಕ್ಷೆಗಳು.ಇದರ ನಿಶ್ಚಲ ಸ್ಥಿತಿಯ ಗುಣವು ಸಂವಹನ(ದೂರವಾಣಿ, ಟಿ.ವಿ, ಮತ್ತು ರೇಡಿಯೊ) ಮತ್ತು ಹವಾಮಾನ ಮಾನಿಟರ್ ಗೆ ತುಂಬಾ ಉಪಯುಕ್ತವಾಗಿದೆ.
  • ಉಪಗ್ರಹಗಳನ್ನು ಕಕ್ಷೆಗಳಲ್ಲಿ ಇಡುವ ವಿಧಾನ:

ಉಪಗ್ರಹಗಳನ್ನು ಕಕ್ಷೆಗಳಲ್ಲಿ ಇಡಲು ಉಡಾವಣೆ ವಾಹಕವನ್ನು(ಎಲ್.ವಿ.ಎಸ್) ಉಪಯೋಗಿಸುತ್ತಾರೆ. ಭಾರತವು ೧೯೬೩ರ ನವೆಂಬರ್ ೨೧ ರಂದು ಪ್ರಪ್ರಥಮ ಬಾರಿಗೆ ಶಬ್ಧ ಮಾಡುವ ರಾಕೆಟ್ ಅನ್ನು ಉಡಾವಣೆ ಮಾಡುವ ಮುಲಕ ಬಾಹ್ಯಾಕಾಶದತ್ತ ತನ್ನ ಹೆಜ್ಜೆ ಇಟ್ಟಿತು.ಭಾರತವು ೧೯೭೦ರ ದಶಕದ ಆರಂಭದಲ್ಲಿ ಉಡಾವಣೆ ವಾಹಕಗಳನ್ನು ಅಭಿವೃಧ್ಧಿಪಡಿಸುವ ಕಾರ್ಯದಲ್ಲಿ ತೊಡಗಿತು.

  • ಎಸ್.ಎಲ್.ವಿ ಮತ್ತು ಎ.ಎಸ್.ಎಲ್.ವಿ:ಉಪಗ್ರಹ ಉಡಾವಣೆ ವಾಹನ (ಎಸ್.ಎಲ್.ವಿ.ಎಸ್)ಭಾರತದ ಮೊದಲ ಪ್ರಾಯೋಗಿಕ ಉಡಾವಣೆ ವಾಹಕವಾಗಿತ್ತು.ಇದು ಕೆಳಸ್ಥಾಯಿ

ಕಕ್ಷೆಯಲ್ಲಿ ೪೦ಕೆಜಿ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿತ್ತು.೧೯೭೯ರಲ್ಲಿ ಉಡಾವಣೆ ವೈಫಲ್ಯ ಕಂಡಿತು.ಹಾಗಾಗಿ ೧೯೮೦ ಜುಲೈ ೧೮ರಂದು ಎಸ್.ಎಲ್.ವಿ-೩ವಾಹನದ ಮುಲಕ ರೋಹಿಣಿ (ಆರ್.ಎಸ್-೧)ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.ಈ ಮುಲಕ ಭಾರತವು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಆರನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತ್ತು.ಎಸ್.ಎಲ್.ವಿ ಪ್ರೋಗ್ರಾಮ್ ನ ಯಶಸ್ಸಿನ ನಂತರ ಇಸ್ರೋ ಸಂಸ್ಥೆಯು ಅಗ್ ಮೆಂಟೆಡ್ ಸೆಟಲೈಟ್ ಲಾಂಚ್ ವೆಹಿಕಲ್ (ಎ.ಎಸ್.ಎಲ್.ವಿ)ಪ್ರೋಗ್ರಾಮ್ ಅಭಿವೃಧ್ಧಿಪಡಿಸಿತು.ಇದು ಎಸ್.ಎಲ್.ವಿಗಿಂತ ಮುರು ಪಟ್ಟು ಅಂದರೆ ೧೫೦ಕೆಜಿ ತೂಕ ಹೊಂದಬಲ್ಲ ಸಮರ್ಥ್ಯ ಹೊಂದಿತ್ತು.

  • ಪಿ.ಎಸ್.ಎಲ್.ವಿ :ಕೆಳಸ್ಥಾಯಿ ಉಪಗ್ರಹಗಳನ್ನು ಸೂರ್ಯನ ಸಮಕಾಲಿಕ ಧ್ರುವದ ಕಕ್ಷೆಗೆ ಉಡಾವಣೆ ಮಾಡುವ ವ್ಯವಸ್ಥೆಯನ್ನು ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ ಎಂದು

