ಇಸ್ಕಾನ್ ದೇವಸ್ಥಾನ, ಬೆಂಗಳೂರು

ವಿಕಿಪೀಡಿಯ ಇಂದ
Jump to navigation Jump to search

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಮುಖ್ಯ ದೇವಸ್ಥಾನ

"ಇಸ್ಕಾನ್ ದೇವಾಲಯ ಬೆಂಗಳೂರು"[ಬದಲಾಯಿಸಿ]

 • ಹೆಸರು -ಶ್ರೀ ರಾಧಾ ಕೃಷ್ಣಚಂದ್ರ ದೇವಾಲಯ
 • ಸ್ಥಳ- ರಾಜಾಜಿನಗರ
 • ಜಿಲ್ಲೆ-ಬೆಂಗಳೂರು
 • ರಾಜ್ಯ-ಕರ್ನಾಟಕ
 • ದೇಶ-ಭಾರತ
 • ಮುಖ್ಯ ದೇವರು-ರಾಧಾ ಕೃಷ್ಣ
 • ವಾಸ್ತುಶಿಲ್ಪ ಮತ್ತು ಸಂಸ್ಕೃತಿ'"
 • ಪ್ರಧಾನ ದೇವರು - ಶ್ರೀ ಶ್ರೀ ರಾಧಾ ಕೃಷ್ಣಚಂದ್ರ
 • ಮುಖ್ಯವಾದ ಹಬ್ಬ - ಜನ್ಮಾಷ್ಟಮಿ
 • ವಾಸ್ತುಶಿಲ್ಪದ ಶೈಲಿ - ಹಿಂದೂ ದೇವಾಲಯದ ವಾಸ್ತುಶಿಲ್ಪ.

ಪರಿವಿಡಿ [ಅಡಗಿಸು] ೧ ಇತಿಹಾಸ ೨ ದೇವಸ್ಥಾನದ ವೈಶಿಷ್ಟ್ಯತೆ ೩ ದೇವಾಲಯ ೪ ಕೃಷ್ಣ ಲೀಲಾ ಉದ್ಯಾನವನ ೫ ಹಬ್ಬಗಳು ಅಥವಾ ಆಚರಣೆಗಳು ೬ ಸಮಾಜಸೇವೆ

ಇತಿಹಾಸ[ಬದಲಾಯಿಸಿ]

ಸುಮಾರು ೧೯೭೬, ಭಾರತ ಮತ್ತು ವಿಶ್ವದ ವಿವಿಧ ಭಾಗಗಳಿಂದ ಭಕ್ತರು ಮನೆಗಳಲ್ಲಿ ಕಾರ್ಯಕ್ರಮಗಳಿತ್ತು.ಲೈಫ್ ಸದಸ್ಯರು ಸೇರುವ ರಸ್ತೆಗಳಲ್ಲಿ ಸಂಸ್ಕೃತರು, ಬೆಂಗಳೂರು, ಹುಬ್ಬಳ್ಳಿ, ಮದ್ರಾಸ,ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಇಸ್ಕಾನ್ ಚಟುವಟಿಕೆಗಳನ್ನು ಆರಂಭಿಸಿತು ಮತ್ತು ದೊಡ್ಡ ವ್ಯವಸ್ಥೆ ಮಾಡಿದ್ದರು.ಬೆಂಗಳೂರು ಇಸ್ಕಾನ್ ದೇವಾಲಯವನ್ನು ಭಾರತದ ಅಧ್ಯಕ್ಷ ಉದ್ಘಾಟಿಸಿದರು.ರಾಜಾಜಿನಗರದಲ್ಲಿರುವ ಈ ದೇವಾಲಯವು ಪ್ರಪಂಚದಲ್ಲಿ ಅತಿ ದೊಡ್ಡ ಹಾಗೂ ಹೆಸರುವಾಸಿಯಾದ ದೇವಸ್ಥಾನ. ಇಸ್ಕಾನ್ ಸಂಸ್ಥಾಪಕರಾದಂತಹ, ಆಚಾರ್ಯ ಶ್ರೀ ಎ ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರವರ ಇಚ್ಛೆಯ ಮೇರೆಗೆ, ಮಾಜಿ ರಾಷ್ಟ್ರಪತಿಗಳಾದ ಶಂಕರ ದಯಾಲ ಶರ್ಮರವರಿಂದ ಲೋಕಾರ್ಪಣೆ ಮಾಡಲಾಯಿತು.ಆಧ್ಯಾತ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಜ್ಞಾನಕ್ಕಾಗಿ ಈ ದೇವಸ್ಥಾನವನ್ನು ಸ್ಥಾಪಿಸಲಾಯಿತು. ಈ ದೇವಸ್ಥಾನವು,

 • ಹರೇ-ಕೃಷ್ಣ ಬೆಟ್ಟ
 • ಕೃಷ್ಣ ಲೀಲಾ ಉದ್ಯಾನವನ/ವೈಕುಂಟ ಬೆಟ್ಟ
 • ವೈವಿಧ್ಯಮಯ ಹಬ್ಬಗಳು
 • ಸಮಾಜ ಸೇವೆ

ಮುಂತಾದವುಗಳನ್ನು ಒಳಗೊಂಡಿದೆ.

ದೇವಸ್ಥಾನದ ವೈಶಿಷ್ಟ್ಯತೆ[ಬದಲಾಯಿಸಿ]

ಈ ದೇವಸ್ಥಾನವು ೧೭ ಮೀಟರ್(17 meter) ಎತ್ತರದ ಚಿನ್ನ ಲೇಪಿತ ಧ್ವಜಸ್ಥಂಭ ಮತ್ತು ೮.೫ ಮೀಟರ್(8.5 meter) ಚಿನ್ನ ಲೇಪಿತ ಕಳಶ ಶಿಖರವನ್ನು ಹೊಂದಿದೆ. ದರ್ಶನ ಸಮಯದಲ್ಲಿ ಬರುವ ಭಕ್ತಾದಿಗಳಿಗೆ ಉಚಿತವಾಗಿ ಪ್ರಸಾದವನ್ನು ವಿನಿಯೋಗಿಸಲಾಗುತ್ತದೆ.

ದೇವಾಲಯ[ಬದಲಾಯಿಸಿ]

 • ಮುಖ್ಯ ದೇವರು- ರಾಧಾ ಕೃಷ್ಣ
 • ಕೃಷ್ಣ ಬಲರಾಮ
 • ಚೈತನ್ಯ ಮಹಾಪ್ರಭು ಮತ್ತು ನಿತ್ಯಾನಂದ
 • ಶ್ರೀನಿವಾಸ ಗೋವಿಂದ (ವೆಂಕಟೇಶ್ವರ)
 • ಪ್ರಹ್ಲಾದ ನರಸಿಂಹ
 • ಶ್ರೀಲಾ ಪ್ರಭುಪಾದ

ಕೃಷ್ಣ ಲೀಲಾ ಉದ್ಯಾನವನ[ಬದಲಾಯಿಸಿ]

ಎರಡನೇ ಅತಿ ದೊಡ್ಡ ದೇವಸ್ಥಾನವಾದ ಕೃಷ್ಣ ಲೀಲಾ ಉದ್ಯಾನವನವನ್ನು ಕನಕಪುರ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದೆ. ೭೦ ಎಕರೆ ವಿಸ್ತೀರಣದಲ್ಲಿ ಕಾಮಗಾರಿಯಲ್ಲಿರುವ ಈ ದೇವಸ್ಥಾನದ, ಮೊದಲನೇ ಹಂತದ ಕಟ್ಟಡ ಕಾಮಗಾರಿಯು ಪೂರ್ಣಗೊಂಡಿದ್ದು, ನರಸಿಂಹ ದೇವಸ್ಥಾನವು ದರ್ಶನಕ್ಕೆ ಮುಕ್ತವಾಗಿ ತೆರೆದಿದೆ.

