ವಿಷಯಕ್ಕೆ ಹೋಗು

ಇಫ್ತಿಖಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(इफ्तिखार), ಅಥವಾ Iftekhar Khan (೧೯೨೨-೪, ಮಾರ್ಚ್, ೧೯೯೫) (೧೯೩೮-೧೯೯೨,ಹೆಚ್ಚು ಬೇಡಿಕೆಯಲ್ಲಿದ್ದ ಕಾಲ) ಸನ್, ೧೯೩೭ ರಲ್ಲಿ ’ಕ್ವಾಜಕ್ ಕಿ ಲಡ್ಕಿ’ ಎಂಬ ಚಿತ್ರದಲ್ಲಿ 'ಇಫ್ತಿಖಾರ್'ತಮ್ಮ ಅಭಿನಯವನ್ನು ಶುರುಮಾಡಿದರು. ೧೯೫೦ ರಿಂದ ೧೯೯೦ ರವರೆಗೆ ಅವರು ನಟಿಸಿದ ಚಿತ್ರಗಳ ಸಂಖ್ಯೆ ಸುಮಾರು ೨೦೦. ೧೯೬೦ ರಿಂದ ೧೯೭೦ ರವರೆಗೆ ಬಾಲಿವುಡ್ ಚಿತ್ರರಂಗದಲ್ಲಿ ಬಂದ ಹಲವಾರು ಪೋಷಕನಟರಂತೆ 'ಇಫ್ತಿಖಾರ್' ಸಹ ಸಹಜವಾಗಿ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

'ಇಫ್ತಿಖಾರ್' ಪೋಷಕ ನಟನಲ್ಲದೆ, ನಾಯಕನ ಪಾತ್ರಗಳನ್ನೂ ನಿಭಾಯಿಸಿದ್ದರು

[ಬದಲಾಯಿಸಿ]

ಸನ್, ೧೯೯೪-೧೯೫೦ ಕಾಲಘಟ್ಟ ’ಬಾಲಿವುಡ್ ಚಿತ್ರರಂಗದ ಸ್ವರ್ಣಯುಗ’ವೆಂದು ಹೆಸರಾಗಿತ್ತು. ಆಗ'ಇಫ್ತಿಖಾರ್'ರವರು, ಕೆಲವು ಚಿತ್ರಗಳಲ್ಲಿ ನಾಯಕನ ಪಾತ್ರವನ್ನೂ ಮಾಡಿದ್ದರು. ವೈವಿಧ್ಯಮಯ ಪಾತ್ರಗಳಲ್ಲಿ'ಇಫ್ತಿಖಾರ್' ತಮ್ಮ ಸಹಜ ಅಭಿನಯ ನೀಡಿದ್ದಾರ‍ೆ. ತಂದೆ, ಚಿಕ್ಕಪ್ಪ, ಪುಲಿಸ್ ಆಫಿಸರ್, ಪೋಲಿಸ್ ಕಮಿಶನರ್, ಮತ್ತು ಡಾಕ್ಟರ್ ಆಗಿ 'ಇಫ್ತಿಖಾರ್' ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಪೋಲೀಸ್ ಇನ್ಸ್ ಪೆಕ್ಟರ್' ಪಾತ್ರ, ಅವರಿಗೆ ಚೆನ್ನಾಗಿ ಒಪ್ಪುತ್ತಿತ್ತು

[ಬದಲಾಯಿಸಿ]

