ಇಂಹೊಟೆಪ್
ಇಂಹೊಟೆಪ್ - ಕ್ರಿಸ್ತಪೂರ್ವ ಸುಮಾರು 2980ರಲ್ಲಿ ಈಜಿಪ್ಟಿನ ಮೂರನೆಯ ರಾಜಸಂತತಿಯ ಸೋಸರ್ ದೊರೆಯ ಕಾಲದಲ್ಲಿದ್ದ ಪ್ರಖ್ಯಾತ ವಿದ್ವಾಂಸ ಮತ್ತು ವೈದ್ಯ. ಸೋಸರನ ಆಸ್ಥಾನದಲ್ಲಿ ಈತ ಪುರೋಹಿತ, ಮುಖ್ಯಮಂತ್ರಿ, ವಾಸ್ತುಶಿಲ್ಪಿ, ಲಿಪಿಕಾರ,ಅರಮನೆಯ ನಿರ್ವಾಹಕ,ಅನುವಂಶೀಯ ಕುಲೀನ ಮತ್ತು ವೈದ್ಯನಾಗಿ ತುಂಬ ಮನ್ನಣೆ ಪಡೆದಿದ್ದ. ಆ ದೊರೆಯ ಮೆಟ್ಟಿಲು ಪಿರಮಿಡ್ಡನ್ನು ಕಟ್ಟಿಸಿದವ ಈತನೇ ಎಂದು ಹೇಳುತ್ತಾರೆ. ಇವನ ವಿದ್ಯಾಪ್ರೌಢಿಮೆ, ವೈದ್ಯಜ್ಞಾನ ಮತ್ತು ಮಾಟವಿದ್ಯೆಗಳನ್ನು ಕಂಡು ಜನ ವಿಸ್ಮಯಗೊಂಡರು; ಕೊನೆಗೆ ಈತ ದೈವಾಂಶಸಂಭೂತನೆಂದೂ ಮೆಂಫಿಸ್‍ನ ತ್ರಿಮೂರ್ತಿಗಳಲ್ಲೊಬ್ಬನಾದ ಪ್ಟಾ ಎಂಬ ದೇವನ ಮಗನೆಂದೂ ಪರಿಗಣಿಸಿದರು. ಮೊದಲು ಇವನಿಗೆ ಉಪದೇವತೆಗಳ (ಡೆಮಿಗಡ್ಸ್) ಪಟ್ಟವನ್ನು ಕೊಟ್ಟಿದ್ದರು; ಮುಂದೆ ಟಾಲಮಿ ದೊರೆಗಳ ಕಾಲದಲ್ಲಿ ಈತ ದೇವನೆಂದೇ ಭಾವಿಸಲಾಯಿತು. ಇವನಿಗಾಗಿ ಮಂದಿರಗಳು ನಿರ್ಮಿತವಾದುವು; ಆ ಮಂದಿರಗಳು ದೇವಕೃಪಾರ್ಥಿಗಳಾದ ರೋಗಿಗಳ ಯಾತ್ರಾಸ್ಥಳಗಳಾದವು.ಆ ಮಂದಿರಗಳು ಕೆಲವೇ ಜನರಿಗೆ ಮಾತ್ರ ನಿರ್ಮಿಸಲಾಗುತ್ತದೆ.ಅಂತಹವರಲ್ಲಿ ಇವನು ಒಬ್ಬ.ಇಮ್ಹೊಟೆಪ್ರವರಿಂದ ಒಬ್ಬ ಕವಿ ಮತ್ತು ತತ್ವಜ್ಞಾನಿಹಾಗು ಜನರಿಗೆ ಅವನ ಮೇಲೆ ಪೂಜ್ಯ ಭಾವನೆ ಇತ್ತು .
ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್
[ಬದಲಾಯಿಸಿ]ಇಮ್ಹೊಟೆಪ್ರ ಫರೋ ಡಿಜೊಸೆರ್ ದ ಮುಖ್ಯ ಅಧಿಕಾರಿಆಗಿದ್ದ.ಈಜಿಪ್ತ್ ಅವನಿಗೆ ಪಿರಮಿಡ್ ಆಫ಼್ ದ್ಜೋಸರ್ನ ವಿನ್ಯಾಸ ಮಾಡಲು ಹೊಣೆಮಾಡಿತು.ಅವನು 2630 ರಲ್ಲಿ ಒಂದು ಹೆಜ್ಜೆ ಈಜಿಪ್ಟ್ ಸಕ್ವರದಲ್ಲಿನ ಪಿರಮಿಡ್ ವಿನ್ಯಾಸ ಮಾಡಿದ.ಇವನು ಕಟ್ಟಡವನ್ನು ಬೆಂಬಲಿಸಲು ಕಲ್ಲು ಕಾಲಮ್ಗಳನ್ನು ಬಳಸುವ ಮೊದಲ ಪ್ರಯತ್ನ ಮಾಡಿದವನಾದನು.
ಉಲ್ಲೇಖಗಳು
[ಬದಲಾಯಿಸಿ]