ಕರೆಯಲಾಗುತ್ತದೆ.ಇದು ಎಸ್.ಎಲ್.ವಿ ಮತ್ತು ಎ.ಎಸ್.ಎಲ್.ವಿ ಪ್ರೋಗಾಮ್ ನ ನಂತರದ ಹಂತದ್ದಾಗಿದೆ.ಭಾರತದ ದೂರಗ್ರಾಹಿ ಉಪಗ್ರಹಗಳನ್ನು (ಐ.ಆರ್.ಎಸ್) ಉಡಾವಣೆ ಮಾಡಲು ಪಿ.ಎಸ್.ಎಲ್.ವಿ ಯನ್ನು ಅಭಿವೃಧ್ಧಿಪಡಿಸಲಾಯಿತು.ಪಿ.ಎಸ್.ಎಲ್.ವಿಯ ಮೊದಲ ಉಡಾವಣೆ ೧೯೯೩ರಲ್ಲಿ ನಡೆಯಿತು.ಆದರೆ ವಾಹನವು ಐ.ಆರ್.ಎಸ್-೧ಇ ಉಪಗ್ರಹ ಅನ್ನು ಕಕ್ಷೆಗೆ ಸೇರಿಸಲು ವಿಫಲವಾಯಿತು.೧೯೯೬ರ ಸೆಪ್ಟೆಂಬರ್ ೨೯ರಂದು ಐ,ಆರ್,ಎಸ್-೧ಡಿ ಉಪಗ್ರಗಹವನ್ನು ಉಡಾವಣೆ ಮಾಡಲು ಈ ವಾಹಕವನ್ನು ಉಪಯೋಗಿಸಲಾಯಿತು. ಅಲ್ಲಿಂದ ಆಚೆಗೆ ಅಂದರೆ ೧೯೯೯ರಿಂದ ಈ ವಾಹಕವು ೧೯ ದೇಶಗಳ ೪೦ ಉಪಗ್ರಹಗಳನ್ನು ಉಡಾವಣೆ ಮಾಡಿದೆ.ಚಂದ್ರಯಾನ-೧ ಮತ್ತು ಮಾರ್ಸ್ ಆರ್ಬಿಟರ್ ಮಿಷನ್ ಉಡಾವಣೆಗೂ ಪಿ,ಎಸ್.ಎಲ್.ವಿಯನ್ನು ಉಪಯೋಗಿಸಲಾಗಿದೆ.

  • ಜಿ.ಎಸ್.ಎಲ್.ವಿ ಪ್ರೋಗ್ರಾಮ್: ಭಾರತದ ಭೂಸ್ಥಾಯಿ ಉಪಗ್ರಹ ಉಡಾವಣೆ ವಾಹನ (ಜಿ.ಎಸ್.ಎಲ್.ವಿ) ಪ್ರೋಗ್ರಾಮ್ ಅನ್ನು ೧೯೯೦ರಲ್ಲಿ ಆರಂಭಿಸಲಾಯಿತು.೧೯೯೧ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ರಷ್ಯಾದ ಕಂಪನಿಯು ಉಡಾವಣೆ ವಾಹನಕ್ಕೆ ಅಗತ್ಯವಾದ ಕ್ರಯೋಜೆನಿಕ್ ಎಂಜಿನ್ ಒದಗಿಸಬೇಕಿತ್ತು.೧೯೯೨ರಲ್ಲಿ ಅಮೇರಿಕವು ನಿರ್ಬಂಧ ವಿಧಿಸಿದ್ದರಿಂದ ರಷ್ಯಾದ ಕಂಪನಿಯು ಒಪ್ಪಂದದಿಂದ ದೂರ ಸರಿಯಿತು.ತದನಂತರ ರಷ್ಯಾವು ಭಾರತಕ್ಕೆ ೭ಕ್ರಯೋಜೆನಿಕ್ ಎಂಜಿನ್ ಗಳನ್ನು ಮಾರಟ ಮಾಡಲು ಒಪ್ಪಿಕೊಂಡಿತು.ಇವುಗಳನ್ನು ಜಿ,ಎಸ್,ಎಲ್,ವಿ ಉಡಾವಣೆ ವಾಹಕಕ್ಕೆ ಇಂಧನ ತುಂಬಲು ಉಪಯೋಗಿಸಿಕೊಳ್ಳಲಾಗುತಿತ್ತು.೨೦೧೪ರಲ್ಲಿ ಭಾರತವು ಸ್ವದೇಶೀಯವಾಗಿ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃಧ್ಧಿಪಡಿಸಿ ಜಿ.ಎಸ್.ಎಲ್.ವಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.

ಉಲ್ಲೇಖ[ಬದಲಾಯಿಸಿ]

  1. http://karunaadu.com/articles/%E0%B2%AD%E0%B2%BE%E0%B2%B0%E0%B2%A4%E0%B2%A6-%E0%B2%AC%E0%B2%BE%E0%B2%B9%E0%B3%8D%E0%B2%AF%E0%B2%BE%E0%B2%95%E0%B2%BE%E0%B2%B6-%E0%B2%B8%E0%B2%BE%E0%B2%A7%E0%B2%A8%E0%B3%86%E0%B2%97%E0%B2%B3-2/.
  2. http://www.prajavani.net/article/%E0%B2%AE%E0%B2%82%E0%B2%97%E0%B2%B3%E0%B2%AF%E0%B2%BE%E0%B2%A8%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%87%E0%B2%B8%E0%B3%8D%E0%B2%B0%E0%B3%8A-%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8