೧೯೬೦-೭೦ ರಲ್ಲಿ ಅಂಕಲ್, ತಂದೆ, ಪಾತ್ರಮಾಡಲು ಪ್ರಾರಂಭಿಸಿದರು. ’ಪೋಲಿಸ್ ಇನ್ಸ್ ಪೆಕ್ಟರ್ ರೋಲ್’ ಅವರಿಗೆ ಚೆನ್ನಾಗಿ ಒಪ್ಪುತ್ತಿತ್ತು. 'ಇಫ್ತಿಖಾರ್' ಸಾಮಾನ್ಯವಾಗಿ ಎಲ್ಲೂ ಕ್ರೌರ್ಯ, ಹಾಗೂ ದೌರ್ಜನ್ಯ ಮುಂತಾದ ಪಾತ್ರವನ್ನು ಮಾಡಲು ಇಷ್ಟಪಡುತ್ತಿರಲಿಲ್ಲ. ೧೯೭೫ ರಲ್ಲಿ, ಯಶ್ ಚೋಪ್ರ ನಿರ್ಮಿಸಿದ, ’ದಿವಾರ್’ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ರ, ಲಂಚಕೋರ ಉದ್ಯೋಗಪತಿ, ಬಾಸ್ ರೋಲ್ ನಲ್ಲಿ ಅವರು ಚೆನ್ನಾಗಿ ನಿಭಾಯಿಸಿದರು. ಪ್ರಕಾಶ್ ಮೆಹ್ರಾ ನಿರ್ಮಿಸಿದ 'ಝಂಜೀರ್' ಚಿತ್ರದಲ್ಲಿ ಪೋಲಿಸ್ ಆಫಿಸರ್ ಆಗಿ ನಟಿಸಿದ್ದರು. ಅದು ಚಿಕ್ಕ ಪಾತ್ರವಾದರೂ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿತ್ತು, ಹಾಗೂ ಬಹಳ ಪ್ರಭಾವಿತವಾಗಿತ್ತು.

ಒಳ್ಳೆಯನಿರ್ಮಾಪಕ, ನಿರ್ದೆಶಕರ ಬಳಿ, ಇಫ್ತಿಖಾರ್ ಕೆಲಸಮಾಡಿದ್ದರು

[ಬದಲಾಯಿಸಿ]

ಬಿಮಾಲ್ ರಾಯ್ ರವರ ’ಬಂದಿನಿ’, ರಾಜ್ ಕಪೂರ್ ರವರ, ಸಂಗಮ್, ಮನೋಜ್ ಕುಮಾರ್ ರವರ, ಶಹೀದ್, ತೀಸ್ರಿ ಮಂಝಿಲ್, ತೀಸ್ರಿ ಕಸಮ್, ಜಾನಿ ಮೇರ ನಾಮ್, ಹರೆ ರಾಮ್ ಹರೆ ಕ್ರಿಷ್ಣ, ಡಾನ್, ದ ಗ್ಯಾಂಬ್ಲರ್, ಶೋಲೆ, ಮುಂತಾದ ಚಿತ್ರಗಳಲ್ಲಿ 'ಇಫ್ತಿಖಾರ್' ಸೊಗಸಾಗಿ ಅಭಿನಯಿಸಿದ್ದಾರೆ.

ಅಮೆರಿಕನ್ ಟೆಲಿವಿಶನ್ ನಲ್ಲೂ ಅವರು ಪಾಲ್ಗೊಂಡಿದ್ದರು

[ಬದಲಾಯಿಸಿ]

೧೯೬೭ ರಲ್ಲಿ ’ಅಮೆರಿಕನ್ ಟೆಲಿವಿಶನ್ ಧಾರಾವಾಹಿ, ’ಮಾಯಾ', ದಲ್ಲಿ ೨ ಎಪಿಸೋಡ್ ಮಾಡಿದ್ದರು. ೧೯೭೦ ರಲ್ಲಿ ಬಾಂಬೆಟಾಕಿ ನಿರ್ಮಾಣದ ಇಂಗ್ಲಿಷ್ ಭಾಷಾ-ಚಿತ್ರಗಳಾದ, ’ಬಾಂಬೆ ಟಾಕಿ’ (೧೯೭೦) ಮತ್ತು ’ಸಿಟಿ ಆಫ್ ಜಾಯ್,’(೧೯೯೨), ಒಳ್ಳೆಯ ಹೆಸರು ಮಾಡಿದವು.

ಇಫ್ತಿಖಾರ್ ರವರ ಸೋದರಿ,'ವೀಣ' ಚಿತ್ರಗಳಲ್ಲಿ ಅಭಿನಯಿಸಿದ್ದರು

[ಬದಲಾಯಿಸಿ]

'ಇಫ್ತಿಖಾರ್' ರವರ ಸೋದರಿ 'ವೀಣ', ’ದೋ ರಾಸ್ತೆ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರ‍ೆ.

'ಇಫ್ತಿಖಾರ್' ಬೊಂಬಾಯಿನಲ್ಲಿಯೇ, ೪,ಮಾರ್ಚ್, ೧೯೯೫ ರಲ್ಲಿ ನಿಧನಹೊಂದಿದರು

[ಬದಲಾಯಿಸಿ]