ಹಬ್ಬಗಳು ಅಥವಾ ಆಚರಣೆಗಳು[ಬದಲಾಯಿಸಿ]

ಈ ದೇವಸ್ಥಾನವು ವಿಷ್ಣುವಿನ ಅವತಾರಕ್ಕೆ ಸಂಬಂಧಿಸಿದ ಮತ್ತು ವೈದಿಕ ಸಂಪ್ರದಾಯಕ್ಕೆ ಸಂಬಂಧಪಟ್ಟ ಎಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ,

 • ರಾಮ ನವಮಿ
 • ಬ್ರಹ್ಮೋತ್ಸವ
 • ನಸಿಂಹ ಜಯಂತಿ
 • ರಥಯಾತ್ರೆ
 • ಬಲರಾಮ ಜಯಂತಿ
 • ಉಯ್ಯಾಲೆ ಉತ್ಸವ
 • ಶ್ರೀಕೃಷ್ಣ ಜನ್ಮಾಷ್ಟಮಿ
 • ವೈಷ್ಯ ಪೂಜೆ
 • ರಥ ಯಾತ್ರೆ
 • ಶ್ರೀ ರಾಧಾಷ್ಟಮಿ
 • ದೀಪೋತ್ಸವ
 • ಗೋವರ್ಧನ ಪೂಜೆ
 • ವೈಕುಂಠ ಏಕಾದಶಿ
 • ನಿತ್ಯಾನಂದ ತ್ರಯೋದಶಿ
 • ಗೌರಪೂರ್ಣಿಮ
 • ಕೃಷ್ಣ ಶೃಂಗಾರ
 • ಕುಂಭಾಭಿಷೇಕ

ಚಿತ್ರ:Https://commons.wikimedia.org/wiki/File:Rath Yatra.jpg

ಸಮಾಜಸೇವೆ[ಬದಲಾಯಿಸಿ]

ಕರ್ನಾಟಕ ಸರ್ಕಾರದ, ಮಧ್ಯಾಹ್ನದ ಬಿಸಿ ಊಟ ಯೋಜನೆಯಲ್ಲಿ, ಅಕ್ಷಯ ಪಾತ್ರೆ ಸಂಸ್ಥೆಯು ಇಸ್ಕಾನ್ ಅವರ ಕೊಡುಗೆಯಾಗಿ ಊಟ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಸಂಸ್ಥೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆ ಒಗ್ಗೂಡಿ ಕೆಲಸ ನಿರ್ವಹಿಸುತ್ತಿದೆ. ೨೦೦೩ರಿಂದ ಮಕ್ಕಳ ಮಧ್ಯಾಹ್ನದ ಊಟವನ್ನು ಶುಚಿ ಮತ್ತು ರುಚಿಯನ್ನು ಕಾಯ್ದುಕೊಳ್ಳುವುದರಲ್ಲಿ ಸಾಕಾರಗೊಂಡಿದೆ. ೧೯ ಪ್ರದೇಶಗಳಲ್ಲಿ ಹಾಗೂ ೯ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು ೯೦೦೦ ಸರ್ಕಾರಿ ಶಾಲೆಗಳನ್ನು ತಲುಪಿ, ೧.೩ ಶತಕೋಟಿ ಮಕ್ಕಳ ಆಹಾರಕ್ಕೆ ಆಧಾರವಾಗಿದೆ. ಈ ಯೋಜನೆಗಾಗಿ, ಯು.ಎಸ್. ದೇಶದ ಮಾನ್ಯ ರಾಷ್ಟ್ರಪತಿಗಳಾದ ಬರಾಕ್ ಒಬಾಮಾರವರಿಂದ ಪ್ರಶಂಸೆ ಮತ್ತು ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ.

ಉಲೇಖ[ಬದಲಾಯಿಸಿ]

https://en.wikipedia.org/wiki/ISKCON_Temple_Bangalore

ಆಕರ ಗ್ರಂಥ[ಬದಲಾಯಿಸಿ]

 1. ಕರ್ಮವೀರ