ಇಕ್ಕೇರಿ ವರಹಗಳು
ಗೋಚರ
ಇಕ್ಕೇರಿ ವರಹಗಳು-ಇಕ್ಕೇರಿ ಅರಸರು ಅಚ್ಚು ಹಾಕುತ್ತಿದ್ದ ಪ್ರಸಿದ್ಧ ಚಿನ್ನದ ನಾಣ್ಯಗಳು. ಇವುಗಳಲ್ಲಿ ಸದಾಶಿವನಾಯಕನ ಕಾಲದವು ಮಾತ್ರ ದೊರಕಿವೆ. ಇಕ್ಕೇರಿ ಅರಸರ ಆಳ್ವಿಕೆಯಲ್ಲಿ ಇದೇ ನಾಣ್ಯಗಳನ್ನೇ ಪುನಃ ಪುನಃ ಅಚ್ಚು ಹಾಕುತ್ತಿದ್ದರೆಂದೂ ಪ್ರಾಯಶಃ ಈ ಕಾರಣದಿಂದಲೇ ಆ ಅರಸುಮನೆತನದ ಇತರ ರಾಜರ ನಾಣ್ಯಗಳಾವುವೂ ದೊರೆತಿಲ್ಲವೆಂದೂ ಕೆಲವು ವಿದ್ವಾಂಸರ ಅಭಿಪ್ರಾಯ.
ಸದಾಶಿವನಾಯಕನ ನಾಣ್ಯಗಳು, ವಿಜಯನಗರದ ಹರಿಹರ, ದೇವರಾಯ, ಸದಾಶಿವರಾಯ ಮುಂತಾದವರ ನಾಣ್ಯಗಳ ಮಾದರಿಯಲ್ಲೇ ಇವೆ. ವೃತ್ತಾಕಾರದ ಈ ನಾಣ್ಯಗಳ ಮುಮ್ಮುಖದಲ್ಲಿ ಬಲಗೈಯಲ್ಲಿ ತ್ರಿಶೂಲವನ್ನು, ಎಡಗೈಯಲ್ಲಿ ಮೃಗವನ್ನು ಧರಿಸಿ, ಎಡತೊಡೆಯ ಮೇಲೆ ಪಾರ್ವತಿಯನ್ನು ಕುಳ್ಳಿರಿಸಿಕೊಂಡಿರುವ ಶಿವನ ಚಿತ್ರವೂ ಹಿಮ್ಮುಖದಲ್ಲಿ ಎರಡು ಅಥವಾ ಮೂರು ಅಡ್ಡಗೆರೆಗಳ ಮಧ್ಯೆ ಶ್ರೀ ಸದಾಶಿವ ಎಂಬ ನಾಗರಾಕ್ಷರದ ಬರವಣಿಗೆಯೂ ಇದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: