ಇಂಧನಕೋಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರದರ್ಶನ ಮಾದರಿ

ಇಂಧನಕೋಶ - ಇಂಧನದ ರಾಸಾಯನಿಕ ಶಕ್ತಿಯನ್ನು ಅವಿಚ್ಛಿನ್ನವಾಗಿ ಮತ್ತು ನೇರವಾಗಿ ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ವಿದ್ಯುತ್ಕೋಶ (ಫ್ಯುಯೆಲ್ ಸೆಲ್). ಒಂದು ಶತಮಾನಕ್ಕೂ ಹಿಂದೆ ಬ್ರಿಟನ್ನಿನ ಸರ್.ಡಬ್ಲ್ಯು. ಗ್ರೌ ಎಂಬಾತ ಇಂಧನಕೋಶದಿಂದ ಶಕ್ತಿಯನ್ನು ಪಡೆಯುವ ತತ್ತ್ವವನ್ನು ಕಂಡುಹಿಡಿದ. ಸ್ಫೋಟಕವಾಗದ ಮಂದಗತಿಯ ಪ್ರತಿಕ್ರಿಯೆಯಿಂದ ನೀರಿನ ವಿಯೋಜನೆಯನ್ನು ಸಾಧಿಸುವುದು ಸಾಧ್ಯವೆಂದೂ ಈ ಪ್ರತಿಕ್ರಿಯೆ ಸ್ವಲ್ಪ ವಿದ್ಯುಚ್ಛಕ್ತಿಯ ಬಿಡುಗಡೆ ಮಾಡುವುದೆಂದೂ ಅವನು ತೋರಿಸಿದ. ಈ ಕ್ರಮದಲ್ಲಿ ಶಕ್ತಿಯ ಪರಿವರ್ತನೆಯಿಂದ ಲಭಿಸುವ ಉತ್ಪನ್ನ ಹೆಚ್ಚು. ಗದ್ದಲವಿಲ್ಲ, ಯಾವ ನಂಜೂ ಹೊರಸೂಸುವುದಿಲ್ಲ. ಇಂಥ ಕೋಶಗಳನ್ನು ಆಕಾಶಯಾನದಲ್ಲಿ ಬಳಸುವುದಕ್ಕೂ ಸಮುದ್ರದ ನೀರಿನಲ್ಲಿ ಜಲಾಂತರ್ನೌಕೆಯನ್ನು ನಡೆಸುವುದಕ್ಕೂ ಸಾಧ್ಯತೆಯ ವಿಚಾರವಾಗಿ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಸ್ವೀಡನ್ನಿನಲ್ಲಿ ಅನೇಕ ಶೋಧನೆಗಳು ನಡೆದಿವೆ. ಎಲ್ಲ ಬ್ಯಾಟರಿಗಳಲ್ಲೂ ಆಗುವಂತೆ ಆಕ್ಸೈಡಿನ ಆಕ್ಸಿಜನ್ನನ್ನು ತೆಗೆಯುವ ಪ್ರತಿಕ್ರಿಯೆಯನ್ನು ಇಂಧನಕೋಶ ಉಂಟುಮಾಡುತ್ತದೆ. ವಾಸ್ತವವಾಗಿ ಇದು ರಾಸಾಯನಿಕ ಶಕ್ತಿಯ ಪರಿವರ್ತನೆ ಕ್ರಮ. ಇದರ ಪ್ರತಿಫಲ 50% ರಷ್ಟು ಹೆಚ್ಚು.

ಅನಿಲ ಇಂಧನಕೋಶ[ಬದಲಾಯಿಸಿ]

ಒಂದು ವಿದ್ಯುತ್ಕಾರ್ಯದಿಂದ ವಿಘಟಿತವಾದ ದ್ರವ ಅಥವಾ ಘನಪದಾರ್ಥ ವಿದ್ಯುದ್ವಾಹಿಯಾಗಿರಬಹುದು. ಎರಡು ಎಲೆಕ್ಟ್ರೋಡುಗಳು ವಿದ್ಯುದ್ವಾಹಿಕಣದ (ಅಯೊನಿಕ್) ವಾಹಕವನ್ನು (ಕಂಡಕ್ಟರ್) ಹೊರಗಿನ ವಿದ್ಯುತ್ತಿನ ಆವರಣದೊಂದಿಗೆ ಕೂಡಿಸುತ್ತವೆ. ಒಂದು ಎಲೆಕ್ಟ್ರೋಡನ್ನು ಆಕ್ಸಿಜನ್ನನ್ನು ಸೇರಿಸುವ ಅನಿಲದಿಂದಲೂ ಇನ್ನೊಂದನ್ನು ಆಕ್ಸಿಜನ್ನನ್ನು ತೆಗೆಯುವ ಅನಿಲದಿಂದಲೂ ತುಂಬಿರುತ್ತಾರೆ. ಹೀರುವ ಮತ್ತು ವಿದ್ಯುದ್ವಾಹಿಕಣಗಳಾಗಿ ಮಾರ್ಪಡಿಸುವ ಪ್ರತಿಕ್ರಿಯೆಗಳು ಎಲೆಕ್ಟ್ರೋಡುಗಳಲ್ಲಿ ನಡೆಯುತ್ತವೆ.

ಪ್ರಯೋಗಗಳು[ಬದಲಾಯಿಸಿ]

ಒಂದೋ ಎರಡೋ ವಾಟುಗಳಿಂದ ಕೆಲವು ಕಿಲೋವಾಟುಗಳವರೆಗಿನ ಸಾಮಥ್ರ್ಯದ ಇಂಧನದ ಕೋಶಗಳನ್ನು ಮಾಮೂಲಾದ ಕೋಶಗಳ ಅಥವಾ ವಿದ್ಯುತ್ಕೋಶಗಳ ಬದಲಾಗಿ ಬಳಸುತ್ತಾರೆ. ವಿನ್ಯಾಸದ ಮಾರ್ಪಾಡಿನಿಂದ ಕೋಶಗಳು ಹಗುರವೂ ಅಗ್ಗವೂ ಆದಾಗ ಅವನ್ನು ವಿದ್ಯುತ್ತಿನ ರೈಲ್ವೆ ದಾರಿಗಳಲ್ಲೂ ಸಾರ್ವಜನಿಕ ಸಾಗಣೆಗಳಲ್ಲೂ ಬಳಸಬಹುದು. ಮುಂದೆ ರೈಲ್ವೆಗಾಡಿ ಸಾಲುಗಳಲ್ಲೂ ಹಡಗುಗಳಲ್ಲೂ ಬಳಸುವ ಸಾಧ್ಯತೆಯಿದೆ. (ಎಚ್.ವಿ.ಎಸ್.ಆರ್.)

ಇಂಧನಕೋಶಗಳಲ್ಲಿ ನಡೆಯುವ ರಾಸಾಯನಿಕ ಪ್ರತಿಕ್ರಿಯೆಗಳನ್ನು ಕೆಳಗಿನ ಕೋಷ್ಟಕಗಳು ತೋರಿಸುತ್ತವೆ. ಕೋಷ್ಟಕ 1 : ಬೇರೆ ಬೇರೆ ಉಷ್ಣತೆಗಳಲ್ಲಿ ಕೋಶಗಳ ಸೈದ್ಧಾಂತಿಕ ವಿಭವಗಳು (ಥಿಯೊರೆಟಿಕಲ್ ಸೆಲ್ ಪೊಟನ್ಷಿಯಲ್ಸ್).

ಉಲ್ಲೇಖಗಳು[ಬದಲಾಯಿಸಿ]

[೧] [೨] [೩]

  1. http://auto.howstuffworks.com/fuel-efficiency/alternative-fuels/fuel-cell2.htm
  2. "ಆರ್ಕೈವ್ ನಕಲು" (PDF). Archived from the original (PDF) on 2013-10-05. Retrieved 2016-10-19.
  3. http://americanhistory.si.edu/fuelcells/pem/pem2.htm
"https://kn.wikipedia.org/w/index.php?title=ಇಂಧನಕೋಶ&oldid=1053434" ಇಂದ ಪಡೆಯಲ್ಪಟ್ಟಿದೆ